Nothing Phone 3a ಬಿಡುಗಡೆಗೆ ಡೇಟ್ ಕಂಫಾರ್ಮ್! ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೇನು?

HIGHLIGHTS

ಮುಂಬರಲಿರುವ ನಥಿಂಗ್ ಫೋನ್ ಸ್ಮಾರ್ಟ್ಫೋನ್ ಬಿಡುಗಡೆಗೆ ಡೇಟ್ ಕಂಫಾರ್ಮ್.

Nothing Phone 3a ಸ್ಮಾರ್ಟ್ಫೋನ್ 4ನೇ ಮಾರ್ಚ್ 2025 ರಂದು ಬಿಡುಗಡೆಯಾಗಲಿದೆ.

Nothing Phone 3a ಸ್ಮಾರ್ಟ್ಫೋನ್ ಮಾಹಿತಿಯನ್ನು ಟ್ವಿಟ್ಟರ್ ಮೂಲಕ ಕಂಪನಿ ಘೋಷಿಸಿದೆ.

Nothing Phone 3a ಬಿಡುಗಡೆಗೆ ಡೇಟ್ ಕಂಫಾರ್ಮ್! ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೇನು?

Nothing Phone 3a launch: ಚೀನಾದ ಜನಪ್ರಿಯ ಸ್ಮಾರ್ಟ್ಫೋನ್ ಬ್ರಾಂಡ್ ನಥಿಂಗ್ (Nothing) ತನ್ನ ಮುಂಬರಲಿರುವ Nothing Phone 3a ಸ್ಮಾರ್ಟ್ಫೋನ್ 4ನೇ ಮಾರ್ಚ್ 2025 ರಂದು ಬಿಡುಗಡೆಯಾಗುವುದಾಗಿ ಕಂಪನಿ ಟ್ವಿಟ್ಟರ್ ಮೂಲಕ ಘೋಷಿಸಿದೆ. ಸ್ಮಾರ್ಟ್ಫೋನ್ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದ್ದು ಅದೇ ಮಾದರಿಯ LED ಡಿಸೈನಿಂಗ್ ಲುಕ್ ಹೊಂದಲಿದೆ. ಆದರೆ ಕಂಪನಿ ಪ್ರಸ್ತುತ ಯಾವುದೇ ಫೀಚರ್, ವಿಶೇಷಣ ಅಥವಾ ಬೆಲೆಯ ಬಗ್ಗೆ ಅಧಿಕೃತ ಮಾಹಿತಿ ನೀಡಿಲ್ಲ.

Digit.in Survey
✅ Thank you for completing the survey!

ಭಾರತದಲ್ಲಿ Nothing Phone 3a ನಿರೀಕ್ಷಿತ ಬೆಲೆ ಮತ್ತು ಲಭ್ಯತೆ

ಈ ಸ್ಮಾರ್ಟ್ಫೋನ್ ಈಗಾಗಲೇ ಫ್ಲಿಪ್ಕಾರ್ಟ್ ತನ್ನ ಮೈಕ್ರೋಸೈಟ್ ಪೇಜ್ ಲೈವ್ ಮಾಡಿದ್ದೂ ನಿಮಗೆ ನಥಿಂಗ್ ಫೋನ್ (3a) ಸ್ಮಾರ್ಟ್ಫೋನ್ ಎರಡು ರೂಪಾಂತರಗಳಲ್ಲಿ 6GB RAM ಮತ್ತು 128GB ಸ್ಟೋರೇಜ್ ಸುಮಾರು 23,499 ರೂಗಳಿಗೆ ಮತ್ತೊಂದು ಇದರ 6GB RAM ಮತ್ತು 256GB ಸ್ಟೋರೇಜ್ ಸುಮಾರು 24,499 ರೂಗಳಿಗೆ ನಿರೀಕ್ಷಿಸಬಹುದು. ಆದರೆ ಇದರ ಅಧಿಕೃತ ಬೆಲೆ ಮಾಹಿತಿಯನ್ನು ಪಡೆಯಲು ಡಿಜಿಟ್ ಕನ್ನಡವನ್ನು ಫಾಲೋ ಮಾಡಬಹುದು. ಇದರ ಮುಂಬರಲಿರುವ ಮಾಹಿತಿಗಳನ್ನು ನಿಮಗೆ ತಕ್ಷಣ ಈ ಸ್ಟೋರಿಯ ಮೂಲಕ ಅಪ್ಡೇಟ್ ಮಾಡಲಾಗುತ್ತದೆ.

Nothing Phone 3a ನಿರೀಕ್ಷಿತ ಫೀಚರ್ ಮತ್ತು ವಿಶೇಷಣಗಳೇನು?

ನಥಿಂಗ್ ಫೋನ್ (3a) ಸ್ಮಾರ್ಟ್ಫೋನ್ ಯಾವುದೇ ಕಾಂಕ್ರೀಟ್ ಸುದ್ದಿ ಇಲ್ಲದಿದ್ದರೂ ಫೋನ್ ಅದರ ಪೂರ್ವವರ್ತಿಯಂತೆ ಅದೇ 6.7 ಇಂಚಿನ 120Hz AMOLED ಡಿಸ್‌ಪ್ಲೇಯನ್ನು ರಾಕ್ ಮಾಡಬಹುದು ಎಂದು ಊಹಿಸುವುದು ಸುರಕ್ಷಿತವಾಗಿದೆ. ಫೋನ್ ಹಿಂದಿನ ತಲೆಮಾರಿನ ಅದೇ ಇನ್-ಡಿಸ್ಪ್ಲೇ ಆಪ್ಟಿಕಲ್ ಫಿಂಗರ್‌ಪ್ರಿಂಟ್ ಸಂವೇದಕವನ್ನು ಒಳಗೊಂಡಿರುವ ಸಾಧ್ಯತೆಯಿದೆ.

Also Read: Jio Combo Plan: ದಿನಕ್ಕೆ ಕೇವಲ 15 ರೂಪಾಯಿ ಖರ್ಚು ಮಾಡಿ ತಿಂಗಳಿಗೆ ಅನ್ಲಿಮಿಟೆಡ್ ಕರೆ, ಡೇಟಾದೊಂದಿಗೆ ಉಚಿತ OTT ಲಭ್ಯ!

ನಥಿಂಗ್ ಫೋನ್ (3a) ಸ್ಮಾರ್ಟ್ಫೋನ್ ಆರಂಭಿಕ 6GB RAM ಮತ್ತು 128GB ಸ್ಟೋರೇಜ್ ಜೊತೆಗೆ Snapdragon 7s Gen 3 ಪ್ರೊಸೆಸರ್‌ನಿಂದ ಬರಬಹುದು. ಆಂಡ್ರಾಯ್ಡ್ ಅಥಾರಿಟಿಯ ಹಿಂದಿನ ವರದಿಯು ನಥಿಂಗ್ ಓಎಸ್ 3.0 ಬಿಲ್ಡ್‌ನಲ್ಲಿ Asteroids ಎಂಬ ಸಂಕೇತನಾಮ ಹೊಂದಿರುವ ಫೋನ್ (3a) ಅನ್ನು ಗುರುತಿಸಿದೆ. ವರದಿಯ ಪ್ರಕಾರ ಮುಂಬರುವ ‘A’ ಸರಣಿಯ ಮಾದರಿಯು ಟೆಲಿಫೋಟೋ ಲೆನ್ಸ್ ಅನ್ನು ಹೊಂದಿರುತ್ತದೆ. ಇದು ಇ-ಸಿಮ್‌ಗೆ ಬೆಂಬಲದೊಂದಿಗೆ ಬರುವ ನಿರೀಕ್ಷೆಯಿದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo