Moto G69 5G ಸ್ಮಾರ್ಟ್ಫೋನ್ ಬಿಡುಗಡೆ! ₹17,999 ರೂಗಳಿಗೆ ಮೋಟೊರೋಲಾ ಏನೇನು ನೀಡುತ್ತಿದೆ ಎಲ್ಲವನ್ನು ನೀವೇ ನೋಡಿ!
Moto G69 5G ಸ್ಮಾರ್ಟ್ಫೋನ್ ಬಜೆಟ್ ಬೆಲೆಗೆ ಅಧಿಕೃತವಾಗಿ ಭಾರತದಲ್ಲಿ ಬಿಡುಗಡೆಗೊಳಿಸಿದೆ.
Moto G69 5G ಸ್ಮಾರ್ಟ್ಫೋನ್ ಆರಂಭಿಕ 8GB RAM ಕೇವಲ 17,999 ರೂಗಳಿಂದ ಶುರುವಾಗುತ್ತದೆ.
Moto G69 5G ಸ್ಮಾರ್ಟ್ಫೋನ್ 32MP ಸೇಲ್ಫಿ, Snapdragon 7s Gen 2 ಚಿಪ್ ಮತ್ತು 5500mAh ಬ್ಯಾಟರಿಯನ್ನು ಹೊಂದಿದೆ.
Moto G69 5G launched in India: ಮೋಟೊರೋಲಾ ತನ್ನ ಹೊಚ್ಚ ಹೊಸ Moto G69 5G ಸ್ಮಾರ್ಟ್ಫೋನ್ ಅನ್ನು ಬಜೆಟ್ ಬೆಲೆಗೆ ಅಧಿಕೃತವಾಗಿ ಭಾರತದಲ್ಲಿ ಬಿಡುಗಡೆಗೊಳಿಸಿದೆ. ಸ್ಮಾರ್ಟ್ಫೋನ್ ಪ್ರತ್ಯೇಕವಾಗಿ ಫ್ಲಿಪ್ಕಾರ್ಟ್ ಮೂಲಕ ಬಿಡುಗಡೆಗೊಳಿಸಿ ಮಾರಾಟಕ್ಕೆ ಪರಿಚಯಿಸಿದೆ. ಮೋಟೊರೋಲಾ ಇದನ್ನು ಸುಮಾರು 20,000 ರೂಗಳೊಳಗೆ ಅತ್ಯುತ್ತಮ ಫೀಚರ್ಗಳೊಂದಿಗೆ ಅನಾವರಣಗೊಳಿಸಿದೆ. Moto G69 5G ಸ್ಮಾರ್ಟ್ಫೋನ್ ಆರಂಭಿಕ ರೂಪಾಂತರವನ್ನು 8GB RAM ಕೇವಲ 17,999 ರೂಗಳಿಂದ ಶುರುವಾಗುತ್ತದೆ. Moto G69 5G ಸ್ಮಾರ್ಟ್ಫೋನ್ 32MP ಸೇಲ್ಫಿ ಕ್ಯಾಮೆರಾ, Snapdragon 7s Gen 2 ಚಿಪ್ ಮತ್ತು 5500mAh ಬ್ಯಾಟರಿಯನ್ನು ಹೊಂದಿದೆ.
SurveyMoto G69 5G ಫೀಚರ್ಗಳೇನು?
Moto G96 5G ಆಕರ್ಷಕ 6.67 ಇಂಚಿನ 144Hz 3D ಕರ್ವ್ pOLED ಡಿಸ್ಪ್ಲೇಯನ್ನು ಹೊಂದಿದ್ದು ನಿಮಗೆ ತಲ್ಲೀನಗೊಳಿಸುವ ದೃಶ್ಯಗಳನ್ನು ನೀಡುತ್ತದೆ. ಈ Moto G69 5G ಸ್ಮಾರ್ಟ್ಫೋನ್ ಸೋನಿ LYT-700C ಸೆನ್ಸರ್ ಮತ್ತು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಹೊಂದಿರುವ 50MP ಪ್ರೈಮರಿ ಕ್ಯಾಮೆರಾವನ್ನು ಹೊಂದಿದ್ದು ಇದು ತೀಕ್ಷ್ಣ ಮತ್ತು ಉತ್ತಮ ಶೂಟ್ ಖಚಿತಪಡಿಸುತ್ತದೆ. ಅಲ್ಲದೆ 32MP ಮುಂಭಾಗದ ಕ್ಯಾಮೆರಾ ಉತ್ತಮ ಗುಣಮಟ್ಟದ ಸೆಲ್ಫಿಗಳಿಗೆ ಸೂಕ್ತವಾಗಿದೆ.
ಹುಡ್ ಅಡಿಯಲ್ಲಿ Moto G96 5G ಪವರ್ಫುಲ್ Qualcomm Snapdragon 7s Gen 2 ಚಿಪ್‌ನಿಂದ ಚಾಲಿತವಾಗಿದ್ದು ಆಂಡ್ರಾಯ್ಡ್ 15 ಸಪೋರ್ಟ್ ಮಾಡುವುದರೊಂದಿಗೆ ಉತ್ತಮವಾದ 5G ಕಾರ್ಯಕ್ಷಮತೆ ಮತ್ತು ಸುಗಮ ಬಹುಕಾರ್ಯಕವನ್ನು ಒದಗಿಸುತ್ತದೆ. ಇದು ವಿಸ್ತೃತ ಬಳಕೆಗಾಗಿ ದೊಡ್ಡ 5,500mAh ಬ್ಯಾಟರಿಯನ್ನು ಹೊಂದಿದೆ. Moto G69 5G ಸ್ಮಾರ್ಟ್ಫೋನ್ 68W ಫಾಸ್ಟ್ ಚಾರ್ಜಿಂಗ್ ಅನ್ನು ಸಹ ಬೆಂಬಲಿಸುತ್ತದೆ. ಇದು ತ್ವರಿತ ವಿದ್ಯುತ್ ಮರುಪೂರಣಕ್ಕೆ ಅನುವು ಮಾಡಿಕೊಡುತ್ತದೆ.
ಭಾರತದಲ್ಲಿ Moto G69 5G ಬೆಲೆ ಮತ್ತು ಬ್ಯಾಂಕ್ ಆಫರ್ಗಳೇನು?
ಫೋನ್ ಆರಂಭಿಕ 8GB RAM + 128GB ಸ್ಟೋರೇಜ್ ₹17,999 ರೂಗಳಿಗೆ ಲಭ್ಯವಿರುತ್ತದೆ. ಅಲ್ಲದೆ ಇದರ ಮತ್ತೊಂದು 8GB RAM + 256GB ಸ್ಟೋರೇಜ್ ₹19,999 ರೂಗಳಿಗೆ ಲಭ್ಯವಿರುತ್ತದೆ. ಇದು ಫ್ಲಿಪ್‌ಕಾರ್ಟ್, ಮೊಟೊರೊಲಾ ಇ-ಸ್ಟೋರ್ ಮತ್ತು ರಿಲಯನ್ಸ್ ಡಿಜಿಟಲ್ ಸೇರಿದಂತೆ ಆಯ್ದ ಚಿಲ್ಲರೆ ಮಾರಾಟ ಮಳಿಗೆಗಳ ಮೂಲಕ ಖರೀದಿಗೆ ಲಭ್ಯವಿರುತ್ತದೆ.
ನಿರ್ದಿಷ್ಟ ಬಿಡುಗಡೆ ಬ್ಯಾಂಕ್ ಕೊಡುಗೆಗಳನ್ನು ವ್ಯಾಪಕವಾಗಿ ವಿವರಿಸಲಾಗಿಲ್ಲವಾದರೂ ಫ್ಲಿಪ್‌ಕಾರ್ಟ್ ಸಾಮಾನ್ಯವಾಗಿ ಮಾರಾಟದ ಸಮಯದಲ್ಲಿ HDFC, ICICI ಅಥವಾ SBI ನಂತಹ ಬ್ಯಾಂಕ್‌ಗಳಿಂದ ಕ್ರೆಡಿಟ್ ಕಾರ್ಡ್‌ಗಳ ಮೇಲೆ ತ್ವರಿತ ರಿಯಾಯಿತಿಗಳನ್ನು ನೀಡುತ್ತದೆ. Moto G96 5G ಭಾರತದಲ್ಲಿ 16 ಜುಲೈ 2025 ರಿಂದ ಮಧ್ಯಾಹ್ನ 12:00 ಗಂಟೆಗೆ ಮಾರಾಟಕ್ಕೆ ಬರಲಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile