Samsung Unpacked 2026: Galaxy S26 ಸರಣಿಯು ಈ ದಿನಾಂಕದಂದು ಗ್ರ್ಯಾಂಡ್ ಎಂಟ್ರಿ ಕೊಡಲಿದೆ
Samsung Galaxy Unpacked ಕಾರ್ಯಕ್ರಮ ಫೆಬ್ರವರಿ 25 ರಂದು ನಡೆಯಲಿದೆ
Galaxy S26 ಸರಣಿಯು ಮೂರು ಫೋನ್ ಮಾಡೆಲ್‌ಗಳನ್ನು ಒಳಗೊಂಡಿರಲಿದೆ
Samsung ಕಂಪನಿಯ ಯೂಟ್ಯೂಬ್ ಚಾನೆಲ್‌ನಲ್ಲಿ ಲೈವ್ ಸ್ಟ್ರೀಮ್ ಅನ್ನು ವೀಕ್ಷಿಸಬಹುದು
ಸ್ಯಾಮ್‌ಸಂಗ್ ಸಂಸ್ಥೆಯ ಬಹುನಿರೀಕ್ಷಿತ Samsung Galaxy S26 ಸರಣಿಯು ಈಗಾಗಲೇ ಮಾರುಕಟ್ಟೆಯಲ್ಲಿ ಕುತೂಹಲ ಹಾಗೂ ನಿರೀಕ್ಷೆಗಳನ್ನು ಹೆಚ್ಚಿಸಿದೆ. ಇದೀಗ Samsung Galaxy S26 ಸರಣಿಯ ಲಾಂಚ್ ದಿನಾಂಕವನ್ನು ಸ್ಯಾಮ್‌ಸಂಗ್ ಅಧಿಕೃತವಾಗಿ ಘೋಷಿಸಿದೆ. ಅಂದಹಾಗೆ Samsung Galaxy S26 ಸರಣಿಯು ಮೂರು ಮಾಡೆಲ್‌ಗಳನ್ನು ಒಳಗೊಂಡಿರಲಿದೆ ಎನ್ನಲಾಗಿದ್ದು, ಅವುಗಳು ಕ್ರಮವಾಗಿ Galaxy S26, Galaxy S26 Plus ಮತ್ತು Galaxy S26 Ultra ಆಗಿರಲಿವೆ ಎಂದು ಹೇಳಲಾಗುತ್ತಿದೆ. ಈ ಸರಣಿಯ ಜೊತೆಗೆ ಸಂಸ್ಥೆಯು Galaxy Buds 4 ಇಯರ್‌ಬಡ್ಸ್ ಲೈನ್‌ಅಪ್ ಅನ್ನು ಸಹ ಮುಂಬರುವ Unpacked ಕಾರ್ಯಕ್ರಮದಲ್ಲಿ ಪರಿಚಯಿಸಲಿದೆ ಎನ್ನಲಾಗಿದೆ. ಇನ್ನುಳಿದಂತೆ Samsung Galaxy S26 ಸರಣಿ ಲಾಂಚ್ ಡೇಟ್ ಮಾಹಿತಿ ಹಾಗೂ ಫೀಚರ್ಸ್ ಕುರಿತ ಇನ್ನಷ್ಟು ಮಾಹಿತಿಯನ್ನು ಮುಂದೆ ತಿಳಿಯೋಣ.
SurveyAlso Read : Valentine’s Special: Realme Narzo 90x 5G ಮೊಬೈಲ್ ಈಗ ಹೊಸ ಲುಕ್‌ನಲ್ಲಿ ಬಿಡುಗಡೆ! ಬೆಲೆ ತಿಳಿಯಿರಿ
Samsung Galaxy S26 ಸರಣಿ ಬಿಡುಗಡೆಗೆ ದಿನಾಂಕ ಫಿಕ್ಸ್
Samsung ಕಂಪನಿಯ Galaxy Unpacked ಕಾರ್ಯಕ್ರಮದಲ್ಲಿ Samsung Galaxy S26 ಸರಣಿ ಬಿಡುಗಡೆ ಆಗಲಿದೆ. ಇನ್ನು Galaxy Unpacked ಕಾರ್ಯಕ್ರಮ ಇದೇ ಫೆಬ್ರವರಿ 25 ರಂದು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನಡೆಯಲಿದೆ ಎಂದು ಸ್ಯಾಮ್‌ಸಂಗ್ ದೃಢಪಡಿಸಿದೆ. ಈ ಕಾರ್ಯಕ್ರಮ ಅಂದು ಭಾರತೀಯ ಕಾಲಮಾನ ರಾತ್ರಿ 11:30 ಗಂಟೆಗೆ ಪ್ರಾರಂಭವಾಗುತ್ತದೆ. ಪ್ರಪಂಚದಾದ್ಯಂತದ ವೀಕ್ಷಕರು Samsung ಸಂಸ್ಥೆಯ ಅಧಿಕೃತ ವೆಬ್‌ಸೈಟ್ Samsung.com, ಸ್ಯಾಮ್‌ಸಂಗ್ ನ್ಯೂಸ್‌ರೂಮ್ ಮತ್ತು ಕಂಪನಿಯ YouTube ಚಾನೆಲ್‌ನಲ್ಲಿ ಲೈವ್ ಸ್ಟ್ರೀಮ್ ಅನ್ನು ವೀಕ್ಷಿಸಬಹುದು.

Samsung ಕಾರ್ಯಕ್ರಮದಲ್ಲಿ ಏನನ್ನು ನಿರೀಕ್ಷಿಸಬಹುದು
Samsung Galaxy S26 ಸರಣಿಯು ಮೂರು ಮಾಡೆಲ್‌ಗಳನ್ನು ಒಳಗೊಂಡಿರಲಿದೆ. ಅಲ್ಲದೇ Galaxy Buds 4 ಇಯರ್‌ಬಡ್ಸ್ ಡಿವೈಸ್ ಸಹ ಅನಾವರಣ ಆಗಲಿದೆ. ಈ ಸರಣಿಯಲ್ಲಿ Samsung Galaxy S26, Samsung Galaxy S26 Plus ಮತ್ತು Samsung Galaxy S26 Ultra ಫೋನ್‌ಗಳು ಲಗ್ಗೆ ಇಡುವ ನಿರೀಕ್ಷೆಗಳು ಇವೆ.
Galaxy S26 ನಿರೀಕ್ಷಿತ ಫೀಚರ್ಸ್
ಕಂಪನಿಯ ಈ ಫೋನ್ 6.3 ಇಂಚಿನ AMOLED 2X ಡಿಸ್‌ಪ್ಲೇ ಪಡೆದಿರಲಿದ್ದು ಇದು FHD+ ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ರೇಟ್ ಹೊಂದುವ ನಿರೀಕ್ಷೆಯಿದೆ. ಹಾಗೆಯೇ ಇದು Exynos 2600 ಚಿಪ್‌ಸೆಟ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಲಾಗುತ್ತದೆ. 12GB ವರೆಗೆ RAM ಮತ್ತು 512GB ವರೆಗೆ ಸ್ಟೋರೇಜ್ ಆಯ್ಕೆಗಳನ್ನು ಒಳಗೊಂಡಿರಲಿದೆ. ಅಲ್ಲದೇ ಇದು 25W ಚಾರ್ಜಿಂಗ್ ಬೆಂಬಲ ಮತ್ತು 15W ವೈರ್‌ಲೆಸ್ ಚಾರ್ಜಿಂಗ್ ಸಪೋರ್ಟ್ ಜೊತೆಗೆ 4,300 mAh ಬ್ಯಾಟರಿ ಹೊಂದಿರಲಿದೆ. ಫೋಟೋಗ್ರಫಿಗಾಗಿ 50MP ಮುಖ್ಯ ಕ್ಯಾಮೆರಾ, 12MP ಅಲ್ಟ್ರಾವೈಡ್ ಲೆನ್ಸ್ ಮತ್ತು 12MP ಟೆಲಿಫೋಟೋ ಕ್ಯಾಮೆರಾ ಅನ್ನು ಹೊಂದಿರಬಹುದು ಎನ್ನಲಾಗಿದೆ.
Galaxy S26 Plus ನಿರೀಕ್ಷಿತ ಫೀಚರ್ಸ್
ಸಂಸ್ಥೆಯ ಈ ಮೊಬೈಲ್ 120Hz ರಿಫ್ರೆಶ್ ರೇಟ್ ಜೊತೆಗೆ 6.7 ಇಂಚಿನ AMOLED ಡಿಸ್‌ಪ್ಲೇ ಹೊಂದಿದೆ ಎಂದು ಹೇಳಲಾಗುತ್ತದೆ. ಇನ್ನು ಈ ಫೋನ್ Exynos 2600 ಚಿಪ್‌ಸೆಟ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ ಹಾಗೂ 12GB ವರೆಗೆ RAM ಮತ್ತು 512GB ವರೆಗೆ ಸ್ಟೋರೇಜ್ ಆಯ್ಕೆ ಪಡೆದಿರಲಿದೆ. ಉಳಿದಂತೆ 45W ಚಾರ್ಜಿಂಗ್ ಬಲದೊಂದಿಗೆ 4,900 mAh ಬ್ಯಾಟರಿ ಹೊಂದಿರಲಿದೆ ಎನ್ನಲಾಗಿದೆ. ಅಲ್ಲದೇ ಟ್ರಿಪಲ್ ಕ್ಯಾಮೆರಾ ರಚನೆ ಅನ್ನು ಪಡೆದಿರಲಿದ್ದು, ಇದರ ಮುಖ್ಯ ಸೆನ್ಸಾರ್ 50MP ಆಗಿರಲಿದೆ. ಇದರೊಂದಿಗೆ 12MP ಅಲ್ಟ್ರಾವೈಡ್ ಲೆನ್ಸ್ ಮತ್ತು 12MP ಟೆಲಿಫೋಟೋ ಸೆನ್ಸಾರ್ ಕ್ಯಾಮೆರಾ ಅನ್ನು ಒಳಗೊಂಡಿರುತ್ತದೆ ಎಂದು ಹೇಳಲಾಗುತ್ತಿದೆ.
Galaxy S26 Ultra ನಿರೀಕ್ಷಿತ ಫೀಚರ್ಸ್
Samsung Galaxy S26 Ultra ಈ ಮೊಬೈಲ್ 6.9 ಇಂಚಿನ AMOLED 2X ಡಿಸ್‌ಪ್ಲೇ ಪಡೆದಿರಲಿದ್ದು ಇದರ ಜೊತೆಗೆ 120Hz ರಿಫ್ರೆಶ್ ರೇಟ್ ಸಪೋರ್ಟ್ ನೀಡುವ ನಿರೀಕ್ಷೆಯಿದೆ. ಇದು Snapdragon 8 Elite Gen 5 ಚಿಪ್‌ಸೆಟ್ ಪ್ರೊಸೆಸರ್ ಹೊಂದಿರಲಿದ್ದು ಇದಕ್ಕೆ ಅನುಗುಣವಾಗಿ 16GB RAM ಮತ್ತು 1TB ವರೆಗಿನ ಸ್ಟೋರೇಜ್ ಆಯ್ಕೆಗಳನ್ನು ಪಡೆದಿರಲಿದೆ. ಹಾಗೆಯೇ 5,400 mAh ಬ್ಯಾಟರಿ ಬ್ಯಾಕ್‌ಅಪ್ ಹೊಂದಿರಲಿದ್ದು 60W ಚಾರ್ಜಿಂಗ್ ಸಪೋರ್ಟ್ ಒಳಗೊಂಡಿರಲಿದೆ. ಈ ಫೋನಿನ ಪ್ರಾಥಮಿಕ ಕ್ಯಾಮೆರಾವು 200MP ಆಗಿರಲಿದೆ.
Manthesh B
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile