ಗೂಗಲ್‌ನ ಹೊಸ ‘Nano Banana AI Image Tool’ ಬಳಸುವುದು ಹೇಗೆ? ಹಂತ ಹಂತದ ಮಾಹಿತಿ ಇಲ್ಲಿದೆ

HIGHLIGHTS

Nano Banana ಟೂಲ್‌ನಲ್ಲಿ ನಿಮ್ಮ ಕಲ್ಪನೆಗೆ ತಕ್ಕಂತೆ ಹೊಸ ಚಿತ್ರಗಳನ್ನು ಮಾಡಬಹುದು.

ಫೋಟೋದಲ್ಲಿರುವ ವಸ್ತುಗಳನ್ನು ತೆಗೆದುಹಾಕಬಹುದು ಅಥವಾ ಹೊಸದನ್ನು ಸೇರಿಸಬಹುದು.

ಒಬ್ಬ ವ್ಯಕ್ತಿ ಅಥವಾ ವಸ್ತುವನ್ನು ಬೇರೆ ಬೇರೆ ಫೋಟೋಗಳಲ್ಲಿಯೂ ಒಂದೇ ರೀತಿ ಇರಿಸಬಹುದು.

ಗೂಗಲ್‌ನ ಹೊಸ ‘Nano Banana AI Image Tool’ ಬಳಸುವುದು ಹೇಗೆ? ಹಂತ ಹಂತದ ಮಾಹಿತಿ ಇಲ್ಲಿದೆ

Gemini AI Image Editing: ಕೆಲವು ದಿನಗಳ ಹಿಂದೆ ಹೊಸ AI ಇಮೇಜ್ ಎಡಿಟಿಂಗ್ ಟೂಲ್ ನಾನೋ ಬನಾನಾ (Nano Banana) ಅಂತ ಇಂಟರ್ನೆಟ್‌ನಲ್ಲಿ ಸಖತ್ ಚರ್ಚೆಯಲ್ಲಿತ್ತು. ಇದು ಇಮೇಜ್ ಎಡಿಟಿಂಗ್ ಜಗತ್ತನ್ನೇ ಬದಲಾಯಿಸುತ್ತೆ ಅಂತ ಎಲ್ಲರೂ ಮಾತಾಡ್ತಿದ್ರು. ನಾನು ಸಹ ಇದನ್ನೇ ಆಸಕ್ತಿಯಿಂದ ಕಾಯುತ್ತಿದ್ದೆ. ಗೂಗಲ್ ತನ್ನ ಹೊಸ Gemini 2.5 ಇಮೇಜ್ ಎಡಿಟಿಂಗ್ ಮಾಡೆಲ್ ಅನ್ನು “ನಾನೋ ಬನಾನಾ” ಅಂತ ಹೆಸರಿಸಿದೆ ಮತ್ತು ಅದನ್ನು ನೇರವಾಗಿ ಜೆಮಿನಿ ಆಪ್‌ನಲ್ಲಿ ಸೇರಿಸಲಾಗಿದೆ ಅಂತ ಗೊತ್ತಾದ ತಕ್ಷಣ ನಾನು ಕೂಡ ಅದನ್ನು ಬಳಸಲು ಶುರು ಮಾಡಿದೆ. ಬಳಸಿದ ನಂತರ ಇದು ಇಮೇಜ್ ಎಡಿಟಿಂಗ್ ಪ್ರಪಂಚವನ್ನೇ ಸಂಪೂರ್ಣವಾಗಿ ಬದಲಾಯಿಸುತ್ತದೆ ಎಂದು ಎಲ್ಲರೂ ಹೇಳುತ್ತಾರೆ.

Digit.in Survey
✅ Thank you for completing the survey!

Nano Banana ಬಳಕೆಯಲ್ಲಿ ನನ್ನ ಅನಿಸಿಕೆ ಮತ್ತು ಉದಾಹರಣೆಗಳು:

ಈ ಗೂಗಲ್ ಎಡಿಟಿಂಗ್ ಟೂಲ್ ಬಳಸುವುದು ಎಷ್ಟು ಸುಲಭ ಎಂದರೆ Product photography, Fashion photography ಮತ್ತು Social media images ಅನ್ನು ಫೋಟೋಶಾಪ್‌ನಂತಹ ಭಾರಿ ಸಾಫ್ಟ್‌ವೇರ್‌ನಲ್ಲಿನ ಸಂಕೀರ್ಣ ಸೆಟ್ಟಿಂಗ್‌ಗಳಿಲ್ಲದೆ ಬಳಸಬಹುದು. ನಾನು ಕುರ್ಚಿಯಲ್ಲಿ ಕುಳಿತು ಒಂದೆರಡು ಫೋಟೋಗಳನ್ನು ಅಪ್ಲೋಡ್ ಮಾಡಿ ಅವುಗಳ ಲೈವ್ ಸ್ಕ್ರೀನ್ ಶಾಟ್ ನಿಮ್ಮ ಮುಂದೆ ಇಟ್ಟಿದ್ದೇನೆ. ಇದರ ರಿಸಲ್ಟ್ ಸಿಕ್ಕಾಪಟ್ಟೆ ಆಶ್ಚರ್ಯ ಮತ್ತು ಇಂಟ್ರೆಸ್ಟಿಂಗ್ ಮಾಡೋದರಲ್ಲಿ ಬೇರೆ ಯಾವುದೇ ಸಂದೇಹ ಬೇಡ ಬಿಡಿ ಅದಕ್ಕೆ ಸಾಕ್ಷಿ ಇಲ್ಲಿದೆ ನೋಡಿ.

Also Read: 43 ಇಂಚಿನ KODAK Smart TV ಕೇವಲ ₹15,000ಕ್ಕಿಂತ ಕಡಿಮೆ ಬೆಲೆಗೆ ಲಭ್ಯ! ಕೈ ಜಾರುವ ಮುಂಚೆ ಡೀಲ್ ಖರೀದಿಸಿ!

ಮೊದಲಿಗೆ Blending Photos ಬಳಸಿ ‘ಒಬ್ಬ ಸ್ಕೂಲ್ ಹುಡುಗಿ ಮತ್ತು ಮುದ್ದಾದ ನಾಯಿ ಎರಡು ಬೇರೆ ಬೇರೆ ಫೋಟೋಗಳನ್ನು ಒಟ್ಟಿಗೆ ಸೇರಿಸಿ ಇಬ್ಬರು ಒಬ್ಬರನೊಬ್ಬರು ನೋಡುತ್ತಾ ಆಟವಾಡಬೇಕು ಎಂದು ಕಮಾಂಡ್ ಟೈಪ್ ಮಾಡಿ ಕೇಳಿದಾಗ ಬಂದ ಉತ್ತರ ಈ ಕೆಳಗಿದೆ. ಇದು ತುಂಬಾ ಪವರ್‌ಫುಲ್ ಮತ್ತು ತಮಾಷೆಯಾಗಿದೆ ಆದ್ದರಿಂದ ನಾನು ಇದನ್ನು ಹಲವು ಬಾರಿ ಬಳಸಿದ್ದೇನೆ.

ಎರಡನೇಯದಾಗಿ Cloths on try ಮೇರೆಗೆ ಕ್ಯಾಶುಯಲ್ ಡ್ರೆಸ್‌ನಲ್ಲಿರುವ ಒಬ್ಬ ಹುಡುಗಿಗೆ ಮತ್ತೊಂದು ಹೊಸ ರೀತಿಯ ಡ್ರೆಸ್ ಟ್ರೈ ಮಾಡಿದರೆ ಹೇಗೆ ಕಾಣುತ್ತದೆ ಎಂದು ಟೈಪ್ ಮಾಡಿ ನೋಡಿದಾಗ ಬಂದ ರಿಸಲ್ಟ್ ಈ ಕೆಳಗಿದೆ. ಈ ರೀತಿ ನಾನು ಹತ್ತಾರು ಕಮಾಂಡ್ ನೀಡಿ ಅತ್ಯುತ್ತಮ ರಿಸಲ್ಟ್ ಪಡೆದಿದ್ದೇನೆ. ಆದರೆ ನಿಮಗೆ ನನ್ನ ಮಾತು ಇನ್ನು ಸರಳ ರೀತಿಯಲ್ಲಿ ತಿಳಿಸಲು ಈ ಉದಾಹರಣೆಗಳನ್ನು ಹಂಚಿಕೊಂಡಿದ್ದೇನೆ.

Nano Banana Clothes try on-
Nano Banana Clothes try on-

ಈ ನಾನೋ ಬನಾನಾ ಇಮೇಜ್ ಎಡಿಟಿಂಗ್‌ನಲ್ಲಿ ಏನೇನು ಮಾಡಬಹುದು?

ಫೋಟೋವನ್ನು ಬದಲಾಯಿಸುವುದು: ನೀವು ಒಂದು ಫೋಟೋವನ್ನು ಅಪ್‌ಲೋಡ್ ಮಾಡಿ “ಆ ವಸ್ತುವನ್ನು ತೆಗೆಯಿರಿ” ಅಥವಾ “ಬಟ್ಟೆಯ ಬಣ್ಣವನ್ನು ಬದಲಾಯಿಸು” ಎಂದು ಹೇಳಬಹುದು. ಮಾದರಿ ನೀವು ಹೇಳಿದಂತೆ ಮಾಡುತ್ತದೆ.

ಹೊಸ ಚಿತ್ರಗಳನ್ನು ರಚಿಸುವುದು: ನೀವು ಕೇವಲ ಟೆಕ್ಸ್ಟ್ ಬಳಸಿ ಹೊಸ ಚಿತ್ರಗಳನ್ನು ರಚಿಸಬಹುದು. ನೀವು ಒಂದು ಸನ್ನಿವೇಶವನ್ನು ಒಂದು ಪಾತ್ರವನ್ನು ಅಥವಾ ಒಂದು ಸ್ಟೈಲ್ ಅನ್ನು ವಿವರಿಸಬಹುದು.

ಒಂದೇ ರೀತಿಯಲ್ಲಿ ಕಾಣುವಂತೆ ಮಾಡುವುದು: ಇದು ಒಂದು ಅದ್ಭುತವಾದ ವೈಶಿಷ್ಟ್ಯ. ನೀವು ಒಂದೇ ವ್ಯಕ್ತಿಯನ್ನು ಫೋಟೋಗಳಲ್ಲಿ ಎಡಿಟ್ ಮಾಡಿ ಆ ವ್ಯಕ್ತಿಯ ಮುಖ ಯಾವಾಗಲೂ ಒಂದೇ ರೀತಿ ಇರುತ್ತದೆ.

ಬಹು ಬದಲಾವಣೆಗಳು: ನೀವು ಒಮ್ಮೆಲೇ ಹಲವು ಬದಲಾವಣೆಗಳನ್ನು ಮಾಡಬೇಕೆಂದು ಕೇಳಬಹುದು.

ಈ ನಾನೋ ಬನಾನಾನು ಹೇಗೆ ಬಳಸಬೇಕು?

  • ಮೊದಲಿಗೆ ನಿಮ್ಮ ಫೋನ್‌ನಲ್ಲಿ ಜೆಮಿನಿ ಅಪ್ಲಿಕೇಶನ್ ಅಪ್ಡೇಟ್ ಮಾಡಿ ಅದನ್ನು ತೆರೆಯಿರಿ.
  • ಈಗ ನಿಮ್ಮ ಫೋಟೋ ಗ್ಯಾಲರಿ ಅಥವಾ ಲೈವ್ ಫೋಟೋ ಕ್ಲಿಕ್ ಮಾಡಿ ಅಪ್ಲೋಡ್ ಬಟನ್ ಅನ್ನು ಕ್ಲಿಕ್ ಮಾಡಿ.
  • ಈಗ ಇದರಲ್ಲಿ ನಿಮಗೆ ಏನು ಬೇಕೋ ಅದನ್ನು ಟೈಪ್ ಮಾಡಿ ಅಥವಾ ಈ ಫೋಟೋದೊಂದಿಗೆ ಏನು ಮಾಡಬೇಕೋ ಟೈಪ್ ಮಾಡಿ ಅಂದ್ರೆ ಬ್ಯಾಕ್ಗ್ರೌಂಡ್ ಬದಲಾವಣೆ, ಡ್ರೆಸ್ ಬದಲಾವಣೆ, ಅಥವಾ ಶೋ, ಟಾಪ್ ಏನೇನ್ನದರು ಬದಲಾಯಿಸಬಹುದು ಆದರೆ ನೀವು ಏನು ಬದಲಾಯಿಸಬೇಕೆಂದು ಸ್ಪಷ್ಟವಾಗಿ ಟೈಪ್ ಮಾಡಿ.
  • ಇದರ ನಂತರ ಕೆಲವು ಸೆಕೆಂಡುಗಳಲ್ಲಿ ನಿಮಗೆ ಹೊಸ ಫೋಟೋ ಬರುತ್ತದೆ ಇಷ್ಟವಾಗದಿದ್ದರೆ ಬೇರೆ ಏನು ಬೇಕೋ ಅದನ್ನು ಟೈಪ್ ಮಾಡಿ ಪಡೆಯಿರಿ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo