ಫೆಬ್ರವರಿ 18 ರಿಂದ Google Pixel 10a ಪ್ರಿ-ಆರ್ಡರ್‌ಗೆ ಲಭ್ಯ! ನಿರೀಕ್ಷಿತ ಬೆಲೆ ತಿಳಿಯಿರಿ

HIGHLIGHTS

ಈ ಸ್ಮಾರ್ಟ್‌ಫೋನ್‌ ಇದೇ ಮುಂದಿನ ವಾರ (ಫೆ. 18 ರಿಂದ) ಪ್ರಿ-ಆರ್ಡರ್‌ಗೆ ಲಭ್ಯ ಆಗಲಿದೆ

ಈ ಮೊಬೈಲ್ ನಾಲ್ಕು ಭಿನ್ನ ಕಲರ್‌ ಆಯ್ಕೆಗಳಲ್ಲಿ ಮಾರುಕಟ್ಟೆಗೆ ಲಗ್ಗೆ ಇಡುವ ನಿರೀಕ್ಷೆಗಳಿವೆ

ಇದು Tensor G4 chipset ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕೆಲಸ ಮಾಡುವ ಸಾಧ್ಯತೆಗಳಿವೆ

ಫೆಬ್ರವರಿ 18 ರಿಂದ Google Pixel 10a ಪ್ರಿ-ಆರ್ಡರ್‌ಗೆ ಲಭ್ಯ! ನಿರೀಕ್ಷಿತ ಬೆಲೆ ತಿಳಿಯಿರಿ

Google ಕಂಪನಿಯು ತನ್ನ Pixel ಸರಣಿಯ ಮುಂದಿನ ಭಾಗವಾಗಿ ಮಾರುಕಟ್ಟೆಗೆ ಬರಲಿರುವ Google Pixel 10a ಫೋನಿನ ಕುರಿತು ಇತ್ತೀಚಿಗೆ ಟೀಸರ್‌ ಮೂಲಕ ತಿಳಿಸಿದೆ. ಸಂಸ್ಥೆಯು ಟೀಸರ್‌ ವಿಡಿಯೋದಲ್ಲಿ Pixel 10a ಫೋನಿನ ಡಿಸೈನ್‌, ರಚನೆ ಬಗ್ಗೆ ಮಾಹಿತಿಯನ್ನು ಬಹಿರಂಗಪಡಿಸಿದೆ. ಅಂದಹಾಗೆ ಈ ಮೊಬೈಲ್‌ ಮುಂದಿನ ವಾರ ಪ್ರೀ ಆರ್ಡರ್ ಪ್ರಾರಂಭಿಸುವ ಸೂಚನೆ ನೀಡಿದೆ. ಇನ್ನು ಕೆಲವು ಲೀಕ್‌ ಮಾಹಿತಿಗಳ ಪ್ರಕಾರ ಬರಲಿರುವ ಗೂಗಲ್‌ ಪಿಕ್ಸಲ್‌ 10a ಮೊಬೈಲ್‌ ಡಿಸೈನ್‌ ಹಾಗೂ ಫೀಚರ್ಸ್‌ಗಳಲ್ಲಿ ಯಾವುದೇ ವಿಶೇಷ ಅಪ್‌ಗ್ರೇಡ್‌ ಪಡೆಯುವುದಿಲ್ಲ ಎನ್ನಲಾಗಿದೆ. ಅದಾಗ್ಯೂ ಈ ಸ್ಮಾರ್ಟ್‌ಫೋನಿನ ಕೆಲವು ಲೀಕ್‌ ಫೀಚರ್ಸ್‌ ಗ್ರಾಹಕರಲ್ಲಿ ಕುತೂಹಲ ಮೂಡಿಸಿವೆ. ಹಾಗಾದರೇ Google Pixel 10a ಫೋನಿನ ಫೀಚರ್ಸ್‌, ಲಾಂಚ್‌ ಡೇಟ್‌ ಕುರಿತ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : Jio Plans: ಜಿಯೋದ ಈ ಪ್ಲಾನಿನಲ್ಲಿ ಅಧಿಕ ಡೇಟಾ, 365 ದಿನಗಳ ವ್ಯಾಲಿಡಿಟಿ, ಉಚಿತ ಕರೆಗಳು ಲಭ್ಯ!

Google Pixel 10a ಫೋನಿನ Pre-Orders ಮತ್ತು ನಿರೀಕ್ಷಿತ ಬೆಲೆ

ಗೂಗಲ್‌ ಕಂಪನಿಯ ಸಂಸ್ಥೆಯ ಮುಂಬರುವ ಗೂಗಲ್‌ ಪಿಕ್ಸಲ್‌ 10a ಸ್ಮಾರ್ಟ್‌ಫೋನ್‌ ಫೆಬ್ರವರಿ 18 ರಿಂದ Flipkart ಮತ್ತು ಗೂಗಲ್ ಇ-ಸ್ಟೋರ್ ಮೂಲಕ ಪ್ರೀ-ಆರ್ಡರ್ ಲಭ್ಯವಾಗುವುದು ಕನ್ಫರ್ಮ್ ಆಗಿದೆ. ಅಂದಹಾಗೆ ಈ ಮೊಬೈಲ್‌ ಇದೇ ಮಾರ್ಚ್ 5, 2026 ರಂದು ಮಾರುಕಟ್ಟೆ ಪ್ರವೇಶಿಸಲಿದೆ ಎಂದು ಲೀಕ್ ಮಾಹಿತಿಗಳಿಂದ ತಿಳಿದುಬಂದಿದೆ. ಇನ್ನುಳಿದಂತೆ ಗೂಗಲ್‌ ಸಂಸ್ಥೆಯ ಗೂಗಲ್‌ ಪಿಕ್ಸಲ್‌ 10a ಮೊಬೈಲ್‌ ಬೆರ್ರಿ, ಫಾಗ್, ಲ್ಯಾವೆಂಡರ್ ಮತ್ತು ಅಬ್ಸಿಡಿಯನ್ ಕಲರ್‌ಗಳ ಆಯ್ಕೆಯಲ್ಲಿ ಬಿಡುಗಡೆ ಆಗುವ ನಿರೀಕ್ಷೆಗಳು ಇವೆ. ಇನ್ನು ಈ ಮೊಬೈಲ್‌ನ 8GB RAM + 128GB ವೇರಿಯಂಟ್‌ 49,999 ರೂಗಳ ಬೆಲೆ ಪಡೆದಿರಬಹುದು. ಹಾಗೆಯೇ 8GB RAM + 256GB ವೇರಿಯಂಟ್‌ 69,000 ರೂಗಳ ರೇಂಜ್‌ನಲ್ಲಿ ಬಿಡುಗಡೆ ಆಗುವ ನಿರೀಕ್ಷೆಗಳು ಇವೆ.

Google Pixel 10a

Google Pixel 10a ಮೊಬೈಲ್‌ನ ನಿರೀಕ್ಷಿತ ವೈಶಿಷ್ಟ್ಯಗಳು

ಗೂಗಲ್‌ ಪಿಕ್ಸಲ್‌ 10a ಮೊಬೈಲ್‌ 6.3 ಇಂಚಿನ ಪೂರ್ಣ ಹೆಚ್‌ಡಿ+ AMOLED ಡಿಸ್‌ಪ್ಲೇ ಹೊಂದಿರಲಿದೆ ಎಂದು ಹೇಳಲಾಗುತ್ತಿದೆ. ಇನ್ನು ಇದರ ಸ್ಕ್ರೀನ್‌ 120Hz ರಿಫ್ರೆಶ್ ರೇಟ್‌ ಆಗಿರಲಿದ್ದು ಇದರೊಂದಿಗೆ 2,000 ನಿಟ್ಸ್ ಗರಿಷ್ಠ ಬ್ರೈಟ್ನೆಸ್‌ ಬೆಂಬಲದ ಜೊತಗೆ ಬಿಡುಗಡೆ ಆಗಲಿದೆ ಎನ್ನಲಾಗಿದೆ. ಹಾಗೆಯೇ ಈ ನೂತನ ಮೊಬೈಲ್‌ Tensor G4 chipset ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕೆಲಸ ನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ 8GB RAM ಮತ್ತು 256GB ಆಂತರೀಕ ಸ್ಟೋರೇಜ್‌ ಸಪೋರ್ಟ್‌ ಅನ್ನು ಒಳಗೊಂಡಿರುವ ಸಾಧ್ಯತೆಗಳು ಇವೆ ಎನ್ನಲಾಗಿದೆ. ಅಲ್ಲದೇ ಧೂಳು ಮತ್ತು ನೀರಿನ ಪ್ರತಿರೋಧವನ್ನು ಪಡೆಯಲು ಇದು IP68 ರೇಟಿಂಗ್ ಸೌಲಭ್ಯ ಪಡೆದಿರಬಹುದು.

ಅಲ್ಲದೇ ಗೂಗಲ್‌ ಪಿಕ್ಸಲ್‌ 10a ಮೊಬೈಲ್‌ ತನ್ನ ವರ್ಗದಲ್ಲೇ ಉತ್ತಮ ಕ್ಯಾಮೆರಾ ಸೆಟ್‌ಅಪ್‌ ಒಳಗೊಂಡಿರಲಿದೆ. ಈ ಪ್ರಿಮಿಯಂ ಮೊಬೈಲ್‌ 48MP ಮುಖ್ಯ ಕ್ಯಾಮೆರಾವನ್ನು OIS ಸಪೋರ್ಟ್‌ ಜೊತೆಗೆ ಹೊಂದಿರಲಿದೆ. ಹಾಗೆಯೇ 13MP ಅಲ್ಟ್ರಾವೈಡ್ ಸೆನ್ಸರ್‌ ಕ್ಯಾಮೆರಾ ಆಯ್ಕೆ ಕೂಡಾ ಒಳಗೊಂಡಿರಬಹುದು. ಇದಲ್ಲದೇ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಈ ಮೊಬೈಲ್‌ ಮುಂಭಾಗದಲ್ಲಿ 13MP ಕ್ಯಾಮೆರಾವನ್ನು ಹೊಂದಿರಬಹುದು. ಇದರ ಜೊತೆಗೆ ಈ ಫೋನ್‌ 5,100mAh ಬ್ಯಾಟರಿ ಬ್ಯಾಕ್‌ಅಪ್‌ ಜೊತೆಗೆ 23W ಚಾರ್ಜಿಂಗ್ ಅನ್ನು ಸಪೋರ್ಟ್‌ ಮಾಡಬಹುದು.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile

Digit.in
Logo
Digit.in
Logo