Xiaomi ಯ Redmi Note 7 Pro ಸ್ಮಾರ್ಟ್ಫೋನಿನ ಮೇಲೆ ನನ್ನ ಫಸ್ಟ್ ಇಂಪ್ರೆಷನ್ ಮಾತುಗಳು

Xiaomi ಯ Redmi Note 7 Pro ಸ್ಮಾರ್ಟ್ಫೋನಿನ ಮೇಲೆ ನನ್ನ ಫಸ್ಟ್ ಇಂಪ್ರೆಷನ್ ಮಾತುಗಳು
HIGHLIGHTS

Redmi ಯ ಮೊಟ್ಟ ಮೊದಲ ಸ್ಮಾರ್ಟ್ಫೋನ್ ಆಗಿದ್ದು ಟೈಪ್ ಸಿ ಪೋರ್ಟ್ 18W ಕ್ವಿಕ್ ಚಾರ್ಜ್ 4.0 ಸಪೋರ್ಟ್ ಮಾಡುತ್ತದೆ.

ಈಗ Redmi Note 7 Pro ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆಯಾಗಿದೆ. ಇದು ತನ್ನ 48MP ಕ್ಯಾಮೆರಾವನ್ನು ಸೋನಿ IMX586 ಸೆನ್ಸರೊಂದಿಗೆ  ಹಿಂಭಾಗದಲ್ಲಿ ಹೊಂದಿದೆ. ಇದರ ಬೆಲೆ ಸಹ ಈಗ ಅಧಿಕೃತವಾಗಿ ಬಿಡುಗಡೆಯಾಗಿದ್ದು ಕೇವಲ 13,999 ರೂಗಳೊಳಗೆ ಲಭ್ಯವಿದೆ. ಈ ಬಜೆಟಲ್ಲಿ ನೀವು ಪಡೆಯಬವುದುದಾದ ಭರ್ಜರಿಯ ಫೋನಾಗಿದೆ. ಅಲ್ಲದೆ ಈ ಸ್ಮಾರ್ಟ್ಫೋನನ್ನು ನೀವು ಫ್ಲಿಪ್ಕಾರ್ಟ್, ಮಿ.ಕಾಮ್ ಮಾತು ಮಿ ಸ್ಟೋರ್ಗಳಲ್ಲಿ ಮೊದಲ ಬಾರಿಗೆ ಇದೇ 13ನೇ ಮಾರ್ಚ್ ಮಧ್ಯಾಹ್ನ 12:00 ಗಂಟೆಗೆ ಲಭ್ಯವಾಗುತ್ತದೆ.

ಈ ಸ್ಮಾರ್ಟ್ಫೋನ್ ಕೇವಲ ಬಜೆಟ್ ಫೋನ್ ಮಾತ್ರವಲ್ಲದೆ Xiaomi ಈ ಫೋನಲ್ಲಿ ಸುಪೀರಿಯರ್ ಗ್ಲಾಸ್ ಡಿಸೈನ್ ಸಹ ಹೊಂದಿದೆ. ಇದು 2.5D ಕರ್ವ್ ಗೋರಿಲ್ಲಾ ಗ್ಲಾಸ್ v5 ಅನ್ನು ಹಿಂದೆ ಮತ್ತು ಮುಂದೆ ಎರಡು ಕಡೆಯಲ್ಲಿ ನೀಡಲಾಗಿದೆ. ಇದರ ಡಿಸ್ಪ್ಲೇ 6.3 ಇಂಚಿನ ಫುಲ್ HD+ LTPS ಡಾಟ್ ನಾಚ್ ಡಿಸ್ಪ್ಲೇಯನ್ನು ಹೊಂದಿದೆ. ಅಲ್ಲದೆ ಇದು 1.95 ಸಣ್ಣದಾದ ಬೆಝಲ್ಗಳೊಂದಿಗೆ ಬರುತ್ತದೆ. ಈಗಾಗಲೇ ಹೇಳಿರುವಂತೆ ಇದರ ಮೇಲ್ಭಾಗದಲ್ಲಿ ಡಾಟ್ ನಾಚ್ ಡಿಸ್ಪ್ಲೇಯನ್ನು ನೀಡಲಾಗಿದ್ದು ಇದರಲ್ಲಿ 13MP ಫ್ರಂಟ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.   

Redmi Note 7 Pro ಹೊಸ ಕ್ವಾಲ್ಕಾಮ್ ಸ್ನ್ಯಾಪ್ಡ್ರಾಗನ್ 675 SoC ಓಕ್ಟಾ ಕೋರ್ ಪ್ರೊಸೆಸರ್ ಹೊಂದಿದೆ. ಅಲ್ಲದೆ ಇದು ಇದರ ಹೈಯರ್ ಪ್ರೊಸೆಸರ್ ಆಗಿರುವ 710 ನಂತೆ ಕಾರ್ಯ ನಿರ್ವಯಿಸಲಿದೆಯಂತೆ. ಇದರಲ್ಲಿ ISP ಸಹ ಹೊಂದಿದ್ದು 48MP ಸಪೋರ್ಟ್ ಮಾಡುತ್ತದೆ. ಇದು 4GB-6GB ಯ RAM ಮತ್ತು 64GB-128GB ಸ್ಟೋರೇಜ್ ವೇರಿಯಂಟ್ಗಳಲ್ಲಿ ಬರುತ್ತದೆ.

ಇದು Redmi ಯ ಮೊಟ್ಟ ಮೊದಲ ಸ್ಮಾರ್ಟ್ಫೋನ್ ಆಗಿದ್ದು ಟೈಪ್ ಸಿ ಪೋರ್ಟ್ ಅನ್ನು ಹೊಂದಿದ್ದು 18W ಕ್ವಿಕ್ ಚಾರ್ಜ್ 4.0 ಸಪೋರ್ಟ್ ಮಾಡುತ್ತದೆ.   ಇದರ ಕ್ಯಾಮೆರಾದ ಬಗ್ಗೆ ಹೇಳಬೇಕೆಂದರೆ ಇದು 48MP + 5MP ಕ್ಯಾಮೆರಾದಲ್ಲಿ ಸೋನಿ IMX586 ಸೆನ್ಸರೊಂದಿಗೆ ಬರುತ್ತದೆ. ಇದೇ ರೀತಿಯ ಸೆನ್ಸರ್ Honor View 20 ಸಹ ನೀಡಲಾಗಿದೆ. ಇದು iPhone 10s ಮತ್ತು OnePlus 6T ಯಂತಹ ಕ್ಯಾಮೆರಾವನ್ನು ಹೊಂದಿದೆ. 

ಇದರಲ್ಲಿ ಮುಖ್ಯವಾಗಿ ಈ 48MP ಕೇವಲ ಪ್ರೊ ಮೋಡಲ್ಲಿ ಮಾತ್ರ ಕೆಲಸ ಮಾಡುತ್ತದೆ. ನಾರ್ಮಲಾಗಿ 12MP ನೀಡುತ್ತದೆ. ಇದರಲ್ಲಿ ನೈಟ್ ಫೋಟೋಗ್ರಫಿ ಮೂಡ್ ಸಹ ಹೊಂದಿದೆ. ಇದರಲ್ಲಿ ನೈಟ್ ಅಥವಾ ಲೋ ಲೈಟ್ ಶಾಟ್ಗಳನ್ನು ಅದ್ದೂರಿಯ ತೆಗೆಯಬವುದು. ಇದರಲ್ಲಿ ರಾತ್ರಿಯಲ್ಲಿ ತೆಗೆಯುವ ಶಾಟ್ಗಳಿಗಾಗಿ ಇಮೇಜ್ ಸ್ಟಬಿಲೈಝಷನ್ ನೀಡಿದ್ದು ಅದ್ದೂರಿಯ ಶಾಟ್ಗಳನ್ನು ಪಡೆಯಬವುದು. 

ಇದರ 48MP ತೆಗೆದ ನಾಲ್ಕು ಪಿಕ್ಸೆಲ್ಗಳಿಂದ ತೆಗೆದ ಪಿಕ್ಚರನ್ನು ಒಂದೇ ಇಮೇಜಾಗಿ ಹೊರ ತರುತ್ತದೆ. ಕೊನೆಯದಾಗಿ ಇದರ 5MP ಸೆನ್ಸರಲ್ಲಿ ಡೆಪ್ತ್ ಮೂಡಲ್ಲಿ ಪೋಟ್ರೇಟ್ ಶಾಟ್ಗಳನ್ನು ಪಡೆಯಬವುದು.  ಇದರ ಫ್ರಂಟಲ್ಲು ಸಹ 16MP AI ಕ್ಯಾಮೆರಾ ಸಾಫ್ಟ್ವೇರ್ ಬೊಕೆ ಶಾಟ್ಗಳನ್ನು ತೆಗೆಯಲು ಸಹಕರಿಸುತ್ತದೆ. ಈ Redmi Note 7 Pro ನಿಮಗೆ 4000 ಮಿಲಿ ಎಂಪವರ್ ಬ್ಯಾಟರಿಯನ್ನು ಹೊಂದಿದೆ. ಇದು 8 ಘಂಟೆಯ ನಿಮ್ಮ ಗೇಮಿಂಗ್ ಸಮಯವನ್ನು ನೀಡುತ್ತದೆ. 
 

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo