iQOO 12 5G ಸ್ಮಾರ್ಟ್ಫೋನ್ ಮೇಲೆ ಬರೋಬ್ಬರಿ 4000 ರೂಗಳ ಡಿಸ್ಕೌಂಟ್! ಹೊಸ ಬೆಲೆ ಮತ್ತು ಫೀಚರ್ಗಳೇನು?

HIGHLIGHTS

iQOO 12 5G ಸ್ಮಾರ್ಟ್ಫೋನ್ ಬರೋಬ್ಬರಿ 4000 ರೂಗಳ ಡಿಸ್ಕೌಂಟ್ ನೀಡುತ್ತಿದೆ.

iQOO 12 5G ಸ್ಮಾರ್ಟ್ಫೋನ್ Snapdragon 8 Gen 3 ಪ್ರೊಸೆಸರ್ನೊಂದಿಗೆ ಬರುತ್ತದೆ.

iQOO 12 5G ಸ್ಮಾರ್ಟ್ಫೋನ್ ಹಿಂಭಾಗದಲ್ಲಿ 50MP + 64MP + 50MP ಕ್ಯಾಮೆರಾದೊಂದಿಗೆ ಬರುತ್ತದೆ.

iQOO 12 5G ಸ್ಮಾರ್ಟ್ಫೋನ್ ಮೇಲೆ ಬರೋಬ್ಬರಿ 4000 ರೂಗಳ ಡಿಸ್ಕೌಂಟ್! ಹೊಸ ಬೆಲೆ ಮತ್ತು ಫೀಚರ್ಗಳೇನು?

iQOO 12 5G Price Cut in India: ಭಾರತದಲ್ಲಿ ಚೀನಾದ ಸ್ಮಾರ್ಟ್ಫೋನ್ ಬ್ರಾಂಡ್ iQOO 12 5G ಸ್ಮಾರ್ಟ್ಫೋನ್ ತನ್ನ ಬೆಲೆಯಲ್ಲಿ ಬರೋಬ್ಬರಿ 4000 ರೂಗಳ ಬೆಲೆಯನ್ನು ಕಳೆದುಕೊಂಡಿದ್ದು ಈಗ ಅತಿ ಕಡಿಮೆ ಬೆಲೆಗೆ ಖರೀದಿಸುವ ಅವಕಾಶವಿದೆ. ಸ್ಮಾರ್ಟ್ಫೋನ್ ಒಟ್ಟು ಎರಡು RAM ರೂಪಾಂತಗಳಲ್ಲಿ ಬರುವ ಈ ಲೇಟೆಸ್ಟ್ ಸ್ಮಾರ್ಟ್ಫೋನ್ ಪ್ರಸ್ತುತ ಅಮೆಜಾನ್‌ನಲ್ಲಿ ಆರಂಭಿಕ ₹45,999 ರೂಗಳಿಗೆ ಪಟ್ಟಿ ಮಾಡಲಾಗಿದೆ. ಉಚಿತ ಕೂಪನ್ ಕೋಡ್ ಮತ್ತು ಬ್ಯಾಂಕ್ ಆಫರ್ ಜೊತೆಗೆ ಬರೋಬ್ಬರಿ 4000 ರೂಗಳ ಡಿಸ್ಕೌಂಟ್ ಪಡೆಯಬಹುದು.

Digit.in Survey
✅ Thank you for completing the survey!

ಭಾರತದಲ್ಲಿ iQOO 12 5G ಆಫರ್ ಬೆಲೆ

ಮೊದಲಿಗೆ ಈ ಸ್ಮಾರ್ಟ್ಫೋನ್ ಆಫರ್ ಬೆಲೆಯನ್ನು ನೋಡುವುದಾದರೆ ಆರಂಭಿಕ 12GB RAM ಮತ್ತು 256GB ಸ್ಟೋರೇಜ್ ₹45,999 ರೂಗಳಿಗೆ ಮತ್ತೊಂದು ಇದರ 16GB RAM ಮತ್ತು 512GB ಸ್ಟೋರೇಜ್ ₹50,999 ರೂಗಳಿಗೆ ಅಮೆಜಾನ್‌ನಲ್ಲಿ ಪಟ್ಟಿ ಮಾಡಲಾಗಿದೆ. ಆದರೆ ಆಸಕ್ತ ಬಳಕೆದಾರರು ಇದನ್ನು HDFC ಮತ್ತು ICICI ಬ್ಯಾಂಕ್ಗಳ ಕಾರ್ಡ್ ಬಳಸಿಕೊಂಡು ಸುಮಾರು 2000 ರೂಗಳ ಹೆಚ್ಚುವರಿ ಡಿಸ್ಕೌಂಟ್ ಮತ್ತು ಉಚಿತ ಕೂಪನ್ 2000 ರೂಗಳನ್ನು ಸಹ ಪಡೆಯುವ ಮೂಲಕ ಆರಂಭಿಕ ರೂಪಾಂತರವನ್ನು ಕೇವಲ 41,999 ರೂಗಳಿಗೆ ಈ ಸ್ಮಾರ್ಟ್ಫೋನ್‌ ಖರೀದಿಸಬಹುದು.

iQOO 12 5G Price Cut in India

ಅಲ್ಲದೆ ನೀವು ಈ ಫೋನ್ ಮೇಲೆ ಅಮೆಜಾನ್ ಹೆಚ್ಚುವರಿಯಾಗಿ ವಿನಿಮಯ ಕೊಡುಗೆಯನ್ನು ಸಹ (Exchange Offer) ಪಡೆಯಬಹುದು. ಈ iQOO 12 5G ಸ್ಮಾರ್ಟ್‌ಫೋನ್ ಖರೀದಿಸಲು ನೀವು ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಇದರೊಂದಿಗೆ ವಿನಿಮಯ ಮಾಡುವುದರೊಂದಿಗೆ ಸುಮಾರು 32,500 ರೂಗಳ ವರೆಗೆ ಡಿಸ್ಕೌಂಟ್ ಪಡೆಯಬಹುದು. ಆದರೆ ಈ ಡೀಲ್ ಬೆಲೆಯನ್ನು ನಿಮ್ಮ ಹಳೆ ಫೋನಿನ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೀವು ನೆನಪಿನಲ್ಲಿಡಿ.

Also Read: BSNL Dhamaka: 900 ರೂಗಳಿಗಿಂತ ಕಡಿಮೆ ಬೆಲೆಗೆ ಬರೋಬ್ಬರಿ 6 ತಿಂಗಳ ವ್ಯಾಲಿಡಿಟಿ ನೀಡುವ ಜಬರ್ದಸ್ತ್ ಪ್ಲಾನ್!

ಭಾರತದಲ್ಲಿ iQOO 12 5G ಫೀಚರ್ ಮತ್ತು ವಿಶೇಷಣಗಳೇನು?

ಸೋರಿಕೆಯಾದ ವರದಿಗಳ ಪ್ರಕಾರ ಈ iQOO 12 5G ಫೋನ್‌ನಲ್ಲಿ 6.7 ಇಂಚಿನ AMOLED ಡಿಸ್ಪ್ಲೇಯನ್ನು ಪಡೆಯಬಹುದು. ಇದು 1.5K ರೆಸಲ್ಯೂಶನ್ ಮತ್ತು 144Hz ರಿಫ್ರೆಶ್ ದರ ಅನ್ನು ಬೆಂಬಲಿಸುತ್ತದೆ. ಸ್ಮಾರ್ಟ್ಫೋನ್ 16GB RAM ಆಯ್ಕೆಯನ್ನು ಹೊಂದಿರುತ್ತದೆ. ಈ ಹ್ಯಾಂಡ್‌ಸೆಟ್ Android 14 ಆಧಾರಿತ Funtouch OS 14 ಸ್ಕಿನ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ ಬರುತ್ತದೆ.

iQOO 12 5G Price Cut in India

ಇದು 50MP OmniVision OV50H ಪ್ರೈಮರಿ ಸೆನ್ಸರ್ ಅನ್ನು OIS ಬೆಂಬಲದೊಂದಿಗೆ ಹೊಂದುವ ನಿರೀಕ್ಷೆಗಳಿವೆ. ಇದಲ್ಲದೇ 50MP Samsung JN1 ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಮತ್ತು 64MP ಟೆಲಿಫೋಟೋ ಲೆನ್ಸ್ ಅನ್ನು 100X ಜೂಮ್ ಸಹ ನಿರೀಕ್ಷಿಸಬಹುದು. ಸ್ಮಾರ್ಟ್ಫೋನ್ ಪವರ್ ಮಾಡಲು 5000mAh ಬ್ಯಾಟರಿಯನ್ನು ಒದಗಿಸಬಹುದು. ವರದಿಗಳನ್ನು ನಂಬುವುದಾದರೆ ಇದು 120W ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲವನ್ನು ಹೊಂದಿರುತ್ತದೆ. ಕಂಪನಿಯು ಈ ಹ್ಯಾಂಡ್‌ಸೆಟ್‌ನಲ್ಲಿ Q1 ಇ-ಸ್ಪೋರ್ಟ್ ಚಿಪ್ ಅನ್ನು ಒದಗಿಸಬಹುದು ಇದು ಗೇಮಿಂಗ್ ಅನುಭವವನ್ನು ಸುಧಾರಿಸುತ್ತದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo