8GB RAM ಮತ್ತು 50MP ಸೋನಿ ಕ್ಯಾಮೆರಾವುಳ್ಳ Narzo 70 Pro 5G ಲಾಂಚ್! ಬೆಲೆ ಮತ್ತು ಟಾಪ್ 5 ಫೀಚರ್ಗಳೇನು?

8GB RAM ಮತ್ತು 50MP ಸೋನಿ ಕ್ಯಾಮೆರಾವುಳ್ಳ Narzo 70 Pro 5G ಲಾಂಚ್! ಬೆಲೆ ಮತ್ತು ಟಾಪ್ 5 ಫೀಚರ್ಗಳೇನು?
HIGHLIGHTS

ಭಾರತದಲ್ಲಿ Realme Narzo 70 Pro 5G ಸ್ಮಾರ್ಟ್ಫೋನ್ ಇಂದು ಅಧಿಕೃತವಾಗಿ ಬಿಡುಗಡೆಯಾಗಿದೆ.

Narzo 70 Pro 5G ಸ್ಮಾರ್ಟ್ಫೋನ್ 8GB RAM ಮತ್ತು 50MP IMX890 ಸೋನಿ ಸೆನ್ಸರ್ ಕ್ಯಾಮೆರಾ ಹೊಂದಿದೆ.

Realme Narzo 70 Pro 5G ಸ್ಮಾರ್ಟ್ಫೋನ್ ಇತ್ತೀಚಿನ ನಾರ್ಜೋ ಸರಣಿಯಲ್ಲಿ ಮೊದಲ ಮತ್ತು ಅತ್ಯುತ್ತಮ 5G ಇದಾಗಿದೆ.

ಭಾರತದಲ್ಲಿ ರಿಯಲ್‌ಮಿ ಸ್ಮಾರ್ಟ್ಫೋನ್ ಬ್ರಾಂಡ್ ಕಂಪನಿ ತನ್ನ ಲೇಟೆಸ್ಟ್ ಸ್ಮಾರ್ಟ್ಫೋನ್ Realme Narzo 70 Pro 5G ಅನ್ನು ಇಂದು ಅಧಿಕೃತವಾಗಿ ಬಿಡುಗಡೆಗೊಳಿಸಿದೆ. ಕಂಪನಿ ಈ ವರ್ಷ ಇತ್ತೀಚಿನ ನಾರ್ಜೋ ಸರಣಿಯಲ್ಲಿ (Narzo Series) ಮೊದಲ ಮತ್ತು ಅತ್ಯುತ್ತಮ 5G ಇದಾಗಿದೆ. ಇದರ ಹೈಲೈಟ್ ಬಗ್ಗೆ ಮಾತನಾಡುವುದಾದರೆ 8GB RAM, Dimensity ಪ್ರೊಸೆಸರ್, 5000mAh ಬ್ಯಾಟರಿ ಮತ್ತು 50MP IMX890 ಸೋನಿ ಸೆನ್ಸರ್ ಕ್ಯಾಮೆರಾವನ್ನು ಈ ಸ್ಮಾರ್ಟ್ಫೋನ್ ಹೊಂದಿದೆ.

ಈ ಸ್ಮಾರ್ಟ್ ಫೋನ್‌ನಲ್ಲಿರುವ AMOLED ಡಿಸ್ಪ್ಲೇ ನಿಮಗೆ ರೈನ್‌ವಾಟರ್ ಮತ್ತು ಏರ್ ಸ್ಮಾರ್ಟ್ ಟಚ್ ವೈಶಿಷ್ಟ್ಯದೊಂದಿಗೆ ಬರುತ್ತದೆ. Realme Narzo 70 Pro 5G ಸ್ಮಾರ್ಟ್ಫೋನ್ ಮೊದಲ ಮಾರಾಟವನ್ನು ಇಂದು ಸಂಜೆ 6:00pm ಗಂಟೆಯಿಂದ ಶುರುಗೊಳಿಸಿದ್ದು ಬಿಡುಗಡೆಯ ಕೊಡುಗೆಯಾಗಿ ಆಕರ್ಷಕ ಡೀಲ್ ಮತ್ತು ಆಫರ್ಗಳನ್ನು ರಿಯಲ್‌ಮಿ ನೀಡುತ್ತಿದೆ.

Also Read: Airtel, Jio, Vi Plans: ಒಂದೇ ಬೆಲೆಯಲ್ಲಿ 30 ದಿನಗಳ ವ್ಯಾಲಿಡಿಟಿಯ ಈ ಯೋಜನೆಯಲ್ಲಿ ಯಾರ ಪ್ಲಾನ್ ಹೆಚ್ಚು ಲಾಭ ನೀಡುತ್ತಿದೆ!

ಭಾರತದಲ್ಲಿ Realme Narzo 70 Pro 5G Display ಮಾಹಿತಿ:

Realme Narzo 70 Pro 5G launched in India
Realme Narzo 70 Pro 5G launched in India

ಈ ಲೇಟೆಸ್ಟ್ ಸ್ಮಾರ್ಟ್ಫೋನ್ ಡಿಸ್ಪ್ಲೇಯ ಬಗ್ಗೆ ಮಾತನಾಡುವುದಾದ್ರೆ Realme Narzo 70 Pro ಅತ್ಯುತ್ತಮವಾದ ಡಿಸ್ಪ್ಲೇ ಪ್ಯಾನಲ್ ಅನ್ನು ಕಂಪನಿ ಒಳಗೊಂಡಿದೆ. ಇದು 2400×1080 ರೆಸಲ್ಯೂಶನ್ FHD+ ಮತ್ತು 120Hz ಅಲ್ಟ್ರಾ ಸ್ಮೂತ್ ರಿಫ್ರೆಶ್ ರೇಟ್‌ನೊಂದಿಗೆ 6.67 ಇಂಚಿನ AMOLED ಪ್ಯಾನೆಲ್ 2000nits ಬ್ರೈಟ್‌ನೆಸ್ ಜೊತೆಗೆ ಬರುತ್ತದೆ.

ಇದರ ಡಿಸ್ಪ್ಲೇ 16.7 ಮಿಲಿಯನ್ ಬಣ್ಣಗಳನ್ನು ಮತ್ತು DCI-P3 ಬಣ್ಣವು ನಿಮಗೆ ದಿನದ ಸೂರ್ಯನ ಬೆಳಕಿನಲ್ಲೂ 100% ಆರಾಮಾಗಿ ಬಳಸಲು ಬೆಂಬಲಿಸುವುದರೊಂದಿಗೆ ಉತ್ತಮ ವೀಕ್ಷಣಾ ಅನುಭವವನ್ನು ನೀಡುತ್ತದೆ. Realme Narzo 70 Pro 5G ಡಿಸ್ಪ್ಲೇ ನಿಮಗೆ ಡೀಪ್ ಕಪ್ಪು ಮತ್ತು ರೋಮಾಂಚಕ ಬಣ್ಣಗಳನ್ನು ಹೊಂದಿದ್ದು ನಿಖರತೆ ಮಯ್ಯು ಶಾರ್ಪ್ ಕಂಟೆಂಟ್ ವೀಕ್ಷಣೆಯನ್ನು ನೀಡಲು ಹೆಚ್ಚು ಅನುಕೂಲಕರವಾಗಿದೆ.

ಭಾರತದಲ್ಲಿ Realme ನಾರ್ಜೋ 70 Pro 5G Camera ಮಾಹಿತಿ:

ಇಂದಿನ ದಿನಗಳಲ್ಲಿ ರಿಯಲ್‌ಮಿ ತನ್ನ ಕ್ಯಾಮೆರಾ ವಿಭಾಗದಲ್ಲಿ ಹೆಚ್ಚ್ಚು ಗಮನ ಹರಿಸಿದಂತೆ ಕಾಣುತ್ತದೆ. ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ನೀಡಲಾಗಿದ್ದು ಮೊದಲನೆಯದು ನಿಮಗೆ 50MP ಮೆಗಾಪಿಕ್ಸೆಲ್‌ ಅನ್ನು Sony IMX890 ಸೆನ್ಸರ್ f/1.88 ಅಪರ್ಚರ್ OIS ಮತ್ತು 2x ಇನ್-ಸೆನ್ಸರ್ ಜೂಮ್‌ನೊಂದಿಗೆ ನೀಡಲಾಗಿದ್ದು ಅತ್ಯುತ್ತಮ ಶಾರ್ಪ್ ಮತ್ತು ಕ್ಲಿಯರ್ ಇಮೇಜ್ ಮತ್ತು ವಿಡಿಯೋಗಳನ್ನು ಪಡೆಯಲು ಸಹಕಾರಿಯಾಗಲಿದೆ. ಎರಡನೇಯದಾಗಿ 8MP ಮೆಗಾಪಿಕ್ಸೆಲ್‌ ಅಲ್ಟ್ರಾವೈಡ್ ಶೂಟರ್ ಮತ್ತು ಕೊನೆಯದಾಗಿ 2MP ಮೆಗಾಪಿಕ್ಸೆಲ್‌ ಮ್ಯಾಕ್ರೋ ಲೆನ್ಸ್ ಹೊಂದಿದೆ. Realme Narzo 70 Pro 5G ಸ್ಮಾರ್ಟ್ಫೋನ್ ಡಿಸ್ಪ್ಲೇಯಲ್ಲಿ ಪಂಚ್ ಹೋಲ್ ಡಿಸ್ಪ್ಲೇಯಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 16MP ಮೆಗಾಪಿಕ್ಸೆಲ್‌ ಮುಂಭಾಗದಲ್ಲಿ ನೀಡಲಾಗಿದೆ.

Realme Narzo 70 Pro 5G launched in India
Realme Narzo 70 Pro 5G launched in India

ಭಾರತದಲ್ಲಿ Realme Narzo 70 Pro 5G Hardware ಮಾಹಿತಿ:

ಸ್ಮಾರ್ಟ್ಫೋನ್ ಪ್ರೊಸೆಸರ್ ಮತ್ತು ಹಾರ್ಡ್ವೇರ್ ಬಗ್ಗೆ ಮಾತನಾಡುವುದಾದರೆ ಇದರಲ್ಲಿ MediaTek Dimensity 7050 5G ಅನ್ನು ಹೊಂದಿರುವ ಈ ಸ್ಮಾರ್ಟ್ಫೋನ್ 6nm ಪ್ರೊಸೆಸರ್‌ನೊಂದಿಗೆ 2.6Ghz ಸ್ಪೀಡ್ ನಡೆಯುತ್ತದೆ. ಸ್ಮಾರ್ಟ್ಫೋನ್ ಒಟ್ಟಾರೆಯಾಗಿ ಎರಡು ರೂಪಾಂತರಗಳಲ್ಲಿ 8GB RAM ಮತ್ತು 128GB ಸ್ಟೋರೇಜ್ ಮತ್ತೊಂದು 8GB RAM ಮತ್ತು 256GB ಸ್ಟೋರೇಜ್ ಮೇರೆಗೆ ಬಿಡುಗಡೆಯಾಗಿದೆ. Realme Narzo 70 Pro 5G ಫೋನ್ 16GB ಡೈನಮಿಕ್ RAM ಆಯ್ಕೆಯನ್ನು ಸಹ ನೀಡಲಾಗಿದೆ.

ಫೋನ್ ತನ್ನದೇಯಾದ realme UI 5.0 ಆಧಾರಿತ ಆಂಡ್ರಾಯ್ಡ್ 14 ಜೊತೆಗೆ ಫೋನ್ ಅನ್ನು ಸ್ಮೂತಾಗಿ ನಡೆಸಲು ಮತ್ತು ಫೋನ್ ಕೂಲಾಗಿಡಲು 3D ವೇಪರ್ ಚೆಮ್ಬರ್ ಸಿಸ್ಟಮ್ ಅನ್ನು ಸಹ ನೀಡಲಾಗಿದೆ. ಫೋನ್ ಒಳಗೆ ಆಡಿಯೋ ವಿಭಾಗದಲ್ಲಿ ಡುಯಲ್ ಸೂಪರ್ ಸ್ಪೀಕರ್ ಹೊಂದಿದ್ದು ಡುಯಲ್ ಮೈಕ್ ನೋಯಿಸ್ ಕ್ಯಾನ್ಸಲೇಶಯನ್ ಮತ್ತು Hi-Res Audio ಸಪೋರ್ಟ್ ಮಾಡುತ್ತದೆ.

ಭಾರತದಲ್ಲಿ Realme Narzo 70 Pro 5G Battery ಮಾಹಿತಿ:

ಈ ಸ್ಮಾರ್ಟ್ಫೋನ್ ನಿಮಗೆ 5000mAh ದೊಡ್ಡ ಡಿಸೆಂಟ್ ಸಾಮರ್ಥವುಳ್ಳ ಬ್ಯಾಟರಿಯನ್ನು ಹೊಂದಿದ್ದು ಫೋನ್ 67W SUPERVOOC ಫಾಸ್ಟ್ ಚಾರ್ಜಿಂಗ್ ಅನ್ನು ಹೊಂದಿದೆ. ಇದರಲ್ಲಿ ನೀವು ದಿನದ ಪೂರ್ತಿ ಸಮಯದಲ್ಲಿ ಆಟಗಳನ್ನು ಆಡುವುದು, ಇಮೇಜ್ ಕ್ಲಿಕ್ ಮತ್ತು ವೀಡಿಯೊಗಳನ್ನು ಶೂಟ್ ಮಾಡಿ ಭಾರೀ ಬಳಕೆಯೊಂದಿಗೆ ಫೋನ್ ಸುಲಭವಾಗಿ ಒಂದು ದಿನ ಕಳೆಯುತ್ತದೆ. ಫೋನ್ 4K ವೀಡಿಯೊ ಲೂಪ್ ಪರೀಕ್ಷೆಯಲ್ಲಿ ಈ Realme Narzo 70 Pro ಪೂರ್ಣ ಚಾರ್ಜ್‌ನಿಂದ ಖಾಲಿಯಾಗುವವರೆಗೆ ಸುಮಾರು 14 ಗಂಟೆಗಳ ಕಾಲ ಇರುತ್ತದೆ. ಈ ನಿಮ್ಮ ಫೋನ್ 0 ಯಿಂದ 100% ಪುರ್ಟಿ ಚಾರ್ಜ್ ಆಗಲು 58 ನಿಮಿಷಗಳ ಕಾಲಾವಕಾಶ ಬೇಕಾಗುತ್ತದೆ.

Realme Narzo 70 Pro 5G launched in India
Realme Narzo 70 Pro 5G launched in India

ಭಾರತದಲ್ಲಿ Realme ನಾರ್ಜೋ 70 Pro 5G Price ಮಾಹಿತಿ:

ಭಾರತದಲ್ಲಿ ಈ ಸ್ಮಾರ್ಟ್ಫೋನ್ 22ನೇ ಮಾರ್ಚ್ 2024 ರಂದು ಎರಡನೇ ಅಧಿಕೃತ ಮಾರಾಟ ಪ್ರಾರಂಭಿಸಲಾಗುವುದು. ಈ ಸ್ಮಾರ್ಟ್ಫೋನ್ ಒಟ್ಟಾರೆಯಾಗಿ ಎರಡು ರೂಪಾಂತರಗಳಲ್ಲಿ 8GB RAM ಮತ್ತು 128GB ಸ್ಟೋರೇಜ್ ಆವೃತ್ತಿಗೆ ₹19,999 ರೂಗಳಾಗಿದ್ದು ಮತ್ತೊಂದು 8GB RAM ಮತ್ತು 256GB ಸ್ಟೋರೇಜ್ ಆವೃತ್ತಿಗೆ ₹21,999 ರೂಗಳಾಗಿವೆ.

ಅಲ್ಲದೆ ಸ್ಮಾರ್ಟ್ಫೋನ್ ಇಂದು ಅರ್ಲಿ ಬರ್ಡ್ ಸೇಲ್ ಬಿಡುಗಡೆಯ ಮಾರಾಟವನ್ನು ಸಂಜೆ ಆರಂಭಿಸಲಿದ್ದು ಕಂಪನಿಯು 8+128 ರೂಪಾಂತರದ ಮೇಲೆ ₹1,000 ಬ್ಯಾಂಕ್ ರಿಯಾಯಿತಿ ಮತ್ತು 8+256 ರೂಪಾಂತರದ ಮೇಲೆ ₹2,000 ರಿಯಾಯಿತಿಯನ್ನು ನೀಡುತ್ತಿದೆ. ಇದು ICICI ಮತ್ತು HDFC ಬ್ಯಾಂಕ್ ಕಾರ್ಡ್‌ಗಳಿಗೆ ಮಾತ್ರ ಲಭ್ಯವಿದ್ದು ಇದನ್ನು realme.com ಮತ್ತು Amazon India ನಲ್ಲಿ ಖರೀದಿಸಬಹುದು.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo