OPPO F31 Series ಬಿಡುಗಡೆ ಕಂಫಾರ್ಮ್ ಮಾಡಿದ ಒಪ್ಪೋ! ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೇನು?
ಭಾರತದಲ್ಲಿ OPPO F31 Series ಸ್ಮಾರ್ಟ್ಫೋನ್ ಬಿಡುಗಡೆಗೆ ಡೇಟ್ ಕಂಫಾರ್ಮ್.
OPPO F31 Series ಸ್ಮಾರ್ಟ್ಫೋನ್ 7000mAh ಬ್ಯಾಟರಿ ಮತ್ತು ಸ್ನಾಪ್‌ಡ್ರಾಗನ್ ಪ್ರೊಸೆಸರ್ನೊಂದಿಗೆ ಬರಲಿದೆ.
OPPO F31 Series ಸ್ಮಾರ್ಟ್ಫೋನ್ 128GB ಮಾದರಿ ಸುಮಾರು ₹20,000 ಕ್ಕಿಂತ ಕಡಿಮೆ ಬೆಲೆಗೆ ನಿರೀಕ್ಷಿಸಲಾಗಿದೆ.
ಜನಪ್ರಿಯ ಸ್ಮಾರ್ಟ್ ಫೋನ್ ಕಂಪನಿ ಒಪ್ಪೋ (OPPO) ತನ್ನ ಬಹುನಿರೀಕ್ಷಿತ OPPO F31 Series ಬಿಡುಗಡೆ ದಿನಾಂಕವನ್ನು ಭಾರತದಲ್ಲಿ ದೃಢಪಡಿಸಿದೆ. ಸ್ಮಾರ್ಟ್ಫೋನ್ “Durable Champion” ಎಂಬ ಟ್ಯಾಗ್‌ಲೈನ್‌ನೊಂದಿಗೆ ಬರುವ ಈ ಹೊಸ ಸ್ಮಾರ್ಟ್‌ಫೋನ್ ಸರಣಿಯು ಇದೆ 15ನೇ ಸೆಪ್ಟೆಂಬರ್ 2025 ರಂದು ಅಧಿಕೃತವಾಗಿ ಬಿಡುಗಡೆಯಾಗಲಿದೆ. ಈ ಸರಣಿಯು ಪ್ರೀಮಿಯಂ ಫೀಚರ್ಗಳನ್ನು ಹೊಂದಿದ್ದು ಮಧ್ಯಮ ಶ್ರೇಣಿಯ ಫೋನ್‌ಗಳ ವಿಭಾಗದಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸುವ ನಿರೀಕ್ಷೆ ಇದೆ. ಕಂಪನಿಯು ಇನ್ನೂ ಎಲ್ಲಾ ವೈಶಿಷ್ಟ್ಯಗಳನ್ನು ಬಹಿರಂಗಪಡಿಸಿಲ್ಲ ಆದರೆ ಹಲವು ವಿಶ್ವಾಸಾರ್ಹ ಮಾಹಿತಿ ಸೋರಿಕೆಗಳು ಮತ್ತು ಅಧಿಕೃತ ಟೀಸರ್‌ಗಳು ಈ ಸರಣಿಯ ಬಗ್ಗೆ ಸ್ಪಷ್ಟ ಮಾಹಿತಿ ನೀಡಿವೆ.
Surveyಭಾರತದಲ್ಲಿ OPPO F31 Series ನಿರೀಕ್ಷಿತ ಬೆಲೆ ಮತ್ತು ವೇರಿಯೆಂಟ್
ಒಪ್ಪೋ ಕಂಪನಿ ತನ್ನ ಮುಂಬರಲಿರುವ ಈ ಸ್ಮಾರ್ಟ್ಫೋನ್ ಸರಣಿಯಲ್ಲಿ ಒಟ್ಟಾರೆಯಾಗಿ 3 ವೇರಿಯೆಂಟ್ ಪರಿಚಯಿಸುವ ನಿರೀಕ್ಷೆಗಳಿವೆ. ಕಂಪನಿ ಇದರಲ್ಲಿ OPPO F31, OPPO F31 Pro ಮತ್ತು OPPO F31 Pro+ ಅನ್ನು ಬಿಡುಗಡೆಗೊಳಿಸುವ ನಿರೀಕ್ಷೆಗಳಿವೆ. ಈ ಸ್ಮಾರ್ಟ್ಫೋನ್ ಆರಂಭಿಕ 8GB RAM ಮತ್ತು 128GB ಸ್ಟೋರೇಜ್ ಸುಮಾರು 20,000 ರೂಗಳಿಗಿಂತ ಕಡಿಮೆ ಬೆಲೆಗೆ ನಿರೀಕ್ಷಿಸಲಾಗಿದೆ. ಈ OPPO F31 Series ಸ್ಮಾರ್ಟ್ ಫೋನ್ ಪ್ರತ್ಯೇಕವಾಗಿ ಫ್ಲಿಪ್ಕಾರ್ಟ್ ಮೂಲಕ ಬಿಡುಗಡೆಯಾಗಿ ಮಾರಾಟವಾಗುವ ನಿರೀಕ್ಷೆಗಳಿವೆ.
Something smooth is coming your way! The all-new #OPPOF31Series5G is launching on 15th Sept, 12 PM IST. Stay tuned for #SmoothAndPowerful performance like never before. For details, Search “OPPO F31 Series” pic.twitter.com/hXe2ahfRco
— OPPO India (@OPPOIndia) September 7, 2025
ಭಾರತದಲ್ಲಿ OPPO F31 Series ನಿರೀಕ್ಷಿತ ಫೀಚರ್ಗಳೇನು?
ಈ ಸರಣಿಯ ಪ್ರಮುಖ ವೈಶಿಷ್ಟ್ಯವೆಂದರೆ ಅದರ ಬಾಳಿಕೆಯಾಗಿದೆ. ಈ ಫೋನ್‌ಗಳು IP66, IP68 ಮತ್ತು IP69 ರೇಟಿಂಗ್‌ಗಳನ್ನು ಹೊಂದಿರಲಿದ್ದು ಇದು ಧೂಳು ಮತ್ತು ನೀರಿನಿಂದ ಫೋನ್‌ಗೆ ರಕ್ಷಣೆ ನೀಡುತ್ತದೆ. ಈ ಸ್ಮಾರ್ಟ್ಫೋನ್ 6.7 ಇಂಚಿನ AMOLED ಡಿಸ್‌ಪ್ಲೇ ಮತ್ತು 120Hz ರಿಫ್ರೆಶ್ ರೇಟ್ ಹೊಂದಿರುವ ಸಾಧ್ಯತೆ ಇದೆ. ಈ ಸರಣಿಯ ಎಲ್ಲಾ ಫೋನ್‌ಗಳು ಪ್ರೈಮರಿ 50MP ಕ್ಯಾಮೆರಾ ಹೊಂದಿರಲಿವೆ.
Also Read: ತಪ್ಪಾದ UPI ಖಾತೆಗೆ ಹಣ ಸೆಂಡ್ಆ ಆಗೋಯ್ತಾ? ಹಾಗಾದ್ರೆ ತಕಕ್ಷಣ ವಾಪಸ್ ಪಡೆಯೋದು ಹೇಗೆ ತಿಳಿಯಿರಿ!
ಈ ಸ್ಮಾರ್ಟ್ ಫೋನ್ಗಳಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ ಫೋನ್‌ಗಳು 32MP ಮುಂಭಾಗದ ಕ್ಯಾಮೆರಾ ಹೊಂದಿರಲಿವೆ. ಇದು ಬಳಕೆದಾರರಿಗೆ ಅತ್ಯುತ್ತಮ ಅನುಭವವನ್ನು ನೀಡಲಿವೆ ಆದರೆ ಇವುಗಳ ಖಚಿತ ಫೀಚರ್ಗಳಿಗಾಗಿ ಇನ್ನೂ ಕೊಂಚ ಸಮಯ ಕಾಯಬೇಕಿದೆ.
ಈ OPPO F31 ಸ್ಮಾರ್ಟ್ ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 6300 ಪ್ರೊಸೆಸರ್‌ನಿಂದ OPPO F31 Pro ಮೀಡಿಯಾಟೆಕ್ ಡೈಮೆನ್ಸಿಟಿ 7300 ಪ್ರೊಸೆಸರ್‌ನಿಂದ ಮತ್ತು OPPO F31 Pro+ ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ 7 Gen 3 ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸುವ ನಿರೀಕ್ಷೆ ಇದೆ. ಈ OPPO F31 Series ಎಲ್ಲಾ ಮೂರು ಮಾದರಿಗಳು 7000mAh ಬ್ಯಾಟರಿ ಹೊಂದಿರಲಿವೆ ಎಂದು ಹೇಳಲಾಗಿದೆ. ಇದರೊಂದಿಗೆ ಫೋನ್‌ಗಳು 80W SuperVOOC ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸಲಿದ್ದು ಇದರಿಂದ ಫೋನ್ ವೇಗವಾಗಿ ಚಾರ್ಜ್ ಆಗುತ್ತದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile