Upcoming Smartphones: ಈ ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆಗೆ ಸಜ್ಜಾಗಿರುವ ಸ್ಮಾರ್ಟ್ ಫೋನ್ಗಳ ಪಟ್ಟಿ ಇಲ್ಲಿದೆ!

HIGHLIGHTS

ಈ ತಿಂಗಳು ಬಿಡುಗಡೆಯಾಗಲಿರುವ ಕೆಲವು ಪ್ರಮುಖ ಫೋನ್‌ಗಳ ಪಟ್ಟಿ ಇಲ್ಲಿ ನೀಡಲಾಗಿದೆ.

ಉತ್ತಮ ಕ್ಯಾಮೆರಾ, ಫಾಸ್ಟ್ ಪ್ರೊಸೆಸರ್, ಪ್ರೀಮಿಯಂ ಡಿಸೈನ್ ಮತ್ತು ಪವರ್ಫುಲ್ ಬ್ಯಾಟರಿಗಳನ್ನು ನಿರೀಕ್ಷಿಸಲಾಗಿದೆ.

ಈ ಸರಣಿಯಲ್ಲಿ iPhone 17, iPhone 17 Pro ಮತ್ತು iPhone 17 Pro Max ಎಂಬ ಫೋನ್‌ಗಳನ್ನು ನಿರೀಕ್ಷಿಸಲಾಗಿದೆ.

Upcoming Smartphones: ಈ ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆಗೆ ಸಜ್ಜಾಗಿರುವ ಸ್ಮಾರ್ಟ್ ಫೋನ್ಗಳ ಪಟ್ಟಿ ಇಲ್ಲಿದೆ!

Upcoming Smartphones: ಪ್ರತಿ ವರ್ಷದಂತೆ ಈ ಸೆಪ್ಟೆಂಬರ್ ತಿಂಗಳಿನಲ್ಲಿಯೂ ಹಲವಾರು ದೊಡ್ಡ ಕಂಪನಿಗಳು ತಮ್ಮ ಹೊಸ ಫೋನ್‌ಗಳನ್ನು ಬಿಡುಗಡೆ ಮಾಡಲು ಸಿದ್ಧವಾಗಿವೆ. ಈ ಹೊಸ ಫೋನ್‌ಗಳಲ್ಲಿ ಉತ್ತಮ ಕ್ಯಾಮೆರಾ, ಫಾಸ್ಟ್ ಪ್ರೊಸೆಸರ್, ಪ್ರೀಮಿಯಂ ಡಿಸೈನ್ ಮತ್ತು ಪವರ್ಫುಲ್ ಬ್ಯಾಟರಿಗಳನ್ನು ನಿರೀಕ್ಷಿಸಲಾಗಿದೆ. ಈ ತಿಂಗಳು ಬಿಡುಗಡೆಯಾಗಲಿರುವ ಕೆಲವು ಪ್ರಮುಖ ಫೋನ್‌ಗಳ ಪಟ್ಟಿ ಇಲ್ಲಿ ನೀಡಲಾಗಿದ್ದು ಈ ಎಲ್ಲ ಫೋನ್‌ಗಳು ಈ ತಿಂಗಳು ಮಾರುಕಟ್ಟೆಯನ್ನು ಪ್ರವೇಶಿಸುವ ನಿರೀಕ್ಷೆಯಿದೆ. ಗ್ರಾಹಕರಿಗೆ ಹಲವು ಹೊಸ ಆಯ್ಕೆಗಳನ್ನು ಒದಗಿಸುತ್ತವೆ. ನಿಖರವಾದ ದಿನಾಂಕಗಳು ಮತ್ತು ಫೀಚರ್‌ಗಳಿಗಾಗಿ ಆಯಾ ಕಂಪನಿಗಳ ಅಧಿಕೃತ ಘೋಷಣೆಗಳನ್ನು ಗಮನಿಸಬಹುದು.

Digit.in Survey
✅ Thank you for completing the survey!

iPhone 17 Series:

ಈಗಾಗಲೇ ಕಂಪನಿ ಇದನ್ನೂ 9ನೇ ಸೆಪ್ಟೆಂಬರ್ 2025 ರಂದು ಆಪಲ್ ಕಂಪನಿ ತಮ್ಮ ಹೊಸ ಐಫೋನ್ ಸರಣಿಯನ್ನು ಬಿಡುಗಡೆ ಮಾಡಲಿದೆ ಎಂದು ಹೇಳಲಾಗುತ್ತಿದೆ. ಈ ಸರಣಿಯಲ್ಲಿ iPhone 17, iPhone 17 Pro ಮತ್ತು iPhone 17 Pro Max ಎಂಬ ಮೂರು ಹೊಸ ಫೋನ್‌ಗಳನ್ನು ನಿರೀಕ್ಷಿಸಲಾಗಿದೆ. ಈ ಬಾರಿ ಐಫೋನ್ ಕ್ಯಾಮೆರಾ ತಂತ್ರಜ್ಞಾನದಲ್ಲಿ ದೊಡ್ಡ ಬದಲಾವಣೆಗಳನ್ನು ನಿರೀಕ್ಷಿಸಲಾಗಿದೆ. ಇದರ ಜೊತೆಗೆ ಫೋನ್ ಅನ್ನು ಇನ್ನಷ್ಟು ವೇಗವಾಗಿ ಮಾಡಲು ಹೊಸ ಚಿಪ್‌ಸೆಟ್ ಬಳಸಲಾಗುತ್ತದೆ.

Upcoming Smartphones Sep 2025

Upcoming Smartphones: Samsung Galaxy S25 FE

ಸ್ಯಾಮ್‌ಸಂಗ್ ಕಂಪನಿಯು 4ನೇ ಸೆಪ್ಟೆಂಬರ್ 2025 ರಂದು ತಮ್ಮ ಹೊಸ Samsung Galaxy S25 FE ಫೋನ್ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಇದು ಯುವಕರಿಗಾಗಿ ಮತ್ತು ಫೋನ್ ಪ್ರಿಯರಿಗಾಗಿ ವಿಶೇಷವಾಗಿ ತಯಾರಿಸಿದ ಫೋನ್ ಆಗಿದೆ. ಈ ಫೋನ್‌ನಲ್ಲಿ ಶಕ್ತಿಶಾಲಿ ಪ್ರೊಸೆಸರ್ ಇರುವುದರಿಂದ ಗೇಮ್ಸ್ ಆಡುವುದು ಅಥವಾ ಹಲವು ಆ್ಯಪ್‌ಗಳನ್ನು ಒಂದೇ ಬಾರಿಗೆ ಬಳಸಲು ಅನುಕೂಲವಾಗುತ್ತದೆ. ಅಲ್ಲದೆ ಇದರ ಕ್ಯಾಮೆರಾ ಕೂಡ ತುಂಬಾ ಉತ್ತಮವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ.

Also Read: 43 ಇಂಚಿನ KODAK Smart TV ಕೇವಲ ₹15,000ಕ್ಕಿಂತ ಕಡಿಮೆ ಬೆಲೆಗೆ ಲಭ್ಯ! ಕೈ ಜಾರುವ ಮುಂಚೆ ಡೀಲ್ ಖರೀದಿಸಿ!

Realme 15T 5G:

ಕೈಗೆಟುಕುವ ದರದಲ್ಲಿ ಉತ್ತಮ ಫೀಚರ್‌ಗಳನ್ನು ನೀಡಲು ಹೆಸರುವಾಸಿಯಾದ ರಿಯಲ್‌ಮಿ ಕಂಪನಿ 2ನೇ ಸೆಪ್ಟೆಂಬರ್ 2025 ರಂದು Realme 15T 5G ಫೋನ್ ಅನ್ನು ಬಿಡುಗಡೆ ಮಾಡುವ ನಿರೀಕ್ಷೆ ಇದೆ. ಈ ಫೋನ್ ಕಡಿಮೆ ಬೆಲೆಯಲ್ಲಿ 5G ನೆಟ್‌ವರ್ಕ್ ಬೆಂಬಲ ಮತ್ತು ದೊಡ್ಡ ಬ್ಯಾಟರಿಯನ್ನು ಹೊಂದಿದೆ. ಇದು ವೇಗದ ಚಾರ್ಜಿಂಗ್ ಬೆಂಬಲ ಕೂಡ ನೀಡುತ್ತದೆ. ಈ ಫೋನ್ ವಿದ್ಯಾರ್ಥಿಗಳು ಮತ್ತು ಸಾಮಾನ್ಯ ಬಳಕೆಗೆ ತುಂಬಾ ಸೂಕ್ತವಾಗಿದೆ.

Upcoming Smartphones Sep 2025

Moto G56:

ಮಧ್ಯಮ ಬೆಲೆಯ ವಿಭಾಗದಲ್ಲಿ ಮೊಟೊರೊಲಾ ಕಂಪನಿ Moto G56 ಎಂಬ ಹೊಸ ಫೋನ್ ತರಲಿದೆ. ಇದು ಸಪ್ಟೆಂಬರ್ ತಿಂಗಳಲ್ಲಿ ಮಾರುಕಟ್ಟೆಗೆ ಬರಬಹುದು. ಈ ಫೋನ್ ಸುಂದರವಾದ ಡಿಸ್‌ಪ್ಲೇ ಮತ್ತು ದೀರ್ಘಕಾಲ ಬಾಳಿಕೆ ಬರುವ ಬ್ಯಾಟರಿಯನ್ನು ಹೊಂದಿದೆ. ಇದರ ಕ್ಯಾಮೆರಾವು ಕೂಡ ಉತ್ತಮ ಗುಣಮಟ್ಟದ ಫೋಟೋಗಳನ್ನು ತೆಗೆಯಲು ಸಹಾಯ ಮಾಡುತ್ತದೆ.

Also Read: Flipkart Big Billion Days 2025: ಹಬ್ಬಕೆ ಸರಿಯಾಗಿ ಸೀಸನ್ ಸೇಲ್ ಪ್ರಕಟಿಸಿದ ಫ್ಲಿಪ್ಕಾರ್ಟ್! ಡೀಲ್ ಮತ್ತು ಆಫರ್ಗಳೇನು?

Tecno Pova Slim 5G:

ಟೆಕ್ನೋ ಕಂಪನಿ Pova Slim 5G ಎಂಬ ಹೆಸರಿನ ಹೊಸ ಫೋನ್ ಅನ್ನು ಸೆಪ್ಟೆಂಬರ್ 4 ರಂದು ಬಿಡುಗಡೆ ಮಾಡಬಹುದು. ಈ ಫೋನ್ ಅದರ ಹೆಸರೇ ಸೂಚಿಸುವಂತೆ ತುಂಬಾ ತೆಳ್ಳಗಿದೆ. ಇದರ ಡಿಸ್‌ಪ್ಲೇ ಬದಿಗಳಲ್ಲಿ ಬಾಗಿದಂತೆ ಕಾಣುತ್ತದೆ. ಇದು ಫೋನ್‌ಗೆ ಹೊಸ ಲುಕ್ ನೀಡುತ್ತದೆ. ಈ ಫೋನ್ ಒಳ್ಳೆಯ ಬ್ಯಾಟರಿ ಮತ್ತು ಕ್ಯಾಮೆರಾ ಜೊತೆಗೆ ಬಜೆಟ್ ಸ್ನೇಹಿ ಬೆಲೆಯಲ್ಲಿ ಸಿಗುವ ನಿರೀಕ್ಷೆ ಇದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo