ಮಾರ್ಚ್ 1 ರಿಂದ ಸಿಮ್ ಕಾರ್ಡ್ ಇಲ್ಲದೆ WhatsApp ಕಾರ್ಯನಿರ್ವಹಿಸುವುದಿಲ್ಲ! ಇಲ್ಲಿದೆ ಪೂರ್ಣ ಮಾಹಿತಿ

HIGHLIGHTS

ವಾಟ್ಸಾಪ್‌ ಸಿಮ್‌ ಬೈಡಿಂಗ್ ನಿಯಮ ಜಾರಿಗೆ ಫೆಬ್ರವರಿ 28 ಗಡವು

ಮೊಬೈಲ್‌ನಲ್ಲಿ ಸಿಮ್ ಕಾರ್ಡ್ ಇಲ್ಲದಿದ್ದರೆ ವಾಟ್ಸಾಪ್ ಕೆಲಸ ಬಂದ್

ವೆಬ್‌ನಲ್ಲಿ ಪ್ರತಿ ಆರು ಗಂಟೆಗಳಿಗೊಮ್ಮೆ ವಾಟ್ಸಾಪ್‌ ಆಟೋಮ್ಯಾಟಿಕ್ ಲಾಗ್ ಔಟ್ ಆಗುತ್ತೆ

ಮಾರ್ಚ್ 1 ರಿಂದ ಸಿಮ್ ಕಾರ್ಡ್ ಇಲ್ಲದೆ WhatsApp ಕಾರ್ಯನಿರ್ವಹಿಸುವುದಿಲ್ಲ! ಇಲ್ಲಿದೆ ಪೂರ್ಣ ಮಾಹಿತಿ

Whatsapp SIM Binding Rule: ನಾಳೆ (ಫೆಬ್ರವರಿ 28 ರಿಂದ) ವಾಟ್ಸಾಪ್ App ಸಿಮ್ ಬೈಂಡಿಂಗ್ ನಿಯಮದಡಿಯಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಹೊಸ ನಿಯಮದ ಪ್ರಕಾರ ಬಳಕೆದಾರರ ಸ್ಮಾರ್ಟ್‌ಫೋನ್‌ನಲ್ಲಿ ಸಿಮ್ ಕಾರ್ಡ್ ಇಲ್ಲದಿದ್ದರೆ ವಾಟ್ಸಾಪ್, ಟೆಲಿಗ್ರಾಮ್, ಸಿಗ್ನಲ್, ಸ್ನ್ಯಾಪ್‌ಚಾಟ್, ಶೇರ್‌ಚಾಟ್ ಹಾಗೂ ಜಿಯೋಚಾಟ್ ಇನ್ನು ಮುಂದೆ ಕೆಲಸ ಮಾಡುವುದಿಲ್ಲ. ಇದಲ್ಲದೆ ಆರು ಗಂಟೆಗಳ ನಂತರ ವಾಟ್ಸಾಪ್ ವೆಬ್ ಆಟೋಮ್ಯಾಟಿಕ್ ಆಗಿ ಲಾಗ್ ಔಟ್ ಆಗುತ್ತದೆ. ಈ ವ್ಯವಸ್ಥೆಯು ಸೈಬರ್ ವಂಚಕರನ್ನು ಹಿಡಿಯಲು ನೆರವಾಗುತ್ತದೆ ಎಂದು ಸರ್ಕಾರ ಹೇಳಿಕೊಂಡಿದೆ. ವಾಟ್ಸಾಪ್ ಸಿಮ್ ಬೈಂಡಿಂಗ್ ನಿಯಮದ ಬಗ್ಗೆ ವಿವರವಾಗಿ ಮುಂದೆ ತಿಳಿದುಕೊಳ್ಳೋಣ.

Digit.in Survey
✅ Thank you for completing the survey!

Also Read : Vivo ಹಾಗೂ iQOO ಮೊಬೈಲ್‌ ಖರೀದಿಸುವ ಗ್ರಾಹಕರಿಗೆ ಬಿಗ್‌ ಶಾಕ್‌! ಸದ್ಯದಲ್ಲೇ ಬೆಲೆ ಏರಿಕೆ ಸಾಧ್ಯತೆ

WhatsApp ಸಿಮ್ ಬೈಂಡಿಂಗ್ ಎಂದರೇನು?

ಸಿಮ್ ಬೈಂಡಿಂಗ್ ಎನ್ನುವುದು ನಿಮ್ಮ ಡಿಜಿಟಲ್ ಖಾತೆಯನ್ನು (ವಿಶೇಷವಾಗಿ ಬ್ಯಾಂಕಿಂಗ್ ಅಥವಾ ಹಣಕಾಸು ಆಪ್‌ಗಳು) ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಇರುವ ನಿರ್ದಿಷ್ಟ ಸಿಮ್ ಕಾರ್ಡ್ ಮತ್ತು ಡಿವೈಸ್‌ಗೆ ಕನೆಕ್ಟ್ ಮಾಡುವ ಭದ್ರತಾ ಕ್ರಮವಾಗಿದೆ. ಇದರ ಪ್ರಮುಖ ವೈಶಿಷ್ಟ್ಯವೆಂದರೆ ಯಾವುದೇ ಹ್ಯಾಕರ್ ಅಥವಾ ವಂಚಕ ನಿಮ್ಮ ಸಂಖ್ಯೆಯನ್ನು ಮತ್ತೊಂದು ಡಿವೈಸ್‌ನಲ್ಲಿ ಬಳಸಲು ಸಾಧ್ಯವಾಗುವುದಿಲ್ಲ.

WhatsApp

ಬಳಕೆದಾರರು ಸಿಮ್ ಬೈಂಡಿಂಗ್ ಮೂಲಕ ಆಪ್‌ ಅನ್ನು ಲಿಂಕ್ ಮಾಡಿದಾಗ, ಬಳಕೆದಾರರ ನೋಂದಾಯಿತ ಸಿಮ್ ಕಾರ್ಡ್ ಪ್ರಸ್ತುತ ಅದೇ ಸ್ಮಾರ್ಟ್‌ಫೋನಿನಲ್ಲಿ ಸಕ್ರಿಯವಾಗಿದ್ದರೆ ಮಾತ್ರ ಆ ಆಪ್‌ ಓಪೆನ್‌ ಆಗುತ್ತದೆ. ಈ ಹೊಸ ನಿಯಮ ಮಾರ್ಚ್ 1, 2026 ರಿಂದ ಜಾರಿಗೆ ಬರಲಿದ್ದು ಆ ನಂತರ ಬಳಕೆದಾರರು ಇನ್ನು ಮುಂದೆ ಸಿಮ್ ಕಾರ್ಡ್ ಇಲ್ಲದೆ ಆಪ್‌ ಅನ್ನು ಬಳಸಲು ಸಾಧ್ಯ ಆಗುವುದಿಲ್ಲ. ಹೀಗಾಗಿ ಬಳಕೆದಾರರು ತಮ್ಮ ವಾಟ್ಸಾಪ್ ಸಂಖ್ಯೆಗೆ ಸಂಬಂಧಿಸಿದ ಸಿಮ್ ಕಾರ್ಡ್ ಅನ್ನು ಅದೇ ಸ್ಮಾರ್ಟ್‌ಫೋನ್‌ನಲ್ಲಿ ಇದೆಯೇ ಎಂದು ಖಚಿತಪಡಿಸಿಕೊಳ್ಳಬೇಕು. ಸಿಮ್ ಕಾರ್ಡ್ ಅನ್ನು ಫೋನ್‌ನಿಂದ ತೆಗೆದುಹಾಕಿದರೆ, ಮೆಸೆಜ್‌ ಕಳುಹಿಸುವ ಆಪ್‌ ಕೆಲಸ ನಿರ್ವಹಿಸುವುದನ್ನು ನಿಲ್ಲಿಸಬಹುದು.

ವಾಟ್ಸಾಪ್ ಸಿಮ್ ಹೊಸ ನಿಯಮಗಳು

ಪ್ರಸ್ತುತ ಬಳಕೆದಾರರು ತಮ್ಮ ಮೊಬೈಲ್‌ನಿಂದ ಸಿಮ್ ಕಾರ್ಡ್ ಅನ್ನು ತೆಗೆದರೂ ಅಥವಾ ಸಿಮ್ ಪ್ರಸ್ತುತ ಸ್ಮಾರ್ಟ್‌ಫೋನ್‌ನಲ್ಲಿ ಸಕ್ರಿಯವಾಗಿಲ್ಲದಿದ್ದರೂ ಸಹ ವಾಟ್ಸಾಪ್ ಆಪ್‌ ಕಾರ್ಯನಿರ್ವಹಿಸುವುದನ್ನು ಮುಂದುವರಿಸುತ್ತದೆ. ಆದರೆ ಹೊಸ ನಿಯಮಗಳ ಪ್ರಕಾರ, ನೋಂದಾಯಿತ ಸಿಮ್ ಆ ಸಮಯದಲ್ಲಿ ಸ್ಮಾರ್ಟ್‌ಫೋನ್‌ನಲ್ಲಿ ಮತ್ತು ಸಕ್ರಿಯವಾಗಿರಬೇಕು. ಇಲ್ಲದಿದ್ದರೆ ವಾಟ್ಸಾಪ್ ಕಾರ್ಯನಿರ್ವಹಿಸಲ್ಲ.

ಹಾಗೆಯೇ ಪ್ರಸ್ತುತ ವಾಟ್ಸಾಪ್ ವೆಬ್ ಲಾಗಿನ್ ಕೆಲವು ವಾರಗಳವರೆಗೆ ಇರುತ್ತದೆ. ಆದರೆ ಹೊಸ ನಿಯಮಗಳ ಪ್ರಕಾರ, ಭದ್ರತಾ ಕಾರಣಗಳಿಗಾಗಿ ಆರು ಗಂಟೆಗಳ ನಂತರ ವಾಟ್ಸಾಪ್ ಆಟೋಮ್ಯಾಟಿಕ್ ಆಗಿ ಲಾಗ್ ಔಟ್ ಆಗುತ್ತದೆ. ಪ್ರಸ್ತುತ OTP ಬಳಸಿ ಲಾಗಿನ್ ಮಾಡಬಹುದು. ಆದರೆ ಹೊಸ ನಿಯಮಗಳ ಪ್ರಕಾರ ಸಿಮ್ ಲಿಂಕ್ ಮಾಡದಿದ್ದರೂ ಸಹ ಆಪ್‌ ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile

Digit.in
Logo
Digit.in
Logo