ZOHO Pay ಅಪ್ಲಿಕೇಶನ್ ಶೀಘ್ರದಲ್ಲೇ ಮಾರುಕಟ್ಟೆಗೆ ಕಾಲಿಡಲಿದೆ! ಹಾಗಾದ್ರೆ ಇದರ ಒಂದಿಷ್ಟು ಮಾಹಿತಿ ತಿಳಿಯಿರಿ

HIGHLIGHTS

ಜೋಹೋ ಕಾರ್ಪೊರೇಷನ್ ಈಗ ಗ್ರಾಹಕರಿಗಾಗಿ ಪಾವತಿ ಫಿನ್ಟೆಕ್ ವಲಯಕ್ಕೆ ಕಾಲಿಡುತ್ತಿದೆ.

ಹೊಸ ಗ್ರಾಹಕ ಪಾವತಿ ಅಪ್ಲಿಕೇಶನ್ ಜೋಹೋ ಪೇ ಎಂಬ ಹೊಸ UPI ಅಪ್ಲಿಕೇಶನ್ ಪರಿಚಯಿಸಲು ಸಜ್ಜು.

ಪ್ರಸ್ತುತ ಜೋಹೋ ಪೇ ಆಂತರಿಕ ಪರೀಕ್ಷೆಯ ಮಟ್ಟದಲ್ಲಿದ್ದು ಮುಂದಿನ ಕೆಲವೇ ತಿಂಗಳುಗಳಲ್ಲಿದೆ.

ZOHO Pay ಅಪ್ಲಿಕೇಶನ್ ಶೀಘ್ರದಲ್ಲೇ ಮಾರುಕಟ್ಟೆಗೆ ಕಾಲಿಡಲಿದೆ! ಹಾಗಾದ್ರೆ ಇದರ ಒಂದಿಷ್ಟು ಮಾಹಿತಿ ತಿಳಿಯಿರಿ

ZOHO Pay App: ಸಾಫ್ಟ್ವೇರ್ ಕ್ಷೇತ್ರದಲ್ಲಿ ಇತ್ತೀಚಿಗೆ ಸಿಕ್ಕಾಪಟ್ಟೆ ಸಡ್ಡು ಮಾಡುತ್ತಿರುವ ಜೋಹೋ ಕಾರ್ಪೊರೇಷನ್ ಈಗ ಗ್ರಾಹಕರಿಗಾಗಿ ಪಾವತಿ ಫಿನ್ಟೆಕ್ ವಲಯಕ್ಕೆ ಕಾಲಿಡುತ್ತಿದೆ. ತನ್ನ ಕಂಪನಿಯು ಹೊಸ ಗ್ರಾಹಕ ಪಾವತಿ ಅಪ್ಲಿಕೇಶನ್ ಆದ ‘ಜೋಹೋ ಪೇ’ (ZOHO Pay) ಎಂಬ ಹೊಸ UPI ಅಳವಡಿತ ಅಪ್ಲಿಕೇಶನ್ ಪರಿಚಯಿಸಲು ಸಿದ್ಧತೆ ನಡೆಸುತ್ತಿದೆ. ಈ ಹೊಸ ಆಪ್ ಒಂದಿಷ್ಟು ಇಂಟ್ರೆಸ್ಟಿಂಗ್ ಫೀಚರ್ಗಳೊಂದಿಗೆ ಬರಲಿದ್ದು ಪ್ರಸ್ತುತ ಈ ಜೋಹೋ ಪೇ ಅಪ್ಲಿಕೇಶನ್ ಈಗಾಗಲೇ ಮಾರುಕಟ್ಟೆಯಲ್ಲಿ ಬಳಕೆಯಲ್ಲಿರುವ ಗೂಗಲ್ ಪೇ, ಫೋನ್‌ಪೇ ಮತ್ತು ಪೇಟಿಎಂ ಕಂಪನಿಗಳಿಗೆ ನೇರ ಸ್ಪರ್ಧೆ ನೀಡಲು ಮುಂದಾಗಿದೆ. ಪ್ರಸ್ತುತ ಜೋಹೋ ಪೇ ಆಂತರಿಕ ಪರೀಕ್ಷೆಯ ಮಟ್ಟದಲ್ಲಿದ್ದು ಮುಂದಿನ ಕೆಲವೇ ತಿಂಗಳುಗಳಲ್ಲಿ ಇದನ್ನು ದೇಶಾದ್ಯಂತ ಹಂತ ಹಂತವಾಗಿ ಬಿಡುಗಡೆ ಮಾಡಲಾಗುತ್ತದೆ.

Digit.in Survey
✅ Thank you for completing the survey!

ಮುಂಬರಲಿರುವ ZOHO Pay ನಿರೀಕ್ಷಿತ ಫೀಚರ್ಗಳೇನು?

ಈ ಜೋಹೋ ಪೇ ಅಪ್ಲಿಕೇಶನ್ ಮುಖ್ಯ ವಿಶೇಷತೆಯೆಂದರೆ ಇದು ಜೋಹೋ ಈಗಾಗಲೇ ಲಭ್ಯವಿರುವ ಮೆಸೇಜಿಂಗ್ ಅಪ್ಲಿಕೇಶನ್ ಆದ ‘ಅರಟ್ಟೈ’ (Arattai) ಜೊತೆ ಸಂಪೂರ್ಣವಾಗಿ ವಿಲೀನವಾಗುವುದಿಲ್ಲ. ಜೋಹೋ ಪೇ ಅನ್ನು ಪ್ರತ್ಯೇಕ ಅಪ್ಲಿಕೇಶನ್ ಆಗಿಯೂ ಬಳಸಬಹುದು. ಇದರರ್ಥ ಬಳಕೆದಾರರು ಚಾಟ್ ಮಾಡುತ್ತಿರುವಾಗಲೇ ಹಣ ಕಳುಹಿಸಲು, ಹಣ ಪಡೆಯಲು, ಬಿಲ್ ಪಾವತಿಸಲು ಅಥವಾ ಬೇರೆ ಯಾವುದೇ ಸುರಕ್ಷಿತ ಹಣಕಾಸು ವ್ಯವಹಾರಗಳನ್ನು ಮಾಡಲು ಸಾಧ್ಯವಾಗುತ್ತದೆ. ಈ ಸುಲಭ ಮತ್ತು ತಡೆರಹಿತ ಪಾವತಿ ಅನುಭವ ನೀಡುವ ಮೂಲಕ ಅರಟ್ಟೈ ಅಪ್ಲಿಕೇಶನ್ ಅನ್ನು ‘ಸೂಪರ್ ಅಪ್ಲಿಕೇಶನ್’ ಆಗಿ ಪರಿವರ್ತಿಸಲು ಜೋಹೋ ಪ್ರಯತ್ನಿಸುತ್ತಿದೆ.

ZOHO Pay App

ZOHO ಪೈಪೋಟಿ ಮತ್ತು ‘ಸ್ವದೇಶಿ’ ತಂತ್ರ:

ಜೋಹೋ ಪೇ ದೇಶದ ಅತ್ಯಂತ ಜನಪ್ರಿಯ ಮತ್ತು ಪೈಪೋಟಿಯಿಂದ ಕೂಡಿದ ಡಿಜಿಟಲ್ ಪಾವತಿ ಮಾರುಕಟ್ಟೆಯನ್ನು ಪ್ರವೇಶಿಸುತ್ತಿದೆ. ಈ ಯುಪಿಐ (UPI) ಆಧಾರಿತ ಪಾವತಿಗೆ ಬಲಿಷ್ಠ ಆಟಗಾರರಿದ್ದಾರೆ. ಜೋಹೋ ಕಂಪನಿಯು ತನ್ನ ಬಳಕೆದಾರರಲ್ಲಿ ಇರುವ ವಿಶ್ವಾಸ, ಹಾಗೂ ಮೇಡ್ ಇನ್ ಇಂಡಿಯಾ ತಂತ್ರಜ್ಞಾನ ಎಂಬ ಹೆಗ್ಗಳಿಕೆಯನ್ನು ನೆಚ್ಚಿಕೊಂಡಿದೆ. ಜೋಹೋದ ಮೆಸೇಜಿಂಗ್ ಅಪ್ಲಿಕೇಶನ್ ಆದ ಅರಟ್ಟೈ ಕೂಡ ‘ಸ್ವದೇಶಿ’ ಅಪ್ಲಿಕೇಶನ್ ಎಂಬ ಕಾರಣಕ್ಕೆ ಜನಪ್ರಿಯತೆ ಗಳಿಸಿದೆ. ಜೋಹೋ ಪೇ ವ್ಯವಹಾರಗಳಿಗೆ POS (ಪಾಯಿಂಟ್-ಆಫ್-ಸೇಲ್) ಸಾಧನಗಳು ಮತ್ತು ಇತರ ಹಣಕಾಸು ಪರಿಹಾರಗಳನ್ನು ನೀಡಲಾಗಿದೆ ಕಾರಣ ಆ ಮಾರುಕಟ್ಟೆಯ ಸಂಪರ್ಕವನ್ನು ಸಹ ಗ್ರಾಹಕ ಬಳಸುವ ಯೋಜನೆ ಹೊಂದಿದೆ.

Also Read: 43 Inch Smart TV: ಫ್ಲಿಪ್‌ಕಾರ್ಟ್‌ನಲ್ಲಿ ಹೊಸ QLED ಗೂಗಲ್ ಸ್ಮಾರ್ಟ್ ಟಿವಿ ಕೈಗೆಟಕುವ ಬೆಲೆಗೆ ಲಭ್ಯ!

ಜೋಹೋ ಸಂಸ್ಥೆಯ ದೀರ್ಘಕಾಲೀನ ಹಣಕಾಸು ಯೋಜನೆ:

ಜೋಹೋ ಪೇ ಅಪ್ಲಿಕೇಶನ್ ಬಿಡುಗಡೆಯು ಒಂದು ಹೊಸ ಪಾವತಿ ಸಾಧನವಲ್ಲ ಇದು ಜೋಹೋ ಸಂಸ್ಥೆಯು ಒಂದು ಸಮಗ್ರ ಹಣಕಾಸು ತಂತ್ರಜ್ಞಾನ ವ್ಯವಸ್ಥೆ ಕಟ್ಟುವ ದೊಡ್ಡ ಯೋಜನೆ ಮೊದಲ ಹೆಜ್ಜೆ. ‘ಜೋಹೋ ಬುಕ್ಸ್’ ಇಂತಹ ಸಾಫ್ಟ್‌ವೇರ್‌ಗಳ ಮೂಲಕ ಹಣಕಾಸು ಮತ್ತು ಅಕೌಂಟಿಂಗ್ ವ್ಯವಹಾರಗಳನ್ನು ನಿರ್ವಹಿಸುವ ಸೌಲಭ್ಯವನ್ನು ಸೇರಿಸಿ ನೀಡುತ್ತಿರುವ ಜೋಹೋ, ಈಗ ಗ್ರಾಹಕರ ಪಾವತಿಗಳನ್ನು ನೇರವಾಗಿ ವ್ಯಾಪಾರ ನಿರ್ವಹಣಾ ವ್ಯವಸ್ಥೆಯು ಜೋಡಿಸುವ ಗುರಿಯನ್ನು ಹೊಂದಿದೆ. ಇದರಿಂದ ಸಣ್ಣ ವ್ಯಾಪಾರಿಗಳ ಕೆಲಸ ಸುಲಭವಾಗುತ್ತದೆ. ಪಾವತಿಯ ನಂತರ ಜೋಹೋ ಕ್ರಮೇಣ ಸಾಲ ನೀಡಿಕೆ, ವಿಮೆ ಮತ್ತು ಸಂಪತ್ತು ನಿರ್ವಹಣೆ ಮುಂತಾದ ಇತರ ಹಣಕಾಸು ಸೇವೆಗಳನ್ನು ವಿಸ್ತರಿಸುತ್ತದೆ ಆಲೋಚನೆಯನ್ನು ಹೊಂದಿದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo