WhatsApp News: 50 ಕೋಟಿಗೂ ಹೆಚ್ಚು ವಾಟ್ಸಾಪ್ ಬಳಕೆದಾರರ ಫೋನ್ ನಂಬರ್ ಮತ್ತು ಡೇಟಾ ಸೋರಿಕೆ!

WhatsApp News: 50 ಕೋಟಿಗೂ ಹೆಚ್ಚು ವಾಟ್ಸಾಪ್ ಬಳಕೆದಾರರ ಫೋನ್ ನಂಬರ್ ಮತ್ತು ಡೇಟಾ ಸೋರಿಕೆ!
HIGHLIGHTS

ಸುಮಾರು 500 ಮಿಲಿಯನ್ ಬಳಕೆದಾರರ ವಾಟ್ಸಾಪ್ ನಂಬರ್ ಆನ್ನು ಕದ್ದು ಆನ್ಲೈನ್ ನಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ವರದಿಯೊಂದು ಸಖತ್ ವೈರಲ್ ಆಗುತ್ತಿದೆ.

ಸೈಬರ್‌ನ್ಯೂಸ್ ಸುದ್ದಿಯ ಪ್ರಕಾರ ಡೇಟಾಸೆಟ್ 84 ದೇಶಗಳ ವಾಟ್ಸಾಪ್ ಬಳಕೆದಾರರ ಡೇಟಾ ಸೋರಿಕೆಯಾಗಿದೆ ಎಂದು ಹೇಳಲಾಗುತ್ತಿದೆ.

ವಾಸ್ತವವಾಗಿ ವಾಟ್ಸಾಪ್ ಅನೇಕ ಗೌಪ್ಯತೆ ಸೆಟ್ಟಿಂಗ್‌ಗಳನ್ನು ಒದಗಿಸುತ್ತದೆ.

ಈ ಉಲ್ಲಂಘನೆಯನ್ನು ಮೊದಲು ಸೈಬರ್‌ನ್ಯೂಸ್ ವರದಿ ಮಾಡಿದೆ. ಮೊದಲಿಗೆ ಇಟಲಿ, ಯುನೈಟೆಡ್ ಕಿಂಗ್‌ಡಮ್, ಯುನೈಟೆಡ್ ಸ್ಟೇಟ್ಸ್, ರಷ್ಯಾ, ಫ್ರಾನ್ಸ್ ಮತ್ತು ಸೌದಿ ಅರೇಬಿಯಾವನ್ನು ಒಳಗೊಂಡ 84 ವಿವಿಧ ದೇಶಗಳ ವಾಟ್ಸಾಪ್ ಬಳಕೆದಾರರ ಮೊಬೈಲ್ ಸಂಖ್ಯೆಗಳನ್ನು ಡೇಟಾಬೇಸ್ ಒಳಗೊಂಡಿದೆ ಎಂದು ವರದಿ ಹೇಳಿದೆ. ಜನಪ್ರಿಯ ಮೆಸೇಜಿಂಗ್ ಪ್ಲಾಟ್ಫಾರ್ಮ್ ವಾಟ್ಸಾಪ್ ಬಳಕೆದಾರರಿಗೆ ಶಾಕಿಂಗ್ ಸುದ್ದಿ. ಸುಮಾರು 200 ಕೋಟಿ ಬಳಕೆದಾರರನ್ನು ಹೊಂದಿರುವ ವಾಟ್ಸಾಪ್ ಡೇಟಾ ಮತ್ತು ಗೌಪ್ಯತೆಯ ಕಾರಣದಿಂದಾಗಿ ಮತ್ತೆ ಮುನ್ನಲೆಗೆ ಬಂದಿದೆ.

ವಾಟ್ಸಾಪ್ ನಂಬರ್ (WhatsApp Number) ಆನ್ನು ಕದ್ದು ಆನ್ಲೈನ್ ನಲ್ಲಿ ಮಾರಾಟ

ಸುಮಾರು 500 ಮಿಲಿಯನ್ ಬಳಕೆದಾರರ ವಾಟ್ಸಾಪ್ ನಂಬರ್ ಆನ್ನು ಕದ್ದು ಆನ್ಲೈನ್ ನಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ವರದಿಯೊಂದು ಸಖತ್ ವೈರಲ್ ಆಗುತ್ತಿದೆ. ಸೈಬರ್‌ನ್ಯೂಸ್ ಸುದ್ದಿಯ ಪ್ರಕಾರ ಡೇಟಾಸೆಟ್ 84 ದೇಶಗಳ ವಾಟ್ಸಾಪ್ ಬಳಕೆದಾರರ ಡೇಟಾವನ್ನು ಮತ್ತು ಯುಎಸ್ ನಿಂದ 32 ಮಿಲಿಯನ್ ಬಳಕೆದಾರರ ಫೋನ್ ನಂಬರ್ ಯುಕೆಯ 11 ಮಿಲಿಯನ್ ಮತ್ತು ರಷ್ಯಾದಿಂದ 10 ಮಿಲಿಯನ್ ಬಳಕೆದಾರರ ನಂಬರ್ ಸೋರಿಕೆಯಾಗಿದೆ ಎಂದು ಹೇಳಲಾಗುತ್ತಿದೆ.

ಈಜಿಪ್ಟ್ (45 ಮಿಲಿಯನ್), ಇಟಲಿ (35 ಮಿಲಿಯನ್), ಸೌದಿ ಅರೇಬಿಯಾ (29 ಮಿಲಿಯನ್), ಫ್ರಾನ್ಸ್ (20 ಮಿಲಿಯನ್) ಮತ್ತು ಟರ್ಕಿ (20 ಮಿಲಿಯನ್) ನಾಗರಿಕರಿಗೆ ಸೇರಿದ ಫೋನ್ ಸಂಖ್ಯೆಗಳನ್ನು ಹ್ಯಾಕರ್‌ಗಳು ಹೊಂದಿದ್ದಾರೆಂದು ಹೇಳಲಾಗುತ್ತಿದೆ. ವರದಿಯ ಪ್ರಕಾರ, ಹ್ಯಾಕರ್ ಯುಎಸ್ ಡೇಟಾಸೆಟ್ ಅನ್ನು $ 7,000 (ರೂ. 5,72,481), ಯುಕೆ $ 2,500 (ರೂ. 2,04,457) ಮತ್ತು ಜರ್ಮನಿಯು $ 2,000 (ರೂ. 1,63,566) ಗೆ ಮಾರಾಟ ಮಾಡುತ್ತಿದ್ದಾರೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ಈ ರೀತಿ ದುರ್ಬಳಕೆ ಮಾಡಬಹುದು:

ವಾಸ್ತವವಾಗಿ ವಾಟ್ಸಾಪ್ ಅನೇಕ ಗೌಪ್ಯತೆ ಸೆಟ್ಟಿಂಗ್‌ಗಳನ್ನು ಒದಗಿಸುತ್ತದೆ. ಉದಾಹರಣೆಗೆ ಸ್ಟೇಟಸ್ ಮರೆ ಮಾಡುವುದು ಪ್ರೊಫೈಲ್ ಫೋಟೋಗಳನ್ನು ಮರೆಮಾಡುವುದು ಇತ್ಯಾದಿ. ಈ ಸೆಟ್ಟಿಂಗ್‌ಗಳನ್ನು ಬಳಸುವ ಮೂಲಕ ಗ್ರಾಹಕರು ತಮ್ಮ ಗೌಪ್ಯತೆಯನ್ನು ಸುರಕ್ಷಿತವಾಗಿರಿಸಬಹುದು. ಆದಾಗ್ಯೂ ಹ್ಯಾಕರ್ ಅವರು ಡೇಟಾವನ್ನು ಹೇಗೆ ಪಡೆದರು ಎಂಬುದರ ಬಗ್ಗೆ ಯಾವುದೇ ಖಚಿತ ಮಾಹಿತಿ ಲಭ್ಯವಾಗಿಲ್ಲ. ಈ ಡೇಟಾಬೇಸ್ ಅನ್ನು ಸ್ಪ್ಯಾಮಿಂಗ್, ಫಿಶಿಂಗ್ ಪ್ರಯತ್ನಗಳು, ಗುರುತಿನ ಕಳ್ಳತನ ಮತ್ತು ಇತರ ಸೈಬರ್ ಅಪರಾಧ ಚಟುವಟಿಕೆಗಳಿಗೆ ಹ್ಯಾಕರ್‌ಗಳು ಬಳಸಬಹುದು.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo