OnePlus 12R ಮುಂದಿನ ಸೇಲ್ ನಾಳೆ ಅಮೆಜಾನ್‌ನಲ್ಲಿ ಭಾರಿ ಆಫರ್‌ಗಳೊಂದಿಗೆ ಲಭ್ಯ! ಖರೀದಿಗೆ ನೀವು ರೆಡಿನಾ?

OnePlus 12R ಮುಂದಿನ ಸೇಲ್ ನಾಳೆ ಅಮೆಜಾನ್‌ನಲ್ಲಿ ಭಾರಿ ಆಫರ್‌ಗಳೊಂದಿಗೆ ಲಭ್ಯ! ಖರೀದಿಗೆ ನೀವು ರೆಡಿನಾ?
HIGHLIGHTS

ಒನ್​ಪ್ಲಸ್ ತನ್ನ OnePlus 12R ಎರಡನೇ ಸೇಲ್ ನಾಳೆ ಅಂದ್ರೆ 13ನೇ ಫೆಬ್ರವರಿ 2024 ರಂದು ಹಮ್ಮಿಕೊಂಡಿದೆ

OnePlus 12R ಮುಂದಿನ ಸೇಲ್‌ನಲ್ಲಿ 4000 ರೂಪಾಯಿಗಳವರೆಗೆ ಭರ್ಜರಿ ಎಕ್ಸ್‌ಚೇಂಜ್ ಬೋನಸ್‌ ನೀಡುತ್ತಿದೆ.

ಆಸಕ್ತ ಬಳಕೆದಾರರು ಅತಿ ಶೀಘ್ರದಲ್ಲೇ ಮತ್ತೊಂದು ಸೇಲ್ ಬೇಕೆಂದು ಟ್ವಿಟ್ಟರ್ ಮತ್ತು ಹಲವು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದರು

ಇತ್ತೀಚಿಗೆ ಒನ್​ಪ್ಲಸ್ ತನ್ನ ಲೇಟೆಸ್ಟ್ ಸ್ಮಾರ್ಟ್ಫೋನ್ ಅನ್ನು ಮಾರುಕಟ್ಟೆಯಲ್ಲಿ ಅತ್ಯುತ್ತಮ ಫೀಚರ್ಗಳೊಂದಿಗೆ ಬಿಡುಗಡೆಗೊಳಿಸಿದ ಈ OnePlus 12R ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಭಾರಿ ಸದ್ದು ಮಾಡಿತ್ತು. ಈಗ ಎರಡನೇ ಮಾರಾಟಕ್ಕೆ ಭರ್ಜರಿ ಡೀಲ್ ಮತ್ತು ಡಿಸ್ಕೌಂಟ್‌ಗಳೊಂದಿಗೆ ಮತ್ತೆ ಪಿಸುಗುಡುತ್ತಿದೆ. ಏಕೆಂದರೆ ಇದರ ಮೊದಲ ಮಾರಾಟ ಕಂಪನಿಯ 6ನೇ ಫೆಬ್ರವರಿ 2024 ರಂದು ಮೊದಲ ಬಾರಿಗೆ ಮಾರಾಟಕ್ಕೆ ಬಂದಿತ್ತು ಸೇಲ್ ಶುರುವಾದ ಕೆಲವೇ ಘಂಟೆಗಳಲ್ಲಿ ಫೋನ್ ಭರ್ಜರಿಯಾಗಿ ಮಾರಾಟವಾಗಿ ಫುಲ್ ಸೋಲ್ಡ್ ಔಟ್ ಆಗಿತ್ತು.

ಇದರ ಹಿನ್ನೆಯಲ್ಲಿ ಹಲವಾರು ಆಸಕ್ತ ಬಳಕೆದಾರರು ಅತಿ ಶೀಘ್ರದಲ್ಲೇ ಮತ್ತೊಂದು ಸೇಲ್ ಬೇಕೆಂದು ಟ್ವಿಟ್ಟರ್ ಮತ್ತು ಹಲವು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದರು. ಇದಕ್ಕೆ ಉತ್ತರವಾಗಿ ಕಂಪನಿ ತನ್ನ OnePlus 12R ಎರಡನೇ ಮಾರಾಟವನ್ನು ನಾಳೆ ಅಂದ್ರೆ 13ನೇ ಫೆಬ್ರವರಿ 2024 ರಂದು 12:00pm ಹಮ್ಮಿಕೊಂಡಿದ್ದು ಭರ್ಜರಿಯ ಎಕ್ಸ್‌ಚೇಂಜ್ ಬೋನಸ್‌ನ ಸಹ ನೀಡುತ್ತಿದೆ.

Also Read: WhatsApp Phishing: ಆನ್‌ಲೈನ್ ವಂಚನೆಗಳಿಗೆ ಬ್ರೇಕ್ ಹಾಕಲು ವಾಟ್ಸಾಪ್‌ನಿಂದ ಹೊಸ ಸೆಕ್ಯೂರಿಟಿ ಫೀಚರ್!

OnePlus 12R ಬೆಲೆ ಮತ್ತು ಆಫರ್‌ಗಳು

ಒನ್​ಪ್ಲಸ್ ಇಂಡಿಯಾ ವೆಬ್‌ಸೈಟ್ ಪ್ರಕಾರ ICICI ಬ್ಯಾಂಕ್ ಅಥವಾ OneCard ಕ್ರೆಡಿಟ್ ಕಾರ್ಡ್‌ಗಳು ಮತ್ತು ಕ್ರೆಡಿಟ್ ಕಾರ್ಡ್‌ಗಳ ಮೂಲಕ EMI ವಹಿವಾಟುಗಳನ್ನು ಮಾಡುವ ಬಳಕೆದಾರರು 1,000 ರೂಪಾಯಿಗಳ ತ್ವರಿತ ರಿಯಾಯಿತಿಯನ್ನು ಪಡೆಯುತ್ತಾರೆ. OnePlus 12R ಈ ಕೊಡುಗೆಯು ಐಸಿಐಸಿಐ ಬ್ಯಾಂಕ್ ನೆಟ್‌ಕಿಂಗ್ ವಹಿವಾಟುಗಳಿಗೂ ಸಹ ಅಮೆಜಾನ್ ಇಂಡಿಯಾ ಡೀಲ್‌ನಲ್ಲಿ ನೀವು ಈ ಫೋನ್ ಅನ್ನು ಎಕ್ಸ್‌ಚೇಂಜ್ ಜೊತೆಗೆ ರೂ 4,000 ವರೆಗೆ ಹೆಚ್ಚುವರಿ ರಿಯಾಯಿತಿಯೊಂದಿಗೆ ಖರೀದಿಸಬಹುದು.ಐಸಿಐಸಿಐ ಬ್ಯಾಂಕ್ ಮತ್ತು ಒನ್ ಕಾರ್ಡ್ ಆಫರ್ ಅಮೆಜಾನ್ ಇಂಡಿಯಾದಲ್ಲಿಯೂ ಲಭ್ಯವಿರುತ್ತದೆ. ನೀವು ಜಿಯೋ ಬಳಕೆದಾರರಾಗಿದ್ದರೆ ಜಿಯೋ ಪ್ಲಸ್ ಪೋಸ್ಟ್‌ಪೇಯ್ಡ್ ಯೋಜನೆಯೊಂದಿಗೆ ನೀವು ರೂ 2250 ಮೌಲ್ಯದ ಪ್ರಯೋಜನಗಳನ್ನು ಪಡೆಯುತ್ತೀರಿ.

OnePlus 12R

ಒನ್​ಪ್ಲಸ್ 12R ವೈಶಿಷ್ಟ್ಯಗಳು ಮತ್ತು ವಿಶೇಷಣಗಳು

ಕಂಪನಿಯು ಈ ಫೋನ್‌ನಲ್ಲಿ 2780×1284 ಪಿಕ್ಸೆಲ್ ರೆಸಲ್ಯೂಶನ್‌ನೊಂದಿಗೆ 6.78 ಇಂಚಿನ AMOLED PraXDR 1.5K ಡಿಸ್ಪ್ಲೇಯನ್ನು ನೀಡುತ್ತಿದೆ. ಡಿಸ್ಪ್ಲೇ ನಿಮಗೆ 120Hz ರವರೆಗಿನ ರಿಫ್ರೆಶ್ ದರವನ್ನು ಮತ್ತು 4500 ನಿಟ್‌ಗಳ ಗರಿಷ್ಠ ಬ್ರೈಟ್‌ನೆಸ್ ಲೇವಲ್ ಬೆಂಬಲಿಸುತ್ತದೆ. ಡಿಸ್ಪ್ಲೇ ಪ್ರೊಟೆಕ್ಷನ್‌ಗಾಗಿ ಕಂಪನಿಯು ಈ ಫೋನ್‌ನಲ್ಲಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ಅನ್ನು ಸಹ ಒದಗಿಸುತ್ತಿದೆ. OnePlus 12R ಫೋನ್ 16 GB LPDDR5x RAM ವರೆಗೆ ಮತ್ತು 256 GB ವರೆಗೆ UFS 4.0 ಸ್ಟೋರೇಜ್ ಆಯ್ಕೆಯಲ್ಲಿ ಬರುತ್ತದೆ. ಪ್ರೊಸೆಸರ್ ಆಗಿ ಈ ಫೋನ್‌ನಲ್ಲಿ ನೀವು ಅಡ್ವಾಣಿ 740 GPU ಜೊತೆಗೆ Snapdragon 6 Gen 2 ಚಿಪ್‌ಸೆಟ್ ಅನ್ನು ಪಡೆಯುತ್ತೀರಿ.

OnePlus 12R ಫೋಟೋಗ್ರಾಫಿಗಾಗಿ ಫೋನ್‌ನ ಹಿಂಭಾಗದಲ್ಲಿ LED ಫ್ಲ್ಯಾಷ್‌ನೊಂದಿಗೆ ಟ್ರಿಪಲ್ ಕ್ಯಾಮೆರಾಗಳನ್ನು ನೀಡಲಾಗಿದೆ. ಇವುಗಳು ಮೊದಲನೆಯದು 50MP ಮೆಗಾಪಿಕ್ಸೆಲ್ ಪ್ರೈಮರಿ ಲೆನ್ಸ್ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಜೊತೆಗೆ ಮತ್ತೊಂದು 8MP ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್ ಮತ್ತು ಕೊನೆಯದಾಗಿ 2MP ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸರ್ ಅನ್ನು ಒಳಗೊಂಡಿವೆ. ಅಲ್ಲದೆ ಸೆಲ್ಫಿಗಾಗಿ ಕಂಪನಿಯು ಈ ಫೋನ್‌ನಲ್ಲಿ 16MP ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ನೀಡುತ್ತಿದೆ. ಫೋನ್‌ನ ಬ್ಯಾಟರಿ 5500mAh ಆಗಿದೆ ಮತ್ತು ಇದು 100W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ ವಾಟ್ಸಾಪ್ Channel View ಮಾಡಿ ಸೇರಿಕೊಳ್ಳಿ!

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo