Nothing Phone (3a) ಸ್ಮಾರ್ಟ್ಫೋನ್ ಡಿಸೈನ್ ಲಂಡನ್ನಾದರೂ ತಯಾರಿಕೆ ಮಾತ್ರ ಭಾರತದಲ್ಲಿ ನಡೆಯುತ್ತಿದೆ!

HIGHLIGHTS

Nothing Phone (3a) ಸ್ಮಾರ್ಟ್ಫೋನ್ ಭಾರತ ಸೇರಿದಂತೆ ಜಾಗತಿಕವಾಗಿ ಬಿಡುಗಡೆಗೆ ಸಜ್ಜಾಗಿದೆ.

Nothing Phone (3a) ಸ್ಮಾರ್ಟ್ಫೋನ್ ಇದೆ 4ನೇ ಮಾರ್ಚ್ 2025 ರಂದು ಬಿಡುಗಡೆಯಾಗುವುದಾಗಿ ಘೋಷಿಸಿದೆ.

Nothing Phone (3a) ಸ್ಮಾರ್ಟ್ಫೋನ್ ಡಿಸೈನ್ ಲಂಡನ್ನಾದರೂ ತಯಾರಿಕೆ ಮಾತ್ರ ಭಾರತದಲ್ಲಿ ನಡೆಯುತ್ತಿದೆ.

Nothing Phone (3a) ಸ್ಮಾರ್ಟ್ಫೋನ್ ಡಿಸೈನ್ ಲಂಡನ್ನಾದರೂ ತಯಾರಿಕೆ ಮಾತ್ರ ಭಾರತದಲ್ಲಿ ನಡೆಯುತ್ತಿದೆ!

Nothing Phone (3a) Launch: ನಥಿಂಗ್‌ನಿಂದ ಮುಂಬರಲಿರುವ ತನ್ನ ಹೊಸ ಸ್ಮಾರ್ಟ್ಫೋನ್ ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಗಳಿಗೆ ಶೀಘ್ರದಲ್ಲೇ ಪಾದಾರ್ಪಣೆ ಮಾಡಲಿದೆ. ಈ Nothing Phone (3a) ಸ್ಮಾರ್ಟ್ಫೋನ್ 4ನೇ ಮಾರ್ಚ್ 2025 ರಂದು ಪ್ರಾರಂಭಿಸಲು ಸಿದ್ಧವಾಗಿದೆ. ಅಲ್ಲದೆ ಇನ್ನೂ ಆಸಕ್ತಿದಾಯಕ ಸಂಗತಿಯೆಂದರೆ ಈ ಸೌಲಭ್ಯದಲ್ಲಿ ಸುಮಾರು 95% ಕ್ಕಿಂತ ಹೆಚ್ಚು ಮಹಿಳಾ ಉದ್ಯೋಗಿಗಳನ್ನು ಹೊಂದಿದೆ. ಹಾಗಾದ್ರೆ ಈ ಸ್ಮಾರ್ಟ್ಫೋನ್ ಬಗ್ಗೆ ಈವರೆಗೆ ಲಭ್ಯವಿರುವ ಮಾಹಿತಿಗಳೇನು ಎಲ್ಲವನ್ನು ಈ ಕೆಳಗೆ ತಿಳಿಯಿರಿ.

Digit.in Survey
✅ Thank you for completing the survey!

Nothing Phone (3a) ಬಗ್ಗೆ ಒಂದಿಷ್ಟು ಮಾಹಿತಿ!

ಈ Nothing Phone (3a) ಸ್ಮಾರ್ಟ್ಫೋನ್ ಡಿಸೈನ್ ಲಂಡನ್ನಾದರೂ ತಯಾರಿಕೆ ಮಾತ್ರ ಭಾರತದಲ್ಲಿ ನಡೆಯುತ್ತಿದೆ. ಹೌದು, ಈ ಮುಂಬರಲಿರುವ ಸ್ಮಾರ್ಟ್ಫೋನ್ ಮೇಕ್ ಇನ್ ಇಂಡಿಯಾ ಯೋಜನೆಯಡಿಯಲ್ಲಿ ಇದರ ವಿನ್ಯಾಸ ಮಾತ್ರ ಲಂಡನ್ನಾದರೂ ಇದರ ತಯಾರಿಕೆಯನ್ನು ಕಂಪನಿ ಭಾರತದ ಚೆನ್ನೈನಲ್ಲಿ ನಡೆಯುತ್ತಿದೆ. ಈ Nothing Phone (3a) ಸ್ಮಾರ್ಟ್ಫೋನ್ ವಿಶೇಷವಾಗಿ ಫ್ಲಿಪ್ಕಾರ್ಟ್ ಮೂಲಕ ಇದೆ 4ನೇ ಮಾರ್ಚ್ 2025 ರಂದು ಪ್ರಾರಂಭಗೊಳಿಸಲಿದೆ. ಇದು ಇಲ್ಲಿಂದ ಸಾಕಷ್ಟು ಹತ್ತಿರದಲ್ಲಿದೆ. ಮುಂಬರುವ ದಿನಗಳಲ್ಲಿ, ಫೋನ್ನ ವಿಶೇಷಣಗಳು ಆನ್ಲೈನ್ನಲ್ಲಿ ಪರಿಶೀಲಿಸಬಹುದು.

Nothing Phone (3a) Launch
Nothing Phone (3a) Launch

ಕೌಂಟರ್ಪಾಯಿಂಟ್ ರಿಸರ್ಚ್ ವರದಿ ಹೇಳೋದೇನು?

ಕಳೆದ ವರ್ಷ ಈ ಕಂಪನಿಯ ಮಾರಾಟವನ್ನು ಹೊಸ ಮತ್ತು ಹೆಚ್ಚಿನ ಡೊಮೇನ್ಗಳಿಗೆ ಓಡಿಸಿದ ಕಾರಣ ನಥಿಂಗ್ ಕಂಪನಿ ತುಂಬ ಹಿಟ್ ಆಗಿತ್ತು. ಕೌಂಟರ್ಪಾಯಿಂಟ್ ರಿಸರ್ಚ್ ವರದಿಯ ಪ್ರಕಾರ ಕಂಪನಿ 577% ಕ್ಕಿಂತ ಹೆಚ್ಚು ಬೆಳವಣಿಗೆಯೊಂದಿಗೆ ನಥಿಂಗ್ ವೇಗವಾಗಿ ಬೆಳೆಯುತ್ತಿರುವ ಬ್ರ್ಯಾಂಡ್ ಆಗಿತ್ತು. ಅಲ್ಲದೆ Nothing Phone (2a) ಮತ್ತು CMF By Nothing ಹೆಚ್ಚು ಕೈಗೆಟುಕುವ ಸ್ಮಾರ್ಟ್ಫೋನ್ ಬಿಡುಗಡೆ ಇದಕ್ಕೆ ಕಾರಣವಾಗಿತ್ತು. ಕಂಪನಿಯು ಇತ್ತೀಚೆಗೆ ಜೀವಮಾನದ ಆದಾಯದಲ್ಲಿ $1 ಶತಕೋಟಿಯನ್ನು ಮೀರಿದ್ದು ಪ್ರಭಾವಶಾಲಿ ಬೆಳವಣಿಗೆಯತ್ತ ಮುಖ ಮಾಡಿದೆ.

Also Read: Realme P3 Pro ಬಿಡುಗಡೆಗೆ ಡೇಟ್ ಕಂಫಾರ್ಮ್! 6000mAh ಬ್ಯಾಟರಿಯೊಂದಿಗೆ 80W ಚಾರ್ಜ್ ಸಪೋರ್ಟ್!

Nothing ಕಂಪನಿ ಪ್ರಸ್ತುತ ದೆಹಲಿ, ಬೆಂಗಳೂರು, ಮುಂಬೈ, ಹೈದರಾಬಾದ್ ಮತ್ತು ಚೆನ್ನೈ ಸೇರಿದಂತೆ ಐದು ಪ್ರಮುಖ ನಗರಗಳಲ್ಲಿ ತನ್ನ ಸೇವಾ ಕೇಂದ್ರಗಳನ್ನು ಹೊಂದಿದ್ದು ಇದರೊಂದಿಗೆ 300 ಕ್ಕೂ ಅಧಿಕ ಬಹು ಬ್ರಾಂಡ್ ಜೊತೆಗೆ ಕೈ ಜೋಡಿಸಿ ಗ್ರಾಹಕರಿಗೆ ಸೇವೆಯನ್ನು ಪೂರೈಸುತ್ತಿದೆ. ಕಳೆದ ವರ್ಷದ ಆರಂಭದಲ್ಲಿ 2000 ಮಳಿಗೆಗಳಿಂದ ಆರಂಭಿಸಿ ಪ್ರಸ್ತುತ 7,000 ಮಳಿಗೆಗಳಿಗೆ ತನ್ನ ಉಪಸ್ಥಿತಿಯನ್ನು ವಿಸ್ತರಿಸಿದೆ. ಇದನ್ನು ಕೆಲವೇ ಸಮಯದಲ್ಲಿ 10,000 ಕ್ಕೂ ಅಧಿಕವಾಗಿ ಮಾಡುವ ಗುರಿಯನ್ನು ಹೊಂದಿದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo