Windows, MacOS ಮತ್ತು Linux ನಲ್ಲಿನ Chrome ಬಳಕೆದಾರರಿಗೆ ಅಪಾಯಗಳ ಬಗ್ಗೆ ಎಚ್ಚರಿಕೆ ನೀಡಲಾಗುತ್ತಿದೆ.
Google Chrome ಆವೃತ್ತಿ ಅಪ್‌ಡೇಟ್ ಮಾಡುವ ಮೂಲಕ ಬಳಕೆದಾರರು ಸೇಫ್ ಆಗಿರಬಹುದು.
ಭಾರತ ಸರ್ಕಾರವು Google Chrome ಬಳಕೆದಾರರಿಗೆ ಹೊಸ ಸೈಬರ್ ಸೆಕ್ಯುರಿಟಿ ಎಚ್ಚರಿಕೆ ಅನ್ನು ನೀಡಿದೆ. ಹ್ಯಾಕರ್‌ಗಳಿಗೆ ಸಿಸ್ಟಮ್‌ಗಳನ್ನು ಒಡ್ಡಬಹುದಾದ ಹೊಸ ದುರ್ಬಲತೆಯ ಬಗ್ಗೆ ಎಚ್ಚರಿಕೆಯ ಗಂಟೆ ಬಾರಿಸಿದೆ. ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (CERT-In) ಬಿಡುಗಡೆ ಮಾಡಿರುವ ಸಲಹೆಯು Windows, macOS ಮತ್ತು Linux ಪ್ಲಾಟ್‌ಫಾರ್ಮ್‌ಗಳ ಬಳಕೆದಾರರ ಮೇಲೆ ಪರಿಣಾಮ ಬೀರುವ ವೆಬ್ ಬ್ರೌಸರ್‌ನಲ್ಲಿನ ಭದ್ರತಾ ದೋಷವನ್ನು ಎತ್ತಿ ತೋರಿಸುತ್ತದೆ. ಸಂಸ್ಥೆಯ ಜನವರಿ 2026 ವರದಿಯಲ್ಲಿ CERT-In ಸಮಸ್ಯೆಯನ್ನು ಮಧ್ಯಮ ತೀವ್ರತೆ ಎಂದು ವರ್ಗೀಕರಿಸಿದೆ. ಆ ರೇಟಿಂಗ್ ಮಧ್ಯಮ ಎಂದು ತೋರಿದರು ಮಧ್ಯಮ-ಅಪಾಯದ ದೋಷಗಳು ಸಹ ಪ್ಯಾಚ್ ಮಾಡದೆ ಬಿಟ್ಟರೆ ಅಪಾಯಕಾರಿ ಆಗಬಹುದು ಎಂದು ಸೈಬರ್ ಭದ್ರತೆ ತಜ್ಞರು ಎಚ್ಚರಿಕೆ ನೀಡಿದ್ದಾರೆ.
SurveyGoogle Chrome ಬಳಕೆದಾರರೇ ಎಚ್ಚರ ಎಚ್ಚರ…
Chrome ಈಗ Gemini ಅಂತಹ AI ಸಪೋರ್ಟ್ ಪಡೆದಿರುವ ಫೀಚರ್ಸ್‌ಗಳೊಂದಿಗೆ ಸಂಯೋಜಿಸಲ್ಪಟ್ಟಿದೆ ಬ್ರೌಸರ್‌ನಲ್ಲಿ ಸ್ಟೋರ್ ಆಗುವ ವೈಯಕ್ತಿಕ ಮತ್ತು ವೃತ್ತಿಪರ ಡೇಟಾಗೆ ಒಂದು ಭದ್ರತಾ ಅಂತರವು ದೂರಗಾಮಿ ಪರಿಣಾಮಗಳನ್ನು ಉಂಟುಮಾಡಬಹುದು. ಈ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ನೋಡೋಣ.
Also Read: Dimensity 9400+ ಚಿಪ್‌ಸೆಟ್ ಮತ್ತು Zeiss ಕ್ಯಾಮೆರಾದ Vivo X200T ಫೋನ್ ಬಿಡುಗಡೆಗೆ ಡೇಟ್ ಫಿಕ್ಸ್!
Chrome ಭದ್ರತಾ ಸಮಸ್ಯೆ ಕುರಿತು CERT-In ಏನು ಸಲಹೆ ನೀಡಿದೆ?
ನೂತನ Chrome ನ ಭದ್ರತಾ ಸಮಸ್ಯೆ ಕುರಿತಂತೆ CERT-In ಭದ್ರತಾ ಸಂಸ್ಥೆಯು ಕೆಲವು ವಿವರಗಳನ್ನು ಹಂಚಿಕೊಂಡಿದೆ. ‘WebView ಟ್ಯಾಗ್‌ನಲ್ಲಿ ಸಾಕಷ್ಟು ನೀತಿ ಜಾರಿಯಾಗದ ಕಾರಣ Google Chrome ನಲ್ಲಿ ಭದ್ರತಾ ನಿರ್ಬಂಧ ಬೈಪಾಸ್ ದುರ್ಬಲತೆ ಅಸ್ತಿತ್ವದಲ್ಲಿದೆ. ಈ ದುರ್ಬಲತೆಯ ಯಶಸ್ವಿ ಶೋಷಣೆಯು ಗುರಿಪಡಿಸಿದ ಸಿಸ್ಟಮ್‌ನಲ್ಲಿ ಭದ್ರತಾ ನಿರ್ಬಂಧಗಳನ್ನು ಬೈಪಾಸ್ ಮಾಡಲು ರಿಮೋಟ್ ಹ್ಯಾಕರ್‌ಗಳಿಗೆ ಅವಕಾಶ ಒದಗಿಸುತ್ತದೆ.

ಸರಳವಾಗಿ ಹೇಳುವುದಾದರೆ ಈ ನ್ಯೂನತೆಯು ಹ್ಯಾಕರ್‌ಗಳಿಗೆ Chrome ಅಂತರ್ನಿರ್ಮಿತ ರಕ್ಷಣೆಗಳನ್ನು ಪ್ರವೇಶಿಸಲು ಅನುಮತಿಸುತ್ತದೆ. ಒಮ್ಮೆ ಭದ್ರತಾ ನಿರ್ಬಂಧಗಳನ್ನು ಬೈಪಾಸ್ ಮಾಡಿದರೆ ಹ್ಯಾಕರ್‌ಗಳು ಸೇವ್ ಮಾಡಿರುವ ಪಾಸ್‌ವರ್ಡ್‌ಗಳು, ಬ್ರೌಸಿಂಗ್ ಡೇಟಾ ಮತ್ತು ಬಹುಶಃ ಸಿಸ್ಟಮ್-ಮಟ್ಟದ ಸಂಪನ್ಮೂಲಗಳನ್ನು ಒಳಗೊಂಡಂತೆ ಸೂಕ್ಷ್ಮ ಮಾಹಿತಿಗೆ ಪ್ರವೇಶವನ್ನು ಪಡೆಯಬಹುದು. ಇದು ವಿಶೇಷವಾಗಿ ದೈನಂದಿನ ಕಾರ್ಯಾಚರಣೆಗಳಿಗಾಗಿ Chrome ಅನ್ನು ಹೆಚ್ಚು ಅವಲಂಬಿಸಿರುವ ಸಂಸ್ಥೆಗಳು ಮತ್ತು ವೃತ್ತಿಪರರಿಗೆ ಸಂಬಂಧಿಸಿದ ಸಮಸ್ಯೆಯನ್ನು ಮಾಡುತ್ತದೆ.
Chrome ಸಮಸ್ಯೆಯಿಂದ ಸೇಫ್ ಇರಲು ಏನು ಮಾಡಬೇಕು?
ಪ್ರಮುಖ ವೆಬ್ ಬ್ರೌಸರ್‌ಗಳಾದ Windows, MacOS ಮತ್ತು Linux ನಲ್ಲಿನ ಕ್ರೋಮ್ ಬಳಕೆದಾರರಿಗೆ ಅಪಾಯಗಳ ಬಗ್ಗೆ ಎಚ್ಚರಿಕೆ ನೀಡಲಾಗುತ್ತಿದೆ. ಈ ಕೆಳಗೆ ನೀಡಿರುವ ಆವೃತ್ತಿಗಳನ್ನು ಭದ್ರತಾ ಸಂಸ್ಥೆಯು ಉಲ್ಲೇಖಿಸಿದೆ.
- 143.0.7499.192 (Linux) ಗೆ ಮೊದಲು Google Chrome
- 143.0.7499.192/.193 (Mac) ಗೆ ಮೊದಲು Google Chrome
- 143.0.7499.192/.193 (Windows) ಗೆ ಮೊದಲು Google Chrome
ಬಳಕೆದಾರರೇ ನೀವು ನಿಮ್ಮ ಸಿಸ್ಟಂನಲ್ಲಿ Chrome ಹೊಂದಿದ್ದರೆ ಮತ್ತು ಅವುಗಳ ಆವೃತ್ತಿಯು ಇವುಗಳಿಗಿಂತ ಹಳೆಯದಾಗಿದ್ದರೆ ತಕ್ಷಣವೇ ಬ್ರೌಸರ್ ಅನ್ನು ನವೀಕರಿಸಲು ಸಲಹೆ ನೀಡಲಾಗಿದೆ. Google ಸಹ ವಿವರಗಳನ್ನು ಮತ್ತು ಪೀಡಿತ ಆವೃತ್ತಿಗಳಿಗೆ ಹೊಸ ಪ್ಯಾಚ್ ನವೀಕರಣಗಳನ್ನು ಶೇರ್ ಮಾಡಿದೆ. Chrome ಬಳಕೆದಾರರು Windows, macOS ಮತ್ತು Linux ನಲ್ಲಿ Google Chrome ಗಾಗಿ ಲಭ್ಯವಿರುವ ಇತ್ತೀಚಿನ ಸಾಫ್ಟ್‌ವೇರ್ ನವೀಕರಣವನ್ನು ಡೌನ್‌ಲೋಡ್ ಮಾಡಬೇಕು. Chrome ನಲ್ಲಿ ಮೂರು-ಡಾಟ್ ಮೆನುಗೆ ಹೋಗುವ ಮೂಲಕ ನೀವು ಹೀಗೆ ಮಾಡಬಹುದು > ಸೆಟ್ಟಿಂಗ್‌ಗಳು > ಅಬೌಟ್ > Chrome ಅನ್ನು ಅಪ್‌ಡೇಟ್ ಮಾಡಿರಿ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile