ಮಾರ್ಚ್ 5 ರಂದು Nothing Phone 4a ಸರಣಿ ಬಿಡುಗಡೆ! ನಿರೀಕ್ಷಿತ ಫೀಚರ್ಸ್‌ ಹಾಗೂ ಬೆಲೆ ನೋಡಿ

HIGHLIGHTS

ನಥಿಂಗ್ ಫೋನ್ 4a ಸರಣಿಯು ಮಾರ್ಚ್‌ 5 ರಂದು ಅಧಿಕೃತವಾಗಿ ಬಿಡುಗಡೆ ಆಗಲಿದೆ

ನಥಿಂಗ್ ಫೋನ್ 4a ಸರಣಿಯು ಎರಡು ಸ್ಮಾರ್ಟ್‌ಫೋನ್‌ ಮಾಡೆಲ್‌ಗಳನ್ನು ಒಳಗೊಂಡಿರಲಿದೆ

ನಥಿಂಗ್ ಫೋನ್ 4a ಸರಣಿಯು 120Hz ರಿಫ್ರೆಶ್ ರೇಟ್, AMOLED ಡಿಸ್‌ಪ್ಲೇ ಆಯ್ಕೆ ಪಡೆದಿರಲಿದೆ

ಮಾರ್ಚ್ 5 ರಂದು Nothing Phone 4a ಸರಣಿ ಬಿಡುಗಡೆ! ನಿರೀಕ್ಷಿತ ಫೀಚರ್ಸ್‌ ಹಾಗೂ ಬೆಲೆ ನೋಡಿ

ಯುಕೆ ಮೂಲದ Nothing ಮೊಬೈಲ್‌ ಕಂಪನಿಯು ಮುಂದಿನ ವಾರ ಭಾರತದಲ್ಲಿ Nothing Phone 4a ಸರಣಿಯನ್ನು ಬಿಡುಗಡೆ ಮಾಡಲು ನಥಿಂಗ್ ಸಜ್ಜಾಗಿದೆ. ಅಂದಹಾಗೆ ಈ ಮುಂಬರುವ ಹೊಸ ಈ ನಥಿಂಗ್ ಫೋನ್ 4a ಸರಣಿಯು ನಥಿಂಗ್ ಫೋನ್ 4a ಹಾಗೂ ನಥಿಂಗ್ ಫೋನ್ 4a ಪ್ರೊ ಮಾಡೆಲ್‌ಗಳನ್ನು ಒಳಗೊಂಡಿರಲಿದೆ. ನಥಿಂಗ್ ಫೋನ್ 4a ಸರಣಿಯ ಬಗ್ಗೆ ಲೀಕ್‌ ಅಪ್‌ಡೇಟ್ ಮಾಹಿತಿಗಳು ಗ್ರಾಹಕರ ಕುತೂಹಲ ಹೆಚ್ಚಿಸಿವೆ. ಬರಲಿರುವ ಈ ಮೊಬೈಲ್‌ಗಳು Snapdragon ಚಿಪ್‌ಸೆಟ್‌ ಪ್ರೊಸೆಸರ್‌ ಸಾಮರ್ಥ್ಯವನ್ನು ಒಳಗೊಂಡಿರಲಿದ್ದು AMOLED ಡಿಸ್‌ಪ್ಲೇ ಸಪೋರ್ಟ್‌ ಸಹ ಪಡೆದಿರಲಿವೆ. ಹಾಗಾದರೆ ನಥಿಂಗ್ ಫೋನ್ 4a ಸರಣಿಯು ಬಿಡುಗಡೆ ಯಾವಾಗ, ನಿರೀಕ್ಷಿತ ಫೀಚರ್ಸ್‌ ಏನು ಎಂಬುದನ್ನು ಮುಂದೆ ನೋಡೋಣ.

Digit.in Survey
✅ Thank you for completing the survey!

Also Read : Airtel 979 ರೂ.ಗಳ ಪ್ಲಾನ್‌ನಲ್ಲಿ ಪ್ರತಿದಿನ 2GB ಡೇಟಾ ಜೊತೆಗೆ OTT ಸೌಲಭ್ಯ

Nothing Phone 4a ಸರಣಿ ಲಾಂಚ್‌ ದಿನಾಂಕ

Nothing ಮೊಬೈಲ್‌ ಕಂಪನಿಯ ಮುಂಬರುವ ನೂತನ Nothing Phone 4a ಸರಣಿಯು ಮುಂದಿನ ತಿಂಗಳು ಗ್ಲೋಬಲ್‌ ಮಾರುಕಟ್ಟೆಗೆ ಅನಾವರಣ ಆಗಲಿದೆ. ಈ ಸರಣಿಯು ಇದೇ ಮಾರ್ಚ್ 5 ರಂದು ಅಧಿಕೃತವಾಗಿ ಬಿಡುಗಡೆ ಆಗಲಿದೆ. ಅಂದಹಾಗೆ ನಥಿಂಗ್‌ ಫೋನ್‌ 4a ಸರಣಿಯು ಪಿಂಕ್‌, ವೈಟ್‌ ಹಾಗೂ ಬ್ಲ್ಯಾಕ್‌ ಕಲರ್‌ ಆಯ್ಕೆಗಳಲ್ಲಿ ಮಾರುಕಟ್ಟೆಗೆ ಪ್ರವೇಶಿಸುವ ಸಾಧ್ಯತೆಗಳು ಇವೆ. ಇನ್ನು ಕಂಪನಿಯು ಈ ಸರಣಿಯ ಫೋನ್‌ಗಳ ಬೆಲೆಯ ಬಗ್ಗೆ ಅಧಿಕೃತ ಮಾಹಿತಿ ಹೊರಹಾಕಿಲ್ಲ.

Nothing Phone 4a
Nothing Phone 4a

ನಥಿಂಗ್‌ ಫೋನ್‌ 4a ಸರೀಸ್‌ನ ನಿರೀಕ್ಷಿತ ಫೀಚರ್ಸ್‌ ಹೀಗಿವೆ

ಮುಂಬರುವ ನಥಿಂಗ್‌ ಫೋನ್‌ 4a ಮತ್ತು ನಥಿಂಗ್‌ ಫೋನ್‌ 4a ಪ್ರೊ ಈ ಎರಡು ಮಾಡೆಲ್‌ಗಳು 6.7 ಇಂಚಿನ AMOLED ಡಿಸ್‌ಪ್ಲೇ ಅನ್ನು ಒಳಗೊಂಡಿರಲಿದ್ದು, 120Hz ರಿಫ್ರೆಶ್ ರೇಟ್ ಸೌಲಭ್ಯದಲ್ಲಿ ಕೆಲಸ ಮಾಡಲಿವೆ ಎನ್ನಲಾಗಿದೆ. ಹಾಗೆಯೇ ಈ ಎರಡು ಫೋನ್‌ಗಳು 3000 nits ಗರಿಷ್ಠ ಬ್ರೈಟ್ನೆಸ್‌ ಸಪೋರ್ಟ್‌ ಪಡೆದಿರುವ ನಿರೀಕ್ಷೆಗಳು ಇವೆ. ಅಲ್ಲದೇ ನಥಿಂಗ್‌ ಫೋನ್‌ 4a ಪ್ರೊ ಮೊಬೈಲ್ Snapdragon 8s Gen 3 ಚಿಪ್‌ಸೆಟ್‌ ಪ್ರೊಸೆಸರ್‌ ಸಾಮರ್ಥ್ಯದ ಜೊತೆಗೆ ಮಾರುಕಟ್ಟೆಗೆ ಲಗ್ಗೆ ಇಡುವ ಸಾಧ್ಯತೆಗಳು ಇವೆ ಹಾಗೂ 12GB RAM + 256GB ವರೆಗೂ ಸ್ಟೋರೇಜ್‌ ಆಯ್ಕೆಗಳನ್ನು ಪಡೆದಿರುವ ನಿರೀಕ್ಷೆಗಳು ಇವೆ.

ನಥಿಂಗ್‌ ಫೋನ್‌ 4a ಮೊಬೈಲ್ 5,080 mAh ಬ್ಯಾಟರಿ ಬ್ಯಾಕ್‌ಅಪ್‌ ಸಾಮರ್ಥ್ಯವನ್ನು ಬೆಂಬಲಿಸಬಹುದು ಹಾಗೂ ಅದಕ್ಕೆ ಪೂರಕವಾಗಿ 50W ಫಾಸ್ಟ್ ಚಾರ್ಜಿಂಗ್ ಆಯ್ಕೆ ಅನ್ನು ಒಳಗೊಂಡಿರುವ ಸಾಧ್ಯತೆಗಳು ಇವೆ ಎನ್ನಲಾಗಿದೆ. ಇನ್ನು ಈ ಮೊಬೈಲ್ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP65 ರೇಟಿಂಗ್ ಸೌಲಭ್ಯ ಅನ್ನು ಪಡೆಯಬಹುದು ಎನ್ನಲಾಗಿದೆ. ನಥಿಂಗ್ ಮೊಬೈಲ್‌ ಕಂಪನಿಯ ಬರಲಿರುವ ಈ ನೂತನ ಫೋನ್‌ ಆಂಡ್ರಾಯ್ಡ್ 16 ಅನ್ನು ಆಧರಿಸಿದ ನಥಿಂಗ್ OS 4 ನಲ್ಲಿ ಕೆಲಸ ಮಾಡಲಿದೆ ಎನ್ನಲಾಗಿದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile

Digit.in
Logo
Digit.in
Logo