32MP ಸೆಲ್ಫಿ ಕ್ಯಾಮೆರಾದೊಂದಿಗೆ Motorola Razr 50 ಬಿಡುಗಡೆ! ಬೆಲೆ ಮತ್ತು ಟಾಪ್ ಫೀಚರ್ಗಳೇನು?

HIGHLIGHTS

ಮೋಟೋರೋಲ ಕಂಪನಿ ಇಂದು ತನ್ನ ಲೇಟೆಸ್ಟ್ Motorola Razr 50 ಸ್ಮಾರ್ಟ್ಫೋನ್ ಅನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿದೆ.

Motorola Razr 50 ಸ್ಮಾರ್ಟ್ಫೋನ್ 32MP ಸೇಲ್ಫಿ ಕ್ಯಾಮೆರಾದೊಂದಿಗೆ ಬರೋಬ್ಬರಿ 6.9 ಇಂಚಿನ ಡಿಸ್ಪ್ಲೇಯನ್ನು ಒಳಗೊಂಡಿದೆ.

ನೀವು ಫೋನ್‌ನಲ್ಲಿ 15000 ರೂಗಳ ಸಂಪೂರ್ಣ ರಿಯಾಯಿತಿಯನ್ನು ಪಡೆದರೆ ನೀವು 49,999 ರೂಗಳಲ್ಲಿ ಫೋನ್ ಅನ್ನು ಖರೀದಿಸಲು ಸಾಧ್ಯ.

32MP ಸೆಲ್ಫಿ ಕ್ಯಾಮೆರಾದೊಂದಿಗೆ Motorola Razr 50 ಬಿಡುಗಡೆ! ಬೆಲೆ ಮತ್ತು ಟಾಪ್ ಫೀಚರ್ಗಳೇನು?

ಭಾರತದಲ್ಲಿ ಮೋಟೋರೋಲ ಕಂಪನಿ ಇಂದು ತನ್ನ ಲೇಟೆಸ್ಟ್ Motorola Razr 50 ಸ್ಮಾರ್ಟ್ಫೋನ್ ಅನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿದೆ. ಇದು ಕಂಪನಿಯ ಎರಡನೇ ಫ್ಲಿಪ್ ಸ್ಮಾರ್ಟ್ಫೋನ್ ಆಗಿದ್ದು ಅತ್ಯುತ್ತಮ ಫೀಚರ್ಗಳೊಂದಿಗೆ ಸ್ಮಾರ್ಟ್ಫೋನ್ ಮಾರುಕಟ್ಟೆಗೆ ಕಾಲಿಟ್ಟಿದೆ. ಈ Motorola Razr 50 ಸ್ಮಾರ್ಟ್ಫೋನ್ 32MP ಸೇಲ್ಫಿ ಕ್ಯಾಮೆರಾದೊಂದಿಗೆ ಬರೋಬ್ಬರಿ 6.9 ಇಂಚಿನ ಡಿಸ್ಪ್ಲೇಯನ್ನು ಒಳಗೊಂಡಿದೆ. ಈ ಸ್ಮಾರ್ಟ್ಫೋನ್ ಖರೀದಿಸಲು ಯೋಚಯಿಸುತ್ತಿದ್ದಾರೆ ಒಮ್ಮೆ ಇದರ ಬೆಲೆಯೊಂದಿಗೆ ಟಾಪ್ ಫೀಚರ್ಗಳೇನು ಎಲ್ಲವನ್ನು ತಿಳಿಯಿರಿ.

Digit.in Survey
✅ Thank you for completing the survey!

Also Read: iPhone 16 launch Event ಲೈವ್ ಸ್ಟ್ರೀಮಿಂಗ್ ನೋಡುವುದು ಎಲ್ಲಿ? ಮಾರಾಟ ಯಾವಾಗ? ಮತ್ತು ಬೆಲೆ ಎಷ್ಟು?

Motorola Razr 50 ಬೆಲೆ ಮತ್ತು ಲಭ್ಯತೆ

ಭಾರತದಲ್ಲಿ ಇಂದು ಬಿಡುಗಡೆಯಾದ ಮೋಟೊರೋಲದ ಲೇಟೆಸ್ಟ್ Motorola Razr 50 ಸ್ಮಾರ್ಟ್ಫೋನ್ ಬೆಲೆ ಮತ್ತು ಲಭ್ಯತೆ ಮಾಹಿತಿಯನ್ನು ನೋಡುವುದಾದರೆ ಸ್ಮಾರ್ಟ್ಫೋನ್ ಕೇವಲ ಒಂದೇ ಒಂದು ರೂಪಾಂತರದಲ್ಲಿ ಅಂದ್ರೆ 8GB RAM ಮತ್ತು 256GB ಸ್ಟೋರೇಜ್‌ನೊಂದಿಗೆ ಸ್ಯಾಂಡ್ ಬೀಚ್, ಸ್ಪ್ರಿಟ್ಜ್ ಆರೆಂಜ್ ಮತ್ತು ಕೋಲಾ ಗ್ರೇ ಎಂಬ ಮೂರು ಬಣ್ಣಗಳಲ್ಲಿ 64,999 ರೂಗಳಿಗೆ ಬಿಡುಗಡೆಯಾಗಿದೆ. Motorola ಈ ಫೋನ್‌ನಲ್ಲಿ 5000 ರೂಪಾಯಿಗಳ ಸೀಮಿತ ಅವಧಿಯ ಹಬ್ಬದ ರಿಯಾಯಿತಿಯನ್ನು ನೀಡುತ್ತಿದೆ.

Motorola Razr 50 launched with 32MP selfie camera and more
Motorola Razr 50 launched with 32MP selfie camera and more

ಇದರೊಂದಿಗೆ ಪ್ರಮುಖ ಬ್ಯಾಂಕ್‌ ಕಾರ್ಡ್‌ಗಳ ಮೂಲಕ ಫೋನ್‌ನಲ್ಲಿ 10,000 ರೂಪಾಯಿಗಳ ತ್ವರಿತ ರಿಯಾಯಿತಿಯನ್ನು ನೀಡುತ್ತಿದೆ. ನೀವು ಫೋನ್‌ನಲ್ಲಿ 15000 ರೂಗಳ ಸಂಪೂರ್ಣ ರಿಯಾಯಿತಿಯನ್ನು ಪಡೆದರೆ ನೀವು 49,999 ರೂಗಳಲ್ಲಿ ಫೋನ್ ಅನ್ನು ಖರೀದಿಸಲು ಸಾಧ್ಯವಾಗುತ್ತದೆ. ಆಸಕ್ತ ಬಳಕೆದಾರರು ಇದೆ 20ನೇ ಸೆಪ್ಟೆಂಬರ್ 2024 ರಿಂದ ಅಮೆಜಾನ್, ರಿಲಯನ್ಸ್ ಡಿಜಿಟಲ್ ಸ್ಟೋರ್‌ಗಳು ಮತ್ತು ಪ್ರಮುಖ ರಿಟೇಲ್ ಔಟ್‌ಲೆಟ್‌ಗಳಲ್ಲಿ ಖರೀದಿಸಲು ಲಭ್ಯವಾಗಲಿದೆ. ಆದರೆ ನೀವು 10ನೇ ಸೆಪ್ಟೆಂಬರ್‌ನಿಂದ ಪ್ರೀ-ಆರ್ಡರ್‌ ಮಾಡಿಕೊಳ್ಳಬಹುದು.

Motorola Razr 50 ಫೀಚರ್ ಮತ್ತು ವಿಶೇಷಣಗಳೇನು?

Motorola Razr 50 ಸ್ಮಾರ್ಟ್ಫೋನ್ 2640 x 1080 ಪಿಕ್ಸೆಲ್‌ಗಳ ರೆಸಲ್ಯೂಶನ್, 120Hz ರಿಫ್ರೆಶ್ ರೇಟ್ ಮತ್ತು 3000 nits ಪೀಕ್ ಬ್ರೈಟ್‌ನೆಸ್‌ನೊಂದಿಗೆ 6.9 ಇಂಚಿನ FlexView Full HD+ ಪೋಲೆಡ್ LTPO ಡಿಸ್ಪ್ಲೇ ಹೊಂದಿದೆ. 90Hz ರಿಫ್ರೆಶ್ ದರ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ರಕ್ಷಣೆಯೊಂದಿಗೆ 3.6 ಇಂಚಿನ ಬಾಹ್ಯ pOLED ಡಿಸ್ಪ್ಲೇ ಕೂಡ ಇದೆ. ಕ್ಯಾಮೆರಾದ ಬಗ್ಗೆ ಮಾತನಾಡುವುದಾದರೆ ಸ್ಮಾರ್ಟ್ಫೋನ್ OIS ಜೊತೆಗೆ 50MP ಪ್ರೈಮರಿ ಸೆನ್ಸರ್ ಮತ್ತು 13MP ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್‌ನೊಂದಿಗೆ ಬರುತ್ತದೆ. ಮುಂಭಾಗದಲ್ಲಿ ಸೆಲ್ಫಿ ತೆಗೆದುಕೊಳ್ಳಲು ಮತ್ತು ವೀಡಿಯೊ ಕರೆ ಮಾಡಲು 32MP ಶೂಟರ್ ಇದೆ. ಫೋನ್ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಮತ್ತು ನೀರಿನ ಪ್ರತಿರೋಧಕ್ಕಾಗಿ IPX8 ರೇಟಿಂಗ್ ಅನ್ನು ಹೊಂದಿದೆ.

Motorola Razr 50 launched with 32MP selfie camera and more
Motorola Razr 50 launched with 32MP selfie camera and more

Motorola ಫೋಲ್ಡಬಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 7300x ಪ್ರೊಸೆಸರ್‌ನಿಂದ ಚಾಲಿತವಾಗಿದೆ. ಅಲ್ಲದೆ 4nm ಪ್ರಕ್ರಿಯೆಯ ಆಧಾರದ ಮೇಲೆ ಗ್ರಾಫಿಕ್ಸ್-ತೀವ್ರ ಕಾರ್ಯಗಳನ್ನು ನಿರ್ವಹಿಸಲು Mali G615 MC2 GPU ನೊಂದಿಗೆ ಜೋಡಿಸಲಾಗಿದೆ. Motorola Razr 50 ಆಂಡ್ರಾಯ್ಡ್ 14 ಆಧಾರಿತ Hello UI ನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಕಂಪನಿಯು ಹೊಸ ಸಾಧನದೊಂದಿಗೆ 3 ವರ್ಷಗಳ ಆಪರೇಟಿಂಗ್ ಸಿಸ್ಟಮ್ ಮತ್ತು 4 ವರ್ಷಗಳ ಭದ್ರತಾ ಪ್ಯಾಚ್‌ಗಳನ್ನು ಭರವಸೆ ನೀಡುತ್ತಿದೆ. 33W ಟರ್ಬೋಪವರ್ ವೇಗದ ಚಾರ್ಜಿಂಗ್ ಮತ್ತು 15W ವೈರ್‌ಲೆಸ್ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ ಫೋನ್ 4,200 mAh ಬ್ಯಾಟರಿಯಿಂದ ಚಾಲಿತವಾಗಿದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo