Jio Plans: ಜಿಯೋದ ಈ ಪ್ಲಾನಿನಲ್ಲಿ ಅಧಿಕ ಡೇಟಾ, 365 ದಿನಗಳ ವ್ಯಾಲಿಡಿಟಿ, ಉಚಿತ ಕರೆಗಳು ಲಭ್ಯ!
Jio ಟೆಲಿಕಾಂನ ಈ ಮೂರು ರೀಚಾರ್ಜ್ ಯೋಜನೆಗಳಲ್ಲಿ 2.5GB ಡೇಟಾ ಸಿಗುತ್ತದೆ
Jio ಕಂಪನಿಯ ಈ ಯೋಜನೆಗಳಲ್ಲಿ ಉಚಿತ ವಾಯ್ಸ್ ಕರೆ ಹಾಗೂ 100 SMS ಸೌಲಭ್ಯ ಲಭ್ಯ
ವಾರ್ಷಿಕ ವ್ಯಾಲಿಡಿಟಿ ಜೊತೆಗೆ ಹೆಚ್ಚಿನ ಡೇಟಾ ಬಯಸುವ ಗ್ರಾಹಕರಿಗೆ Jio ಟೆಲಿಕಾಂನ ಈ ಪ್ಲಾನ್‌ಗಳು ಸೂಕ್ತ
ದೇಶದ ಲೀಡಿಂಗ್ ಟೆಲಿಕಾಂ ಕಂಪನಿಯಾಗಿ ಬಿಂಬಿತವಾಗಿರುವ Jio ಭಿನ್ನ ರೀಚಾರ್ಜ್ ಯೋಜನೆಗಳ ಮೂಲಕ ಗ್ರಾಹಕರ ಗಮನ ಸೆಳೆದಿದೆ. ಅವುಗಳ ಪೈಕಿ Jio ಕಂಪನಿಯ ಯೋಜನೆಗಳ ಲಿಸ್ಟ್‌ನಲ್ಲಿ ಅಗ್ಗದ ಪ್ಲಾನ್‌ಗಳು ಹಾಗೂ ದುಬಾರಿ ದರದ ಯೋಜನೆಗಳು ಸೇರಿವೆ. ಅದಾಗ್ಯೂ, ದುಬಾರಿ ಬೆಲೆಯ ಅಧಿಕ ಡೇಟಾ ಪ್ರಯೋಜನ ಒಳಗೊಂಡ ಪ್ರೀಪೇಯ್ಡ್ ರೀಚಾರ್ಜ್ ಪ್ಲಾನ್‌ಗಳು ಹೆಚ್ಚಿನ ಗ್ರಾಹಕರನ್ನು ಆಕರ್ಷಿಸಿವೆ. ಇವು ಪ್ರತಿದಿನ ಅಧಿಕ ಡೇಟಾ ಪ್ರಯೋಜನ ಬಯಸುವ ಬಳಕೆದಾರರಿಗೆ ಹಾಗೂ ದೀರ್ಘಾವಧಿಯ ವ್ಯಾಲಿಡಿಟಿ ಸೌಲಭ್ಯ ಬಯಸುವ ಗ್ರಾಹಕರಿಗೆ ಸೂಕ್ತ ಎನಿಸಿವೆ. ಅಂದಹಾಗೆ ಈ ಪ್ಲಾನ್‌ಗಳಲ್ಲಿ ಡೇಟಾ ಪ್ರಯೋಜನದ ಜೊತೆಗೆ ಹೆಚ್ಚುವರಿ ಓಟಿಟಿ ಚಂದಾದಾರಿಕೆಯ ಸೌಲಭ್ಯಗಳು ಕೂಡಾ ಸಿಗುತ್ತವೆ. ಹಾಗಾದರೆ Jio ಟೆಲಿಕಾಂನ ದುಬಾರಿ ದರದ ರೀಚಾರ್ಜ್ ಯೋಜನೆಗಳ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
SurveyAlso Read : 32MP ಸೆಲ್ಫಿ ಕ್ಯಾಮೆರಾ ಇರುವ Motorola G96 5G ಫೋನ್ ಬೆಲೆಯಲ್ಲಿ ಸಖತ್ ಇಳಿಕೆ!
Jio ಟೆಲಿಕಾಂನ 3599 ರೂಗಳ ಪ್ಲಾನ್ ಮಾಹಿತಿ
Jio ಕಂಪನಿಯ 3599 ರೂಗಳ ಪ್ರೀಪೇಯ್ಡ್ ರೀಚಾರ್ಜ್ ಪ್ಲಾನಿನಲ್ಲಿ ಬಳಕೆದಾರರಿಗೆ ಪ್ರತಿದಿನ 2.5 GB Data ಪ್ರಯೋಜನ ಸಿಗಲಿದ್ದು ಒಟ್ಟಾರೇ ವ್ಯಾಲಿಡಿಟಿ ಅವಧಿಗೆ ಒಟ್ಟು 912.5GB ಡೇಟಾ ಸೌಲಭ್ಯ ಲಭ್ಯವಾಗಲಿದೆ. ಅಲ್ಲದೇ ಈ ಯೋಜನೆಯು 365 ದಿನಗಳ ವ್ಯಾಲಿಡಿಟಿ ಪ್ರಯೋಜನ ಹೊಂದಿದೆ. ಹಾಗೆಯೇ ಈ ರೀಚಾರ್ಜ್ ಪ್ಲಾನಿನಲ್ಲಿ ಬಳಕೆದಾರರಿಗೆ ಅನ್‌ಲಿಮಿಟೆಡ್ ವಾಯ್ಸ್ ಕಾಲ್ ಸೌಲಭ್ಯ ಸಹ ಸಿಗಲಿದೆ. ಇದರ ಜೊತೆಗೆ ಪ್ರತಿದಿನ 100 SMS ಸೌಲಭ್ಯ ಸಹ ಲಭ್ಯ ಇರಲಿದೆ. ಹಾಗೆಯೇ ಜಿಯೋ ಹಾಟ್‌ಸ್ಟಾರ್ ಚಂದಾದಾರಿಕೆಯ ಪ್ರಯೋಜನ ಸಹ ದೊರೆಯುತ್ತದೆ. ಅಲ್ಲದೇ JioTV ಹಾಗೂ JioAICloud ಚಂದಾದಾರಿಕೆ ಸಹ ಲಭ್ಯ.

Jio ಟೆಲಿಕಾಂನ 3999 ರೂಗಳ ಪ್ಲಾನ್ ಮಾಹಿತಿ
Jio ಕಂಪನಿಯ 3999 ರೂಗಳ ಪ್ರೀಪೇಯ್ಡ್ ರೀಚಾರ್ಜ್ ಪ್ಲಾನಿನಲ್ಲಿ ಬಳಕೆದಾರರಿಗೆ ಪ್ರತಿದಿನ 2.5 GB Data ಪ್ರಯೋಜನ ಸಿಗಲಿದ್ದು ಒಟ್ಟಾರೇ ವ್ಯಾಲಿಡಿಟಿ ಅವಧಿಗೆ ಒಟ್ಟು 912.5GB ಡೇಟಾ ಸೌಲಭ್ಯ ಲಭ್ಯವಾಗಲಿದೆ. ಅಲ್ಲದೇ ಈ ಯೋಜನೆಯು 365 ದಿನಗಳ ವ್ಯಾಲಿಡಿಟಿ ಪ್ರಯೋಜನ ಹೊಂದಿದೆ. ಹಾಗೆಯೇ ಈ ರೀಚಾರ್ಜ್ ಪ್ಲಾನಿನಲ್ಲಿ ಬಳಕೆದಾರರಿಗೆ ಅನ್‌ಲಿಮಿಟೆಡ್ ವಾಯ್ಸ್ ಕಾಲ್ ಸೌಲಭ್ಯ ಸಹ ಸಿಗಲಿದೆ. ಇದರ ಜೊತೆಗೆ ಪ್ರತಿದಿನ 100 SMS ಸೌಲಭ್ಯ ಸಹ ಲಭ್ಯ ಇರಲಿದೆ. ಹಾಗೆಯೇ ಜಿಯೋ ಹಾಟ್‌ಸ್ಟಾರ್ ಚಂದಾದಾರಿಕೆಯ ಪ್ರಯೋಜನ ಸಹ ದೊರೆಯುತ್ತದೆ. ಇದರೊಂದಿಗೆ FanCode, JioTV ಹಾಗೂ JioAICloud ಚಂದಾದಾರಿಕೆ ಸಹ ಲಭ್ಯ.
Jio ಟೆಲಿಕಾಂನ 2025 ರೂಗಳ ಪ್ಲಾನ್ ಮಾಹಿತಿ
Jio ಸಂಸ್ಥೆಯ 2025 ರೂಗಳ ಪ್ರೀಪೇಯ್ಡ್ ರೀಚಾರ್ಜ್ ಪ್ಲಾನಿನಲ್ಲಿ ಬಳಕೆದಾರರಿಗೆ ಪ್ರತಿದಿನ 2.5 GB Data ಪ್ರಯೋಜನ ಸಿಗಲಿದ್ದು ಒಟ್ಟಾರೇ ವ್ಯಾಲಿಡಿಟಿ ಅವಧಿಗೆ ಒಟ್ಟು 500GB ಡೇಟಾ ಸೌಲಭ್ಯ ಲಭ್ಯವಾಗಲಿದೆ. ಅಲ್ಲದೇ ಈ ಯೋಜನೆಯು 200 ದಿನಗಳ ವ್ಯಾಲಿಡಿಟಿ ಪ್ರಯೋಜನ ಹೊಂದಿದೆ. ಉಳಿದಂತೆ ಈ ರೀಚಾರ್ಜ್ ಯೋಜನೆಯಲ್ಲಿ ಬಳಕೆದಾರರಿಗೆ ಅನ್‌ಲಿಮಿಟೆಡ್ ವಾಯ್ಸ್ ಕಾಲ್ ಸೌಲಭ್ಯ ಸಹ ಸಿಗಲಿದೆ. ಇದರ ಜೊತೆಗೆ ಪ್ರತಿದಿನ 100 SMS ಸೌಲಭ್ಯ ಸಹ ಲಭ್ಯ ಇರಲಿದೆ. ಹಾಗೆಯೇ ಜಿಯೋ ಹಾಟ್‌ಸ್ಟಾರ್ ಚಂದಾದಾರಿಕೆಯ ಪ್ರಯೋಜನ ಸಹ ದೊರೆಯುತ್ತದೆ. ಅಲ್ಲದೇ JioTV ಹಾಗೂ JioAICloud ಚಂದಾದಾರಿಕೆ ಸಹ ಲಭ್ಯ.
Manthesh B
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile