Voter Card: ವೋಟರ್ ಐಡಿ ಕಾರ್ಡ್‌ನಲ್ಲಿ ಅಡ್ರೆಸ್ ಚೇಂಜ್ ಮಾಡೋದು ಹೇಗೆ ತಿಳಿಯಿರಿ

Voter Card: ವೋಟರ್ ಐಡಿ ಕಾರ್ಡ್‌ನಲ್ಲಿ ಅಡ್ರೆಸ್ ಚೇಂಜ್ ಮಾಡೋದು ಹೇಗೆ ತಿಳಿಯಿರಿ
HIGHLIGHTS

ಭಾರತದಲ್ಲಿ 18 ವರ್ಷದ ಮೇಲ್ಪಟ್ಟ ಎಲ್ಲ ಭಾರತೀಯರಿಗೆ ಇದೊಂದು ಮಹತ್ವದ ದಾಖಲೆಗಳಲ್ಲಿ ಒಂದಾಗಿದೆ.

ಮತದಾರರ ಗುರುತಿನ ಚೀಟಿಯು (Voter Card) ವ್ಯಕ್ತಿಯ ಗುರುತು ಮತ್ತು ವಿಳಾಸವನ್ನು ಸಾಬೀತುಪಡಿಸಲು ಅಧಿಕೃತ ದಾಖಲೆಯಾಗಿದೆ.

ಪ್ರತಿಯೊಂದು ಚುನಾವಣೆಯಲ್ಲಿ ನೋಂದಾಯಿಸಲು ಮತ್ತು ಮತ ಚಲಾಯಿಸಲು ಮತದಾರರ ಗುರುತಿನ ಚೀಟಿಯನ್ನು (Voter Card) ಬಳಸಬಹುದು.

ನೀವೊಬ್ಬ ಭಾರತೀಯರಾಗಿದ್ದಾರೆ ಮತದಾರರ ಗುರುತಿನ ಚೀಟಿಯ (Voter Card) ಬಗ್ಗೆ ಹೆಚ್ಚಿನ ಪರಿಚಯ ಬೇಕಿಲ್ಲ. ಯಾಕೆಂದರೆ 18 ವರ್ಷದ ಮೇಲ್ಪಟ್ಟ ಎಲ್ಲ ಭಾರತೀಯರಿಗೆ ಇದೊಂದು ಮಹತ್ವದ ದಾಖಲೆಗಳಲ್ಲಿ ಒಂದಾಗಿದೆ. ದೇಶದಲ್ಲಿ ನಡೆಯುವ ಪ್ರತಿಯೊಂದು ಚುನಾವಣೆಯಲ್ಲಿ ನೋಂದಾಯಿಸಲು ಮತ್ತು ಮತ ಚಲಾಯಿಸಲು ನಿಮ್ಮ ಈ ಮತದಾರರ ಗುರುತಿನ ಚೀಟಿಯನ್ನು (Voter Card) ಬಳಸಬಹುದು. ಅಷ್ಟೇಯಲ್ಲದೆ ನಿಮಗೆ ಅಗತ್ಯವಿದ್ದಾಗ ಗುರುತಿನ ದಾಖಲೆಯನ್ನು ಹಲವಾರು ಕಾರ್ಯ ಕೆಲಸಗಳಿಗೆ ಬಳಸಬಹುದು. ಈ ಕಾರಣಗಳಿಗಾಗಿ ಮತದಾರರ ಗುರುತಿನ ಚೀಟಿಯ (Voter Card) ಕಾರ್ಡ್‌ನಲ್ಲಿ ನಿಮ್ಮ ವಿಳಾಸವನ್ನು ಸದಾ ನಿಖರವಾಗಿಸುವುದು ಅನಿವಾರ್ಯ ಮತ್ತು ಕಡ್ಡಾಯವಾಗಿದೆ.

Also Read: Lost or Stolen: ಕಳೆದುಹೋದ / ಕಳ್ಳತನವಾದ ಸ್ಮಾರ್ಟ್‌ಫೋನ್‌ಗಳನ್ನು ಟ್ರ್ಯಾಕ್ ಮಾಡಿ ಬ್ಲಾಕ್ ಮಾಡುವುದು ಹೇಗೆ?

ವೋಟರ್ ಕಾರ್ಡ್‌ನಲ್ಲಿ (Voter Card) ವಿಳಾಸವನ್ನು ಸದಾ ಅಪ್ಡೇಟ್ ಮಾಡುವುದು ಕಡ್ಡಾಯ

ಭಾರತದಲ್ಲಿ ಮತದಾರರ ಫೋಟೊ ಗುರುತಿನ ಕಾರ್ಡ್‌ಗಳನ್ನು (EPIC) ಮತದಾರರ ಗುರುತಿನ ಚೀಟಿ ಎಂದೂ ಕರೆಯಲಾಗುತ್ತದೆ ಇದನ್ನು ಭಾರತೀಯ ಚುನಾವಣಾ ಆಯೋಗ (ECI) ದೇಶದ ಅರ್ಹ ನಿವಾಸಿಗಳಿಗೆ ನೀಡಲಾಗುತ್ತದೆ. ಈ ಭಾರತೀಯ ಚುನಾವಣಾ ಆಯೋಗವು ನಿಮ್ಮ ಮತದಾರರ ಗುರುತಿನ ಚೀಟಿಯಲ್ಲಿ ನಿಮ್ಮ ವಿಳಾಸವನ್ನು ಅಪ್ಡೇಟ್ ಮಾಡಲು ಸುಲಭಗೊಳಿಸಿದೆ. ನಿಮ್ಮ ಹೆಸರನ್ನು ಮತದಾರರ ಗುರುತಿನ ಚೀಟಿಯ (Voter Card) ಕಾರ್ಡ್‌ನಲ್ಲಿ ಸೇರಿಸಲು ಮತ್ತು ನಿಮ್ಮ ವಿಳಾಸವನ್ನು ಸದಾ ಅಪ್ಡೇಟ್ ಮಾಡಿಡಲು ಮತ್ತು ಹೊಸ ಕ್ಷೇತ್ರದ ಪಟ್ಟಿಯಲ್ಲಿ ನಿಮ್ಮ ಹೊಸ ಅಡ್ರೆಸ್ ಸೇರಿಸುವುದು ಮುಖ್ಯವಾಗಿದೆ.

How to change Address in Voter card online
How to change Address in Voter card online

ವೋಟರ್ ಕಾರ್ಡ್‌ನಲ್ಲಿ ಅಡ್ರೆಸ್ ಆನ್‌ಲೈನ್‌ನಲ್ಲಿ ಬದಲಾಯಿಸುವುದು ಹೇಗೆ?

ನಿಮ್ಮ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದ https://voters.eci.gov.in/signup ವೆಬ್‌ಸೈಟ್‌ಗೆ ಹೋಗಿ ಆನ್‌ಲೈನ್ ಮತದಾರರ ನೋಂದಣಿ ಆಯ್ಕೆಯನ್ನು ಆರಿಸಿ.

ಇದರ ನಂತರ ನೀವು ಒದಗಿಸಿದ ಆಯ್ಕೆಗಳಲ್ಲಿ ಫಾರ್ಮ್ 8A ಅನ್ನು ಆಯ್ಕೆಮಾಡಿ ಅದರ ನಂತರ ಆನ್‌ಲೈನ್ ಫಾರ್ಮ್ ಹೊಸ ಟ್ಯಾಬ್‌ನಲ್ಲಿ ಗೋಚರಿಸುತ್ತದೆ.

ನಿಮ್ಮ ಹೆಸರು ಮತ್ತು ವಿಳಾಸ, ರಾಜ್ಯ, ಕ್ಷೇತ್ರ, ಹಾಗೆಯೇ ನಿಮ್ಮ ಹೊಸ ವಿಳಾಸದಂತಹ ವಿವರಗಳನ್ನು ಅಗತ್ಯವಿರುವಂತೆ ಭರ್ತಿ ಮಾಡಿ.

ನಿಮ್ಮ ಪ್ರಸ್ತುತ ವಿಳಾಸವನ್ನು ನಮೂದಿಸುವ ಡಾಕ್ಯುಮೆಂಟ್ ಅನ್ನು ಅಪ್‌ಲೋಡ್ ಮಾಡಿ (ಉದಾಹರಣೆಗೆ ಯುಟಿಲಿಟಿ ಬಿಲ್, ಬ್ಯಾಂಕ್ ಪಾಸ್ ಪುಸ್ತಕ, ಆಧಾರ್ ಕಾರ್ಡ್ ಅಥವಾ ಯಾವುದೇ ಅಧಿಕೃತ ದಾಖಲೆ) ನೀಡಬಹುದು.

ಒಮ್ಮೆ ನೀವು ಡಾಕ್ಯುಮೆಂಟ್‌ಗಳನ್ನು ಭರ್ತಿ ಮಾಡಿ ಮತ್ತು ಅಪ್‌ಲೋಡ್ ಮಾಡಿದ ನಂತರ ಫಾರ್ಮ್ ಅನ್ನು ಆನ್‌ಲೈನ್‌ನಲ್ಲಿ ಸಲ್ಲಿಸಿ.

ನಿಮ್ಮ ಅಪ್ಲಿಕೇಶನ್ ಅನ್ನು ಆನ್‌ಲೈನ್‌ನಲ್ಲಿ ಟ್ರ್ಯಾಕ್ ಮಾಡಲು ನೀವು ಬಳಸಬಹುದಾದ ಉಲ್ಲೇಖ ಸಂಖ್ಯೆಯನ್ನು ನೀವು ಸ್ವೀಕರಿಸುತ್ತೀರಿ ಇದನ್ನು ಜೋಪಾನವಾಗಿ ಒಂದೆಡೆ ಬರೆದಿಟ್ಟುಕೊಳ್ಳಿ.

ಇದರ ನಂತರ ಒಮ್ಮೆ ನೀವು ನಿಮ್ಮ ಅರ್ಜಿಯನ್ನು ಸಲ್ಲಿಸಿದ ನಂತರ ಅದನ್ನು ಚುನಾವಣಾ ಅಧಿಕಾರಿಗಳು ನಿಮ್ಮೆಲ್ಲ ದಾಖಲೆಗಳನ್ನು ಪರಿಶೀಲಿಸುತ್ತಾರೆ.

ಎಲ್ಲವೂ ಸರಿಯಾಗಿದ್ದರೆ ಯಶಸ್ವಿ ಪರಿಶೀಲನೆಯ ನಂತರ ನಿಮ್ಮ ಪ್ರಸ್ತುತ ವಿಳಾಸದೊಂದಿಗೆ ನಿಮ್ಮ ಮತದಾರರ ಗುರುತಿನ ಚೀಟಿಯನ್ನು ನೀವು ಸ್ವೀಕರಿಸುತ್ತೀರಿ.

Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ ವಾಟ್ಸಾಪ್ Channel View ಮಾಡಿ ಸೇರಿಕೊಳ್ಳಿ!

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo