Upcoming Smartphone: ಹೊಸ ಫೋನ್‌ ಖರೀದಿಸುವ ಪ್ಲಾನ್‌ ಇದ್ರೆ ಇಲ್ಲಿ ಗಮನಿಸಿ; ಈ ವಾರ ಲಾಂಚ್‌ ಆಗಲಿವೆ ಈ ಫೋನ್‌ಗಳು!

HIGHLIGHTS

Redmi Note 15 Pro+ ಸರಣಿ ಇದೇ ಜನವರಿ 29 ರಂದು ಲಾಂಚ್ ಆಗಲಿದೆ

Vivo X200T ಸ್ಮಾರ್ಟ್‌ಫೋನ್‌ ಇದೇ ಜನವರಿ 27 ರಂದು ಮಾರುಕಟ್ಟೆಗೆ ಲಗ್ಗೆ ಇಡಲಿದೆ

Realme P4 Power ಫೋನ್‌ ಇದೇ ಜನವರಿ 29 ರಂದು ಬಿಡುಗಡೆ ಆಗಲಿದೆ

Upcoming Smartphone: ಹೊಸ ಫೋನ್‌ ಖರೀದಿಸುವ ಪ್ಲಾನ್‌ ಇದ್ರೆ ಇಲ್ಲಿ ಗಮನಿಸಿ; ಈ ವಾರ ಲಾಂಚ್‌ ಆಗಲಿವೆ ಈ ಫೋನ್‌ಗಳು!

Upcoming Smartphone: ಜನವರಿಯ ಈ ಕೊನೆಯ ವಾರ ಸ್ಮಾರ್ಟ್‌ಫೋನ್ ಪ್ರಿಯರಿಗೆ ಭರ್ಜರಿ ಸಂತಸ ತರಲಿದೆ. ಏಕೆಂದರೆ ಈ ಅವಧಿಯಲ್ಲಿ ಭಾರತೀಯ ಮೊಬೈಲ್‌ ಮಾರುಕಟ್ಟೆಗೆ ಮೂರು ಹೊಸ ಸ್ಮಾರ್ಟ್‌ಫೋನ್‌ಗಳು ಲಗ್ಗೆ ಇಡಲಿವೆ. ಹೌದು, ಈ ವಾರದಲ್ಲಿ Redmi Note 15 Pro ಸರಣಿ, Vivo X200T ಮತ್ತು Realme P4 Power ಸ್ಮಾರ್ಟ್‌ಫೋನ್‌ಗಳು ಗ್ರ್ಯಾಂಡ್‌ ಎಂಟ್ರಿ ಪಡೆಯಲಿವೆ. ಅಂದಹಾಗೆ ಲಾಂಚ್ ಆಗಲಿರುವ ಈ ಸ್ಮಾರ್ಟ್‌ಫೋನ್‌ಗಳು ಮಿಡ್ ರೇಂಜ್ ಹಾಗೂ ಪ್ರೀಮಿಯಂ ವಿಭಾಗವನ್ನು ಗುರಿಯಾಗಿಸಿಕೊಂಡಿವೆ. ಕೆಲವು ಲೀಕ್ ಮಾಹಿತಿಗಳ ಮೂಲಕ ಈಗಾಗಲೇ ಗ್ರಾಹಕರಲ್ಲಿ ಸಖತ್ ಕುತೂಹಲ ಮೂಡಿಸಿರುವ ಈ ಫೋನ್‌ಗಳ ನಿರೀಕ್ಷಿತ ಫೀಚರ್ಸ್‌, ಬಿಡುಗಡೆಯ ದಿನಾಂಕ ಹಾಗೂ ಇತರೆ ಮಾಹಿತಿ ಮುಂದೆ ನೋಡೋಣ.

Digit.in Survey
✅ Thank you for completing the survey!

Also Read : ಭರ್ಜರಿ ಡಿಸ್ಕೌಂಟ್‌ನಲ್ಲಿ OnePlus Nord CE 5 5G ಫೋನ್‌ ಖರೀದಿಸಲು ಇದುವೇ ಬೆಸ್ಟ್‌ ಟೈಮ್‌!

Redmi Note 15 Pro+ ಸ್ಮಾರ್ಟ್‌ಫೋನ್‌

ಇದೇ ಜನವರಿ 29 ರಂದು Redmi Note 15 Pro ಸರಣಿಯು ದೇಶಿಯ ಮೊಬೈಲ್‌ ಮಾರುಕಟ್ಟೆಗೆ ಪ್ರವೇಶ ಮಾಡಲಿದೆ. ಈ ಸರಣಿಯು ಈಗಾಗಲೇ ಗ್ರಾಹಕರು ನಿರೀಕ್ಷಿಸಿದಂತೆ Redmi Note 15 Pro ಮತ್ತು Redmi Note 15 Pro+ ಮಾಡೆಲ್‌ಗಳ ಆಯ್ಕೆ ಪಡೆದಿರಲಿದೆ. ಇನ್ನು Redmi Note 15 Pro+ ಫೋನ್‌ ಟಾಪ್-ಎಂಡ್ ಮಾಡೆಲ್‌ ಆಗಿರಲಿದ್ದು ಇದು 200MP ಮಾಸ್ಟರ್‌ಪಿಕ್ಸೆಲ್ OIS ಕ್ಯಾಮೆರಾವನ್ನು ಹೊಂದಿರಲಿದೆ. ಅಲ್ಲದೇ ಈ ಸ್ಮಾರ್ಟ್‌ಫೋನ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ರಕ್ಷಣೆಯೊಂದಿಗೆ IP66, IP68, IP69, ಮತ್ತು IP69K ರೇಟಿಂಗ್‌ ಸೌಲಭ್ಯ ಪಡೆದಿರಲಿದೆ ಇದರ ಜೊತೆಗೆ ಈ ಮೊಬೈಲ್‌ 6,500mAh ಬ್ಯಾಟರಿಯ ಬ್ಯಾಕ್‌ಅಪ್‌ ಸಪೋರ್ಟ್‌ ಸಹ ಪಡೆದಿರಲಿದೆ. ಹಾಗೆಯೇ ಇದು Snapdragon 7s Gen 4 ಪ್ರೊಸೆಸರ್‌ ಬಲದಲ್ಲಿ ಕೆಲಸ ಮಾಡಲಿದೆ ಎನ್ನಲಾಗಿದೆ.

Redmi Note 15 Pro ಸ್ಮಾರ್ಟ್‌ಫೋನ್‌

Redmi Note 15 Pro ಈ ಫೋನ್‌ ಬಹುತೇಕ Redmi Note 15 Pro+ ಮಾಡೆಲ್‌ ಫೀಚರ್ಸ್‌ಗಳ ಆಯ್ಕೆಗಳನ್ನೇ ಒಳಗೊಂಡಿರಲಿದೆ ಎನ್ನಲಾಗಿದೆ. ಮುಖ್ಯವಾಗಿ ಆಕರ್ಷಕ ಡಿಸ್ಪ್ಲೇ, 200MP ಕ್ಯಾಮೆರಾ ಸೌಲಭ್ಯದ ಜೊತೆಗೆ AI ಫೀಚರ್ಸ್‌ಗಳನ್ನು ಇದೆ ಪಡೆದಿರಲಿದೆ. Redmi Note 15 Pro ಇದು MediaTek Dimensity 7400 Ultra ಚಿಪ್‌ಸೆಟ್ ಪ್ರೊಸೆಸರ್‌ ಪಡೆದಿರುವ ಸಾಧ್ಯತೆ ಇವೆ. ಅಲ್ಲದೇ ಇದು 6,580mAh ಬ್ಯಾಟರಿ ಬ್ಯಾಕ್‌ಅಪ್‌ ಬಲವನ್ನು ಪಡೆಯಬಹುದು ಎಂದು ಹೇಳಲಾಗುತ್ತಿದ್ದು ಇದಕ್ಕೆ ಪೂರಕವಾಗಿ 45W ಚಾರ್ಜಿಂಗ್ ಸಪೋರ್ಟ್‌ ಪಡೆದಿರಲಿದೆ ಎಂದು ಲೀಕ್ ಮಾಹಿತಿಗಳಿಂದ ತಿಳಿದುಬಂದಿದೆ.

Vivo X200T ಸ್ಮಾರ್ಟ್‌ಫೋನ್‌

ಇದೇ ಜನವರಿ 27 ರಂದು Vivo X200T ಸ್ಮಾರ್ಟ್‌ಫೋನ್‌ ಅಧಿಕೃತವಾಗಿ ಲಾಂಚ್ ಆಗಲಿದೆ. ಈ ಫೋನ್ T ಸರಣಿಯ ಮಾದರಿಯಾಗಿದೆ. ಕೆಲವು ಲೀಕ್ ಮಾಹಿತಿ ಪ್ರಕಾರ ಇದು 6.67 ಇಂಚಿನ 1.5K AMOLED ಡಿಸ್ಪ್ಲೇಯನ್ನು 120Hz ರಿಫ್ರೆಶ್ ರೇಟ್‌ ಜೊತೆಗೆ ಪಡೆದಿರಲಿದೆ. ಇನ್ನು ಈ ಸ್ಮಾರ್ಟ್‌ಫೋನ್‌ನಲ್ಲಿ 50MP ZEISS ಕ್ಯಾಮೆರಾ ಸೆಟ್‌ಅಪ್‌ ಪಡೆದಿರಲಿದೆ. ಇದರ ಮೊದಲ ಕ್ಯಾಮೆರಾ, ಅಲ್ಟ್ರಾ-ವೈಡ್ ಹಾಗೂ ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್ ಒಳಗೊಂಡಿರಲಿವೆ. ಹಾಗೆಯೇ ಈ ಮೊಬೈಲ್‌ MediaTek Dimensity 9400+ chipset ಪ್ರೊಸೆಸರ್‌ ಪವರ್‌ನಲ್ಲಿ ಕೆಲಸ ಮಾಡಲಿದೆ. ಇದೇ ರೀತಿ ಈ ಫೋನ್‌ 6,200mAh ಬ್ಯಾಟರಿ ಬ್ಯಾಕ್‌ಅಪ್‌ ಸಪೋರ್ಟ್‌ ಪಡೆದಿರುವ ನಿರೀಕ್ಷೆಗಳು ಇವೆ. ಇದಕ್ಕೆ ಪೂರಕವಾಗಿ ಚಾರ್ಜಿಂಗ್ 90W ವೈರ್ಡ್ ಮತ್ತು 40W ವೈರ್‌ಲೆಸ್ ವೇಗವನ್ನು ಬೆಂಬಲಿಸುತ್ತದೆ.

Realme P4 Power ಸ್ಮಾರ್ಟ್‌ಫೋನ್‌

ರಿಯಲ್‌ಮಿ ಸಂಸ್ಥೆಯ ಹೊಸ Realme P4 Power ಫೋನ್‌ ಇದೇ ಜನವರಿ 29 ರಂದು ಮಾರುಕಟ್ಟೆಗೆ ಬಿಡುಗಡೆ ಆಗಲಿದೆ. ಈ ಫೋನ್ 10,001mAh ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿರುವುದು ಪ್ರಮುಖ ಹೈಲೈಟ್ ಆಗಿದೆ. ದೀರ್ಘ ಅವಧಿಯ ಈ ಬ್ಯಾಟರಿ ಸೌಲಭ್ಯವು ಒಂದೇ ಚಾರ್ಜ್‌ನಲ್ಲಿ 32.5 ಗಂಟೆಗಳ ವೀಡಿಯೊ ಸ್ಟ್ರೀಮಿಂಗ್ ಅನ್ನು ನೀಡುತ್ತದೆ ಎನ್ನಲಾಗಿದೆ. ಉಳಿದಂತೆ ಇದು 1.5K ರೆಸಲ್ಯೂಶನ್‌ ಜೊತೆಗೆ 144Hz ಹೈಪರ್‌ಗ್ಲೋ 4D ಕರ್ವ್+ ಡಿಸ್ಪ್ಲೇ ಪಡೆದಿರಲಿದೆ. ಜೊತೆಗೆ ಇದು MediaTek Dimensity 7400 Ultra ಪ್ರೊಸೆಸರ್‌ ಪವರ್‌ನಲ್ಲಿ ಕೆಲಸ ಮಾಡಲಿದೆ ಎನ್ನಲಾಗಿದೆ. ಹಾಗೆಯೇ ಇದು ಡ್ಯುಯಲ್-ಕ್ಯಾಮೆರಾ ರಚನೆ ಪಡೆದಿರಲಿದ್ದು, ಅವುಗಳು ಕ್ರಮವಾಗಿ 50MP ಸೋನಿ OIS ಕ್ಯಾಮೆರಾ ಮತ್ತು 8MP ಅಲ್ಟ್ರಾ-ವೈಡ್ ಕ್ಯಾಮೆರಾ ಆಗಿರಲಿವೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile

Digit.in
Logo
Digit.in
Logo