Motorola Edge 60 Stylus ಬಿಡುಗಡೆಗೆ ಡೇಟ್ ಕಂಫಾರ್ಮ್! ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೇನು?
Motorola Edge 60 Stylus ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ.
Motorola Edge 60 Stylus ಫೋನ್ 15ನೇ ಏಪ್ರಿಲ್ 2025 ರಂದು ಬಿಡುಗಡೆಯಾಗಲಿದೆ.
Motorola Edge 60 Stylus ಫೋನ್ ಆರಂಭಿಕ 8GB RAM ಸುಮಾರು 22,999 ರೂಗಳಿಗೆ ನಿರೀಕ್ಷೆಯಿದೆ.
ಮೊಟೊರೊಲಾ ಶೀಘ್ರದಲ್ಲೇ ಭಾರತದಲ್ಲಿ ತನ್ನ ಹೊಸ ಮುಂಬರಲಿರುವ Motorola Edge 60 Stylus ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ತಿಳಿದಿಲ್ಲದವರಿಗಾಗಿ ಇದು ಇತ್ತೀಚೆಗೆ ಭಾರತದಲ್ಲಿ Motorola Edge 60 Fusion ಅನ್ನು ಬಿಡುಗಡೆ ಮಾಡಿತು. ಈಗ ಕಂಪನಿಯು Motorola Edge 60 Stylus ಅನ್ನು ತರಲು ಸಿದ್ಧವಾಗಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಇದೆ ನಾಳೆ ಅಂದ್ರೆ 15ನೇ ಏಪ್ರಿಲ್ 2025 ರಂದು ಮಧ್ಯಾಹ್ನ 12:00 ಗಂಟೆಗೆ ಬಿಡುಗಡೆಯಾಗಲು ಸಜ್ಜಾಗಿರುವುದರ ಬಗ್ಗೆ ದೃಢಪಡಿಸಿದೆ. ಇದಲ್ಲದೆ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲೂ ಇದರ ಬಗ್ಗೆ ಪೋಸ್ಟ್ ಮಾಡಲಾಗಿದೆ. ಹಾಗಾದ್ರೆ Motorola Edge 60 Stylus ಸ್ಮಾರ್ಟ್‌ಫೋನ್ ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೇನು ತಿಳಿಯಿರಿ.
SurveyMotorola Edge 60 Stylus ಸ್ಮಾರ್ಟ್‌ಫೋನ್ ನಿರೀಕ್ಷಿತ ಬೆಲೆ
ಈಗಾಗಲೇ ಮೇಲೆ ತಿಳಿಸಿರುವಂತೆ Motorola Edge 60 Stylus ಸ್ಮಾರ್ಟ್‌ಫೋನ್ ಪ್ರತ್ಯೇಕವಾಗಿ ಫ್ಲಿಪ್‌ಕಾರ್ಟ್ ಮೂಲಕ ಭಾರತದಲ್ಲಿ ಮಾರಾಟಕ್ಕೆ ಬರಲಿದೆ. ಇದು ಮೊಟೊರೊಲಾ ಮಾನದಂಡವಾಗಿದೆ. ಕಂಪನಿಯು ತನ್ನ ಫೋನ್ಗಳನ್ನು ಭಾರತದಲ್ಲಿ ಆನ್‌ಲೈನ್‌ನಲ್ಲಿ ಮಾರಾಟ ಮಾಡಲು ಫ್ಲಿಪ್‌ಕಾರ್ಟ್‌ನೊಂದಿಗೆ ದೀರ್ಘಕಾಲದ ಪಾಲುದಾರಿಕೆಯನ್ನು ಹೊಂದಿದೆ. ಆನ್‌ಲೈನ್‌ನಲ್ಲಿ ಕೆಲವು ಸೋರಿಕೆಗಳ ಪ್ರಕಾರ Motorola Edge 60 Stylus ಭಾರತದಲ್ಲಿ 8GB RAM ಮತ್ತು 256GB ಇಂಟರ್ನಲ್ ಸ್ಟೋರೇಜ್‌ನೊಂದಿಗೆ 22,999 ರೂಗಳಿಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ.
Motorola Edge 60 Stylus ನಿರೀಕ್ಷಿತ ಫೀಚರ್ಗಳೇನು?
ಪ್ರಸ್ತುತ ಆನ್‌ಲೈನ್‌ನಲ್ಲಿ ಹರಡಿರುವ ಇತರ ವದಂತಿಗಳು ಫೋನ್ 1.5K 2.5D pOLED ಡಿಸ್ಪ್ಲೇಯೊಂದಿಗೆ 120Hz ರಿಫ್ರೆಶ್ ದರ ಮತ್ತು 300Hz ಟಚ್ ಸ್ಯಾಂಪ್ಲಿಂಗ್ ದರಕ್ಕೆ ಬೆಂಬಲದೊಂದಿಗೆ ಬರಬಹುದು. ಇದರಲ್ಲಿ 3000nits ಗರಿಷ್ಠ ಹೊಳಪು ಮತ್ತು ಆಕ್ವಾ ಟಚ್ ಬೆಂಬಲದೊಂದಿಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ರಕ್ಷಣೆಗೆ ಬೆಂಬಲವೂ ಇರುತ್ತದೆ. ಈ Motorola Edge 60 Stylus ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7s Gen 2 ಪ್ರೊಸೆಸರ್ನಿಂದ 8GB LPDDR4X RAM ಮತ್ತು 256GB UFS 2.2 ಇಂಟರ್ನಲ್ ಸ್ಟೋರೇಜ್‌ನೊಂದಿಗೆ ಚಾಲಿತವಾಗುವ ನಿರೀಕ್ಷೆಯಿದೆ.
ಮೈಕ್ರೊ SD ಕಾರ್ಡ್ ಮೂಲಕ 1TB ವರೆಗೆ ಸಂಗ್ರಹಣೆ ವಿಸ್ತರಣೆಯ ಲಭ್ಯತೆಯೊಂದಿಗೆ ಫೋನ್ ಬರುತ್ತದೆ. ಈ ಸಾಧನವು ಹಿಂಭಾಗದಲ್ಲಿ ಟ್ರಿಪಲ್-ಕ್ಯಾಮೆರಾ ಸೆಟಪ್‌ನೊಂದಿಗೆ 50MP ಸೋನಿ LYTIA 700C ಪ್ರೈಮರಿ ಸೆನ್ಸರ್ ಮತ್ತೊಂದು 13MP ಅಲ್ಟ್ರಾ-ವೈಡ್-ಆಂಗಲ್ ಸೆನ್ಸರ್ ಮತ್ತು ಮೀಸಲಾದ 3 ಇನ್ 1 ಲೈಟ್ ಸಂವೇದಕದೊಂದಿಗೆ ಬರುವ ಸಾಧ್ಯತೆಯಿದೆ. ಸೆಲ್ಫಿಗಳಿಗಾಗಿ ಮುಂಭಾಗದಲ್ಲಿ 32MP ಸೆನ್ಸರ್ ಹೊಂದಿರುವ ಸಾಧ್ಯತೆಯಿದೆ. ಬ್ಯಾಟರಿ ವಿಭಾಗದಲ್ಲಿ Motorola Edge 60 Stylus ಫೋನ್ 68W ವೈರ್ಡ್ ಫಾಸ್ಟ್-ಚಾರ್ಜಿಂಗ್ ಬೆಂಬಲದೊಂದಿಗೆ 5000mAh ಬ್ಯಾಟರಿಯನ್ನು ಒಳಗೊಂಡಿರುವ ಸಾಧ್ಯತೆಯಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile