Moto Edge 50 Fusion ಸ್ಮಾರ್ಟ್ಫೋನ್ 32MP ಸೆಲ್ಫಿ ಕ್ಯಾಮೆರಾದೊಂದಿಗೆ ಬಿಡುಗಡೆ! ಬೆಲೆಯೊಂದಿಗೆ 5 ಫೀಚರ್‌ಗಳೇನು?

Moto Edge 50 Fusion ಸ್ಮಾರ್ಟ್ಫೋನ್ 32MP ಸೆಲ್ಫಿ ಕ್ಯಾಮೆರಾದೊಂದಿಗೆ ಬಿಡುಗಡೆ! ಬೆಲೆಯೊಂದಿಗೆ 5 ಫೀಚರ್‌ಗಳೇನು?
HIGHLIGHTS

ಮೋಟೋರೋಲ ಭಾರತದಲ್ಲಿ ತನ್ನ ಲೇಟೆಸ್ಟ್ Moto Edge 50 Fusion ಅನ್ನು ಅಧಿಕೃತವಾಗಿ ಉತ್ತಮ ಫೀಚರ್ಗಳೊಂದಿಗೆ ಬಿಡುಗಡೆ.

Moto Edge 50 Fusion ಸ್ಮಾರ್ಟ್ಫೋನ್ 50MP ಪ್ರೈಮರೀ ಕ್ಯಾಮೆರಾದೊಂದಿಗೆ 5000mAh ಬ್ಯಾಟರಿಯೊಂದಿಗೆ ಅನಾವರಣಗೊಂಡಿದೆ.

Moto Edge 50 Fusion ಸ್ಮಾರ್ಟ್ಫೋನ್ 8GB RAM ಮತ್ತು 128GB ಸ್ಟೋರೇಜ್‌ನ ಮೂಲ ಮಾದರಿಗೆ 22,999 ರೂಗಳಿಗೆ ಲಭ್ಯ.

Moto Edge 50 Fusion launched in India 2024: ಮೋಟೋರೋಲ ಭಾರತದಲ್ಲಿ ಇಂದು ತನ್ನ ಲೇಟೆಸ್ಟ್ Moto Edge 50 Fusion ಅನ್ನು ಅಧಿಕೃತವಾಗಿ ಉತ್ತಮ ಫೀಚರ್ಗಳೊಂದಿಗೆ ಬಿಡುಗಡೆಗೊಳಿಸಿದೆ. Moto Edge 50 Fusion ಈ ಸರಣಿಯ ಎರಡನೇ ಸ್ಮಾರ್ಟ್ಫೋನ್ ಅಗಿದ್ದು ಇದಕ್ಕೂ ಮೊದಲು ಲಭ್ಯವಿರುವ Moto Edge 50 Pro ಬಿಡುಗಡೆಗೊಳಿಸಲಾಗಿದೆ. ಈ Moto Edge 50 Fusion ಸ್ಮಾರ್ಟ್ಫೋನ್ ಅನ್ನು ಖರೀದಿಸಲು ಯೋಚಿಸುತ್ತಿದರೆ ಮೊದಲು ಟಾಪ್ 5 ಫೀಚರ್ಗಳನೊಮ್ಮೆ ಪರಿಶೀಲಿಸಿಕೊಳ್ಳಿ.

ಇಂದು ಬಿಡುಗಡೆಯಾಗಿರುವ Edge 50 Fusion ಬೆಲೆ, ಡಿಸೈನ್ ಮತ್ತು ಫೀಚರ್ಗಳು ಅದೇ Moto Edge 50 Pro ಮಾದರಿಯಂತೆ ಬಿಡುಗಡೆಯಾಗಿರುವುದು ಅಷ್ಟಾಗಿ ಕುತೂಹಲವನ್ನು ನಿದ್ದಿಲ್ಲದಿದ್ದರೂ ಸ್ಮಾರ್ಟ್ಫೋನ್ 50MP ಪ್ರೈಮರೀ ಕ್ಯಾಮೆರಾದೊಂದಿಗೆ 5000mAh ಬ್ಯಾಟರಿಯೊಂದಿಗೆ Snapdragon 7s Gen 2 ಪ್ರೊಸೆಸರ್ ಅನ್ನು ಹೊಂದಿದೆ.

Also Read: ಮೊಬೈಲ್ ಫೋನ್ ಕವರ್ ಹಿಂದೆ ಹಣ ಅಥವಾ ಕಾರ್ಡ್ ಇಡುತ್ತೀರಾ? ಹಾಗಿದ್ರೆ ತಪ್ಪದೆ ಈ ವಿಷಯ ತಿಳಿದುಕೊಳ್ಳಿ!

ಭಾರತದಲ್ಲಿ Moto Edge 50 Fusion ಡಿಸ್ಪ್ಲೇ ಮಾಹಿತಿಗಳೇನು?

Moto Edge 50 Fusion ಸ್ಮಾರ್ಟ್ಫೋನ್ ನಿಮಗೆ 1080×2400 ಪಿಕ್ಸೆಲ್‌ಗಳ FHD ರೆಸಲ್ಯೂಶನ್‌ನೊಂದಿಗೆ 6.7 ಇಂಚಿನ pOLED ಡಿಸ್ಪ್ಲೇ ಹೊಂದಿದ್ದು ಫೋನ್ ಸ್ಮೋಥ್ ಬಳಕೆಗೆ 144Hz ರಿಫ್ರೆಶ್ ರೇಟ್ ಮತ್ತು 1600 nits ವರೆಗಿನ ಗರಿಷ್ಠ ಹೊಳಪನ್ನು ಹೊಂದಿದೆ. ಇದರಿಂದಾಗಿ ನೀವು ದಿನದ ಸೂರ್ಯನ ಬೆಳಕಿನಲ್ಲೂ ಯಾವುದೇ ಅಡೆತಡೆಗಳಿಲ್ಲದೆ ಉತ್ತಮವಾಗಿ ಬಳಸಬಹುದು. ಸ್ಮಾರ್ಟ್ಫೋನ್ ಡಿಸ್ಪ್ಲೇಯ ಪ್ರೊಟೆಕ್ಷನ್ಗಾಗಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ನಿಂದ ರಕ್ಷಿಸಲಾಗಿದೆ.

Moto Edge 50 Fusion launched in India with 32mp selfie camera and much more
Moto Edge 50 Fusion launched in India with 32mp selfie camera and much more

Moto Edge 50 Fusion ಕ್ಯಾಮೆರಾ ವಿವರಗಳೇನು?

ಈ ಮೋಟೋರೋಲಾದ ಸ್ಮಾರ್ಟ್ಫೋನ್ ಡ್ಯೂಯಲ್ ಕ್ಯಾಮೆರಾ ಸೆಟಪ್ ಜೊತೆಗೆ ಬಿಡುಗಡೆಯಾಗಲಿದ್ದು 50MP ಪ್ರೈಮರಿ ಕ್ಯಾಮೆರಾ f/1.88 ಅಪರ್ಚರ್ ಜೊತೆಗೆ All-Pixel Focus ಮತ್ತು Ultra Pixel Technology ಅನ್ನು ಸಪೋರ್ಟ್ ಮಾಡುತ್ತದೆ. ಮತ್ತೊಂದು 13MP ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ f/2.2 ಅಪರ್ಚರ್ ಜೊತೆಗೆ Optical Image Stabilisation ಸಪೋರ್ಟ್ ಹೊಂದಿದೆ. ಅಂದ್ರೆ ನಿಮಗೆ ಅತ್ಯುತ್ತಮ ಫೋಟೋ ಮತ್ತು ವಿಡಿಯೋಗಳನ್ನು ಪಡೆಯಲು ಸಹಕರಿಸುತ್ತದೆ. ಕೊನೆಯದಾಗಿ ವಿಡಿಯೋ ಕರೆ ಮತ್ತು ಸೆಲ್ಫೀಗಳಿಗಾಗಿ ಡಿಸ್ಪ್ಲೇಯಲ್ಲಿ 32MP ಲೆನ್ಸ್ f/2.45 ಅಪರ್ಚರ್ ಜೊತೆಗೆ ನೀಡಲಾಗಿದೆ.

ಮೋಟೋ Edge 50 Fusion ಹಾರ್ಡ್ವೇರ್ ಹೇಗಿದೆ?

ಮೋಟೊರೋಲದ ಈ ಸ್ಮಾರ್ಟ್ಫೋನ್ ಕೇವಲ ಒಂದೇ ಒಂದು RAM ರೂಪಾಂತರದಲ್ಲಿ ಮತ್ತು ಎರಡು ಮಾದರಿಯ ಸ್ಟೋರೇಜ್ ಆಯ್ಕೆಗಳಲ್ಲಿ ಬಿಡುಗಡೆಯಾಗಿದೆ. ಅವೆಂದರೆ 12GB RAM ಮತ್ತು 128GB ಸ್ಟೋರೇಜ್ ಮತ್ತೊಂದು ಅದೇ 12GB RAM ಮತ್ತು 256GB ಸ್ಟೋರೇಜ್ ಸ್ಟೋರೇಜ್ ಆಯ್ಕೆಗಳಲ್ಲಿ ಬಿಡುಗಡೆಯಾಗಿದೆ. ಇದು ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7s Gen 2 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. ಸ್ಮಾರ್ಟ್ಫೋನ್ ಆಂಡ್ರಾಯ್ಡ್ 14 ನಲ್ಲಿ ಕಾರ್ಯನಿರ್ವಹಿಸುತ್ತದೆ.

Moto Edge 50 Fusion launched in India with 32mp selfie camera and much more
Moto Edge 50 Fusion launched in India with 32mp selfie camera and much more

ಮೋಟೋ Edge 50 Fusion ಬ್ಯಾಟರಿ ಮತ್ತು ಸೆನ್ಸರ್‌ಗಳು ಹೇಗಿವೆ?

ಇಂದು ಬಿಡುಗಡೆಯಾಗಿರುವ ಈ Moto Edge 50 Fusion ಸ್ಮಾರ್ಟ್ಫೋನ್ ನಿಮಗೆ ಸ್ಟಿರಿಯೊ ಸ್ಪೀಕರ್‌ಗಳು ಮತ್ತು ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP68 ರೇಟಿಂಗ್‌ನೊಂದಿಗೆ ಬರುತ್ತದೆ. ಇದು 5000mAh ಬ್ಯಾಟರಿಯನ್ನು ಹೊಂದಿದ್ದು 68W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಸ್ಮಾರ್ಟ್ಫೋನ್ ನಿಮಗೆ ಒಟ್ಟಾರೆಯಾಗಿ ಮೂರು Forest Blue, Marshmallow Blue ಮತ್ತು Hot Pink ಬಣ್ಣಗಳಲ್ಲಿ ಲಭ್ಯವಿದೆ.

ಭಾರತದಲ್ಲಿ Moto Edge 50 Fusion ಬೆಲೆ ಮತ್ತು ಲಭ್ಯತೆಗಳೇನು?

ಕೊನೆಯದಾಗಿ Motorola Edge 50 Fusion ಸ್ಮಾರ್ಟ್ಫೋನ್ ಬೆಲೆ ಮತ್ತು ಲಭ್ಯತೆ ಬಗ್ಗೆ ಮಾತನಾಡುವುದಾದರೆ ಸ್ಮಾರ್ಟ್ಫೋನ್ 8GB RAM ಮತ್ತು 128GB ಸ್ಟೋರೇಜ್‌ನ ಮೂಲ ಮಾದರಿಗೆ 22,999 ರೂಗಳಿಗೆ ಲಭ್ಯವಿದ್ದು ಇದು 12GB RAM ಮತ್ತು 256GB ಸ್ಟೋರೇಜ್ ಬರುತ್ತದೆ. ಅಲ್ಲದೆ ಈ ರೂಪಾಂತರದ ಬೆಲೆ 24,999 ರೂಗಳಾಗಿವೆ. ಈ ಸ್ಮಾರ್ಟ್‌ಫೋನ್ ಫ್ಲಿಪ್‌ಕಾರ್ಟ್, Motorola.in ಮತ್ತು ಇತರ ಚಿಲ್ಲರೆ ಚಾನೆಲ್‌ಗಳ ಮೂಲಕ 22ನೇ ಮೇ 2024 ರಂದು ಮಧ್ಯಾಹ್ನ 12 ಗಂಟೆಗೆ ಲಭ್ಯವಿರುತ್ತದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

 
Digit.in
Logo
Digit.in
Logo