Realme P3 Pro ಬಿಡುಗಡೆಗೆ ಡೇಟ್ ಕಂಫಾರ್ಮ್! 6000mAh ಬ್ಯಾಟರಿಯೊಂದಿಗೆ 80W ಚಾರ್ಜ್ ಸಪೋರ್ಟ್!
Realme P3 Pro ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆಯಾಗಲು ಡೇಟ್ ಫಿಕ್ಸ್ ಮಾಡಿದೆ.
Realme P3 Pro ಗೇಮಿಂಗ್ ಸ್ಮಾರ್ಟ್ಫೋನ್ ಆಗಿದ್ದು 6000mAh ಬ್ಯಾಟರಿಯೊಂದಿಗೆ ಬರುತ್ತದೆ.
Realme P3 Pro ಸ್ಮಾರ್ಟ್ಫೋನ್ ಇದೆ 18ನೇ ಫೆಬ್ರವರಿ 2025 ರಂದು ಬಿಡುಗಡೆಯಾಗಲು ಸಿದ್ಧವಾಗಿದೆ.
Realme P3 Pro Launch Confirmed News: ಚೀನಾದ ಜನಪ್ರಿಯ ಸ್ಮಾರ್ಟ್ಫೋನ್ ಬ್ರಾಂಡ್ ರಿಯಲ್ಮಿ (Realme) ತನ್ನ ಮುಂಬರಲಿರುವ Realme P3 Pro 5G ಗೇಮಿಂಗ್ ಸ್ಮಾರ್ಟ್ಫೋನ್ ಬಿಡುಗಡೆಯಾಗಲು ಸಿದ್ಧವಾಗಿದೆ. ಇದರಲ್ಲಿ ನಿಮಗೆ 6000mAh ಬ್ಯಾಟರಿಯೊಂದಿಗೆ 80W ಚಾರ್ಜ್ ಸಪೋರ್ಟ್ ಮಾಡುವುದರೊಂದಿಗೆ Snapdragon 7s Gen 3 ಮತ್ತು Vapor Chamber Cooling ಫೀಚರ್ಗಳೊಂದಿಗೆ ಈ ಗೇಮಿಂಗ್ ಸ್ಮಾರ್ಟ್ಫೋನ್ ಬರುತ್ತದೆ. ಹಾಗಾದ್ರೆ Realme P3 Pro ಬಗ್ಗೆ ಈವರಗೆ ಲಭ್ಯವಿರುವ ಮಾಹಿತಿಗಳನ್ನು ಈ ಕೆಳಗೆ ಪರಿಶೀಲಿಸಬಹುದು.
SurveyAlso Read: ವಾವ್ ಡೀಲ್! Realme Narzo 70 Turbo 5G ಮೇಲೆ ಬರೋಬ್ಬರಿ ₹5000 ರೂಗಳವರಗೆ ಡಿಸ್ಕೌಂಟ್ ಪಡೆಯುವ ಅವಕಾಶ!
Realme P3 Pro ಬಿಡುಗಡೆ ಕಂಫಾರ್ಮ್!
ಮುಂಬರಲಿರುವ ಈ ಗೇಮಿಂಗ್ ಸ್ಮಾರ್ಟ್ಫೋನ್ 6000mAh ಬ್ಯಾಟರಿಯೊಂದಿಗೆ 80W ಚಾರ್ಜ್ ಸಪೋರ್ಟ್ ಮಾಡುವುದರೊಂದಿಗೆ Snapdragon 7s Gen 3 ಮತ್ತು Vapor Chamber Cooling ಫೀಚರ್ಗಳೊಂದಿಗೆ ಇದೆ 18ನೇ ಫೆಬ್ರವರಿ 2025 ರಂದು ಮಧ್ಯಾಹ್ನ 12:00 ಗಂಟೆಗೆ ಫ್ಲಿಪ್ಕಾರ್ಟ್ ಮೂಲಕ ಬಿಡುಗಡೆಯಾಗಲಿದೆ. ಗ್ರಾಹಕರು ಸ್ಯಾಟರ್ನ್ ಬ್ರೌನ್, ನೆಬ್ಯುಲಾ ಗ್ಲೋ ಮತ್ತು ಗ್ಯಾಲಕ್ಸಿ ಪರ್ಪಲ್ ಬಣ್ಣಗಳನ್ನು ಒಳಗೊಂಡಂತೆ ಮೂರು ಬಣ್ಣಗಳ ಆಯ್ಕೆಗಳನ್ನು ಪಡೆಯಬಹುದು. ಇದು ಫ್ಲಿಪ್‌ಕಾರ್ಟ್ ಮತ್ತು ರಿಯಲ್‌ಮಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಖರೀದಿಗೆ ಲಭ್ಯವಿರುತ್ತದೆ.
Segment's strongest device has hit the road!
— realme (@realmeIndia) February 6, 2025
The #realmeP3Pro5G, powered by the dynamic Snapdragon 7s Gen 3, delivers the smoothest performance, making it a first in the segment.
Launching on 18th Feb! #BornToSlay
Know More:https://t.co/fTFutAUyxUhttps://t.co/p9FT51EBa0 pic.twitter.com/oEzrs5wkk3
Realme P3 Pro ನಿರೀಕ್ಷಿತ ಫೀಚರ್ ಮತ್ತು ವಿಶೇಷಣಗಳೇನು?
ಇದರ ಫೀಚರ್ಗಳ ಆಧಾರದ ಮೇರೆಗೆ ಈ Realme P3 Pro ಸ್ಮಾರ್ಟ್ಫೋನ್ ಅನ್ನು 25,000 ರೂಗಳೊಳಗೆ ನಿರೀಕ್ಷಿಸಬಹುದು. ಕಂಪನಿ ಬಗ್ಗೆ ಸ್ವತಃ ಟ್ವಿಟ್ ಮಾಡಿದ್ದೂ ಇದರ ಮಾಹಿತಿ ಈ ಕೆಳಗಿದೆ. ಈ ಸ್ಮಾರ್ಟ್ಫೋನ್ ಈ ವಿಭಾಗದಲ್ಲಿ ಬರುವ ಮೊದಲ ಆಕರ್ಷಕ ಕರ್ವ್ ಕ್ವಾಡ್-ಕರ್ವ್ಡ್ AMOLED ಪ್ಯಾನೆಲ್‌ನೊಂದಿಗೆ ಬರುವ ಬೆಸ್ಟ್ ಗೇಮಿಂಗ್ ಸ್ಮಾರ್ಟ್ಫೋನ್ ಆಗಿದೆ. ಈ ಸ್ಮಾರ್ಟ್ಫೋನ್ Snapdragon 7s Gen 3 ಸ್ಮಾರ್ಟ್ಫೋನ್ ಸ್ನಾಪ್‌ಡ್ರಾಗನ್ 7s Gen 3 ನಿಂದ ಚಾಲಿತವಾಗಬಹುದು ಮತ್ತು 6050mm² VC ಕೂಲಿಂಗ್ ಚೇಂಬರ್‌ನೊಂದಿಗೆ ಬರಬಹುದು.

Realme P3 Pro ಸ್ಮಾರ್ಟ್ಫೋನ್ 50MP OIS ಪ್ರೈಮರಿ ಶೂಟರ್ ಮತ್ತು ಅನಿರ್ದಿಷ್ಟ ಅಲ್ಟ್ರಾವೈಡ್ ಸೆನ್ಸರ್‌ನೊಂದಿಗೆ ಬರುವ ನಿರೀಕ್ಷೆಯಿದೆ. ಈ Realme P3 Pro ಸ್ಮಾರ್ಟ್ಫೋನ್ BGMI ಆಟದಡಿಯಲ್ಲಿ AI ಅಲ್ಟ್ರಾ-ಸ್ಟೆಡಿ ಫ್ರೇಮ್‌ಗಳು, ಹೈಪರ್ ರೆಸ್ಪಾನ್ಸ್ ಎಂಜಿನ್, AI ಅಲ್ಟ್ರಾ ಟಚ್ ಕಂಟ್ರೋಲ್ ಮತ್ತು AI ಮೋಷನ್ ಕಂಟ್ರೋಲ್ ಅನ್ನು ಸಹ ನೀಡುತ್ತದೆ. ಸ್ಮಾರ್ಟ್ಫೋನ್ 6,000 mAh ಬ್ಯಾಟರಿ ಮತ್ತು 80W ವೇಗದ ಚಾರ್ಜಿಂಗ್ ಪಡೆಯಬಹುದು.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile