ಇಂದಿನಿಂದ Realme C83 5G ಮಾರಾಟ! ಅಗ್ಗದ ಬೆಲೆಯಲ್ಲಿ ಬೊಂಬಾಟ್‌ ಸ್ಮಾರ್ಟ್‌ಫೋನ್‌

HIGHLIGHTS

ಇಂದಿನಿಂದ (ಮಾರ್ಚ್‌ 7 ರಂದು) ರಿಯಲ್‌ಮಿ C83 5G ಮೊಬೈಲ್‌ ಸೇಲ್‌ ಪ್ರಾರಂಭ

ರಿಯಲ್‌ಮಿ C83 5G ಬ್ಲೂಮಿಂಗ್ ಪರ್ಪಲ್ ಮತ್ತು ಸ್ಪ್ರೌಟಿಂಗ್ ಗ್ರೀನ್ ಕಲರ್‌ ಆಯ್ಕೆ ಹೊಂದಿದೆ

ರಿಯಲ್‌ಮಿ C83 5G ಮೊಬೈಲ್‌ MediaTek Dimensity 6300 ಪ್ರೊಸೆಸರ್‌ ಸೌಲಭ್ಯ ಪಡೆದುಕೊಂಡಿದೆ

ಇಂದಿನಿಂದ Realme C83 5G ಮಾರಾಟ! ಅಗ್ಗದ ಬೆಲೆಯಲ್ಲಿ ಬೊಂಬಾಟ್‌ ಸ್ಮಾರ್ಟ್‌ಫೋನ್‌

Realme ಮೊಬೈಲ್‌ ಸಂಸ್ಥೆಯ ಹೊಸ Realme C83 5G ಸ್ಮಾರ್ಟ್‌ಫೋನ್‌ ಅಗ್ಗದ ಬೆಲೆಯ ಮೂಲಕ ಈಗಾಗಲೇ ಗ್ರಾಹಕರ ಗಮನ ಸೆಳೆದಿದೆ. ರಿಯಲ್‌ಮಿ C83 5G ಮೊಬೈಲ್‌ನ ಸೇಲ್‌ ಇಂದಿನಿಂದ ( ಮಾರ್ಚ್ 7 ರಂದು ) ಪ್ರಾರಂಭವಾಗಲಿದೆ. ಈ ಮೊಬೈಲ್‌ MediaTek Dimensity 6300 ಚಿಪ್‌ಸೆಟ್‌ ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕೆಲಸ ಮಾಡಲಿದ್ದು ಜೊತೆಗೆ 7,000mAh ಸಾಮರ್ಥ್ಯದ ಬಿಗ್ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಪಡೆದಿದೆ. ಇಂದು ಮಾರಾಟ ಶುರು ಮಾಡಲಿರುವ ರಿಯಲ್‌ಮಿ C83 5G ಮೊಬೈಲ್‌ ಎರಡು ಆಕರ್ಷಕ ಬಣ್ಣಗಳ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಾಗಲಿದೆ. ಇನ್ನುಳಿದಂತೆ ರಿಯಲ್‌ಮಿ C83 5G ಮೊಬೈಲ್‌ ಸೇಲ್ ಮಾಹಿತಿ, ಲಭ್ಯತೆ ಹಾಗೂ ಫೀಚರ್ಸ್‌ ಕುರಿತ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : Vivo X300 Ultra ಮೊಬೈಲ್‌ ಕ್ಯಾಮೆರಾ ಡಿಟೇಲ್ಸ್ ಬಹಿರಂಗ! ಶೀಘ್ರದಲ್ಲೇ ಮಾರುಕಟ್ಟೆಗೆ ಎಂಟ್ರಿ

Realme C83 5G ಸೇಲ್‌: ಬೆಲೆ ಹಾಗೂ ಲಭ್ಯತೆ ಮಾಹಿತಿ

ರಿಯಲ್‌ಮಿ C83 5G ಮೊಬೈಲ್‌ ಇಂದಿನಿಂದ (ಮಾರ್ಚ್ 7 ರಂದು) Flipkart ಇ ಕಾಮರ್ಸ್‌ ಪ್ಲಾಟ್‌ಫಾರ್ಮ್‌ ಮೂಲಕ ಮಧ್ಯಾಹ್ನ 12 ಗಂಟೆಗೆ ಮಾರಾಟ ಪ್ರಾರಂಭ ಮಾಡಲಿದೆ. ಈ ಮೊಬೈಲ್‌ 4GB RAM + 64GB ಸ್ಟೋರೇಜ್ ಆವೃತ್ತಿಯ ಬೆಲೆ 13,499 ರೂಗಳು ಆಗಿದೆ. ಇದರ 4GB RAM + 128GB ಸ್ಟೋರೇಜ್ ವೇರಿಯಂಟ್‌ ಬೆಲೆ 14,499 ರೂಗಳು ಆಗಿದೆ. ಇನ್ನು ಇದರ 6GB RAM + 128GB ಸ್ಟೋರೇಜ್ ವೇರಿಯಂಟ್‌ ಬೆಲೆ 17,499 ರೂಗಳು ಆಗಿದೆ. ಇನ್ನು ಆಸಕ್ತ ಗ್ರಾಹಕರು Flipkart ಇ ಕಾಮರ್ಸ್‌ ಹಾಗೂ ರಿಯಲ್‌ಮಿ ವೆಬ್‌ಸೈಟ್‌ ಮೂಲಕ ಖರೀದಿಸಬಹುದಾಗಿದೆ. ಅಂದಹಾಗೆ ಈ ಫೋನ್‌ ಬ್ಲೂಮಿಂಗ್ ಪರ್ಪಲ್ ಮತ್ತು ಸ್ಪ್ರೌಟಿಂಗ್ ಗ್ರೀನ್ ಕಲರ್‌ ಆಯ್ಕೆಗಳನ್ನು ಪಡೆದುಕೊಂಡಿದೆ.

Realme C83 5G

ರಿಯಲ್‌ಮಿ C83 5G ಮೊಬೈಲ್‌ ಫೀಚರ್ಸ್‌

ಹೊಸದಾಗಿ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿರುವ ರಿಯಲ್‌ಮಿ C83 5G ಮೊಬೈಲ್ 6.8 ಇಂಚಿನ HD+ LCD ಡಿಸ್‌ಪ್ಲೇ ಹೊಂದಿದ್ದು ಇದರ ಸ್ಕ್ರೀನ್‌ 720×1,570 ಪಿಕ್ಸಲ್‌ ರೆಸಲ್ಯೂಶನನ್ನು ಒಳಗೊಂಡಿದೆ. ಹಾಗೆಯೇ 144Hz ವರೆಗೆ ರಿಫ್ರೆಶ್ ರೇಟ್ ಹೊಂದಿದ್ದು 900 nits ಬ್ರೈಟ್ನೆಸ್‌ ಸೌಲಭ್ಯ ಪಡೆದುಕೊಂಡಿದೆ. ಈ ಫೋನ್ MediaTek Dimensity 6300 ಚಿಪ್‌ಸೆಟ್‌ ಪ್ರೊಸೆಸರ್‌ ಪವರ್‌ ಜೊತೆಗೆ ಇದು ಆಂಡ್ರಾಯ್ಡ್ 16 ಅನ್ನು Realme UI 7.0 ನೊಂದಿಗೆ ಕಾರ್ಯ ನಿರ್ವಹಿಸುತ್ತದೆ. ಅಲ್ಲದೇ ಎಸ್‌ಡಿ ಕಾರ್ಡ್‌ ಬೆಂಬಲದ ಮೂಲಕ ಸ್ಟೋರೇಜ್‌ ಅನ್ನು 2TB ವರೆಗೆ ವಿಸ್ತರಿಸಬಹುದು.

ರಿಯಲ್‌ಮಿ C83 5G ಮೊಬೈಲ್‌ ಹಿಂಬದಿಯಲ್ಲಿ ಡ್ಯುಯಲ್‌ ಕ್ಯಾಮೆರಾ ರಚನೆಯನ್ನು ಪಡೆದಿದೆ. ಇದರ ಪ್ರಾಥಮಿಕ ಕ್ಯಾಮೆರಾವು 13MP AI ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದ್ದು ಸೆಕೆಂಡರಿ ಕ್ಯಾಮೆರಾ ಬೇಸಿಕ್ ಸೆನ್ಸಾರ್‌ ಪವರ್‌ ಹೊಂದಿದೆ. ಇನ್ನು ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 5 ಮೆಗಾಪಿಕ್ಸಲ್ ಕ್ಯಾಮೆರಾ ಒದಗಿಸಲಾಗಿದೆ. ಇನ್ನು ಈ ಮೊಬೈಲ್‌ 7,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಒಳಗೊಂಡಿರುವ ಜೊತೆಗೆ 15W ವೈರ್ಡ್ ಚಾರ್ಜಿಂಗ್‌ ಸಪೋರ್ಟ್‌ ಸಹ ಹೊಂದಿದೆ. ಅಲ್ಲದೇ ಇದು ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP64 ರೇಟಿಂಗ್ ಅನ್ನು ಹೊಂದಿದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile

Digit.in
Logo
Digit.in
Logo