Infinix ಸದ್ದಿಲ್ಲದೇ 2 ಅದ್ದೂರಿಯ 5G ಫೋನ್‌ಗಳನ್ನು ಬಿಡುಗಡೆ ಮಾಡಿದೆ! ಬೆಲೆ ಮತ್ತು ಫೀಚರ್‌ಗಳೇನು ನೀವೇ ನೋಡಿ!

Ravi Rao ಇವರಿಂದ | ಪ್ರಕಟಿಸಲಾಗಿದೆ 06 Feb 2023 13:02 IST
HIGHLIGHTS
  • ಭಾರತದಲ್ಲಿ ತನ್ನ ಸ್ಮಾರ್ಟ್‌ಫೋನ್ ಶ್ರೇಣಿಯನ್ನು ವಿಸ್ತರಿಸುತ್ತಿರುವ ಇನ್‌ಫಿನಿಕ್ಸ್ (Infinix) ಎರಡು ಹೊಸ ಸ್ಮಾರ್ಟ್‌ಫೋನ್‌ಗಳನ್ನು ಅನಾವರಣಗೊಳಿಸಿದೆ.

  • ಕಂಪನಿಯು Infinix Zero 5G 2023 ಮತ್ತು Infinix Zero 5G 2023 Turbo ಅನ್ನು ರೂ 20,000 ಬೆಲೆಯ ಮೂಲಕ ಪರಿಚಯಿಸಿದೆ.

  • ಇನ್‌ಫಿನಿಕ್ಸ್ ದೇಶದಲ್ಲಿ ಫೆಬ್ರವರಿ 11 ರಿಂದ ಫ್ಲಿಪ್‌ಕಾರ್ಟ್ ಮೂಲಕ ಹೊಸ Infinix ಸ್ಮಾರ್ಟ್‌ಫೋನ್‌ಗಳು ಲಭ್ಯವಿರುತ್ತವೆ.

Infinix ಸದ್ದಿಲ್ಲದೇ 2 ಅದ್ದೂರಿಯ 5G ಫೋನ್‌ಗಳನ್ನು ಬಿಡುಗಡೆ ಮಾಡಿದೆ! ಬೆಲೆ ಮತ್ತು ಫೀಚರ್‌ಗಳೇನು ನೀವೇ ನೋಡಿ!
Infinix ಸದ್ದಿಲ್ಲದೇ 2 ಅದ್ದೂರಿಯ 5G ಫೋನ್‌ಗಳನ್ನು ಬಿಡುಗಡೆ ಮಾಡಿದೆ! ಬೆಲೆ ಮತ್ತು ಫೀಚರ್‌ಗಳೇನು ನೀವೇ ನೋಡಿ!

Infinix Zero 5G 2023: ಭಾರತದಲ್ಲಿ ತನ್ನ ಸ್ಮಾರ್ಟ್‌ಫೋನ್ ಶ್ರೇಣಿಯನ್ನು ವಿಸ್ತರಿಸುತ್ತಿರುವ ಇನ್‌ಫಿನಿಕ್ಸ್ (Infinix) ಎರಡು ಹೊಸ ಸ್ಮಾರ್ಟ್‌ಫೋನ್‌ಗಳನ್ನು ಅನಾವರಣಗೊಳಿಸಿದೆ. ಕಂಪನಿಯು Infinix Zero 5G 2023 ಮತ್ತು Infinix Zero 5G 2023 Turbo ಅನ್ನು ರೂ 20,000 ಬೆಲೆಯ ಮೂಲಕ ಪರಿಚಯಿಸಿದೆ. ಈ ಎರಡೂ ಇನ್‌ಫಿನಿಕ್ಸ್ ಸ್ಮಾರ್ಟ್‌ಫೋನ್‌ಗಳು 5,000mAh ಬ್ಯಾಟರಿಗಳು ಮತ್ತು ಮೀಡಿಯಾ ಟೆಕ್ ಡೈಮೆನ್ಸಿಟಿ ಚಿಪ್‌ಸೆಟ್‌ಗಳಿಂದ ಚಾಲಿತವಾಗಿದೆ. ಇನ್‌ಫಿನಿಕ್ಸ್ ದೇಶದಲ್ಲಿ ಫೆಬ್ರವರಿ 11 ರಿಂದ ಫ್ಲಿಪ್‌ಕಾರ್ಟ್ ಮೂಲಕ ಹೊಸ Infinix ಸ್ಮಾರ್ಟ್‌ಫೋನ್‌ಗಳು ಲಭ್ಯವಿರುತ್ತವೆ.

Infinix Zero 5G 2023 ಬೆಲೆ

Infinix Zero 5G 2023 ಒಂದು ಮಾದರಿಯಲ್ಲಿ ಲಭ್ಯವಿದೆ. ಇದು 8GB RAM ಮತ್ತು 128GB ಸ್ಟೋರೇಜ್ ಅನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ ಕೋರಲ್ ಆರೆಂಜ್, ಪರ್ಲಿ ವೈಟ್ ಮತ್ತು ಸಬ್‌ಮರಿನರ್ ಬ್ಲ್ಯಾಕ್ ಕಲರ್‌ಗಳಲ್ಲಿ ಲಭ್ಯವಿದ್ದು ಇದರ ಬೆಲೆ 17,999 ರೂ ಆಗಿದೆ. Infinix Zero 5G 2023 ಗಾಗಿ 1,500 ರೂಪಾಯಿಗಳ ವಿನಿಮಯ ಬೋನಸ್ ಅನ್ನು ಇನ್‌ಫಿನಿಕ್ಸ್ ಒದಗಿಸಿದೆ.

Infinix Zero 5G 2023 Turbo ಬೆಲೆ

Infinix Zero 5G 2023 Turbo 8GB RAM ಹಾಗೂ 256GB ಇಂಟರ್ನಲ್ ಸ್ಟೋರೇಜ್ ಅನ್ನು ನೀಡುತ್ತದೆ. ಈ ಸ್ಮಾರ್ಟ್‌ಫೋನ್‌ನ ಬೆಲೆ 19,999 ರೂ ಆಗಿದೆ. Infinix Zero 5G 2023 ರಂತೆಯೇ Turbo ಮಾದರಿಯು ಕೋರಲ್ ಆರೆಂಜ್, ಪರ್ಲಿ ವೈಟ್ ಮತ್ತು ಸಬ್‌ಮೆರಿನರ್ ಬ್ಲಾಕ್ ಕಲರ್‌ಗಳಲ್ಲಿ ಲಭ್ಯವಿದೆ. Infinix Zero 5G 2023 Turbo ಗಾಗಿ ವಿನಿಮಯ ಬೋನಸ್ 2,000 ರೂ ವರೆಗೆ ರಿಯಾಯಿತಿಯನ್ನು ನೀಡಲಾಗುತ್ತದೆ.

Infinix Zero 5G 2023 ಫೀಚರ್‌ಗಳು

Infinix Zero 5G 2023 ಮತ್ತು Infinix Zero 5G 2023 Turbo ಆಂಡ್ರಾಯ್ಡ್ 12 ಆಧಾರಿತ XOS 12 ನಲ್ಲಿ ರನ್ ಆಗುತ್ತವೆ. 6.78 ಇಂಚಿನ ಪೂರ್ಣ HD+ (1,080x2,460 ಪಿಕ್ಸೆಲ್‌ಗಳು) 120Hz ರಿಫ್ರೆಶ್ ದರದೊಂದಿಗೆ ಡಿಸ್‌ಪ್ಲೇಯನ್ನು ಈ ಡಿವೈಸ್‌ಗಳಲ್ಲಿ ಸೇರಿಸಲಾಗಿದೆ. ಇವುಗಳ ಡಿಸ್‌ಪ್ಲೇ 360Hz ಟಚ್ ಸ್ಯಾಂಪ್ಲಿಂಗ್ ದರ ಮತ್ತು 100% RGB ಕಲರ್ ಕವರೇಜ್‌ ಅನ್ನು ಹೊಂದಿದೆ. MediaTek ಡೈಮೆನ್ಸಿಟಿ 920 5G SoC Infinix Zero 5G 2023 ಅನ್ನು ಪವರ್ ಮಾಡುತ್ತದೆ ಮತ್ತು Infinix Zero 5G 2023 Turbo MediaTek ಟೆಕ್ ಡೈಮೆನ್ಸಿಟಿ 1080 5G ಚಿಪ್‌ಸೆಟ್ ಅನ್ನು ಬಳಸುತ್ತದೆ. ಈ ಸ್ಮಾರ್ಟ್‌ಫೋನ್‌ಗಳು 8GB RAM ಅನ್ನು ಹೊಂದಿವೆ ಮತ್ತು 5GB ವರೆಗೆ ವರ್ಚುವಲ್ RAM ಅನ್ನು ಬೆಂಬಲಿಸತ್ತವೆ.‌

ಕ್ಯಾಮೆರಾ ವಿಭಾಗದಲ್ಲಿ ಎರಡೂ ಡಿವೈಸ್‌ಗಳು ಹಿಂಭಾಗದಲ್ಲಿ ಮೂರು ಕ್ಯಾಮೆರಾ ಸೆಟಪ್ ಅನ್ನು ಹೊಂದಿವೆ. ಇದು ಎರಡು 2MP ಸೆನ್ಸರ್ಗಳೊಂದಿಗೆ ಜೋಡಿಯಾಗಿರುವ 50MP ಮುಖ್ಯ ಸೆನ್ಸರ್ ಅನ್ನು ಒಳಗೊಂಡಿದೆ. ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ 16MP ಫ್ರಂಟ್ ಡುಯಲ್ ಕ್ಯಾಮೆರಾದೊಂದಿಗೆ ಬರುತ್ತದೆ. ಕಡಿಮೆ ಬೆಳಕಿನಲ್ಲಿ (Low Light) ಫೋಟೋಗಳನ್ನು ತೆಗೆಯುವುದಕ್ಕಾಗಿ Infinix Zero 5G 2023 ಮತ್ತು Infinix Zero 5G 2023 Turbo ಎರಡೂ ಕ್ವಾಡ್ ರಿಯರ್ ಫ್ಲ್ಯಾಷ್ ಮತ್ತು ಸೂಪರ್ ನೈಟ್ ಮೋಡ್ ಅನ್ನು ಹೊಂದಿವೆ. ಈ ಸ್ಮಾರ್ಟ್‌ಫೋನ್‌ಗಳು 33W ಕ್ವಿಕ್ ಚಾರ್ಜಿಂಗ್‌ನೊಂದಿಗೆ 5,000mAh ಬ್ಯಾಟರಿಯಿಂದ ಬೆಂಬಲಿತವಾಗಿದೆ.

ಕನ್ನಡದಲ್ಲಿ ಹೆಚ್ಚಿನ ತಂತ್ರಜ್ಞಾನ ಸುದ್ದಿಗಳು, ಪ್ರಾಡಕ್ಟ್ ವಿಮರ್ಶೆಗಳು, ವೈಜ್ಞಾನಿಕ ತಂತ್ರಜ್ಞಾನದ ಫೀಚರ್ಗಳು ಮತ್ತು ಅಪ್ಡೇಟ್ಗಳಿಗಾಗಿ Digit.in ಓದುತ್ತಿರಿ ಅಥವಾ Google News ಪೇಜ್ ನೋಡಿ

Ravi Rao
Ravi Rao

Email Email Ravi Rao

Follow Us Facebook Logo Facebook Logo

About Me: Ravi Rao is an Indian technology journalist who has been covering consumer technology since 2016. He is a Senior Editor for Kannada at Digit.in Read More

WEB TITLE

Infinix launches 2 new phones with mediatek processor and 120hz display

Advertisements

ಟ್ರೆಂಡಿಂಗ್ ಲೇಖನಗಳು

Advertisements

ಇತ್ತೀಚಿನ ಲೇಖನಗಳು ಎಲ್ಲವನ್ನು ವೀಕ್ಷಿಸಿ

Advertisements

VISUAL STORY ಎಲ್ಲವನ್ನು ವೀಕ್ಷಿಸಿ