BSNL Bharat Connect 26 ಆಫರ್‌: ಒಂದೇ ರೀಚಾರ್ಜ್‌ನಲ್ಲಿ ಪ್ರತಿದಿನ 2.6GB ಡೇಟಾ, 365 ದಿನಗಳ ವ್ಯಾಲಿಡಿಟಿ ಸೌಲಭ್ಯ!

HIGHLIGHTS

BSNLನಿಂದ ಗಣರಾಜ್ಯೋತ್ಸವದ ಪ್ರಯುಕ್ತ Bharat Connect 26 ರೀಚಾರ್ಜ್‌ ಪ್ಲಾನ್ ಘೋಷಣೆ

BSNL Bharat Connect 26 ರೀಚಾರ್ಜ್‌ ಪ್ಲಾನ್ ಜನವರಿ 24, 2026 ರಿಂದ ಫೆಬ್ರವರಿ 24, 2026 ರ ವರೆಗೆ ಮಾತ್ರ ಲಭ್ಯ ಇರುತ್ತದೆ

BSNL ನ ಈ ಪ್ಲಾನ್ 365 ದಿನಗಳ ವ್ಯಾಲಿಡಿಟಿ ಜೊತೆಗೆ ಪ್ರತಿದಿನ 2.6GB ಡೇಟಾ ಪಡೆದಿದೆ

BSNL Bharat Connect 26 ಆಫರ್‌: ಒಂದೇ ರೀಚಾರ್ಜ್‌ನಲ್ಲಿ ಪ್ರತಿದಿನ 2.6GB ಡೇಟಾ, 365 ದಿನಗಳ ವ್ಯಾಲಿಡಿಟಿ ಸೌಲಭ್ಯ!

BSNL Bharat Connect 26: ಭಾರತದ 77ನೇ ಗಣರಾಜ್ಯೋತ್ಸವದ ಅಂಗವಾಗಿ ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿ BSNL ತನ್ನ ಗ್ರಾಹಕರಿಗಾಗಿ ದೀರ್ಘಾವಧಿಯ ಪ್ಲಾನ್‌ ಅನ್ನು ಬಿಡುಗಡೆ ಮಾಡಿದೆ. ಬಿಎಸ್‌ಎನ್‌ಎಲ್‌ ಸಂಸ್ಥೆಯು Bharat Connect 26 ಹೆಸರಿನಲ್ಲಿ ಹೊಸ ಆಕರ್ಷಕ ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್‌ ಅನ್ನು ಪರಿಚಯಿಸಿದೆ. ಈ ಪ್ಲಾನ್‌ ದೀರ್ಘಾವಧಿ ವ್ಯಾಲಿಡಿಟಿ ಸೌಲಭ್ಯ ಪಡೆದಿದ್ದು ಬಳಕೆದಾರರಿಗೆ ಡೇಟಾ, ವಾಯ್ಸ್‌ ಕರೆ ಹಾಗೂ SMS ಸೌಲಭ್ಯಗಳನ್ನು ಪೂರೈಸುತ್ತದೆ. ಪದೇ ಪದೇ ರೀಚಾರ್ಜ್‌ ಮಾಡಿಸುವುದು ಬೇಡ ಎಂದು ಬಯಸುವ ಗ್ರಾಹಕರಿಗೆ ಈ ಯೋಜನೆ ಅತ್ಯುತ್ತಮ ಆಯ್ಕೆ ಎನಿಸುತ್ತದೆ. ಹಾಗಾದರೇ BSNL ಸಂಸ್ಥೆಯ ಈ ನೂತನ ಯೋಜನೆ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : Redmi Note 14 5G ಈಗ 12,500ರೂಗಳಿಗಿಂತ ಕಡಿಮೆ ಬೆಲೆಯಲ್ಲಿ ಖರೀದಿಗೆ ಲಭ್ಯ! ಆಫರ್‌ ಮಾಹಿತಿ ಇಲ್ಲಿದೆ

BSNL Bharat Connect 26 ಲಭ್ಯತೆ ಹಾಗೂ ರೀಚಾರ್ಜ್‌ ಮಾಹಿತಿ

BSNL ಪರಿಚಯಿಸಿರುವ ನೂತನ Bharat Connect 26 ಯೋಜನೆಯು ವಾರ್ಷಿಕ ಅವಧಿಯ ಪ್ಲಾನ್‌ ಆಗಿದೆ. ಈ ವಿಶೇಷ ಪ್ರಿಪೇಯ್ಡ್ ಯೋಜನೆಯು 2,626 ರೂಗಳ ಬೆಲೆಯಲ್ಲಿ ಲಭ್ಯವಿದೆ. ಅಂದಹಾಗೆ ಈ ಹೊಸ ರೀಚಾರ್ಜ್‌ ಪ್ಲಾನ್‌ ಜನವರಿ 24, 2026 ರಿಂದ ಫೆಬ್ರವರಿ 24, 2026 ರ ವರೆಗೆ ಮಾತ್ರ ಲಭ್ಯ ಇರುತ್ತದೆ ಎಂದು BSNL ಇಂಡಿಯಾ ತನ್ನ X ಖಾತೆಯಲ್ಲಿ ಹಂಚಿಕೊಂಡಿದೆ. ಗ್ರಾಹಕರು BSNL ಸಂಸ್ಥೆಯ ಅಧಿಕೃತ ಚಾಟ್‌ಬಾಟ್ ತಾಣ ಆಗಿರುವ BRex ಮೂಲಕ ಪ್ಲಾನ್‌ ರೀಚಾರ್ಜ್ ಮಾಡಬಹುದಾಗಿದ್ದು ಇದನ್ನು chatbot.bsnl.co.in ಮೂಲಕ ಆಕ್ಸಸ್‌ ಮಾಡಬಹುದಾಗಿದೆ. ಅಲ್ಲದೇ BSNL ಸೆಲ್ಫ್‌ಕೇರ್ ಆಪ್‌ ಮೂಲಕ ಸಹ ರೀಚಾರ್ಜ್‌ ಮಾಡಬಹುದಾಗಿದೆ.

BSNL Bharat Connect 26 ಪ್ರಿಪೇಯ್ಡ್‌ ಪ್ಲಾನ್‌ ಪ್ರಯೋಜನಗಳು

Bharat Connect 26 ಹೆಸರಿನ ಈ ಹೊಸ ಯೋಜನೆ ಆಕರ್ಷಕ ಪ್ರಯೋಜನಗಳನ್ನು ಒಳಗೊಂಡಿದೆ. ಈ ಪ್ಲಾನಿನಲ್ಲಿ ಗ್ರಾಹಕರಿಗೆ ಒಟ್ಟು 365 ದಿನಗಳ ವ್ಯಾಲಿಡಿಟಿ ಸೌಲಭ್ಯ ಸಿಗಲಿದೆ. ಅಲ್ಲದೇ ಬಳಕೆದಾರರಿಗೆ ಈ ಯೋಜನೆಯಲ್ಲಿ ಪ್ರತಿದಿನ 2.6GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಇದರೊಂದಿಗೆ ಅನಿಯಮಿತ ವಾಯ್ಸ್‌ ಕರೆಯ ಸೌಲಭ್ಯ ಹಾಗೂ ಪ್ರತಿದಿನ 100 SMS ಸೌಲಭ್ಯ ಕೂಡಾ ಸಿಗಲಿದೆ. ಬಳಕೆದಾರರು ಈ ಯೋಜನೆಯಲ್ಲಿ ಒಂದು ವರ್ಷದ ಅವಧಿಗೆ ಪೂರ್ಣ ಅನುಕೂಲತೆ ಪಡೆಯಬಹುದು.

ಸಂಸ್ಥೆಯ ಈ ಹೊಸ ಯೋಜನೆಯ ಮೂಲಕ BSNL ತನ್ನ ಗ್ರಾಹಕರಿಗೆ ಹೆಚ್ಚುವರಿ ಮೌಲ್ಯವನ್ನು ನೀಡಲು ಮುಂದಾಗಿದೆ. ಮುಖ್ಯವಾಗಿ ಹೆಚ್ಚಿನ ಡೇಟಾ ಬಳಸುವವರು ಹಾಗೂ ದೀರ್ಘಾವಧಿ ವ್ಯಾಲಿಡಿಟಿ ಇರುವ ಪ್ರಿಪೇಯ್ಡ್ ಯೋಜನೆ ಬೇಡುವ ಬಳಕೆದಾರರಿಗೆ ಇದು ಬೆಸ್ಟ್‌ ಆಯ್ಕೆಯಾಗಿದೆ. ಈ ಯೋಜನೆಯ ಪ್ರಮುಖ ಆಕರ್ಷಣೆಯೆಂದರೆ, ಒಂದೇ ಬಾರಿ ರೀಚಾರ್ಜ್ ಮಾಡಿದರೆ ಒಟ್ಟು 365 ದಿನಗಳವರೆಗೆ ನಿರಂತರ ಸೇವೆಯನ್ನು ಪಡೆಯಲು ಅವಕಾಶ ಸಿಗಲಿದೆ.

77ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಘೋಷಿಸಿರುವ ಈ ಪ್ರಿಪೇಯ್ಡ್ ಪ್ಲಾನ್‌ ಗ್ರಾಹಕರಿಗೆ ವಿಶ್ವಾಸಾರ್ಹ ಡೇಟಾ, ವಾಯ್ಸ್‌ ಕರೆ ಮತ್ತು SMS ಸೌಲಭ್ಯಗಳನ್ನು ಒದಗಿಸುತ್ತದೆ. ಇನ್ನು ಬೆಲೆಯ ದೃಷ್ಟಿಯಿಂದಲೂ ಇದು ಲಾಭದಾಯಕವಾಗಿದ್ದು, ದೀರ್ಘಾವಧಿ ವ್ಯಾಲಿಡಿಟಿಗೆ ಕನೆಕ್ಷನ್ ಉಳಿಸಿಕೊಳ್ಳಲು ಬಯಸುವ ಭಾರತೀಯ ಗ್ರಾಹಕರಿಗೆ ಒಂದು ಆರ್ಥಿಕ ಮತ್ತು ಉಪಯುಕ್ತ ಕೊಡುಗೆಯಾಗಿದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile

Digit.in
Logo
Digit.in
Logo