ಭಾರತದಲ್ಲಿ Noise ಇಯರ್‌ಬಡ್ಸ್‌ ಬಿಡುಗಡೆ: ಒಂದು ವರ್ಷದ Gaana Plus ಸಬ್‌ಸ್ಕ್ರಿಪ್ಶನ್ ಉಚಿತ!

ಭಾರತದಲ್ಲಿ Noise ಇಯರ್‌ಬಡ್ಸ್‌ ಬಿಡುಗಡೆ: ಒಂದು ವರ್ಷದ Gaana Plus ಸಬ್‌ಸ್ಕ್ರಿಪ್ಶನ್ ಉಚಿತ!

ಜನಪ್ರಿಯ Noise ಸಂಸ್ಥೆಯು ಮ್ಯೂಸಿಕ್ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ Gaana ಜೊತೆ ಕೈಜೋಡಿಸಿ ಭಾರತದಲ್ಲಿ ಹೊಸ Noise Buds R1 Gaana Edition ವೈರ್‌ಲೆಸ್ ಇಯರ್‌ಬಡ್ಸ್‌ ಬಿಡುಗಡೆ ಮಾಡಿದೆ. ಈ ಇಯರ್‌ಬಡ್ಸ್‌ ಖರೀದಿಸುವ ಗ್ರಾಹಕರಿಗೆ ಒಂದು ವರ್ಷದ ಗಾನಾ ಪ್ಲಸ್ ಚಂದಾದಾರಿಕೆಯೂ ಉಚಿತವಾಗಿ ಸಿಗಲಿದೆ. ಕಡಿಮೆ ಬೆಲೆಯಲ್ಲಿ ವೈರ್‌ಲೆಸ್ ಇಯರ್‌ಬಡ್ಸ್‌ ಖರೀದಿಸಲು ಬಯಸುವವರಿಗೆ ಈ ಹೊಸ ಮಾದರಿ ಉತ್ತಮ ಆಯ್ಕೆಯಾಗಬಹುದು. ಇದರಲ್ಲಿ 11mm ಡೈನಾಮಿಕ್ ಡ್ರೈವರ್‌ಗಳು, ಬ್ಲೂಟೂತ್ 5.3, ನಾಲ್ಕು ಮೈಕ್ರೊಫೋನ್‌ಗಳು ಮತ್ತು 40 ಗಂಟೆಗಳವರೆಗಿನ ಬ್ಯಾಟರಿ ಬಾಳಿಕೆಯಂತಹ ಫೀಚರ್‌ಗಳಿವೆ. ಹಾಗಾದರೆ ನಾಯ್ಸ್ ಬಡ್ಸ್‌ R1 ಗಾನಾ ಎಡಿಷನ್‌ ಬೆಲೆ ಎಷ್ಟು? ಇದರ ಫೀಚರ್ಸ್‌ ಏನು ಎಂಬುದನ್ನು ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : ಟ್ರಿಪಲ್‌ ಕ್ಯಾಮೆರಾ ರಚನೆ ಇರುವ Vivo V70 ಖರೀದಿಸಲು ಇದುವೇ ಅತ್ಯುತ್ತಮ ಸಮಯ!

Noise Buds R1 Gaana Edition ಬೆಲೆ ಮತ್ತು ಲಭ್ಯತೆ

ಭಾರತದಲ್ಲಿ ನಾಯ್ಸ್ ಬಡ್ಸ್‌ R1 ಗಾನಾ ಎಡಿಷನ್‌ ಇಯರ್‌ಬಡ್ಸ್‌ ಬೆಲೆ 1,399 ರೂ.ಗಳು ಆಗಿದೆ. ನಾಯ್ಸ್‌ ಮತ್ತು ಗಾನಾ ಸಂಸ್ಥೆಗಳ ಅಧಿಕೃತ ವೆಬ್‌ಸೈಟ್‌ಗಳ ಜೊತೆಗೆ ಗಾನಾ ಆಪ್‌ನಲ್ಲಿಯೂ ಇದನ್ನು ಖರೀದಿಸಬಹುದು. ಈ ಇಯರ್‌ಬಡ್ಸ್‌ ಖರೀದಿಸುವವರಿಗೆ 799 ರೂ.ಗಳ ಮೌಲ್ಯದ ಒಂದು ವರ್ಷದ Gaana Plus ಚಂದಾದಾರಿಕೆ ಸಿಗಲಿದೆ.

Noise Buds R1 Gaana Edition Launched

ಇಯರ್‌ಬಡ್ಸ್‌ ಫೀಚರ್ಸ್‌ ಹೀಗಿವೆ

ನಾಯ್ಸ್ ಬಡ್ಸ್‌ R1 ಗಾನಾ ಎಡಿಷನ್‌ ಇಯರ್‌ಬಡ್ಸ್‌ 11mm ಡೈನಾಮಿಕ್ ಡ್ರೈವರ್‌ಗಳನ್ನು ಹೊಂದಿವೆ. ಇವು ಮ್ಯೂಸಿಕ್‌ ಕೇಳಲು ಮತ್ತು ವೀಡಿಯೊ ವೀಕ್ಷಿಸಲು ಅಗತ್ಯವಾದ ಆಡಿಯೊ ಅನುಭವವನ್ನು ಒದಗಿಸುತ್ತವೆ. ಕನೆಕ್ಟಿವಿಟಿಗಾಗಿ Bluetooth 5.3 ತಂತ್ರಜ್ಞಾನವನ್ನು ಬಳಸಲಾಗಿದೆ. ಹಾಗೆಯೇ ಈ ಡಿವೈಸ್‌ Environmental Noise Cancellation (ENC) ತಂತ್ರಜ್ಞಾನವನ್ನು ಪಡೆದುಕೊಂಡಿದೆ. ಅಲ್ಲದೇ ಈ ಇಯರ್‌ಬಡ್ಸ್‌ 40ms ಅಲ್ಟ್ರಾ-ಲೋ ಲೇಟೆನ್ಸಿಯನ್ನು ಬೆಂಬಲಿಸುತ್ತವೆ.

ನಾಯ್ಸ್ ಬಡ್ಸ್‌ R1 ಗಾನಾ ಎಡಿಷನ್‌ ಇಯರ್‌ಬಡ್ಸ್‌ IPX5 ನೀರು ನಿರೋಧಕ ರೇಟಿಂಗ್ ಹೊಂದಿವೆ. ಹೀಗಾಗಿ ಬೆವರು ಮತ್ತು ನೀರಿನ ಸಿಂಚನಗಳಿರುವ ಸಂದರ್ಭಗಳಲ್ಲಿ ಇವುಗಳನ್ನು ಬಳಸಬಹುದು. ಆದರೆ ನೀರಿನಲ್ಲಿ ಸಂಪೂರ್ಣವಾಗಿ ಮುಳುಗಿಸುವುದಕ್ಕೆ ಇವು ಸೂಕ್ತವಲ್ಲ. ಚಾರ್ಜಿಂಗ್ ಕೇಸ್‌ನೊಂದಿಗೆ ಒಟ್ಟು 40 ಗಂಟೆಗಳ ವರೆಗೆ ಬ್ಯಾಟರಿ ಬಾಳಿಕೆ ಸಿಗುತ್ತದೆ ಎಂದು ಕಂಪನಿಯು ಹೇಳಿಕೊಂಡಿದೆ. ಜೊತೆಗೆ ಫಾಸ್ಟ್ ಚಾರ್ಜಿಂಗ್ ಸೌಲಭ್ಯವೂ ಇದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile