Vivo T4 Ultra ಸ್ಮಾರ್ಟ್ಫೋನ್ ಟೆಲಿಫೋಟೋ ಸೆನ್ಸರ್ ಮತ್ತು 100X ಜೂಮ್‌ನೊಂದಿಗೆ ಬರುವ ನಿರೀಕ್ಷೆ!

HIGHLIGHTS

ಭಾರತದಲ್ಲಿ ವಿವೋ ತನ್ನ ಮುಂಬರಲಿರುವ Vivo T4 Ultra ಸ್ಮಾರ್ಟ್ಫೋನ್ ಬಿಡುಗಡೆಗೆ ಸಜ್ಜು.

Vivo T4 Ultra ಸ್ಮಾರ್ಟ್ಫೋನ್ ಟೆಲಿಫೋಟೋ ಸೆನ್ಸರ್ ಮತ್ತು 100X ಜೂಮ್‌ನೊಂದಿಗೆ ಬರುವ ನಿರೀಕ್ಷೆಗಳಿವೆ.

Vivo T4 Ultra ಮುಖ್ಯವಾಗಿ ಅತ್ಯುತ್ತಮ ಕ್ಯಾಮೆರಾ ಅನುಭವನ್ನು ನೀಡಲು ಸೂಪರ್ ಕೂಲ್ ಸೆನ್ಸರ್ಗಳಿಂದ ತಯಾರಿಸಲಾಗಿದೆ.

Vivo T4 Ultra ಸ್ಮಾರ್ಟ್ಫೋನ್ ಭಾರತದಲ್ಲಿ ಬಿಡುಗಡೆಯ ಡೇಟ್ ಇನ್ನೂ ಕಂಫಾರ್ಮ್ ಮಾಡಿಲ್ಲ ಅನ್ನೋದು ಗಮನಿಸಬೇಕಿದೆ.

Vivo T4 Ultra ಸ್ಮಾರ್ಟ್ಫೋನ್ ಟೆಲಿಫೋಟೋ ಸೆನ್ಸರ್ ಮತ್ತು 100X ಜೂಮ್‌ನೊಂದಿಗೆ ಬರುವ ನಿರೀಕ್ಷೆ!

Vivo T4 Ultra India Launch: ಚೀನಾದ ಜನಪ್ರಿಯ ಸ್ಮಾರ್ಟ್ಫೋನ್ ಬ್ರಾಂಡ್ ವಿವೋ ತನ್ನ ಮುಂಬರಲಿರುವ ಹೊಸ ಸ್ಮಾರ್ಟ್ಫೋನ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಕಂಪನಿ ಇದನ್ನು ಅನೇಕ ಇಂಟ್ರೆಸ್ಟಿಂಗ್ ಫೀಚರ್ಗಳಿಂದ ತುಂಬಿ ಮಾರುಕಟ್ಟೆಗೆ ತರಲಿದ್ದು ಇದೊಂದು ಕ್ಯಾಮೆರಾ ಸೆಂಟ್ರಿಕ್ ಫೋನ್ ಆಗಲಿದೆ. ಅಂದರೆ ಇದನ್ನು ಮುಖ್ಯವಾಗಿ ಅತ್ಯುತ್ತಮ ಕ್ಯಾಮೆರಾ ಅನುಭವನ್ನು ನೀಡಲು ಸೂಪರ್ ಕೂಲ್ ಸೆನ್ಸರ್ಗಳಿಂದ ತಯಾರಿಸಲಾಗಿದೆ ಅನ್ನೋದು ವಿಶೇಷವಾಗಿದೆ. ಈ Vivo T4 Ultra ಸ್ಮಾರ್ಟ್ಫೋನ್ ಪ್ರತ್ಯೇಕವಾಗಿ ಫ್ಲಿಪ್ಕಾರ್ಟ್ ಮೂಲಕ ಬಿಡುಗಡೆಯಾಗಿ ಮಾರಾಟವಾಗಲಿದೆ.

Digit.in Survey
✅ Thank you for completing the survey!

ಅಲ್ಲದೆ ಈಗಾಗಲೇ ಕಂಪನಿ ನೀಡಿರುವ ಟೀಸರ್ ಮೂಲಕ Vivo T4 Ultra ಸ್ಮಾರ್ಟ್ಫೋನ್ ಟೆಲಿಫೋಟೋ ಸೆನ್ಸರ್ ಮತ್ತು 100X ಜೂಮ್‌ನೊಂದಿಗೆ ಬರುವ ನಿರೀಕ್ಷೆಗಳಿವೆ ಎನ್ನುವುದನ್ನು ಕಂಫಾರ್ಮ್ ಮಾಡಿದೆ ಆದರೆ Vivo T4 Ultra ಸ್ಮಾರ್ಟ್ಫೋನ್ ಭಾರತದಲ್ಲಿ ಬಿಡುಗಡೆಯ ಡೇಟ್ ಬಗ್ಗೆ ಪ್ರಸ್ತುತ ಯಾವುದೇ ಅಪ್ಡೇಟ್ ಇನ್ನೂ ಕಂಫಾರ್ಮ್ ಮಾಡಿಲ್ಲ ಅನ್ನೋದು ಗಮನಿಸಬೇಕಿದೆ.

ಇದನ್ನೂ ಓದಿ – Best Smart TV: ಬರೋಬ್ಬರಿ 40-43 ಇಂಚಿನ ಸ್ಮಾರ್ಟ್ ಟಿವಿಗಳು ಸುಮಾರು 20,000 ರೂಗಳಿಗಿಂತ ಕಡಿಮೆ ಬೆಲೆಗೆ ಮಾರಾಟ!

Vivo T4 Ultra ಸ್ಮಾರ್ಟ್ಫೋನ್ 100X ಜೂಮ್ ಕ್ಯಾಮೆರಾ:

ಈ ಮುಂಬರಲಿರುವ Vivo T4 Ultra ಸ್ಮಾರ್ಟ್ಫೋನ್ ಶೀಘ್ರದಲ್ಲೇ ದೇಶದಲ್ಲಿ ಬಿಡುಗಡೆಯಾಗುವ ನಿರೀಕ್ಷೆಗಳಿವೆ ಅಲ್ಲದೆ ಕಂಪನಿಯು ಇತ್ತೀಚೆಗೆ ಫೋನ್‌ನ ಟೀಸರ್ ಅನ್ನು ಹಂಚಿಕೊಂಡಿದೆ. ವಿವೋ ಕೇವಲ 6 ಸೆಕೆಂಡುಗಳ ಟೀಸರ್ ಅನ್ನು ಹಂಚಿಕೊಂಡಿದೆ.ಇದು ಫೋನ್‌ನ ಹಿಂಭಾಗವನ್ನು ಹೈಲೈಟ್ ಮಾಡುತ್ತದೆ. ಟೀಸರ್‌ನಲ್ಲಿ ಅತ್ಯಂತ ಆಸಕ್ತಿದಾಯಕ ವಿಷಯವೆಂದರೆ 100x ಜೂಮ್‌ನ ಉಲ್ಲೇಖವಾಗಿದೆ ಇದರರ್ಥ Vivo T4 Ultra ಸ್ಮಾರ್ಟ್ಫೋನ್ ಖಂಡಿತವಾಗಿಯೂ ಟೆಲಿಫೋಟೋ ಸೆನ್ಸರ್ ಜೊತೆಗೆ ಬರುತ್ತಿದೆ.

ಇನ್ನಷ್ಟು ಓದಿ – Jio Recharge Plan: ಜಿಯೋದ ಈ ಪ್ಲಾನ್ ಉಚಿತ Netflix, ದಿನಕ್ಕೆ 2GB ಡೇಟಾ ಮತ್ತು ಕರೆಯನ್ನು 84 ದಿನಗಳಿಗೆ ನೀಡುತ್ತಿದೆ!

Vivo T4 Ultra ಸ್ಮಾರ್ಟ್ಫೋನ್ ಕ್ಯಾಮೆರಾ

ಹಿಂಭಾಗದಲ್ಲಿ ಟ್ರಿಪಲ್-ಕ್ಯಾಮೆರಾ ವ್ಯವಸ್ಥೆ ಸ್ಪಷ್ಟವಾಗಿ ಗೋಚರಿಸುತ್ತದೆ. ಫೋನ್‌ನಲ್ಲಿ ಖಂಡಿತವಾಗಿಯೂ AI ಬೆಂಬಲಿತ ವೈಶಿಷ್ಟ್ಯಗಳು ಇರುತ್ತವೆ. Vivo T4 Ultra ಸ್ಮಾರ್ಟ್ಫೋನ್ ಆರಾ ರಿಂಗ್ ಫ್ಲ್ಯಾಷ್‌ಲೈಟ್‌ನೊಂದಿಗೆ ಸರ್ಕಲ್ ಆಕಾರದ ಕ್ಯಾಮೆರಾವನ್ನು ಸಹ ಹೊಂದುವ ನಿರೀಕ್ಷೆಗಳಿವೆ. Vivo T4 Ultra ಸ್ಮಾರ್ಟ್ಫೋನ್ MediaTe Dimensity 9300 ಪ್ರೊಸೆಸರ್ನಿಂದ ಚಾಲಿತವಾಗುವ ನಿರೀಕ್ಷೆಗಳಿವೆ.

ಹೆಚ್ಚುವರಿಯಾಗಿ ಈ ಸ್ಮಾರ್ಟ್ಫೋನ್ ಟೆಲಿಫೋಟೋ ಸೆನ್ಸರ್ 50MP ಲೆನ್ಸ್ ಆಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ವಿವೋ ಈ ಫೋನ್ ಅನ್ನು ಭಾರತದಲ್ಲಿ ಯಾವಾಗ ಬಿಡುಗಡೆ ಮಾಡುತ್ತದೆ ಎಂಬುದನ್ನು ನೋಡಲು ಆಸಕ್ತಿದಾಯಕವಾಗಿದೆ. ಆದರೂ ಈ ಸ್ಮಾರ್ಟ್ಫೋನ್ ಬಗ್ಗೆ ಈಗಾಗಲೇ ಸಿಕ್ಕಾಪಟ್ಟೆ ಹೈಪ್ ಹೆಚ್ಚಾಗಿದ್ದು ಇದರ ಬೆಲೆಗಾಗಿ ಜನ ಕಾಯುತ್ತಿರು ಕಾಯುವುದನ್ನು ಟ್ವಿಟ್ಟರ್ ಕಮೆಂಟ್ ಮೂಲಕ ತಿಳಿಯಬಹುದು.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo