ಭಾರತದಲ್ಲಿ Noise Master Buds 2 ಇಯರ್‌ಬಡ್ಸ್ ಬಿಡುಗಡೆ! ಬೆಲೆ ಹಾಗೂ ಫೀಚರ್ಸ್‌ ನೋಡಿ

HIGHLIGHTS

ಈ ಇಯರ್‌ಬಡ್‌ಗಳು 6 ಗಂಟೆಗಳ ವರೆಗೆ ಆಡಿಯೊ ಪ್ಲೇಬ್ಯಾಕ್ ಒದಗಿಸಬಲ್ಲವು

ಈ ಇಯರ್‌ಬಡ್ಸ್‌ 6 ಮೈಕ್ ಎನ್ವಿರಾನ್ಮೆಂಟ್ ನಾಯ್ಸ್‌ ಕ್ಯಾನ್ಸಲೇಶನ್ ಸೌಲಭ್ಯ ಪಡೆದಿದೆ

ನಾಯ್ಸ್ ಮಾಸ್ಟರ್ ಬಡ್ಸ್ 2 ಡಿವೈಸ್‌ ಇದೇ ಮಾರ್ಚ್ 19 ರಂದು ಮಾರಾಟ ಪ್ರಾರಂಭಿಸಲಿದೆ

ಭಾರತದಲ್ಲಿ Noise Master Buds 2 ಇಯರ್‌ಬಡ್ಸ್ ಬಿಡುಗಡೆ! ಬೆಲೆ ಹಾಗೂ ಫೀಚರ್ಸ್‌ ನೋಡಿ

Noise ಕಂಪನಿಯು ಇಂದು (ಫೆಬ್ರವರಿ 27 ರಂದು) ಭಾರತದಲ್ಲಿ Noise Master Buds 2 ಡಿವೈಸ್‌ ಅನ್ನು ಬಿಡುಗಡೆ ಮಾಡಿದೆ. ಹೊಸದಾಗಿ ನಾಯ್ಸ್‌ ಮಾಸ್ಟರ್ ಬಡ್ಸ್ 2 ಲಾಂಚ್‌ ಮಾಡುವ ಮೂಲಕ ಸಂಸ್ಥೆಯು ತನ್ನ ಟ್ರೂ ವೈರ್‌ಲೆಸ್ ಸ್ಟೀರಿಯೊ (TWS) ಇಯರ್‌ಫೋನ್‌ಗಳ ಶ್ರೇಣಿ ವಿಸ್ತರಿಸಿದೆ. ಈ ಇಯರ್‌ಬಡ್ಸ್ 10mm PU+ PEEK ಡ್ರೈವರ್‌ಗಳು ಮತ್ತು 6 ಮೈಕ್ ಎನ್ವಿರಾನ್ಮೆಂಟ್ ನಾಯ್ಸ್‌ ಕ್ಯಾನ್ಸಲೇಶನ್ (ENC) ಸೌಲಭ್ಯವನ್ನು ಒಳಗೊಂಡಿದೆ. ಹಾಗೆಯೇ Bose ಟ್ಯೂನ್ ಮಾಡಿದ ಆಡಿಯೊ ಮತ್ತು 51dB ANC ವರೆಗಿನ ಸಪೋರ್ಟ್‌ ಅನ್ನು ಹೊಂದಿದೆ. ಹಾಗಾದರೆ ನಾಯ್ಸ್‌ ಮಾಸ್ಟರ್ ಬಡ್ಸ್ 2 ಇಯರ್‌ಬಡ್ಸ್‌ ಡಿವೈಸ್‌ನ ಇತರೆ ಫೀಚರ್ಸ್‌ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : Vivo ಹಾಗೂ iQOO ಮೊಬೈಲ್‌ ಖರೀದಿಸುವ ಗ್ರಾಹಕರಿಗೆ ಬಿಗ್‌ ಶಾಕ್‌! ಸದ್ಯದಲ್ಲೇ ಬೆಲೆ ಏರಿಕೆ ಸಾಧ್ಯತೆ

Noise Master Buds 2 ಡಿವೈಸ್‌ ಬೆಲೆ ಹಾಗೂ ಲಭ್ಯತೆ

ಮಾರುಕಟ್ಟೆಗೆ ಹೊಸದಾಗಿ ಲಗ್ಗೆ ಇಟ್ಟಿರುವ ನಾಯ್ಸ್ ಮಾಸ್ಟರ್ ಬಡ್ಸ್ 2 ಇಯರ್‌ಬಡ್ಸ್‌ ಡಿವೈಸ್‌ inaugural ಲಾಂಚ್‌ ಬೆಲೆ 7,999 ರೂ.ಗಳಿಗೆ ಲಭ್ಯವಿರುತ್ತದೆ. ಈ ಇಯರ್‌ಬಡ್ಸ್‌ ಡಿವೈಸ್‌ ಕಾರ್ಬನ್, ಆರಮ್ ಮತ್ತು ಮರ್ಕ್ಯುರಿ ಎಂಬ ಮೂರು ಕಲರ್‌ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ. ಅಂದಹಾಗೆ ಮಾಸ್ಟರ್ ಬಡ್ಸ್ 2 ಇಯರ್‌ಬಡ್ಸ್‌ ಡಿವೈಸ್‌ಗಾಗಿ ಪೂರ್ವ-ಬುಕಿಂಗ್ ಈಗ ತೆರೆದಿದೆ. ಆಸಕ್ತ ಗ್ರಾಹಕರು ನಾಯ್ಸ್‌ ಕಂಪನಿಯ ಅಧಿಕೃತ ವೆಬ್‌ಸೈಟ್ ಮತ್ತು ರಿಟೇಲ್‌ ಸ್ಟೋರ್‌ಗಳ ಮೂಲಕ ನಾಯ್ಸ್‌ ಮಾಸ್ಟರ್ ಬಡ್ಸ್ 2 ಡಿವೈಸ್‌ ಅನ್ನು ಪೂರ್ವ-ಬುಕ್ ಮಾಡಬಹುದು. ಇನ್ನು ನಾಯ್ಸ್ ಮಾಸ್ಟರ್ ಬಡ್ಸ್ 2 ಡಿವೈಸ್‌ ಇದೇ ಮಾರ್ಚ್ 19 ರಂದು ಮಾರಾಟಕ್ಕೆ ಬರಲಿದೆ.

Noise Master Buds 2

ನಾಯ್ಸ್ ಮಾಸ್ಟರ್ ಬಡ್ಸ್ 2 ಡಿವೈಸ್‌ನ ಫೀಚರ್ಸ್‌

ನೂತನ ನಾಯ್ಸ್ ಮಾಸ್ಟರ್ ಬಡ್ಸ್ 2 ಡಿವೈಸ್‌ ವಿನೈಲ್ ಡಿಸ್ಕ್-ಪ್ರೇರಿತ ವಿನ್ಯಾಸ ಹೊಂದಿದೆ. ಇದು ಸ್ಪಷ್ಟ ಕರೆಗಳಿಗಾಗಿ 6 ಮೈಕ್ ಎನ್ವಿರಾನ್ಮೆಂಟಲ್ ನಾಯ್ಸ್ ಕ್ಯಾನ್ಸಲೇಷನ್ ಸೌಲಭ್ಯವನ್ನು ಪಡೆದುಕೊಂಡಿದೆ. ನಾಯ್ಸ್ ಮಾಸ್ಟರ್ ಬಡ್ಸ್ 2 ಇಯರ್‌ಬಡ್ಸ್‌ ಬುದ್ಧಿವಂತ ಹೆಡ್ ಟ್ರ್ಯಾಕಿಂಗ್‌ ಜೊತೆಗೆ 360 ಡಿಗ್ರಿ ಸ್ಪಾಟಿಯಲ್ ಆಡಿಯೊ ಅನ್ನು ಸಹ ಸಪೋರ್ಟ್ ಮಾಡುತ್ತದೆ. ಈ ಹೊಸ ಇಯರ್‌ಬಡ್‌ಗಳು ಉತ್ತಮ ಆಡಿಯೊ ಬೆಂಬಲಕ್ಕಾಗಿ 10mm ಡ್ರೈವರ್‌ಗಳನ್ನು ಪಡೆದುಕೊಂಡಿವೆ. ಈ ಡಿವೈಸ್‌ನಲ್ಲಿ ಬಳಕೆದಾರರು ಕೇಸ್‌ನೊಂದಿಗೆ 30 ಗಂಟೆಗಳ ವರೆಗೆ ಆಡಿಯೊ ಪ್ಲೇಬ್ಯಾಕ್ ಪಡೆಯಬಹುದು. ಇನ್ನು ಇಯರ್‌ಬಡ್‌ಗಳೊಂದಿಗೆ 6 ಗಂಟೆಗಳ ವರೆಗೆ ಆಡಿಯೊ ಪ್ಲೇಬ್ಯಾಕ್ ಪಡೆಯಬಹುದು ಎಂದು ನಾಯ್ಸ್ ಹೇಳುತ್ತದೆ.

ಹಾಗೆಯೇ ನಾಯ್ಸ್ ಮಾಸ್ಟರ್ ಬಡ್ಸ್ 2 ಇಯರ್‌ಬಡ್ಸ್‌ ಸೌಂಡ್ ಬೈ ಬೋಸ್ ಬ್ರಾಂಡಿಂಗ್‌ನ ಬೆಂಬಲ ಇದೆ. ಈ ಸಹಯೋಗವು ಹೆಚ್ಚು ಸಮತೋಲಿತ ಮತ್ತು ತಲ್ಲೀನಗೊಳಿಸುವ ಆಡಿಯೊ ಅನುಭವವನ್ನು ಒದಗಿಸುತ್ತದೆ ಎಂದು ನಾಯ್ಸ್ ಹೇಳಿಕೊಂಡಿದೆ. ಹಾಗೆಯೇ ನಾಯ್ಸ್ ಮಾಸ್ಟರ್ ಬಡ್ಸ್ 2 ಕಂಪನಿಯ ಅತ್ಯಾಧುನಿಕ 51dB ವರೆಗೆ ಬೆಂಬಲಿಸುವ ಆಕ್ಟಿವ್ ನಾಯ್ಸ್ ಕ್ಯಾನ್ಸಲೇಷನ್ (ANC) ಸೌಲಭ್ಯ ಪಡೆದುಕೊಂಡಿದೆ. ಅಲ್ಲದೇ ನಾಯ್ಸ್ ಆಡಿಯೋ ಕಂಪ್ಯಾನಿಯನ್ ಆಪ್‌ ಮೂಲಕ ಪ್ರವೇಶಿಸಬಹುದಾದ AI ವಾಯ್ಸ್ ಚಾಟ್ ಅಸಿಸ್ಟೆಂಟ್ ಅನ್ನು ಸಜ್ಜುಗೊಳಿಸಲಾಗಿದೆ. ಇದರೊಂದಿಗೆ ಹೆಡ್-ಗೆಸ್ಚರ್ ಕಂಟ್ರೋಲ್‌ ಸೌಲಭ್ಯ ಸಹ ಲಭ್ಯವಿದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile

Digit.in
Logo
Digit.in
Logo