Jio in Karnataka: ರಾಜ್ಯದಲ್ಲಿ ಉತ್ತಮ ನೆಟ್‌ವರ್ಕ್‌ಗಾಗಿ ಮತ್ತಷ್ಟು ಬಲಪಡಿಸಿದ ರಿಲಯನ್ಸ್ ಜಿಯೋ

Ravi Rao ಇವರಿಂದ | ಪ್ರಕಟಿಸಲಾಗಿದೆ 08 Oct 2021 10:27 IST
HIGHLIGHTS
  • ರಿಲಯನ್ಸ್ ಜಿಯೋ ರಾಜ್ಯದಲ್ಲಿ ಉತ್ತಮ ನೆಟ್ವರ್ಕ್ ಕನೆಕ್ಟಿವಿಟಿಯನ್ನು ಮತ್ತಷ್ಟು ಬಲಪಡಿಸುತ್ತಿದೆ

  • ಗ್ರಾಹಕ ಅನುಭವವನ್ನು ವೃದ್ಧಿಸುವುದಕ್ಕಾಗಿ 1800 ಬ್ಯಾಂಡ್‌ನಲ್ಲಿ ಹೆಚ್ಚುವರಿ 5MHz ತರಂಗಾಂತರವನ್ನು ಯಶಸ್ವಿಯಾಗಿ ಅಳವಡಿಸಿದೆ.

  • ಕರ್ನಾಟಕದಲ್ಲಿನ ಸಂಪೂರ್ಣ ಗ್ರಾಹಕ ನೆಲೆಗೆ ಜಿಯೋ ನೆಟ್‌ವರ್ಕ್ ಅನುಭವವನ್ನು ಪರಿಣಾಮಕಾರಿಯಾಗಿ ಹೆಚ್ಚಿಸಿದೆ.

Jio in Karnataka: ರಾಜ್ಯದಲ್ಲಿ ಉತ್ತಮ ನೆಟ್‌ವರ್ಕ್‌ಗಾಗಿ ಮತ್ತಷ್ಟು ಬಲಪಡಿಸಿದ ರಿಲಯನ್ಸ್ ಜಿಯೋ
Jio in Karnataka: ರಾಜ್ಯದಲ್ಲಿ ಉತ್ತಮ ನೆಟ್‌ವರ್ಕ್‌ಗಾಗಿ ಮತ್ತಷ್ಟು ಬಲಪಡಿಸಿದ ರಿಲಯನ್ಸ್ ಜಿಯೋ

ರಿಲಯನ್ಸ್ ಜಿಯೋ ರಾಜ್ಯದಲ್ಲಿ ಉತ್ತಮ ನೆಟ್ವರ್ಕ್ ಕನೆಕ್ಟಿವಿಟಿಯನ್ನು ಮತ್ತಷ್ಟು ಬಲಪಡಿಸಲು ಮತ್ತು ತನ್ನ ಗ್ರಾಹಕ ಅನುಭವವನ್ನು ವೃದ್ಧಿಸುವುದಕ್ಕಾಗಿ 1800 ಬ್ಯಾಂಡ್‌ನಲ್ಲಿ ಹೆಚ್ಚುವರಿ 5MHz ತರಂಗಾಂತರವನ್ನು ಯಶಸ್ವಿಯಾಗಿ ಅಳವಡಿಸಿದೆ. ಇದರೊಂದಿಗೆ ಈ ವರ್ಷದ ಮಾರ್ಚ್‌ ತಿಂಗಳಲ್ಲಿ ಡಿಒಟಿ ನಡೆಸಿದ ತರಂಗಾಂತರ (ಸ್ಪೆಕ್ಟ್ರಂ) ಹರಾಜಿನಲ್ಲಿ ಖರೀದಿಸಿದ ಹೆಚ್ಚುವರಿ 20MHz ತರಂಗಾಂತರದ ಅಳವಡಿಕೆಯನ್ನು ಪೂರ್ಣಗೊಳಿಸಿದಂತಾಗಿದೆ. ಈ ತರಂಗಾಂತರ ವೃದ್ಧಿಯು ಕರ್ನಾಟಕದಲ್ಲಿನ ಸಂಪೂರ್ಣ ಗ್ರಾಹಕ ನೆಲೆಗೆ ಜಿಯೋ ನೆಟ್‌ವರ್ಕ್ ಅನುಭವವನ್ನು ಪರಿಣಾಮಕಾರಿಯಾಗಿ ಹೆಚ್ಚಿಸಿದೆ. ಇದನ್ನೂ ಓದಿ: ಅಮೆಜಾನ್ ಸೇಲ್‌ನಲ್ಲಿ ಈ ಅತ್ಯುತ್ತಮ Washing Machines ಖರೀದಿಯಲ್ಲಿ 10% ತ್ವರಿತ ಡಿಸ್ಕೌಂಟ್ ಮತ್ತು ಭಾರಿ ಡೀಲ್‌

Jio

ಜಿಯೋ 850MHZ, 1800MHZ ಮತ್ತು 2300MHZ ಬ್ಯಾಂಡ್‌ಗಳಲ್ಲಿ ಹೆಚ್ಚುವರಿಯಾಗಿ 60MHz ಅಳವಡಿಸಲಾಗಿದೆ. ಇದರಿಂದ ಕರ್ನಾಟಕದಾದ್ಯಂತ ನೆಟ್‌ವರ್ಕ್ ಗುಣಮಟ್ಟ ಸುಧಾರಿಸಿದ್ದು ಚಂದಾದಾರರ ಅನುಭವ ಸುಧಾರಣೆಗೆ ನೆರವಾಗಿದೆ. ರಾಜ್ಯಾದ್ಯಂತ ಇರುವ ನಿಯೋಜಿತ ನೆಟ್‌ವರ್ಕ್‌ ಸೈಟ್‌ಗಳ ವಿಚಾರದಲ್ಲಿ ಮತ್ತು ತನ್ನ ಚಂದಾದಾರರಿಗೆ ಒದಗಿಸುವ ನೆಟ್‌ವರ್ಕ್ ಗುಣಮಟ್ಟದಲ್ಲಿ ಜಿಯೋ ರಾಜ್ಯದ ನಾಯಕನಾಗಿ ಮುಂದುವರಿಯಲಿದೆ. ಹೆಚ್ಚುತ್ತಿರುವ ವರ್ಕ್‌ ಫ್ರಂ ಹೋಮ್ ಸನ್ನಿವೇಶಗಳು ಹಾಗೂ ಕಾಲದಿಂದ ಕಾಲಕ್ಕೆ ಹೇರಿಕೆಯಾಗುತ್ತಿರುವ ನಿರ್ಬಂಧಿತ ಸಂಚಾರಗಳನ್ನು ಪರಿಗಣಿಸಿದೆ. ಇದನ್ನೂ ಓದಿ: iPhone Deals: ಅಮೆಜಾನ್ ಫೆಸ್ಟಿವಲ್ ಮಾರಾಟದ ಟಾಪ್ ಡೀಲ್‌ಗಳಲ್ಲಿ ಈ iPhone ಅತ್ಯಂತ ಕಡಿಮೆ ಬೆಲೆಗೆ ಲಭ್ಯ

ಈ ತರಂಗಾಂತರ ಆನ್‌ಲೈನ್ ತರಗತಿಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಮನೆಯಲ್ಲಿ ಸುರಕ್ಷಿತವಾಗಿದ್ದುಕೊಂಡು ಯಾವುದೇ ತಡೆರಹಿತವಾಗಿ ಉದ್ಯಮವನ್ನು ಮನೆಯಿಂದಲೇ ನಡೆಸಲು ಸಹಕಾರಿಯಾಗುತ್ತದೆ. ಹೆಚ್ಚಿಸಲಾದ ಸಂಪರ್ಕ ಜಾಲ ಮತ್ತು ಅನುಭವವು ಹೊರಭಾಗದಲ್ಲಿನ ಅಗತ್ಯ ಕೆಲಸಗಳಲ್ಲಿ ತೊಡಗಿರುವ ವೈದ್ಯಕೀಯ ಹಾಗೂ ಇತರೆ ಮುಂಚೂಣಿ ಕೆಲಸಗಾರರಿಗೆ ಖಂಡಿತವಾಗಿಯೂ ಬಹು ದೊಡ್ಡ ನೆರವು ನೀಡಲಿದೆ. ಕರ್ನಾಟಕದಲ್ಲಿ ಜಿಯೋ 2.21 ಕೋಟಿಗೂ ಅಧಿಕ ಗ್ರಾಹಕರ ನೆಲೆಯನ್ನು ಹೊಂದಿದೆ. ಮತ್ತು ಪ್ರತಿ ಜಿಲ್ಲೆಯಲ್ಲಿಯೂ ಮತ್ತಷ್ಟು ಚಂದಾದಾರರನ್ನು ಸೇರ್ಪಡೆಯನ್ನು ಮುಂದುವರಿಸಿದೆ.

1

ಮತ್ತಷ್ಟು 4ಜಿ ಟವರ್‌ಗಳ ಬೇಡಿಕೆಯನ್ನು ಈಡೇರಿಸಲು ಜಿಯೋ ಕರ್ನಾಟಕ 2021ರಲ್ಲಿ ತನ್ನ 4ಜಿ ನೆಟ್‌ವರ್ಕ್ಅನ್ನು ಶೇ 28ರಷ್ಟು ವಿಸ್ತರಿಸುತ್ತಿದೆ. ಪ್ರಸ್ತುತ ಜಿಯೋ ರಾಜ್ಯದಲ್ಲಿ 22300ಕ್ಕಿಂತ ಹೆಚ್ಚು 4ಜಿ ನೆಟ್‌ವರ್ಕ್ ಸೈಟ್‌ಗಳನ್ನು ಹೊಂದಿದ್ದು ಇದು ಅತಿ ದೊಡ್ಡ 4ಜಿ ಹೆಜ್ಜೆಗುರುತಾಗಿದೆ. ರಿಲಯನ್ಸ್ ಜಿಯೋ ಕಳೆದ ತರಂಗಾಂತರ ಹರಾಜಿನಲ್ಲಿ 20 ವರ್ಷಗಳ ಅವಧಿಗೆ 57123 ಕೋಟಿ ರೂಪಾಯಿ ವೆಚ್ಚದಲ್ಲಿ 22 ವಲಯಗಳಿಗೆ ಒಟ್ಟು 488.35 MHZ (850 MHZ 1800 MHZ ಮತ್ತು 2300 MHZ ಒಳಗೊಂಡಂತೆ) ತರಂಗಾಂತರಗಳನ್ನು ಖರೀದಿಸಿದೆ. ಇದನ್ನೂ ಓದಿ: ಅಮೆಜಾನ್ ಫೆಸ್ಟಿವಲ್ ಮಾರಾಟದಲ್ಲಿ ಈ ಬೆಸ್ಟ್ ಲ್ಯಾಪ್‌ಟಾಪ್ ಮೇಲೆ ಬಂಪರ್ ಆಫರ್

Jio

ಇದರೊಂದಿಗೆ ಜಿಯೋ ತನ್ನ ಹೆಜ್ಜೆಗುರುತನ್ನು ಶೇ 55ರಷ್ಟು ಏರಿಕೆಯೊಂದಿಗೆ ಒಟ್ಟು 1717 MHZಗೆ ಗಣನೀಯವಾಗಿ ಹೆಚ್ಚಿಸಿಕೊಂಡಿದೆ. ಜಿಯೋ ಪ್ರಸ್ತುತ 443 ಮಿಲಿಯನ್ ಗ್ರಾಹಕರನ್ನು ಹೊಂದಿದೆ. ತನ್ನ ವೃದ್ಧಿಸಿದ ತರಂಗಾಂತರ ಹೆಜ್ಜೆಗುರುತಿನೊಂದಿಗೆ ಆರ್‌ ಜೆ ಐ ಎಲ್ ತನ್ನ ಹಾಲಿ ಬಳಕೆದಾರರಿಗೆ ಸೇವೆ ಒದಗಿಸಲು ನೆಟ್‌ವರ್ಕ್ ಸಾಮರ್ಥ್ಯವನ್ನು ಹೆಚ್ಚಿಸಲಿದೆ. ಈ ವೃದ್ಧಿಯು ಮುಂದೆ 300 ಮಿಲಿಯನ್ ಬಳಕೆದಾರರನ್ನು ಸೇರ್ಪಡೆಗೊಳಿಸುವ ಮೂಲಕ ಡಿಜಿಟಲ್ ಸೇವೆಗಳತ್ತ ಹಾಗೂ 5ಜಿ ಸೇವೆಗಳ ಪರಿವರ್ತನೆಗೆ ಸಾಗಲು ಕೂಡ ನೆರವಾಗಲಿದೆ.

Ravi Rao
Ravi Rao

Email Email Ravi Rao

Follow Us Facebook Logo Facebook Logo

About Me: Ravi Rao is an Indian technology journalist who has been covering consumer technology since 2016. He is a Senior Editor for Kannada at Digit.in Read More

WEB TITLE

Jio increasing demand for more 4G towers and strengthens its connectivity across Karnataka

Advertisements

ಟ್ರೆಂಡಿಂಗ್ ಲೇಖನಗಳು

Advertisements

ಇತ್ತೀಚಿನ ಲೇಖನಗಳು ಎಲ್ಲವನ್ನು ವೀಕ್ಷಿಸಿ

VISUAL STORY ಎಲ್ಲವನ್ನು ವೀಕ್ಷಿಸಿ