Samsung Galaxy S26 Ultra ಹೊಸ ಲುಕ್‌ನಲ್ಲಿ ಎಂಟ್ರಿ; ಬರೋಬ್ಬರಿ 6 ಬಣ್ಣಗಳ ಆಯ್ಕೆ ಸಾಧ್ಯತೆ!
ಟೆಕ್ ದೈತ್ಯ ಎಂದೇ ಗುರುತಿಸಿಕೊಂಡಿರುವ ಸ್ಯಾಮ್‌ಸಂಗ್ ಸಂಸ್ಥೆಯು ಈಗಾಗಲೇ ತನ್ನ Galaxy S ಸರಣಿಯ ಸ್ಮಾರ್ಟ್‌ಫೋನ್‌ಗಳ ಮೂಲಕ ಪ್ರಿಮಿಯಂ ರೇಂಜ್ ಸ್ಮಾರ್ಟ್‌ಫೋನ್ ವಲಯದಲ್ಲಿ ಸದ್ದು ಮಾಡಿದೆ. ಇದೀಗ ಸ್ಯಾಮ್‌ಸಂಗ್ ಕಂಪನಿಯು Samsung Galaxy S26 Ultra ಪರಿಚಯಿಸಲು ಸಜ್ಜಾಗಿದ್ದು ಈ ಸರಣಿ ಮುಂದಿನ ತಿಂಗಳು ಬಿಡುಗಡೆಯಾಗುವ ನಿರೀಕ್ಷೆಯಿದೆ. ಆದರೆ ಲಾಂಚ್‌ಗೂ ಮೊದಲೇ ಕೆಲವು ಲೀಕ್ ಸುದ್ದಿಗಳು ಫೋನಿನ ಬಗ್ಗೆ ಕುತೂಹಲ ಹೆಚ್ಚಿಸಿವೆ. ಸದ್ಯ ಟಿಪ್‌ಸ್ಟರ್ ಪ್ರಕಾರ ಸ್ಯಾಮ್‌ಸಂಗ್‌ನ ಫ್ಲ್ಯಾಗ್‌ಶಿಪ್ Galaxy S26 Ultra ಫೋನ್ ಒಟ್ಟು ಆರು ಕಲರ್ ಆಯ್ಕೆಗಳಲ್ಲಿ ಎಂಟ್ರಿ ಕೊಡುವ ಸಾಧ್ಯತೆಗಳು ಇವೆ ಎಂದು ತಿಳಿಸಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಮುಂದೆ ತಿಳಿಯೋಣ.
SurveyAlso Read: BSNL ಸೇರುವವರಿಗೆ ಮಾತ್ರ! ಕೇವಲ 1 ರೂಗಳಿಗೆ ಸಿಕ್ಕಾಪಟ್ಟೆ ಪ್ರಯೋಜನಗಳು! ಲಿಮಿಟೆಡ್ ಟೈಮ್ ಆಫರ್!
Samsung Galaxy S26 Ultra ಬರೋಬ್ಬರಿ 6 ಬಣ್ಣಗಳ ಆಯ್ಕೆ ಸಾಧ್ಯತೆ!
ಸೋಶಿಯಲ್ ಮಾಧ್ಯಮ ತಾಣ X ನಲ್ಲಿ ಟಿಪ್‌ಸ್ಟರ್ ಇವಾನ್ ಬ್ಲಾಸ್‌ನ ಪೋಸ್ಟ್ ಪ್ರಕಾರ ಮುಂಬರುವ ಹೊಸ Samsung Galaxy S26 Ultra ಮೊಬೈಲ್ ಒಟ್ಟು ಆರು ಭಿನ್ನ ಬಣ್ಣಗಳ ಆಯ್ಕೆಯಲ್ಲಿ ಲಾಂಚ್ ಆಗಲಿದೆ ಎಂದು ವರದಿಯಾಗಿದೆ. ಇನ್ನು ಫೋನ್ ಯಾವ ಕಲರ್ ಆಯ್ಕೆಯಲ್ಲಿ ಎಂಟ್ರಿ ಕೊಡಲಿದೆ ಎನ್ನುವುದನ್ನು ನೋಡುವುದಾರೆ ಕ್ರಮವಾಗಿ ಬ್ಲ್ಯಾಕ್, ವೈಟ್, ಸಿಲ್ವರ್ ಶ್ಯಾಡೋ, ಸ್ಕೈ ಬ್ಲೂ, ಕೋಬಾಲ್ಟ್ ವೈಲೆಟ್ ಮತ್ತು ಪಿಂಕ್ ಗೋಲ್ಡ್. ಆದಾಗ್ಯೂ ಇವಾನ್ ಬ್ಲಾಸ್ ನ ಲೀಕ್ ಮಾಹಿತಿ ಪ್ರಕಾರ ಬರಲಿರುವ Samsung Galaxy S26 Ultra ಫೋನ್ ಆರೆಂಜ್ ಕಲರ್ ಅನ್ನು ಉಲ್ಲೇಖಿಸುವುದಿಲ್ಲ.
Samsung Galaxy S26 Ultra ಲಾಂಚ್ ಯಾವಾಗ?
ಸ್ಯಾಮ್‌ಸಂಗ್ ಸಂಸ್ಥೆಯ ಬಹುನಿರೀಕ್ಷಿತ Samsung Galaxy S26 Ultra ಸ್ಮಾರ್ಟ್‌ಫೋನ್ ಪ್ರಮುಖ ಫ್ಲ್ಯಾಗ್‌ಶಿಪ್ ಆಗಿದ್ದು ಈ ಫೋನ್ ಸರಣಿಯು ಇದೇ ಫೆಬ್ರವರಿ 2026 ರಲ್ಲಿ ಕಂಪನಿಯ ವಾರ್ಷಿಕ ಗ್ಯಾಲಕ್ಸಿ ಅನ್ಪ್ಯಾಕ್ಡ್ ಈವೆಂಟ್‌ನಲ್ಲಿ ಇದನ್ನು ಅನಾವರಣಗೊಳಿಸಲಾಗುವುದು ಎಂದು ನಿರೀಕ್ಷಿಸಲಾಗಿದೆ. ಇನ್ನು ಈ ಫೋನ್ 16GB ಯಿಂದ 1TB ಸ್ಟೋರೇಜ್ ವೇರಿಯಂಟ್ ಆಯ್ಕೆಗಳಲ್ಲಿ ಲಭ್ಯ ಆಗಲಿದ್ದು ಹಾಗೆಯೇ ಇದರ ಬೆಲೆ 1,35,000 ರೂ. ಗಳಿಂದ 1,75,00 ರೂಗಳ ರೇಂಜ್‌ನಲ್ಲಿ ಇರಲಿದೆ ಎಂದು ಅಂದಾಜಿಸಲಾಗಿದೆ.
Samsung Galaxy S26 Ultra ಫೋನಿನ ಪ್ರಮುಖ ಫೀಚರ್ಸ್:
Samsung Galaxy S26 Ultra ಫ್ಲ್ಯಾಗ್‌ಶಿಪ್ ಫೋನ್ ಆಗಿರುವುದರಿಂದ ಜಬರ್ದಸ್ತ್ ಫೀಚರ್ಸ್‌ಗಳನ್ನು ಒಳಗೊಂಡಿರುವ ನಿರೀಕ್ಷೆಗಳು ಅಧಿಕ. ಲೀಕ್ ಮಾಹಿತಿಯಂತೆ ಈ ಫೋನ್ 6.9 ಇಂಚಿನ ಡಿಸ್‌ಪ್ಲೇ ಅನ್ನು ಹೊಂದಿರಲಿದ್ದು OLED ಸ್ಕ್ರೀನ್ ಅನ್ನು ಇದು ಒಳಗೊಂಡಿರಲಿದೆ. ಹಾಗೆಯೇ ಇದರ ಪ್ರಾಥಮಿಕ ಕ್ಯಾಮೆರಾವು 200MP ಸೆನ್ಸಾರ್ ಸಾಮರ್ಥ್ಯದಲ್ಲಿ ಇರುವುದು ಬಹುತೇಕ ಖಚಿತ ಎನ್ನಲಾಗಿದೆ. ಅಲ್ಲದೇ ಇದು ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 8 Elite Gen 5 ಪ್ರೊಸೆಸರ್ ಸಪೋರ್ಟ್ ಅನ್ನು ಪಡೆದಿರಲಿದ್ದು ಅದಕ್ಕೆ ಪೂರಕವಾಗಿ ಆಂಡ್ರಾಯ್ಡ್ 16 ಓಎಸ್ ಇರಲಿದೆ. ಇನ್ನು ಈ ಫೋನ್ 5000mAh ಯಿಂದ 5400mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಒಳಗೊಂಡಿರಲಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile