BSNL Dhamaka: ನೀವು ಬಿಎಸ್ಎನ್ಎಲ್ (BSNL) ಸುಮಾರು 900 ರೂಗಳೊಳಗೆ ಬರೋಬ್ಬರಿ 180 ದಿನಗಳ ಅಂದ್ರೆ ಸುಮಾರು 6 ತಿಂಗಳ ವ್ಯಾಲಿಡಿಟಿಯೊಂದಿಗೆ ಸಿಕ್ಕಾಪಟ್ಟೆ ಪ್ರಯೋಜನದ ರಿಚಾರ್ಜ್ ಪ್ಲಾನ್ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. ಈ ಜನಪ್ರಿಯ ದೂರಸಂಪರ್ಕ ಕಂಪನಿ ಬಿಎಸ್ಎನ್ಎಲ್ 897 ಅನಿಯಮಿತ ಕರೆ ಮತ್ತು ಡೇಟಾವನ್ನು ವಿಧಿಸುವ ಯೋಜನೆ ಸುಮಾರು 6 ತಿಂಗಳುಗಳು ಮಾನ್ಯವಾಗಿದೆ. ಬಿಎಸ್ಎನ್ಎಲ್ ತನ್ನ ಬಳಕೆದಾರರಿಗಾಗಿ ಅನೇಕ ಕಡಿಮೆ ಬೆಲೆಯ ರಿಚಾರ್ಜ್ ಯೋಜನೆಗಳನ್ನು ನೀಡುತ್ತದೆ. ಇದರಲ್ಲಿ ಅನಿಯಮಿತ ಕರೆಗಳು ಮತ್ತು ದೀರ್ಘ ಮಾನ್ಯತೆಯೊಂದಿಗೆ ಡೇಟಾದಂತಹ ಅನುಕೂಲಗಳನ್ನು ನೀಡುತ್ತದೆ.
Survey
✅ Thank you for completing the survey!
180 ದಿನಗಳ ವ್ಯಾಲಿಡಿಟಿ ನೀಡುವ BSNL Dhamaka ಪ್ಲಾನ್:
ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ಹೊರತುಪಡಿಸಿ ಎಲ್ಲಾ ಟೆಲಿಕಾಂ ಕಂಪನಿಗಳು ಕಳೆದ ವರ್ಷ ಜುಲೈನಲ್ಲಿ ತಮ್ಮ ರೀಚಾರ್ಜ್ ಯೋಜನೆಗಳನ್ನು ಪರಿಷ್ಕರಿಸಿ ಬೆಲೆ ಎಚ್ಚಿಸಿದವು ಇದರಿಂದಾಗಿ ಬಳಕೆದಾರರು ಈಗ ಮೊದಲಿಗಿಂತ ಹೆಚ್ಚು ಖರ್ಚು ಮಾಡಬೇಕಾಗಿದೆ. BSNL 180 ದಿನಗಳ ಅಂದರೆ 6 ತಿಂಗಳ ವ್ಯಾಲಿಡಿಟಿಯೊಂದಿಗೆ ಅತಿ ಕಡಿಮೆ ಬೆಲೆಯ ರೀಚಾರ್ಜ್ ಯೋಜನೆಯನ್ನು ಹೊಂದಿದೆ. ಇದರಲ್ಲಿ ಬಳಕೆದಾರರು ಅನಿಯಮಿತ ಕರೆ, ಡೇಟಾದಂತಹ ಪ್ರಯೋಜನಗಳನ್ನು ಪಡೆಯುತ್ತಾರೆ. ಭಾರತ್ ಸಂಚಾರ್ ನಿಗಮ್ ಲಿಮಿಟೆಡ್‌ನ ಈ ಅತಿ ಕಡಿಮೆ ಬೆಲೆಯ ರೀಚಾರ್ಜ್ ಯೋಜನೆಯು ರೂ 897 ಕ್ಕೆ ಬರುತ್ತದೆ.
ಈ ಯೋಜನೆಯ ಮೂಲಕ ಬಳಕೆದಾರರು 6 ತಿಂಗಳವರೆಗೆ ಒಳಬರುವ ಮತ್ತು ಹೊರಹೋಗುವ ಕರೆಗಳ ಜೊತೆಗೆ ಡೇಟಾ ಮತ್ತು SMS ಪ್ರಯೋಜನವನ್ನು ಪಡೆಯುತ್ತಾರೆ. ಬಳಕೆದಾರರು ದೆಹಲಿ ಮತ್ತು ಮುಂಬೈನಲ್ಲಿ MTNL ನೆಟ್‌ವರ್ಕ್‌ನಲ್ಲಿ ಉಚಿತ ಕರೆಯನ್ನು ಸಹ ಪಡೆಯಬಹುದು. ಇದಲ್ಲದೆ ಈ ರೀಚಾರ್ಜ್ ಯೋಜನೆಯಲ್ಲಿ ಬಳಕೆದಾರರು ಯಾವುದೇ ದೈನಂದಿನ ಮಿತಿಯಿಲ್ಲದೆ 90GB ಡೇಟಾವನ್ನು ಪಡೆಯುತ್ತಾರೆ.
ಡೇಟಾ ಖಾಲಿಯಾದ ನಂತರ ಬಳಕೆದಾರರು 40kbps ವೇಗದಲ್ಲಿ ಅನಿಯಮಿತ ಇಂಟರ್ನೆಟ್‌ನ ಪ್ರಯೋಜನವನ್ನು ಪಡೆಯುತ್ತಾರೆ. BSNL ಈ ಅತಿ ಕಡಿಮೆ ಬೆಲೆಯ ರೀಚಾರ್ಜ್ ಯೋಜನೆಯಲ್ಲಿ ಲಭ್ಯವಿರುವ ಇತರ ಪ್ರಯೋಜನಗಳ ಕುರಿತು ಮಾತನಾಡುವುದಾದರೆ ಬಳಕೆದಾರರು ಪ್ರತಿದಿನ 100 ಉಚಿತ SMS ಪ್ರಯೋಜನವನ್ನು ಪಡೆಯುತ್ತಾರೆ.
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile