ಸರ್ಕಾರದ ಜಬರ್ದಸ್ತ್ ಆಕ್ಷನ್! ಹೇಳದೆ ಕೇಳದೆ 350 ಕ್ಕೂ ಅಧಿಕ Smartphone ಬ್ಲಾಕ್ ಮಾಡಿದ DoT ಕಾರಣವೇನು ಗೋತ್ತಾ?

ಸರ್ಕಾರದ ಜಬರ್ದಸ್ತ್ ಆಕ್ಷನ್! ಹೇಳದೆ ಕೇಳದೆ 350 ಕ್ಕೂ ಅಧಿಕ Smartphone ಬ್ಲಾಕ್ ಮಾಡಿದ DoT ಕಾರಣವೇನು ಗೋತ್ತಾ?
HIGHLIGHTS

ಆನ್ಲೈನ್ ವಂಚನೆಗಳ ಬಗ್ಗೆ ನೀವು ಕೇಳುತ್ತಿರಬಹುದು ಇದನ್ನು ತಡೆಯಲು ಸರ್ಕಾರ ಸಹ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿರುವುದನ್ನು ಗಮನಿಸಬಹುದು.

350 ಕ್ಕೂ ಅಧಿಕ Smartphone ಬ್ಲಾಕ್ ಮಾಡಿ 10,834 ಅಧಿಕ ಮೊಬೈಲ್ ನಂಬರ್ಗಳನ್ನು ಬಂದ್ ಮಾಡಿದೆ.

DoT ಇನ್ನು ಮೋಸದ ಚಟುವಟಿಕೆಗಳಲ್ಲಿ ಬಳಸುವ Smartphone ಮುಚ್ಚಲು ಮತ್ತು ಅವುಗಳಿಗೆ ಸಂಬಂಧಿಸಿದ ಸಿಮ್ ಕಾರ್ಡ್‌ಗಳನ್ನು ನಿಷ್ಕ್ರಿಯಗೊಳಿಸಲಿದೆ.

DoT blocked more than 350 smartphones: ಭಾರತದಲ್ಲಿ ಪ್ರತಿದಿನ ನಡೆಯುತ್ತಿರುವ ಆನ್ಲೈನ್ ವಂಚನೆಗಳ ಬಗ್ಗೆ ನೀವು ಕೇಳುತ್ತಿರಬಹುದು ಇದನ್ನು ತಡೆಯಲು ಸರ್ಕಾರ ಸಹ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿರುವುದನ್ನು ಗಮನಿಸಬಹುದು. ಇದರೊಂದಿಗೆ ಈಗ ಸರ್ಕಾರದ ಜಬರ್ದಸ್ತ್ ಆಕ್ಷನ್ ಕೈಗೆತ್ತುಕೊಂಡು ಹೇಳದೆ ಕೇಳದೆ 350 ಕ್ಕೂ ಅಧಿಕ Smartphone ಬ್ಲಾಕ್ ಮಾಡಿ 10,834 ಅಧಿಕ ಮೊಬೈಲ್ ನಂಬರ್ಗಳನ್ನು ಬಂದ್ ಮಾಡಿದೆ. ಎಡಕ್ಕೆ ಕರಣ ಈ ಮೊಬೈಲ್ ಮತ್ತು ನಂಬರ್ಗಳು ಆನ್ಲೈನ್ ಸ್ಕ್ಯಾಮ್ ಮಾಡಲು ಬಳಸಲಾಗುತ್ತಿದೆಂದು ವರದಿಯಾಗಿದೆ. ಇದರ ಹಿನ್ನೆಯಲ್ಲಿ ದೂರಸಂಪರ್ಕ ಇಲಾಖೆ (DoT) ಇನ್ನು ಮೋಸದ ಚಟುವಟಿಕೆಗಳಲ್ಲಿ ಬಳಸುವ ಮೊಬೈಲ್ ಫೋನ್‌ಗಳನ್ನು ಮುಚ್ಚಲು ಮತ್ತು ಅವುಗಳಿಗೆ ಸಂಬಂಧಿಸಿದ ಸಿಮ್ ಕಾರ್ಡ್‌ಗಳನ್ನು ನಿಷ್ಕ್ರಿಯಗೊಳಿಸಲು ಪ್ರಾರಂಭಿಸಿದೆ.

ಇದಕ್ಕೆ Chakshu ಪೋರ್ಟಲ್‌ನಿಂದ ಸಹಾಯ!

ಪ್ರಸ್ತುತ PTI ವರದಿಯ ಪ್ರಕಾರ ದೂರಸಂಪರ್ಕ ಇಲಾಖೆ (DoT) ವಂಚನೆಯ ಮತ್ತು ಫಿಶಿಂಗ್ ಹೊಂದಿರುವ SMS ಕಳುಹಿಸುವ 52 ಡಿವೈಸ್ಗಳನ್ನು ಬ್ಲಾಕ್ ಲಿಸ್ಟ್ ಮಾಡಲಾಗಿದೆ. ಅಲ್ಲದೆ ದೇಶಾದ್ಯಂತ 348 ಮೊಬೈಲ್ ಫೋನ್‌ಗಳು ಸ್ವಿಚ್ ಆಫ್ ಆಗಿವೆ. ಇದಲ್ಲದೆ ಇಲಾಖೆಯು 10,834 ಅನುಮಾನಾಸ್ಪದ ಮೊಬೈಲ್ ಸಂಖ್ಯೆಗಳನ್ನು ಗುರುತಿಸಿದ್ದು ಅವುಗಳನ್ನು ಮರು ಪರಿಶೀಲಿಸಲಾಗುವುದು. ಈ ಕ್ರಮಗಳನ್ನು ಕೈಗೊಳ್ಳುವ ಮೂಲಕ ದೂರಸಂಪರ್ಕ ಇಲಾಖೆಯು (DoT) ಮೊಬೈಲ್ ಬಳಕೆದಾರರನ್ನು ವಂಚಕರಿಂದ ರಕ್ಷಿಸಲು ಪ್ರಯತ್ನಿಸುತ್ತಿದೆ.

DoT blocked more than 350 smartphones that were used for fraud activities

ಟ್ವಿಟ್ಟರ್ ದೂರಿನ ಮೇರೆಗೆ Smartphone ಬ್ಲಾಕ್ ಮಾಡಲು ಕ್ರಮ

ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ತಂತ್ರಜ್ಞಾನ ವೃತ್ತಿಪರರು ಹಂಚಿಕೊಂಡ SMS ವಂಚನೆಯ ಪೋಸ್ಟ್‌ಗೆ ದೂರಸಂಪರ್ಕ ಇಲಾಖೆ (DoT) ಪ್ರತಿಕ್ರಿಯಿಸಿದೆ. ಇದಕ್ಕೆ ಪ್ರತಿಕ್ರಿಯಿಸಿದ ಇಲಾಖೆಯೂ ತಮ್ಮ ಪೋಸ್ಟ್‌ನಲ್ಲಿ ನಮೂದಿಸಿರುವ ಮೊಬೈಲ್ ಸಂಖ್ಯೆ ಹಾಗೂ ಅದಕ್ಕೆ ಸಂಬಂಧಿಸಿದ ಎಲ್ಲಾ ಮೊಬೈಲ್ ಫೋನ್‌ಗಳನ್ನು ಬ್ಲಾಕ್ ಮಾಡಿದ್ದೇವೆ. ಸಾಮಾಜಿಕ ಮಾಧ್ಯಮದಲ್ಲಿ ಸಂಭವಿಸಿದ SMS ವಂಚನೆಯ ಬಗ್ಗೆ ದೂರಸಂಪರ್ಕ ಇಲಾಖೆ (DoT) ತಕ್ಷಣ ಕ್ರಮ ಕೈಗೊಂಡಿದೆ.

Also Read: Snapdragon ಚಿಪ್‌ನೊಂದಿಗೆ Realme GT Neo 6 ಬಿಡುಗಡೆಗೆ ಸಜ್ಜು! ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೇನು?

ಆ ದೂರಿಗೆ ಸಂಬಂಧಿಸಿದ ಮೊಬೈಲ್ ಸಂಖ್ಯೆ ಮತ್ತು ಅದಕ್ಕೆ ಲಿಂಕ್ ಮಾಡಲಾದ ಇತರ 20 ಫೋನ್ ಸಂಖ್ಯೆಗಳನ್ನು ನಾವು ನಿರ್ಬಂಧಿಸಿದ್ದೇವೆ ಎಂದು ಇಲಾಖೆ ಉತ್ತರಿಸಿದೆ. ನೀವು ಕೂಡ ಇಂತಹ ವಂಚನೆಗೆ ಬಲಿಯಾದರೆ ತಕ್ಷಣವೇ ‘ಚಕ್ಷು’ ಪೋರ್ಟಲ್‌ಗೆ ಹೋಗಿ ದೂರು ದಾಖಲಿಸಿ ಎಂದು DoT ಹೇಳಿದೆ. ವಂಚನೆಗಾಗಿ ಬಳಸಲಾದ 700 ಕ್ಕೂ ಹೆಚ್ಚು SMS ಟೆಂಪ್ಲೆಟ್ಗಳನ್ನು DoT ನಿರ್ಬಂಧಿಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ TOI ಹೇಳಿದೆ. ಇಲಾಖೆಯು 10,834 ಸಂಶಯಾಸ್ಪದ ಮೊಬೈಲ್ ಸಂಖ್ಯೆಗಳನ್ನು ಗುರುತಿಸಿದ್ದು ಅವುಗಳನ್ನು ಮತ್ತೊಮ್ಮೆ ಮರು ಪರಿಶೀಲಿಸಲಾಗುವುದು ಎಂದು ಸರ್ಕಾರ ಹೇಳಿದೆ.

DoT blocked more than 350 smartphones that were used for fraud activities
DoT blocked more than 350 smartphones that were used for fraud activities

ಅದೇ ಸಮಯದಲ್ಲಿ ಪರಿಶೀಲನೆಯಲ್ಲಿ ವಿಫಲವಾದ ಕಾರಣ ಸುಮಾರು 8,272 ಮೊಬೈಲ್ ಸಂಖ್ಯೆಗಳನ್ನು ನಿರ್ಬಂಧಿಸಲಾಗಿದೆ. DoT ಕೇವಲ ಮೊಬೈಲ್ ಸಂಖ್ಯೆಗಳು ಮತ್ತು ಹ್ಯಾಂಡ್‌ಸೆಟ್‌ಗಳನ್ನು ನಿರ್ಬಂಧಿಸಿಲ್ಲ ಆದರೆ ಸೈಬರ್ ಅಪರಾಧಗಳು ಮತ್ತು ವಂಚನೆಗಳಲ್ಲಿ ಬಳಸಲಾಗುತ್ತಿರುವ 1.58 ಲಕ್ಷಕ್ಕೂ ಹೆಚ್ಚು ವಿಶಿಷ್ಟ ಮೊಬೈಲ್ ಗುರುತಿನ ಸಂಖ್ಯೆಗಳನ್ನು (IMEI) ನಿರ್ಬಂಧಿಸಿದೆ. ಅಲ್ಲದೆ ನಕಲಿ ದಾಖಲೆಗಳ ಆಧಾರದ ಮೇಲೆ ತೆಗೆದುಕೊಂಡಿದ್ದ ಸಿಮ್ ಕಾರ್ಡ್‌ಗಳನ್ನು ಸಹ ಇಲಾಖೆ ಬಂದ್ ಮಾಡಿದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

 
Digit.in
Logo
Digit.in
Logo