ನೀವು Jio ಗ್ರಾಹಕರೇ? ಪ್ರತಿದಿನ ಹೆಚ್ಚಿನ Data ಬೇಕಿದ್ದರೆ ಈ ಪ್ಲಾನ್‌ಗಳನ್ನು ರೀಚಾರ್ಜ್ ಮಾಡಿ!

HIGHLIGHTS

Jio ಟೆಲಿಕಾಂನ 2025ರೂಗಳ, 3599ರೂಗಳ ಹಾಗೂ 3999ರೂಗಳು ಅಧಿಕ ಡೇಟಾಗೆ ಆಕರ್ಷಕ ಎನಿಸಿವೆ

Jio ಟೆಲಿಕಾಂನ ಈ ಮೂರು ಯೋಜನೆಗಳು ಪ್ರತಿದಿನ 2.5GB Data ಸೌಲಭ್ಯ ಒದಗಿಸುತ್ತವೆ

ನೀವು Jio ಗ್ರಾಹಕರೇ? ಪ್ರತಿದಿನ ಹೆಚ್ಚಿನ Data ಬೇಕಿದ್ದರೆ ಈ ಪ್ಲಾನ್‌ಗಳನ್ನು ರೀಚಾರ್ಜ್ ಮಾಡಿ!

Jio ಟೆಲಿಕಾಂ ಹತ್ತು ಹಲವು ಆಕರ್ಷಕ ರೀಚಾರ್ಜ್‌ ಪ್ಲಾನ್‌ಗಳ ಮೂಲಕ ಅಧಿಕ ಗ್ರಾಹಕರನ್ನು ಸೆಳೆದಿದೆ. ಹಾಗೆಯೇ ಪ್ರತಿದಿನ ಅಧಿಕ Data ಪ್ರಯೋಜನ ಬಯಸುವ ತನ್ನ ಗ್ರಾಹಕರಿಗಾಗಿಯೂ ಕೆಲವು ಪ್ರೀಪೇಯ್ಡ್‌ ಯೋಜನೆಗಳ ಆಯ್ಕೆ ನೀಡಿದೆ. ಇನ್ನು ಹೆಚ್ಚಿನ ಡೇಟಾ ಸೌಲಭ್ಯ ಒದಗಿಸುವ ಬಹುತೇಕ ಯೋಜನೆಗಳು ದೀರ್ಘಾವಧಿಯ ವ್ಯಾಲಿಡಿಟಿ ಪ್ರಯೋಜನ ಪಡೆದಿವೆ. ಈ ನಿಟ್ಟಿನಲ್ಲಿ ಜಿಯೋದ 2025ರೂಗಳ ಪ್ಲಾನ್, 3599ರೂಗಳ ಯೋಜನೆ ಹಾಗೂ 3999ರೂಗಳ ಪ್ಲಾನ್‌ಗಳು ಅಧಿಕ ದೈನಂದಿನ ಡೇಟಾಗೆ ಆಕರ್ಷಕವಾಗಿ ಕಾಣುತ್ತವೆ. ಹಾಗಾದರೆ ಜಿಯೋ ಟೆಲಿಕಾಂನ ಈ ಮೂರು ರೀಚಾರ್ಜ್‌ ಯೋಜನೆಗಳ ಪ್ರಯೋಜನಗಳ ಬಗ್ಗೆ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : iPhone 16 Plus ಫೋನ್‌ಗೆ 18,010 ರೂಗಳ ನೇರ ರಿಯಾಯಿತಿ! ಈ ಚಾನ್ಸ್‌ ಮಿಸ್‌ ಮಾಡ್ಕೋತೀರಾ?

Jio ಟೆಲಿಕಾಂನ 2025 ರೂಗಳ ಪ್ರೀಪೇಯ್ಡ್‌ ಪ್ಲಾನ್ ಮಾಹಿತಿ

ಜಿಯೋ ಸಂಸ್ಥೆಯ ಈ ಪ್ರೀಪೇಯ್ಡ್‌ ರೀಚಾರ್ಜ್‌ ಯೋಜನೆಯು ಒಟ್ಟು 200 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ಈ ವ್ಯಾಲಿಡಿಟಿ ಅವಧಿಯಲ್ಲಿ ಗ್ರಾಹಕರಿಗೆ ಪ್ರತಿದಿನ 2.5GB Data ಸೌಲಭ್ಯ ಒದಗಿಸಲಿದ್ದು ಒಟ್ಟಾರೆ ಪೂರ್ಣವಧಿ ವ್ಯಾಲಿಡಿಟಿಗೆ 500GB ಡೇಟಾ ಪ್ರಯೋಜನ ಸಿಗಲಿದೆ. ಹಾಗೆಯೇ ಅನ್‌ಲಿಮಿಟೆಡ್‌ ವಾಯ್ಸ್‌ ಕರೆಗಳ ಪ್ರಯೋಜನ ದೊರೆಯುತ್ತದೆ ಇದರೊಂದಿಗೆ ಪ್ರತಿದಿನ 100 SMS ಸೌಲಭ್ಯ ಸಹ ಲಭ್ಯ ಇರಲಿದೆ. ಅಲ್ಲದೇ JioTV ಹಾಗೂ JioAICloud ಚಂದಾದಾರಿಕೆಯು ಲಭ್ಯ ಆಗಲಿದೆ. ಗ್ರಾಹಕರು ಈ ಪ್ಲಾನ್‌ ಅನ್ನು ಮೈ ಜಿಯೋ ಆಪ್‌ ಮೂಲಕ ರೀಚಾರ್ಜ್ ಮಾಡಬಹುದು.

Jio ಟೆಲಿಕಾಂನ 3599 ರೂಗಳ ರೀಚಾರ್ಜ್‌ ಪ್ಲಾನ್ ಪ್ರಯೋಜನಗಳು

ರಿಲಯನ್ಸ್‌ ಜಿಯೋ ಕಂಪನಿಯ ಈ ಪ್ರೀಪೇಯ್ಡ್‌ ರೀಚಾರ್ಜ್‌ ಯೋಜನೆಯು ಒಟ್ಟು 365 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ಈ ವ್ಯಾಲಿಡಿಟಿ ಅವಧಿಯಲ್ಲಿ ಗ್ರಾಹಕರಿಗೆ ಪ್ರತಿದಿನ 2.5GB Data ಸೌಲಭ್ಯ ಒದಗಿಸಲಿದ್ದು ಹಾಗೆಯೇ ಪೂರ್ಣವಧಿ ವ್ಯಾಲಿಡಿಟಿಗೆ 912.5 GB ಡೇಟಾ ಪ್ರಯೋಜನ ದೊರೆಯುತ್ತದೆ. ಅಲ್ಲದೇ ಈ ಯೋಜನೆಯಲ್ಲಿ ಅನ್‌ಲಿಮಿಟೆಡ್‌ ವಾಯ್ಸ್‌ ಕರೆಗಳ ಪ್ರಯೋಜನ ದೊರೆಯುತ್ತದೆ ಇದರ ಜೊತೆಗೆ ಪ್ರತಿದಿನ 100 SMS ಸೌಲಭ್ಯ ಸಹ ಲಭ್ಯ ಇರಲಿದೆ. ಹಾಗೆಯೇ JioTV ಹಾಗೂ JioAICloud ಚಂದಾದಾರಿಕೆಯು ಲಭ್ಯ ಆಗಲಿದೆ. ಗ್ರಾಹಕರು ಈ ಪ್ಲಾನ್‌ ಅನ್ನು ಮೈ ಜಿಯೋ ಆಪ್‌ ಮೂಲಕ ರೀಚಾರ್ಜ್ ಮಾಡಬಹುದು.

Jio ಟೆಲಿಕಾಂನ 3999 ರೂಗಳ ರೀಚಾರ್ಜ್‌ ಪ್ಲಾನ್ ಪ್ರಯೋಜನಗಳು

ಜಿಯೋ ಕಂಪನಿಯ ಈ ದುಬಾರಿ ಪ್ರೀಪೇಯ್ಡ್‌ ರೀಚಾರ್ಜ್‌ ಪ್ಲಾನ್‌ ಸಹ ಒಟ್ಟು 365 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ಈ ವ್ಯಾಲಿಡಿಟಿ ಅವಧಿಯಲ್ಲಿ ಗ್ರಾಹಕರಿಗೆ ಪ್ರತಿದಿನ 2.5GB Data ಸೌಲಭ್ಯ ಒದಗಿಸಲಿದ್ದು ಹಾಗೆಯೇ ಪೂರ್ಣವಧಿ ವ್ಯಾಲಿಡಿಟಿಗೆ 912.5 GB ಡೇಟಾ ಪ್ರಯೋಜನ ದೊರೆಯುತ್ತದೆ. ಅಲ್ಲದೇ ಈ ಯೋಜನೆಯಲ್ಲಿ ಅನ್‌ಲಿಮಿಟೆಡ್‌ ವಾಯ್ಸ್‌ ಕರೆಗಳ ಪ್ರಯೋಜನ ದೊರೆಯುತ್ತದೆ ಇದರ ಜೊತೆಗೆ ಪ್ರತಿದಿನ 100 SMS ಸೌಲಭ್ಯ ಸಹ ಲಭ್ಯ ಇರಲಿದೆ. ಇದರೊಂದಿಗೆ ಗ್ರಾಹಕರಿಗೆ FanCode, JioTV ಹಾಗೂ JioAICloud ಚಂದಾದಾರಿಕೆಯು ಸಹ ಸಿಗಲಿದೆ. ಗ್ರಾಹಕರು ಈ ಯೋಜನೆಯನ್ನು ಅನ್ನು ಮೈ ಜಿಯೋ ಆಪ್‌ ಮೂಲಕ ರೀಚಾರ್ಜ್ ಮಾಡಬಹುದು.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile

Digit.in
Logo
Digit.in
Logo