TRAI Alert: ಅಪ್ಪಿತಪ್ಪಿ ನಿಮಗೂ ಈ ರೀತಿಯ ಕರೆಗಳು ಬಂದ್ರೆ ತಕ್ಷಣ ಎಚ್ಚೆತ್ತುಕೊಳ್ಳಿ, ಸರ್ಕಾರದಿಂದ ಹೈ ಅಲರ್ಟ್ ಜಾರಿ!

TRAI Alert: ಅಪ್ಪಿತಪ್ಪಿ ನಿಮಗೂ ಈ ರೀತಿಯ ಕರೆಗಳು ಬಂದ್ರೆ ತಕ್ಷಣ ಎಚ್ಚೆತ್ತುಕೊಳ್ಳಿ, ಸರ್ಕಾರದಿಂದ ಹೈ ಅಲರ್ಟ್ ಜಾರಿ!

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ಮೊಬೈಲ್ ಫೋನ್ ಬಳಕೆದಾರರಿಗೆ ಮೋಸದ ಕರೆಗಳ ವಿರುದ್ಧ ಎಚ್ಚರಿಕೆ ನೀಡಿದೆ. ಈ ವಂಚಕರು ಮೊಬೈಲ್ ಸಂಖ್ಯೆ ಕಡಿತಗೊಳಿಸುವುದಾಗಿ ಬೆದರಿಕೆ ಹಾಕುವ ಮೂಲಕ ಬಳಕೆದಾರರನ್ನು ಮೋಸಗೊಳಿಸಲು ಕರೆ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ. ಅಪ್ಪಿತಪ್ಪಿ ನಿಮಗೂ ನಿಮ್ಮ ಮೊಬೈಲ್ ಬ್ಲಾಕ್ ಮಾಡುವ ಬಗ್ಗೆ ಕರೆಗಳು ಬಂದ್ರೆ ತಕ್ಷಣ ಎಚ್ಚೆತ್ತುಕೊಳ್ಳಿ (TRAI Alert) ಯಾಕೆಂದರೆ ಇಂದೊಂದು ವಂಚನೆಯ ಕರೆಯಾಗಿದ್ದು ಸರ್ಕಾರದಿಂದ ಇದರ ಬಗ್ಗೆ ಹೈ ಅಲರ್ಟ್ ಜಾರಿಯಾಗಿದೆ. ಯಾವುದೇ ಟೆಲಿಕಾಂ ಗ್ರಾಹಕರ ಯಾವುದೇ ಮೊಬೈಲ್ ಸಂಖ್ಯೆಯನ್ನು ನಿರ್ಬಂಧಿಸಲು ಅಥವಾ ಸಂಪರ್ಕ ಕಡಿತಗೊಳಿಸಲು ತಾನು ಜವಾಬ್ದಾರನಾಗಿರುವುದಿಲ್ಲ ಎಂದು ಟೆಲಿಕಾಂ ನಿಯಂತ್ರಣ ಸಂಸ್ಥೆ ದೃಢಪಡಿಸಿದೆ.

Also Read: 12GB RAM ಮತ್ತು 32MP ಸೆಲ್ಫಿ ಕ್ಯಾಮೆರಾದ Motorola Edge 50 Fusion ಮೊದಲ ಮಾರಾಟ ಶುರು!

ಅಪ್ಪಿತಪ್ಪಿ ನಿಮಗೂ ಈ ರೀತಿಯ ಕರೆಗಳು ಬಂದ್ರೆ ತಕ್ಷಣ ಎಚ್ಚೆತ್ತುಕೊಳ್ಳಿ ಎಂದ TRAI Alert

ಪತ್ರಿಕಾ ಟಿಪ್ಪಣಿಯಲ್ಲಿ TRAI ಕಾರ್ಯದರ್ಶಿಯಾಗಿರುವ ಶ್ರೀ ವಿ ರಘುನಂದನ್ (Mr. V. Raghunandan) ಮಾತನಾಡಿದ್ದು ಕೆಲವು ಕಂಪನಿಗಳು/ಏಜೆನ್ಸಿಗಳು/ವ್ಯಕ್ತಿಗಳು ಸಾರ್ವಜನಿಕರು / ಗ್ರಾಹಕರನ್ನು ಮೋಸದಿಂದ ಕೇಳುತ್ತಿದ್ದಾರೆ ಎಂದು ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರದ ಗಮನಕ್ಕೆ ತರಲಾಗಿದೆ. TRAI ನಿಂದ ಕರೆ ಮಾಡುವುದು ಮತ್ತು ಸಾರ್ವಜನಿಕರ / ಗ್ರಾಹಕರ ಮೊಬೈಲ್ ಸಂಖ್ಯೆಗಳನ್ನು ಅಪೇಕ್ಷಿಸದ ಸಂದೇಶಗಳನ್ನು ಕಳುಹಿಸಲು ಸಂಖ್ಯೆಗಳನ್ನು ಬಳಸುವುದರಿಂದ ಸಂಪರ್ಕ ಕಡಿತಗೊಳಿಸಲಾಗುತ್ತದೆ ಎಂಬ ಕರೆಗಳು ಬರುತ್ತಿದ್ದು ಒಂದು ವೇಳೆ ಪಾವತಿ ಮಾಡದಿದ್ದರೆ ನಿಮ್ಮ ನಂಬರ್ ಕೆಲವೇ ಗಂಟೆ ಅಥವಾ ದಿನಗಳಲ್ಲಿ ಬ್ಲಾಕ್ ಮಾಡುವುದಾಗಿ ಕರೆಯಲ್ಲಿ ಬಳಕೆದಾರರಿಗೆ ಧಮ್ಕಿ ನೀಡಲಾಗುತ್ತಿದೆ ಎಂದಿದ್ದಾರೆ.

TRAI Alert: warns users against fraud calls threatening mobile number block - Digit Kannada
TRAI Alert: warns users against fraud calls threatening mobile number block – Digit Kannada

ಅಲ್ಲದೆ ಹೊಸ ಸಿಮ್ ಕಾರ್ಡ್‌ಗಳನ್ನು ಪಡೆಯಲು ನಿಮ್ಮ ಆಧಾರ್ ಸಂಖ್ಯೆಯನ್ನು ಬಳಸಲಾಗಿದೆ. ಆ ಸಿಮ್ ಕಾರ್ಡ್ ಅನ್ನು ಕಾನೂನುಬಾಹಿರ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ ಎಂದು ಬಳಕೆದಾರರಿಗೆ ಸುಳ್ಳು ಹೇಳುತ್ತಿರುವ ಈ ವಂಚಕರು ಬಗ್ಗೆ TRAI ಗೆಖಡಕ್ ವಾರ್ನಿಂಗ್ ನೀಡಿರುವುದಾಗಿ ರಘುನಂದನ್ ಹೇಳಿದರು. ಈ ವಂಚನಕರು ಮೊಬೈಲ್ ಸಂಖ್ಯೆಗಳ ಸಂಪರ್ಕ ಕಡಿತಗೊಳಿಸುವುದನ್ನು ತಪ್ಪಿಸಲು Skype ಅಥವಾ ಬೇರೆ ವೀಡಿಯೊ ಕರೆಗಳಿಗೆ ಸೇರುವಂತೆ ಬಳಕೆದಾರರನ್ನು ಮೋಸಗೊಳಿಸಲು ಪ್ರಯತ್ನಿಸುತ್ತಿದ್ದಾರೆಂದು ಹೇಳಿದರು. ಅಲ್ಲದೆ ಟ್ರಾಯ್ ಯಾವುದೇ ವೈಯಕ್ತಿಕ ಟೆಲಿಕಾಂ ಗ್ರಾಹಕರ ಮೊಬೈಲ್ ಸಂಖ್ಯೆಯನ್ನು ನಿರ್ಬಂಧಿಸುವುದಿಲ್ಲ / ಬಂದ್ ಮಾಡುವುದಿಲ್ಲ ಎಂದು ಸಾರ್ವಜನಿಕರಿಗೆ ಈ ಮೂಲಕ ತಿಳಿಸಲಾಗಿದೆ.

ಒಂದು ವೇಳೆ ನಿಮ್ಮ ನಷ್ಟವಾದರೆ ಮುಂದೇನು ಮಾಡಬೇಕು?

ಸಾಮಾನ್ಯವಾಗಿ TRAI ನ ಟೆಲಿಕಾಂ ಕಮರ್ಷಿಯಲ್ ಕಮ್ಯುನಿಕೇಶನ್ ಗ್ರಾಹಕ ಪ್ರಾಶಸ್ಯ ನಿಯಂತ್ರಣ ( TCCCPR ) 2018 ಪ್ರಕಾರ ಈ ವಂಚನ ಕರೆಗಳನ್ನು ಮಾಡುವ ಅಥವಾ ಅಪೇಕ್ಷಿಸದ ಸಂದೇಶಗಳನ್ನು ಕಳುಹಿಸುವ ಮೊಬೈಲ್ ಸಂಖ್ಯೆಗಳ ವಿರುದ್ಧ ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳುವ ಜವಾಬ್ದಾರಿಯನ್ನು ಸೇವಾ ಪೂರೈಕೆದಾರರು ಹೊಂದಿರುತ್ತಾರೆ. ರಘುನಂದನ್ ಸೇರಿಸಿದರು. ಬಾಧಿತ ವ್ಯಕ್ತಿಗಳು ತಮ್ಮ ಗ್ರಾಹಕ ಸೇವಾ ಕೇಂದ್ರದ ಸಂಖ್ಯೆಗಳು ಅಥವಾ ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್ https:llcybercrime.gov.in ನಲ್ಲಿ ನೇರವಾಗಿ ಸಂಬಂಧಪಟ್ಟ ಸೇವಾ ಪೂರೈಕೆದಾರರೊಂದಿಗೆ ವಿಷಯವನ್ನು ತೆಗೆದುಕೊಳ್ಳಬಹುದು ಅಥವಾ ಸೈಬರ್ ಅಪರಾಧ ಸಹಾಯವಾಣಿ ಸಂಖ್ಯೆ 1930 ಗೆ ಕರೆ ಮಾಡಬಹುದು ಎಂದು ಅವರು ಸೂಚಿಸಿದರು.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo