ಯಾವುದೇ ಕಾರ್ಡ್ ಅಥವಾ OTP ಇಲ್ಲದೆ ಕೂಡಾ ನಿಮ್ಮ ಬ್ಯಾಂಕ್ ಖಾತೆಯಿಂದ ಹಣ ಕಳವು ಆಗಬಹುದು.
ವಂಚಕರು ಪ್ರಧಾನ ಮಂತ್ರಿ ಕಿಸಾನ್ ಯೋಜನೆ ಪ್ರಯೋಜನ ಕೊಡುವುದಾಗಿ ಮಹಿಳೆಯನ್ನು ನಂಬಿಸಿ ವಂಚಿಸಲಾಗಿದೆ.
Cyber Fraud Alert ಅಡಿಯಲ್ಲಿ ವಂಚಕರು ಹೆಚ್ಚು ಗ್ರಾಮೀಣ ಮತ್ತು ತಿಳುವಳಿಕೆ ಇಲ್ಲದವರರೇ ಟಾರ್ಗೆಟ್ ಮಾಡಿ ವಂಚಿಸುತ್ತಿದ್ದಾರೆ.
Cyber Fraud Alert: ಇತ್ತೀಚೆಗೆ ಹೊಸ ರೀತಿಯ ಸೈಬರ್ ವಂಚನೆ ಬೆಳಕಿಗೆ ಬಂದಿದೆ. ಇದರ ವಿಶೇಷತೆ ಅಂದ್ರೆ ಯಾವುದೇ ಕಾರ್ಡ್ ಅಥವಾ OTP ಇಲ್ಲದೆ ಕೂಡಾ ನಿಮ್ಮ ಬ್ಯಾಂಕ್ ಖಾತೆಯಿಂದ ಹಣ ಕಳವು ಆಗಬಹುದು. ಜಾರ್ಖಂಡ್‌ನ ಗರ್ವಾ ಜಿಲ್ಲೆಯಲ್ಲಿ ವೃದ್ಧೆಯೊಬ್ಬರ ಖಾತೆಯಿಂದ ಸುಮಾರು ₹10,000 ಕಳೆದುಹೋಗಿದೆ. ಆಗಿದ್ದೆಗೆ ಅಂದ್ರೆ ವಂಚಕರು ಪ್ರಧಾನ ಮಂತ್ರಿ ಕಿಸಾನ್ ಯೋಜನೆ ಪ್ರಯೋಜನ ಕೊಡುತ್ತೇವೆ ಎಂದು ಮಹಿಳೆಯನ್ನು ನಂಬಿಸಿ ಆಕೆಯ ಕಣ್ಣಿನ ಸ್ಕ್ಯಾನ್ ಮಾಡಿ ಬ್ಯಾಂಕ್ ಖಾತೆಯಿಂದ ಹಣ ತೆಗೆದುಕೊಂಡಿದ್ದಾರೆ. ಹೆಚ್ಚಿನ ಬ್ಯಾಂಕ್ ಖಾತೆಗಳು ಆಧಾರ್ ಕಾರ್ಡ್‌ಗೆ ಲಿಂಕ್ ಆಗಿರುವುದರಿಂದ ಬಯೋಮೆಟ್ರಿಕ್ ಸ್ಕ್ಯಾನ್ ಅಂದ್ರೆ ಕಣ್ಣು ಅಥವಾ ಬೆರಳು ಗುರುತನ್ನು ಬಳಸಿ ಹಣ ತೆಗೆಯುವ ವ್ಯವಸ್ಥೆಯನ್ನು ದುರುಪಯೋಗ ಮಾಡಿದ್ದಾರೆ.
SurveyCyber Fraud Alert ಹೆಚ್ಚು ಗ್ರಾಮೀಣ ಮತ್ತು ತಿಳುವಳಿಕೆ ಇಲ್ಲದವರರೇ ಟಾರ್ಗೆಟ್!
ಈ ಘಟನೆ ಆಗಿದ್ದೇನು ಮತ್ತು ಕಾರ್ಡ್ ಅಥವಾ OTP ಇಲ್ಲದೆ ವಂಚಕರು ಹೇಗೆ ಬ್ಯಾಂಕ್ ಖಾತೆ ಖಾಲಿ ಮಾಡ್ತಾರೆ ಮತ್ತು ನೀವು ಹೇಗೆ ಸುರಕ್ಷಿತವಾಗಿರಬೇಕು ತಿಳಿಯಿರಿ. ಇಂದಿನ ಹೆಚ್ಚಿನ ಬ್ಯಾಂಕ್ ಖಾತೆಗಳು ವ್ಯಕ್ತಿಯ ಆಧಾರ್ ಕಾರ್ಡ್‌ಗೆ ಲಿಂಕ್ ಆಗಿರುತ್ತವೆ. ಈ ಲಿಂಕ್‌ನೊಂದಿಗೆ ಫಿಂಗರ್‌ಪ್ರಿಂಟ್ ಅಥವಾ ಐರಿಸ್ ಸ್ಕ್ಯಾನ್‌ನಂತಹ ಬಯೋಮೆಟ್ರಿಕ್ ಸ್ಕ್ಯಾನ್ ಬಳಸಿ ಹಣವನ್ನು ಹಿಂಪಡೆಯಬಹುದು.

ಬ್ಯಾಂಕುಗಳು ಈ ವಹಿವಾಟುಗಳ ಮೇಲೆ ಮಿತಿಗಳನ್ನು ನಿಗದಿಪಡಿಸಿದರೂ ವಂಚಕರು ಈ ವ್ಯವಸ್ಥೆಯನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತದೆ. ವಂಚಕರು ಪ್ರಧಾನ ಮಂತ್ರಿ ಕಿಸಾನ್ ಯೋಜನೆ ಪ್ರಯೋಜನ ಕೊಡುತ್ತೇವೆ ಎಂದು ಮಹಿಳೆಯನ್ನು ನಂಬಿಸಿ ಆಕೆಯ ಕಣ್ಣಿನ ಸ್ಕ್ಯಾನ್ ಮಾಡಿ ಬ್ಯಾಂಕ್ ಖಾತೆಯಿಂದ ಹಣ ತೆಗೆದುಕೊಂಡಿದ್ದಾರೆ. ಅವರು ಮಹಿಳೆಯ ಬ್ಯಾಂಕ್ ಖಾತೆಯನ್ನು ಹುಡುಕಲು ಆಕೆಯ ಆಧಾರ್ ಸಂಖ್ಯೆಯನ್ನು ಬಳಸಿದರು ಮತ್ತು ನಂತರ ಅವಳ ಅರಿವಿಲ್ಲದೆ ಹಣವನ್ನು ಅಕ್ರಮವಾಗಿ ಹಿಂಪಡೆಯಲು ಕಣ್ಣಿನ ಸ್ಕ್ಯಾನ್ ಮಾಡಿದರು.
ನೀವು ಸುರಕ್ಷಿತವಾಗಿರಲು ಏನೇನು ಮಾಡಬೇಕು?
ಆಧಾರ್ ಕಾರ್ಡ್ ಸುರಕ್ಷಿತವಾಗಿಡಿ: ನಿಮ್ಮ ಆಧಾರ್ ವಿವರಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳಬೇಡಿ. UIDAI ವೆಬ್‌ಸೈಟ್‌ನಲ್ಲಿ ವರ್ಚುವಲ್ ಆಧಾರ್ ಸಂಖ್ಯೆ ಬಳಸಿ.
ಬಯೋಮೆಟ್ರಿಕ್ಸ್ ಲಾಕ್ ಮಾಡಿ: ನೀವು UIDAI ವೆಬ್‌ಸೈಟ್‌ನಲ್ಲಿ ನಿಮ್ಮ ಫಿಂಗರ್‌ಪ್ರಿಂಟ್ ಮತ್ತು ಐರಿಸ್ ಸ್ಕ್ಯಾನ್ ಲಾಕ್ ಮಾಡಬಹುದು. ಅಗತ್ಯವಿದ್ದಾಗ ಮಾತ್ರ ಅನ್ಲಾಕ್ ಮಾಡಿ.
ವಂಚನೆಗಳಿಗೆ ಬಲಿಯಾಗಬೇಡಿ: ಯಾವುದೇ ಉಡುಗೊರೆಗಳು, ಬಹುಮಾನಗಳು ಅಥವಾ ಸರ್ಕಾರಿ ಯೋಜನೆಗಳ ಹೆಸರಿನಲ್ಲಿ ಕರೆ ಬಂದರೂ ಎಚ್ಚರಿಕೆಯಿಂದಿರಿ.
Also Read: ವಾವ್! ಬರೋಬ್ಬರಿ 15000mAh ಪವರ್ಫುಲ್ ಬ್ಯಾಟರಿ ಮತ್ತು ‘AC Phone’ ಬಿಡುಗಡೆಗೆ ಸಜ್ಜಾಗಿರುವ realme!
ವಂಚಕರಿಂದ ಸುರಕ್ಷಿತವಾಗಿರಲು ಈ ಹಂತಗಳನ್ನು ಅನುಸರಿಸಬಹುದು:
ನಿಮ್ಮ ಆಧಾರ್ ಮಾಹಿತಿಯನ್ನು ಸುರಕ್ಷಿತಗೊಳಿಸಿ
- ನಿಮ್ಮ ಆಧಾರ್ ಸಂಖ್ಯೆಯನ್ನು ಸಾರ್ವಜನಿಕವಾಗಿ ಅಥವಾ ಅಪರಿಚಿತ ಜನರೊಂದಿಗೆ ಎಂದಿಗೂ ಹಂಚಿಕೊಳ್ಳಬೇಡಿ.
- ನಿಮ್ಮ ಮೂಲ ಸಂಖ್ಯೆಯ ಬದಲಿಗೆ UIDAI ವೆಬ್‌ಸೈಟ್‌ನಿಂದ ವರ್ಚುವಲ್ ಆಧಾರ್ ಐಡಿ (VID) ಬಳಸಿಬಹುದು.
ನಕಲಿ ಕರೆಗಳು ಮತ್ತು ಕೊಡುಗೆಗಳ ಬಗ್ಗೆ ಎಚ್ಚರದಿಂದಿರಿ
- ಸರ್ಕಾರಿ ಸೌಲಭ್ಯಗಳು, ಉಡುಗೊರೆಗಳು ಅಥವಾ ಬಹುಮಾನಗಳನ್ನು ಪಡೆಯುವ ಕರೆಗಳು ಅಥವಾ ಸಂದೇಶಗಳ ಮೂಲಕ ವೈಯಕ್ತಿಕ ವಿವರಗಳನ್ನು ಹಂಚಿಕೊಳ್ಳುವುದನ್ನು ತಪ್ಪಿಸಬಹುದು.
- ನಿಮ್ಮ ಬ್ಯಾಂಕ್ ಅಥವಾ ಅಧಿಕೃತ ಸಹಾಯವಾಣಿಯೊಂದಿಗೆ ಪ್ರತಿಯೊಂದು ಕರೆ ಅಥವಾ ಮೆಸೇಜ್ಗಳನ್ನು ಪರಿಶೀಲಿಸಬಹುದು.
ಬ್ಯಾಂಕ್ ವಹಿವಾಟುಗಳನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಿ
- ನಿಮ್ಮ ಖಾತೆಯ ಬ್ಯಾಲೆನ್ಸ್ ಮತ್ತು ವಹಿವಾಟು ಇತಿಹಾಸವನ್ನು ಆಗಾಗ್ಗೆ ಪರಿಶೀಲಿಸಬಹುದು.
- ಎಲ್ಲಾ ವಹಿವಾಟುಗಳಿಗೆ SMS/ಇ-ಮೇಲ್ ಎಚ್ಚರಿಕೆಗಳನ್ನು ಸಕ್ರಿಯಗೊಳಿಸಬಹುದು.
ಅನುಮಾನಾಸ್ಪದ ಚಟುವಟಿಕೆಯನ್ನು ತಕ್ಷಣ ವರದಿ ಮಾಡಿ
- ಅನಧಿಕೃತ ವಹಿವಾಟುಗಳನ್ನು ನಿರ್ಬಂಧಿಸಲು ನಿಮ್ಮ ಬ್ಯಾಂಕಿನ ಗ್ರಾಹಕ ಬೆಂಬಲವನ್ನು ಸಂಪರ್ಕಿಸಬಹುದು.
- ವಂಚನೆಗಳನ್ನು ರಾಷ್ಟ್ರೀಯ ಸೈಬರ್ ಅಪರಾಧ ಸಹಾಯವಾಣಿ – 1930 ಅಥವಾ cybercrime.gov.in ವರದಿ ಮಾಡಬಹುದು.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile