OPPO Reno14 5G Diwali Edition: ಸದ್ದಿಲ್ಲದೇ ರಂಗೋಲಿ ಡಿಸೈನ್‌ವುಳ್ಳ ಸ್ಮಾರ್ಟ್ ಫೋನ್ ಪರಿಚಯಿಸಿದ ಒಪ್ಪೋ!
OPPO ತನ್ನ ಬಳಕೆದಾರರಿಗೆ Reno14 5G ದೀಪಾವಳಿ ಆವೃತ್ತಿಯ ದೀಪಾವಳಿ ಉಡುಗೊರೆಯನ್ನು ನೀಡಿದೆ.
OPPO Reno14 5G Diwali Edition ಫೋನ್ 8GB RAM ಮತ್ತು 256GB ಸ್ಟೋರೇಜ್ ರೂಪಾಂತರವು ₹39,999 ಬೆಲೆಗೆ ಲಭ್ಯ.
OPPO Reno14 5G Diwali Edition: ಭಾರತದಲ್ಲಿ ಹಬ್ಬದ ಋತುವನ್ನು ಆಚರಿಸಲು ಸ್ಮಾರ್ಟ್‌ಫೋನ್ ಕಂಪನಿಗಳು ಯಾವಾಗಲೂ ವಿಶೇಷವಾದದ್ದನ್ನು ನೀಡುತ್ತವೆ. ಈ ಬಾರಿ OPPO ತನ್ನ ಬಳಕೆದಾರರಿಗೆ Reno14 5G ದೀಪಾವಳಿ ಆವೃತ್ತಿಯ ದೀಪಾವಳಿ ಉಡುಗೊರೆಯನ್ನು ನೀಡಿದೆ. ಈ ಸ್ಮಾರ್ಟ್‌ಫೋನ್ ವಿನ್ಯಾಸ ಮತ್ತು ಬಣ್ಣದಲ್ಲಿ ವಿಶಿಷ್ಟವಾಗಿದೆ. ಜೊತೆಗೆ ಉದ್ಯಮದ ಮೊದಲ ಶಾಖ-ಸೂಕ್ಷ್ಮ ಬಣ್ಣ-ಬದಲಾಯಿಸುವ ತಂತ್ರಜ್ಞಾನವನ್ನು ಸಹ ಒಳಗೊಂಡಿದೆ. ಕೈಯ ಶಾಖದಿಂದಲೇ ಈ ಫೋನ್ ಸ್ಪರ್ಶಿಸಿದಾಗ ಅದರ ಹಿಂದಿನ ಫಲಕವು ಕಪ್ಪು ಬಣ್ಣದಿಂದ ಚಿನ್ನದ ಬಣ್ಣಕ್ಕೆ ಬದಲಾಗುತ್ತದೆ.
Surveyಇದು ದೀಪಾವಳಿಯ ಬೆಳಕು ಮತ್ತು ಬಣ್ಣಗಳ ಅನುಭವವನ್ನು ನೀಡುತ್ತದೆ. ಈ ವಿನ್ಯಾಸವು ನವಿಲು ಮತ್ತು ದಿಯಾ-ಪ್ರೇರಿತ ಮಾದರಿಗಳನ್ನು ಹೊಂದಿದ್ದು ಭಾರತೀಯ ಸಂಸ್ಕೃತಿ ಮತ್ತು ದೀಪಾವಳಿಯನ್ನು ಪ್ರತಿಬಿಂಬಿಸುತ್ತದೆ. ಈ ಫೋನ್ ಪ್ರೀಮಿಯಂ ಕಪ್ಪು-ಮತ್ತು-ಚಿನ್ನದ ಪ್ಯಾಲೆಟ್‌ನಲ್ಲಿಯೂ ಬರುತ್ತದೆ.
Also Read: iPhone 15 or iPhone 16: ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ ಮಾರಾಟದಲ್ಲಿ ಯಾವ ಫೋನ್ ಖರೀದಿಸುವುದು ಬೆಸ್ಟ್?
OPPO Reno14 5G Diwali Edition ಹಬ್ಬದ ಕೊಡುಗೆಗಳು:
ಬೆಲೆಯ ಬಗ್ಗೆ ಹೇಳುವುದಾದರೆ OPPO Reno14 5G ದೀಪಾವಳಿ ಆವೃತ್ತಿಯ ಫೋನ್ 8GB RAM ಮತ್ತು 256GB ಸ್ಟೋರೇಜ್ ರೂಪಾಂತರವು ₹39,999 ಬೆಲೆಗೆ ಲಭ್ಯವಿದೆ. ಆದಾಗ್ಯೂ ಹಬ್ಬದ ಕೊಡುಗೆಯ ಸಮಯದಲ್ಲಿ ಫೋನ್ ಪ್ಲಿಪ್‌ಕಾರ್ಟ್, ಅಮೆಜಾನ್ ಮತ್ತು OPPO ಇ-ಸ್ಟೋರ್‌ನಲ್ಲಿ ಕೇವಲ ₹36,999 ಗೆ ಲಭ್ಯವಿರುತ್ತದೆ. ಆಯ್ದ ಬ್ಯಾಂಕ್ ಕಾರ್ಡ್‌ಗಳಲ್ಲಿ ₹3,000 ವರೆಗೆ ತ್ವರಿತ ಕ್ಯಾಶ್‌ಬ್ಯಾಕ್, ನಿಮ್ಮ ಹಳೆಯ ಫೋನ್‌ನಲ್ಲಿ ₹3,000 ವರೆಗೆ ಬೋನಸ್ ಮತ್ತು 6 ತಿಂಗಳವರೆಗೆ ಯಾವುದೇ ವೆಚ್ಚವಿಲ್ಲದ EMI ಗಳು ಲಭ್ಯವಿದೆ.

ಒಪ್ಪೋವಿನ ದೀಪಾವಳಿ ಆವೃತ್ತಿ ಫೋನ್ ವೈಶಿಷ್ಟ್ಯಗಳೇನು?
ಈ ಸ್ಮಾರ್ಟ್‌ಫೋನ್‌ನ ಅತಿದೊಡ್ಡ ಹೈಲೈಟ್ ಎಂದರೆ ಅದರ ಗ್ಲೋಶಿಫ್ಟ್ ಹೀಟ್-ಸೆನ್ಸಿಟಿವ್ ಬಣ್ಣ ಬದಲಾಯಿಸುವ ಬ್ಯಾಕ್ ಪ್ಯಾನಲ್. ಇದು ಕಪ್ಪು ಬಣ್ಣದಿಂದ ಚಿನ್ನದ ಬಣ್ಣಕ್ಕೆ ರೂಪಾಂತರಗೊಳ್ಳುತ್ತದೆ. ಹಬ್ಬದ ಉತ್ಸಾಹವನ್ನು ಹೆಚ್ಚಿಸುತ್ತದೆ. ಫೋನ್ ಗೋಲ್ಡನ್ ಟಚ್‌ನೊಂದಿಗೆ ಮಂಡಲ ಮತ್ತು ಪೀಕಾಕ್ ವಿನ್ಯಾಸವನ್ನು ಹೊಂದಿದೆ. ಇದು ಕೇವಲ 7.42 ಮಿಮೀ ತೆಳ್ಳಗಿದೆ.
Also Read: BSNL Smart Recharge: ಕೈಗೆಟಕುವ ಬೆಲೆಗೆ ಹೆಚ್ಚುವರಿ ಪ್ರಯೋಜನಗಳನ್ನು ನೀಡುವ ಬೆಸ್ಟ್ ರಿಚಾರ್ಜ್ ಪ್ಲಾನ್ಗಳು!
OPPO Reno14 5G ದೀಪಾವಳಿ ಆವೃತ್ತಿಯು 6.59 ಇಂಚಿನ 1.5K AMOLED ಡಿಸ್ಟ್ರೇಯನ್ನು 120Hz ರಿಫ್ರೆಶ್ ದರ, 93% ಸ್ಟೀನ್-ಟು-ಬಾಡಿ ಅನುಪಾತ ಮತ್ತು 1200 ನಿಟ್ಸ್ ಬೈಟ್‌ನೆಸ್ ಹೊಂದಿದೆ. ಫೋನ್ 50MP ಪ್ರೈಮರಿ ಸೆನ್ಸರ್ 50MP ಟೆಲಿಫೋಟೋ (3.5x ಆಪ್ಟಿಕಲ್ ಜೂಮ್), 8MP ಅಲ್ಪಾ-ವೈಡ್-ಆಂಗಲ್ ಕ್ಯಾಮೆರಾ ಮತ್ತು 50MP ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ. ಇದು Al ಎಡಿಟರ್ 2.0, Al ಬೆಸ್ಟ್ ಫೇಸ್ ಮತ್ತು Al ಎರೇಸರ್‌ನಂತಹ ಸುಧಾರಿತ ವೈಶಿಷ್ಟ್ಯಗಳನ್ನು ಸಹ ಹೊಂದಿದೆ.
ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 8350 ಪ್ರೊಸೆಸರ್ ನಿಂದ ಚಾಲಿತವಾಗಿದ್ದು ಇದು 20% ಹೆಚ್ಚಿನ ಕಾರ್ಯಕ್ಷಮತೆ ಮತ್ತು 30% ಉತ್ತಮ ವಿದ್ಯುತ್ ದಕ್ಷತೆಯನ್ನು ನೀಡುತ್ತದೆ. ಇದು ColorOS 15 ಮತ್ತು AI Translate ಮತ್ತು Al VoiceScribe ನಂತಹ Al ವೈಶಿಷ್ಟ್ಯಗಳೊಂದಿಗೆ ಬರುತ್ತದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile