Amazon EPL 2026: 55 ಇಂಚಿನ ಈ Sony ಸ್ಮಾರ್ಟ್‌ಟಿವಿಗೆ ಭರ್ಜರಿ ಡಿಸ್ಕೌಂಟ್‌

HIGHLIGHTS

ಅಮೆಜಾನ್‌ ಆಯೋಜಿಸಿರುವ EPL 2026 ಸೇಲ್‌ನಲ್ಲಿ ಸ್ಮಾರ್ಟ್‌ಟಿವಿಗಳಿಗೆ ಬಿಗ್‌ ಆಫರ್‌

ಅಮೆಜಾನ್‌ EPL 2026 ಮಾರಾಟದಲ್ಲಿ ಆಕರ್ಷಕ ಬ್ಯಾಂಕ್‌ ಕೊಡುಗೆಗಳು ಲಭ್ಯ

ಈ ಮಾರಾಟದಲ್ಲಿ ಸೋನಿಯ 55 ಇಂಚಿನ ಬ್ರಾವಿಯಾ ಟಿವಿ ಬೊಂಬಾಟ್‌ ಡಿಸ್ಕೌಂಟ್‌ ಪಡೆದಿದೆ

Amazon EPL 2026: 55 ಇಂಚಿನ ಈ Sony ಸ್ಮಾರ್ಟ್‌ಟಿವಿಗೆ ಭರ್ಜರಿ ಡಿಸ್ಕೌಂಟ್‌

ಅಮೆಜಾನ್‌ ಇ ಕಾಮರ್ಸ್‌ ಆಯೋಜಿಸಿರುವ Amazon Electronics Premier league 2026 ಸೇಲ್‌ ಗ್ರಾಹಕರನ್ನ ಆಕರ್ಷಿಸುತ್ತಿದೆ. ಈ ಮಾರಾಟದಲ್ಲಿ ಸ್ಮಾರ್ಟ್‌ಫೋನ್‌ಗಳ ಜೊತೆಗೆ ಸ್ಮಾರ್ಟ್‌ ಟಿವಿಗಳು ಹಾಗೂ ಪ್ರೊಜೆಕ್ಟರ್‌ ಉತ್ಪನ್ನಗಳು ಸಹ ಶೇ 65% ವರೆಗೂ ಡಿಸ್ಕೌಂಟ್‌ ಪಡೆದುಕೊಂಡಿವೆ. ಅಲ್ಲದೇ ಗ್ರಾಹಕರು ಲಭ್ಯವಿರುವ ಆಯ್ದ ಬ್ಯಾಂಕ್‌ಗಳ ಕೊಡುಗೆ ಪಡೆದುಕೊಂಡರೆ ಹೆಚ್ಚುವರಿ ರಿಯಾಯಿತಿ ಸಹ ಪಡೆಯಬಹುದಾಗಿದೆ. ಅಂದಹಾಗೆ ಈ ಸೇಲ್‌ನಲ್ಲಿ Sony ಸಂಸ್ಥೆಯ 55 ಇಂಚಿನ BRAVIA 2M2 ಸರಣಿ 4K ಅಲ್ಟ್ರಾ HD ಸ್ಮಾರ್ಟ್ LED ಗೂಗಲ್ ಟಿವಿ ಭರ್ಜರಿ ರಿಯಾಯಿತಿಯೊಂದಿಗೆ ಗಮನ ಸೆಳೆದಿದೆ. ಹೀಗಾಗಿ ಅಮೆಜಾನ್‌ ಎಲೆಕ್ಟ್ರಾನಿಕ್ಸ್ ಪ್ರೀಮಿಯರ್ ಲೀಗ್ ಡಿಸ್ಕೌಂಟ್‌ ಬೆಲೆಯಲ್ಲಿ ಹೊಸ ಟಿವಿ ಖರೀದಿಸುವ ಗ್ರಾಹಕರಿಗೆ ಬೆಸ್ಟ್‌ ಟೈಮ್‌ ಎನಿಸಿದೆ. ಈ ಮಾರಾಟದಲ್ಲಿ ಹಾಗಾದರೇ ಅಮೆಜಾನ್‌ನ ಈ ಮಾರಾಟದಲ್ಲಿ ಸೋನಿ ಸಂಸ್ಥೆಯ 55 ಇಂಚಿನ ಬ್ರಾವಿಯಾ ಸ್ಮಾರ್ಟ್‌ ಟಿವಿಯ ಕೊಡುಗೆ ಬಗ್ಗೆ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : ಕಡಿಮೆ ಬೆಲೆಯಲ್ಲಿ Realme C83 5G ಸ್ಮಾರ್ಟ್‌ಫೋನ್‌ ಲಾಂಚ್‌! 7,000mAh ಬ್ಯಾಟರಿ ಪ್ರಮುಖ ಹೈಲೈಟ್‌

Amazon ಸೇಲ್‌: 55 ಇಂಚಿನ Sony ಸ್ಮಾರ್ಟ್‌ಟಿವಿ ಬೆಲೆ ಇಳಿಕೆ

ಜನಪ್ರಿಯ ಸೋನಿ ಕಂಪನಿಯ ಸೋನಿ 55 ಇಂಚಿನ ಬ್ರಾವಿಯಾ 2M2 ಸರಣಿ 4K ಅಲ್ಟ್ರಾ HD ಸ್ಮಾರ್ಟ್ LED ಗೂಗಲ್ ಟಿವಿ (K-55S25BM2) ಈಗಾಗಲೇ ಮಾರುಕಟ್ಟೆಯಲ್ಲಿ ಸದ್ದು ಮಾಡಿದೆ. ಈ ಸ್ಮಾರ್ಟ್‌ ಟಿವಿಯು ಅಮೆಜಾನ್‌ ವೆಬ್‌ಸೈಟ್‌ನಲ್ಲಿ 99,900 ರೂಗಳ ಬೆಲೆಯನ್ನು ಹೊಂದಿದೆ. ಆದರೆ ಇದೀಗ ಅಮೆಜಾನ್‌ ಎಲೆಕ್ಟ್ರಾನಿಕ್ಸ್ ಪ್ರೀಮಿಯರ್ ಲೀಗ್ ಮಾರಾಟದಲ್ಲಿ ಈ ಟಿವಿಯು 55,990 ರೂಗಳ ಬೆಲೆಗೆ ಖರೀದಿಗೆ ಲಭ್ಯ ಇದೆ. ಇದರೊಂದಿಗೆ ನೋ ಕಾಸ್ಟ್‌ ಇಎಮ್‌ಐ, ಬ್ಯಾಂಕ್‌ ಆಫರ್‌ ಪಡೆದುಕೊಂಡರೆ ಹೆಚ್ಚುವರಿ ರಿಯಾಯಿತಿ ಪಡೆಯಬಹುದು. Sony 55 ಇಂಚಿನ BRAVIA 2M2 Series 4K Ultra HD Smart LED Google TV (K-55S25BM2) ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ.

sony

55 ಇಂಚಿನ ಸೋನಿ ಸ್ಮಾರ್ಟ್‌ಟಿವಿಯ ಫೀಚರ್ಸ್‌ ಹೀಗಿವೆ

ಸೋನಿ ಕಂಪನಿಯ BRAVIA 2M2 ಸರಣಿಯ 55 ಇಂಚಿನ ಈ ಟಿವಿಯು LED ಮಾದರಿಯಲ್ಲಿ ಇದೆ. ಅಲ್ಲದೇ ರೆಸಲ್ಯೂಶನ್ 4K ಅಲ್ಟ್ರಾ HD ಸೌಲಭ್ಯದ ಜೊತೆಗೆ 60 Hz ರಿಫ್ರೆಶ್ ರೇಟ್‌ ಪಡೆದುಕೊಂಡಿದೆ. ಹಾಗೆಯೇ ಇದು 20 Watts ಔಟ್‌ಪುಟ್ ಸೌಂಡ್‌ ಸಪೋರ್ಟ್‌ ಹೊಂದಿದ್ದು ಜೊತೆಗೆ ಓಪನ್ ಬ್ಯಾಫಲ್ ಸ್ಪೀಕರ್ ಸೌಲಭ್ಯ ಪಡೆದಿದೆ. ಅಲ್ಲದೇ DTS ಡಿಜಿಟಲ್ ಸರೌಂಡ್, ಡಾಲ್ಬಿ ಅಟ್ಮಾಸ್, ಡಾಲ್ಬಿ ಆಡಿಯೋ ಆಯ್ಕೆಗಳನ್ನು ಒಳಗೊಂಡಿದೆ.

ಹಾಗೆಯೇ ಈ ಟಿವಿಯು 4K ಪ್ರೊಸೆಸರ್ X1 ಪ್ರೊಸೆಸರ್‌ ಪಡೆದಿರುವ ಜೊತೆಗೆ ಗೂಗಲ್‌ ಟಿವಿ, ಗೂಗಲ್‌ ಅಸಿಸ್ಟಂಟ್‌, ಗೂಗಲ್‌ ಕಾಸ್ಟ್‌, ಗೇಮ್ ಮೆನು ಆಯ್ಕೆಗಳನ್ನು ಒಳಗೊಂಡಿದೆ. ಅಲ್ಲದೇ ಹೆಚ್ಚುವರಿ ಆಪಲ್‌ ಏರ್‌ಪ್ಲೇ 2, ಆಪಲ್‌ ಹೋಮ್‌ಕಿಟ್, ಅಲೆಕ್ಸಾ ಸೌಲಭ್ಯಗಳು ಸಹ ಈ ಟಿವಿಯಲ್ಲಿ ಇವೆ. ಇದರೊಂದಿಗೆ ಈ ಟಿವಿಯು ಈಥರ್ನೆಟ್, HDMI, USB, Wi-Fi ನಂತಹ ಕನೆಕ್ಟಿವಿಟಿ ಆಯ್ಕೆಗಳನ್ನು ಪಡೆದುಕೊಂಡಿದೆ.

Disclosure: This Article Contains Affiliate Link

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile

Digit.in
Logo
Digit.in
Logo