ಭಾರತದಲ್ಲಿ iQOO 15 ಬಿಡುಗಡೆಗೆ ಮುಹೂರ್ತ ಫಿಕ್ಸ್! ಬೆಲೆ ಮತ್ತು ಫೀಚರ್ಸ್ ಮಾಹಿತಿ ಇಲ್ಲಿದೆ
iQOO 15R ಇದೇ ಫೆಬ್ರವರಿ 24, 2026 ರಂದು ಭಾರತೀಯ ಮಾರುಕಟ್ಟೆಗೆ ಲಾಂಚ್ ಆಗಲಿದೆ
iQOO 15R ಕುರಿತಾಗಿ ಅಮೆಜಾನ್ ಇ ಕಾಮರ್ಸ್‌ನಲ್ಲಿ ವಿಶೇಷ ಮೈಕ್ರೋಪೇಜ್ ಲೈವ್ ಆಗಿದೆ.
Vivo ಸಂಸ್ಥೆಯ ಸಬ್-ಬ್ರಾಂಡ್ ಆಗಿರುವ iQOO ಈಗ ಭಾರತೀಯ ಮಾರುಕಟ್ಟೆಗೆ ಮತ್ತೊಂದು ನೂತನ ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸಲು ಸಜ್ಜಾಗಿದೆ. ಸಂಸ್ಥೆಯು ಮುಂದಿನ ತಿಂಗಳು iQOO 15R ಹೆಸರಿನ ಹೊಸ ಮೊಬೈಲ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡುವುದಾಗಿ ಸೂಚಿಸಿದೆ. ಈ ಬಗ್ಗೆ X ನಲ್ಲಿ ಪೋಸ್ಟ್ ಮಾಡಿರುವ iQOO ಇಂಡಿಯಾ ಸಿಇಒ ನಿಪುನ್ ಮರಿಯಾ, ಫೆಬ್ರವರಿ ತಿಂಗಳ ಕೊನೆಯ ವಾರದಲ್ಲಿ ಮೊಬೈಲ್ ಬಿಡುಗಡೆ ಆಗುವುದನ್ನು ಟೀಸರ್ ಮೂಲಕ ದೃಢಪಡಿಸಿದ್ದಾರೆ. ಟೀಸರ್ ಮಾಹಿತಿ ಪ್ರಕಾರ ಈ ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಪಡೆದಿರುವುದು ಬಹುತೇಕ ಖಚಿತವಾಗಿದೆ. ಇನ್ನುಳಿದಂತೆ iQOO 15R ಫೋನಿನ ನಿರೀಕ್ಷಿತ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ.
SurveyAlso Read : BSNL Bharat Connect 26 ಆಫರ್: ಒಂದೇ ರೀಚಾರ್ಜ್‌ನಲ್ಲಿ ಪ್ರತಿದಿನ 2.6GB ಡೇಟಾ, 365 ದಿನಗಳ ವ್ಯಾಲಿಡಿಟಿ ಸೌಲಭ್ಯ!
iQOO 15R ಲಾಂಚ್ ಮಾಹಿತಿ
ಹೊಸ iQOO 15R ಫೋನ್ ಇದೇ ಫೆಬ್ರವರಿ 24, 2026 ರಂದು ಭಾರತೀಯ ಮಾರುಕಟ್ಟೆಗೆ ಅಧಿಕೃತವಾಗಿ ಎಂಟ್ರಿ ಕೊಡಲು ಸಜ್ಜಾಗಿದೆ. ಈಗಾಗಲೇ ಈ ಸ್ಮಾರ್ಟ್‌ಫೋನ್‌ಗಾಗಿ ಅಮೆಜಾನ್ ಇ ಕಾಮರ್ಸ್ ತಾಣದಲ್ಲಿ ವಿಶೇಷ ಮೈಕ್ರೋಪೇಜ್ ಕೂಡಾ ಲೈವ್ ಆಗಿದೆ. ಮೈಕ್ರೋಪೇಜ್ ಫೋನಿನ ಕುರಿತು ಕೆಲವು ಪ್ರಮುಖ ಫೀಚರ್ಸ್‌ಗಳ ಬಗ್ಗೆ ಪ್ರಾಥಮಿಕ ಸುಳಿವುಗಳನ್ನು ನೀಡುತ್ತಿದೆ. ಮೊಬೈಲ್‌ನ ಸೇಲ್ ಆರಂಭದ ದಿನಾಂಕ, ಲಭ್ಯತೆ ಹಾಗೂ ಇತರೆ ಪ್ರಮುಖ ವಿವರಗಳನ್ನು ಸಂಸ್ಥೆಯು ಇನ್ನೂ ಅಧಿಕೃತವಾಗಿ ಹೊರಹಾಕಿಲ್ಲ. ಇನ್ನು ಭಾರತದಲ್ಲಿ ಈ ಫೋನ್ ಭಾರತದಲ್ಲಿ 45,999 ರೂಗಳ ಬೆಲೆಯೊಂದಿಗೆ ಮಾರುಕಟ್ಟೆಗೆ ಪರಿಚಯವಾಗಬಹುದು ಎನ್ನಲಾಗಿದೆ.

iQOO 15R ಫೋನಿನ ನಿರೀಕ್ಷಿತ ಫೀಚರ್ಸ್ ಮಾಹಿತಿ
ಸಂಸ್ಥೆಯ ಮುಂಬರುವ iQOO 15R ಮೊಬೈಲ್ 6.59 ಇಂಚಿನ 1.5K LTPS OLED ಪ್ಯಾನೆಲ್ ಅನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಅಲ್ಲದೇ ಇದು 144Hz ರಿಫ್ರೆಶ್ ರೇಟ್ ಮತ್ತು 1,800 nits ಗರಿಷ್ಠ ಬ್ರೈಟ್ನೆಸ್ ಸಪೋರ್ಟ್ ಅನ್ನು ಹೊಂದಿರಲಿದೆ ಎನ್ನಲಾಗಿದೆ. ಹಾಗೆಯೇ ಈ ಫೋನ್ Snapdragon 8 Gen 5 SoC ಚಿಪ್‌ಸೆಟ್ ಪ್ರೊಸೆಸರ್ ಪವರ್ ಅನ್ನು ಒಳಗೊಂಡಿರಬಹುದು ಎಂದು ನಿರೀಕ್ಷಿಸಲಾಗಿದೆ. ಇದರೊಂದಿಗೆ Q2 ಗೇಮಿಂಗ್ ಚಿಪ್‌ಸೆಟ್ ಅನ್ನು ಸಹ ಒಳಗೊಂಡಿರಬಹುದು ಹಾಗೂ LPDDR5X ಅಲ್ಟ್ರಾ RAM ಮತ್ತು UFS 4.1 ಸಂಗ್ರಹಣೆ ಆಯ್ಕೆ ಪಡೆದಿರಲಿದೆ.
ಅಂದಹಾಗೆ iQOO 15R ಮೊಬೈಲ್ 7,600 mAh ಬ್ಯಾಟರಿ ಬ್ಯಾಕ್‌ಅಪ್ ಬೆಂಬಲ ಪಡೆದಿರಲಿದ್ದು ಅದಕ್ಕೆ ಅನುಗುಣವಾಗಿ 100W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಅನ್ನು ಒಳಗೊಂಡಿರಬಹುದು ಎಂದು ಹೇಳಲಾಗುತ್ತಿದೆ. ಹಾಗೆಯೇ ಈ ಮೊಬೈಲ್ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP68 + IP69 ರೇಟಿಂಗ್ ಸೌಲಭ್ಯ ಸಹ ಪಡೆದಿರುವ ನಿರೀಕ್ಷೆಗಳು ಅಧಿಕವಾಗಿವೆ. ಇನ್ನು iQOO 15R ಫೋನ್ OnePlus 15R ಮತ್ತು Motorola ಸಿಗ್ನೇಚರ್ ಸ್ಮಾರ್ಟ್‌ಫೋನ್‌ಗಳಿಗೆ ನೇರ ಪ್ರತಿಸ್ಪರ್ಧಿಯಾಗಲಿದೆ ಎನ್ನಲಾಗಿದೆ.
iQOO 15R ಮೊಬೈಲ್‌ನ ಕ್ಯಾಮೆರಾ ವಿಭಾಗವು ಆಕರ್ಷಕ ರಚನೆಯೊಂದಿಗೆ ಇರಲಿದೆ. ಈ ಫೋನಿನ ಪ್ರಾಥಮಿಕ ಕ್ಯಾಮೆರಾವು 200MP OIS ಸೆನ್ಸಾರ್ ಆಗಿರಲಿದೆ ಎಂದು ಹೇಳಲಾಗುತ್ತಿದೆ. ಇನ್ನು ಇದು 8MP ಸೆಕೆಂಡರಿ ಕ್ಯಾಮೆರಾ ಸೆನ್ಸರ್ ಅನ್ನು ಒಳಗೊಂಡಿರಬಹುದು. ಅಲ್ಲದೇ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಇದು 32MP ಸೆನ್ಸಾರ್‌ನ ಸೆಲ್ಫಿ ಕ್ಯಾಮೆರಾವನ್ನು ಪಡೆದಿರುವ ಅಂದಾಜುಗಳು ಇವೆ. ಇದು ಲೋಹದ ಚೌಕಟ್ಟು ಮತ್ತು ಹಿಂಭಾಗದಲ್ಲಿ ಗ್ಲಾಸಿ ವಿನ್ಯಾಸ ಹೊಂದಿರಬಹುದು ಎನ್ನಲಾಗಿದೆ.
Manthesh B
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile