Moto Watch ಬಿಡುಗಡೆ ದಿನಾಂಕ ಬಹಿರಂಗ; ಆಕರ್ಷಕ ಫೀಚರ್ಸ್

HIGHLIGHTS

Moto Watch ಇದೇ ಜನವರಿ 23 ರಂದು ಮಧ್ಯಾಹ್ನ 12 ಗಂಟೆಗೆ ಬಿಡುಗಡೆ ಆಗಲಿದೆ

Moto Watch 13 ದಿನಗಳ ಬ್ಯಾಟರಿ ಪವರ್ ಪಡೆದಿದೆ

Moto Watch ಬಿಡುಗಡೆ ದಿನಾಂಕ ಬಹಿರಂಗ; ಆಕರ್ಷಕ ಫೀಚರ್ಸ್

ಪ್ರಮುಖ ಟೆಕ್ ಬ್ರ್ಯಾಂಡ್‌ಗಳಲ್ಲಿ ಒಂದಾದ Motorola (ಮೊಟೊರೊಲಾ) ಸ್ಮಾರ್ಟ್‌ಫೋನ್‌ ಸೇರಿದಂತೆ ಇತರೆ ಗ್ಯಾಡ್ಜಟ್ಸ್‌ ಪರಿಚಯಿಸುವ ಮೂಲಕ ಮಾರುಕಟ್ಟೆಯಲ್ಲಿ ತನ್ನದೇ ಖದರ ಹೊಂದಿದೆ. ಇದೀಗ Motorola ಸಂಸ್ಥೆಯು ನೂತನವಾಗಿ ತನ್ನ Moto Watch ಅನ್ನು ಭಾರತದಲ್ಲಿ ಬಿಡುಗಡೆ ಮಾಡಲು ಸಕಲ ಸಜ್ಜಾಗಿದ್ದು, ಈ ವಾಚ್‌ ಅನ್ನು Motorola ತನ್ನ ಸಿಗ್ನೇಚರ್ ಫ್ಲ್ಯಾಗ್‌ಶಿಪ್ ಜೊತೆಗೆ ಇದೇ ಜನವರಿ 23 ರಂದು ಮಧ್ಯಾಹ್ನ 12 ಗಂಟೆಗೆ ಬಿಡುಗಡೆ ಮಾಡಲಾಗುವುದು ಎಂದು ಖಚಿತಪಡಿಸಿದೆ. ಅಂದಹಾಗೆ ಲಾಸ್ ವೇಗಾಸ್‌ನಲ್ಲಿ ನಡೆದ ಗ್ರಾಹಕ ಎಲೆಕ್ಟ್ರಾನಿಕ್ಸ್ ಶೋನಲ್ಲಿ ಮೊಟೊ ಕಂಪನಿಯು ತನ್ನ ಹೊಸ ವಾಚ್ ಅನ್ನು ಪರಿಚಯಿಸಿದೆ ಮತ್ತು ಅದೇ ವೇರಿಯಂಟ್‌ ಈಗ ಭಾರತಕ್ಕೂ ಬರಲಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ನೋಡೋಣ.

Digit.in Survey
✅ Thank you for completing the survey!

Moto Watch ಲಾಂಚ್ ಡೇಟ್ ಮಾಹಿತಿ

ಮೊಟೊರೊಲಾ ಸಂಸ್ಥೆಯು ತನ್ನ Moto Watch ಅನ್ನು ಇದೇ ಜನವರಿ 23 ರಂದು ಮಧ್ಯಾಹ್ನ 12 ಗಂಟೆಗೆ ಅಧಿಕೃತವಾಗಿ ಲಾಂಚ್ ಮಾಡಲಿದೆ. ಸಂಸ್ಥೆಯ ಈ ನೂತನ ವಾಚ್ ಬ್ಲ್ಯಾಕ್ ಮತ್ತು ಸಿಲ್ವರ್ ಕಲರ್ ಆಯ್ಕೆಗಳಲ್ಲಿ ಮಾರುಕಟ್ಟೆ ಪ್ರವೇಶ ಮಾಡಲಿದೆ. Moto Watch ಬಿಡುಗಡೆ ಬಳಿಕ Flipkart ಮತ್ತು Motorola India ದ ಅಧಿಕೃತ ವೆಬ್‌ಸೈಟ್ ಮೂಲಕ ಮಾರಾಟ ಪ್ರಾರಂಭ ಆಗಲಿದೆ. ಅಂದಹಾಗೆ Moto Watch ಬಿಡುಗಡೆಯ ಕಾರ್ಯಕ್ರಮದಲ್ಲಿಯೇ Motorola ಕಂಪನಿಯ Motorola Signature ಸ್ಮಾರ್ಟ್‌ಫೋನ್‌ ಕೂಡಾ ಅನಾವರಣಗೊಳ್ಳಲಿದೆ.

Moto Watch

Also Read : CEIR: ರೈಲಿನಲ್ಲಿ ಪ್ರಯಾಣಿಸುತ್ತಿರುವಾಗ ಮೊಬೈಲ್ ಕಳ್ಳತನವಾದ್ರೆ ಏನು ಮಾಡಬೇಕು? ಸರ್ಕಾರದ ಈ ಸುಲಭ ಉಪಾಯ ನಿಮಗೊತ್ತಾ?

Moto Watch ನಿರೀಕ್ಷಿತ ಫೀಚರ್ಸ್‌ಗಳು

ಮಾರುಕಟ್ಟೆಗೆ ಬರಲಿರುವ ಹೊಸ Moto Watch ಕಾರ್ನಿಂಗ್‌ನ ಗೊರಿಲ್ಲಾ ಗ್ಲಾಸ್ 3 ರಕ್ಷಣೆಯೊಂದಿಗೆ 1.4 ಇಂಚಿನ OLED ಡಿಸ್ಪ್ಲೇ ಹೊಂದಿರಲಿದೆ. ಅಲ್ಲದೇ ಇದು ನೀರು ಮತ್ತು ಧೂಳಿನ ಪ್ರತಿರೋಧಕ್ಕಾಗಿ IP68 ರೇಟಿಂಗ್‌ನೊಂದಿಗೆ ಎಂಟ್ರಿ ಕೊಡಲಿದೆ. ಹಾಗೆಯೇ ಈ ವಾಚ್ 1 ATM3 ರಕ್ಷಣೆ ಪಡೆದಿರಲಿದ್ದು, ಅಂದರೆ ಗಡಿಯಾರವು 30 ಮೀಟರ್ ಆಳಕ್ಕೆ ಸಮಾನವಾದ ಒತ್ತಡವನ್ನು ನಿಭಾಯಿಸಲು ಸಾಧ್ಯವಾಗುತ್ತದೆ ಎನ್ನಲಾಗಿದೆ. ಇದರೊಂದಿಗೆ ಈ ವಾಚ್ ಸುಧಾರಿತ ಆರೋಗ್ಯ ಟ್ರ್ಯಾಕಿಂಗ್ ಫೀಚರ್ಸ್‌ ಮತ್ತು ಒಳನೋಟಗಳ ಹಿಂದಿನ ತಂತ್ರಜ್ಞಾನಕ್ಕಾಗಿ ಮೊಟೊರೊಲಾ ಪೋಲಾರ್‌ನೊಂದಿಗೆ ಸಹಭಾಗಿತ್ವ ಪಡೆದಿದೆ.

Moto Watch ರಚನೆ ಹಾಗೂ ಇತರೆ ಫೀಚರ್ಸ್‌

ಇನ್ನು Moto Watch ರಚನೆ ನೋಡುವುದಾದರೇ ಇದು ಸ್ಟೇನ್‌ಲೆಸ್ ಸ್ಟೀಲ್ ರಿಂಗ್ನೊಂದಿಗೆ 47 mm ಅಲ್ಯೂಮಿನಿಯಂ ಫ್ರೇಮ್‌ ರಚನೆ ಪಡೆದಿರಲಿದೆ. ಹಾಗೆಯೇ ಈ ವಾಚ್ 22 mm ಬ್ಯಾಂಡ್ ಹೊಂದಾಣಿಕೆಯನ್ನು ಒಳಗೊಂಡಿರಲಿದ್ದು, ಮೊಟೊರೊಲಾದ ಈ ವಾಚ್ ಡ್ಯುಯಲ್-ಫ್ರೀಕ್ವೆನ್ಸಿ GPS, ನಿದ್ರೆ ಮತ್ತು ಹಂತದ ಮೇಲ್ವಿಚಾರಣೆ, ಕ್ಯಾಲೋರಿ ಟ್ರ್ಯಾಕಿಂಗ್ ಹಾಗೂ ಒತ್ತಡದ ಮೇಲ್ವಿಚಾರಣೆಯ ಫೀಚರ್ಸ್‌ಗಳೊಂದಿಗೆ ಲಗ್ಗೆ ಇಡಲಿದೆ. ಇದು ಬಳಕೆದಾರರಿಗೆ ಚಿಕ್ಕದಾದ, ವೈಯಕ್ತೀಕರಿಸಿದ ಸಾರಾಂಶಗಳನ್ನು ನೀಡಲು ‘ಕ್ಯಾಚ್ ಮಿ ಅಪ್’ ಫೀಚರ್ಸ್‌ ಜೊತೆಗೆ Moto AI ಸೌಲಭ್ಯ ಪಡೆದಿರಲಿದೆ. ಈ ವಾಚ್ Moto Watch ಅಪ್ಲಿಕೇಶನ್‌ನೊಂದಿಗೆ ಕೆಲಸ ಮಾಡಲಿದೆ.

Moto Watch ಬ್ಯಾಟರಿ ಹಾಗೂ ಇತರೆ ಫೀಚರ್ಸ್‌

Moto Watch ಉತ್ತಮ ಬ್ಯಾಟರಿ ಆಯ್ಕೆ ಒಳಗೊಂಡಿದ್ದು, ಇದು 13 ದಿನಗಳ ಮತ್ತು 7 ದಿನಗಳ ಬ್ಯಾಟರಿ ಬ್ಯಾಕ್‌ಅಪ್‌ ಸಪೋರ್ಟ್‌ ಜೊತೆಗೆ ಬರುತ್ತದೆ ಎನ್ನಲಾಗಿದೆ. ಅದೇ ರೀತಿ ಬರಲಿರುವ ಹೊಸ ಮೊಟೊರೊಲಾ ಸಿಗ್ನಿಚರ್ ಫೋನ್‌ 5,200mAh ಬ್ಯಾಟರಿ ಪವರ್‌ ಪಡೆದಿರುವ ನಿರೀಕ್ಷೆಗಳು ಇವೆ.

Manthesh B
Digit.in
Logo
Digit.in
Logo