ಭಾರೀ ಡಿಸ್ಕೌಂಟ್‌ನಲ್ಲಿ ದೈತ್ಯ Oppo Find X8 Pro ಸ್ಮಾರ್ಟ್‌ಫೋನ್‌ ಖರೀದಿಸಲು ಇದುವೇ ಸಕಾಲ!

HIGHLIGHTS

Amazon ತಾಣದಲ್ಲಿ Oppo Find X8 Pro ಫೋನ್‌ ಭರ್ಜರಿ ಬೆಲೆ ಇಳಿಕೆ ಪಡೆದಿದೆ

ಗ್ರಾಹಕರು BOBCARD EMI ಕಾರ್ಡ್‌ ಮೂಲಕ ಖರೀದಿಸಿದರೆ ಹೆಚ್ಚುವರಿ ಡಿಸ್ಕೌಂಟ್‌ ಪಡೆಯಬಹುದು

ಈ ಮೊಬೈಲ್‌ MediaTek Dimensity 9400 ಚಿಪ್‌ಸೆಟ್‌ ಪ್ರೊಸೆಸರ್‌ ಪಡೆದಿದೆ

ಭಾರೀ ಡಿಸ್ಕೌಂಟ್‌ನಲ್ಲಿ ದೈತ್ಯ Oppo Find X8 Pro ಸ್ಮಾರ್ಟ್‌ಫೋನ್‌ ಖರೀದಿಸಲು ಇದುವೇ ಸಕಾಲ!

Oppo ಮೊಬೈಲ್‌ ಕಂಪನಿಯ ಜನಪ್ರಿಯ ಮೊಬೈಲ್‌ಗಳ ಪೈಕಿ ಒಂದಾದ Oppo Find X8 Pro ಸ್ಮಾರ್ಟ್‌ಫೋನ್‌ ಇದೀಗ ಭರ್ಜರಿ ಬೆಲೆ ಇಳಿಕೆ ಪಡೆದಿದೆ. ದೈತ್ಯ ಇ ಕಾಮರ್ಸ್‌ ತಾಣ Amazon ನಲ್ಲಿ ಈ ಮೊಬೈಲ್‌ ಈಗ ಸಖತ್ ಡಿಸ್ಕೌಂಟ್‌ ಪ್ರೈಸ್‌ಟ್ಯಾಗ್‌ನಲ್ಲಿ ಲಭ್ಯ ಇದೆ. ಅಂದಹಾಗೆ Oppo Find X8 Pro ಸ್ಮಾರ್ಟ್‌ಫೋನ್‌ ಸಂಸ್ಥೆಯ Oppo Find X9 ಸರಣಿಯ ಹಿಂದಿನ ಫೋನ್‌ ಮಾಡೆಲ್‌ ಆಗಿದ್ದು ಸದ್ಯ ಆಫರ್‌ ಪಡೆದಿದೆ. ಈ ಫೋನ್‌ MediaTek Dimensity 9400 ಚಿಪ್‌ಸೆಟ್‌ ಪ್ರೊಸೆಸರ್‌ ಪವರ್‌ ಪಡೆದಿದ್ದು ಹಾಗೆಯೇ ಇದರ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್‌ ಒಳಗೊಂಡಿದೆ. ಹಾಗಾದರೆ Oppo Find X8 Pro ಸ್ಮಾರ್ಟ್‌ಫೋನಿನ ಆಫರ್‌ ಬೆಲೆ ಹಾಗೂ ಫೀಚರ್ಸ್‌ ಬಗ್ಗೆ ಮುಂದೆ ನೋಡೋಣ.

Digit.in Survey
✅ Thank you for completing the survey!

Also Read : Vivo X200T ಭಾರತದಲ್ಲಿ ಬಿಡುಗಡೆಯಾಗಿದೆ! ಜಬರ್ದಸ್ತ್‌ ಫೀಚರ್ಸ್‌ ಇರುವ ಈ ಫೋನ್‌ ಬೆಲೆ ಎಷ್ಟು?

ಅಮೆಜಾನ್‌ನಲ್ಲಿ Oppo Find X8 Pro ಆಫರ್‌ ಬೆಲೆ ಎಷ್ಟು

ಒಪ್ಪೋ ಸಂಸ್ಥೆಯ Oppo Find X8 Pro ಸ್ಮಾರ್ಟ್‌ಫೋನ್‌ ಭಾರತದಲ್ಲಿ 99,999 ರೂಗಳ ಬೆಲೆಯಲ್ಲಿ ಲಾಂಚ್ ಆಗಿತ್ತು. ಸದ್ಯ Amazon ಇ ಕಾಮರ್ಸ್‌ ಪ್ಲಾಟ್‌ಫಾರ್ಮ್‌ನಲ್ಲಿ ಬೊಂಬಾಟ್‌ ಬೆಲೆ ಇಳಿಕೆ ಪಡೆದಿದೆ. ಇದು ಅಮೆಜಾನ್‌ ಪ್ಲಾಟ್‌ಫಾರ್ಮ್‌ನಲ್ಲಿ Oppo Find X8 Pro ಫೋನ್‌ 86,990 ರೂ.ಗಳ ಬೆಲೆಯಲ್ಲಿ ಕಾಣಿಸಿಕೊಂಡಿದ್ದು, 13,009 ರೂ.ಗಳ ಫ್ಲಾಟ್ ಡಿಸ್ಕೌಂಟ್‌ ಪಡೆದಿದೆ. ಇದನ್ನು ಹೊರತುಪಡಿಸಿ ಗ್ರಾಹಕರು BOBCARD EMI ಕಾರ್ಡ್‌ ಮೂಲಕ ಖರೀದಿ ಮಾಡಿದರೆ 5,500 ರೂಗಳ ಹೆಚ್ಚುವರಿ ಡಿಸ್ಕೌಂಟ್‌ ಪಡೆಯಬಹುದು. ಈ ಆಫರ್‌ ಅಲ್ಲದೇ Amazon ಪ್ಲಾಟ್‌ಫಾರ್ಮ್‌ 2,000 ರೂಗಳ ಮೌಲ್ಯದ ಕೂಪನ್ ರಿಯಾಯಿತಿ ನೀಡುತ್ತಿದೆ.

Oppo Find X8 Pro ಫೋನಿನ ಪ್ರಮುಖ ಫೀಚರ್ಸ್‌

Oppo Find X8 Pro ಮೊಬೈಲ್‌ 6.78 ಇಂಚಿನ AMOLEDಡಿಸ್‌ಪ್ಲೇ ಅನ್ನು ಹೊಂದಿದ್ದು ಇದರ ಸ್ಕ್ರೀನ್‌ 120Hz ವರೆಗಿನ ರಿಫ್ರೆಶ್ ರೇಟ್‌ ಸಪೋರ್ಟ್‌ ಪಡೆದಿದೆ. ಹಾಗೆಯೇ ಬೆಳಕಿನಲ್ಲಿ4,500 nits ಗರಿಷ್ಠ ಬ್ರೈಟ್ನೆಸ್‌ ಸೌಲಭ್ಯ ಪಡೆದಿದೆ. ಅಲ್ಲದೇ ಈ ಫೋನ್‌ MediaTek Dimensity 9400 ಚಿಪ್‌ಸೆಟ್‌ ಪ್ರೊಸೆಸರ್‌ ಬಲದಲ್ಲಿ ಕೆಲಸ ಮಾಡಲಿದೆ. ಅಲ್ಲದೇ ಇದು 16GB RAM + 512GB ಸ್ಟೋರೇಜ್‌ ಆಯ್ಕೆಯ ಸೌಲಭ್ಯ ಸಹ ಪಡೆದಿದೆ. ಇದರೊಂದಿಗೆ ಈ ಮೊಬೈಲ್‌ 5,910mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿದ್ದು ಇದಕ್ಕೆ ಪೂರಕವಾಗಿ 80W ವೈರ್ಡ್ ಫಾಸ್ಟ್ ಚಾರ್ಜಿಂಗ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಸಪೋರ್ಟ್ ಸಹ ನೀಡಲಾಗಿದೆ.

ಇನ್ನು ಒಪ್ಪೋದ ಈ Oppo Find X8 Pro ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ಕ್ವಾಡ್‌ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು ಇದರ ಪ್ರಾಥಮಿಕ ಕ್ಯಾಮೆರಾವು 50MP ಸೆನ್ಸಾರ್‌ ಆಗಿದೆ. ಹಾಗೆಯೇ ಇದರ ಇನ್ನುಳಿದ ಮೂರು ಕ್ಯಾಮೆರಾಗಳು ಕೂಡಾ 50MP ಸೆನ್ಸಾರ್‌ ಸೌಲಭ್ಯ ಪಡೆದಿವೆ. ಹಾಗೆಯೇ ಮುಂಭಾಗದಲ್ಲಿ ಸೆಲ್ಫಿ ಹಾಗೂ ವೀಡಿಯೊ ಕರೆಗಳಿಗಾಗಿ 32MP ಸೆನ್ಸಾರ್‌ ಇರುವ ಕ್ಯಾಮೆರಾ ಸೌಲಭ್ಯ ಒದಗಿಸಲಾಗಿದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile

Digit.in
Logo
Digit.in
Logo