Air India Plane Crash: ಭಾರತದಲ್ಲಿ ಇಂದು ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ಬೋಯಿಂಗ್ 787-8 ಡ್ರೀಮ್‌ಲೈನರ್, ಫ್ಲೈಟ್ AI-171, ಗುರುವಾರ ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಅಪಘಾತಕ್ಕೀಡಾಗಿದೆ. ಈ ಅಪಘಾತವು ಬೃಹತ್ ರಕ್ಷಣಾ ಕಾರ್ಯಾಚರಣೆಗಳಿಗೆ ನಾಂದಿ ಹಾಡಿದೆ. ಅಲ್ಲದೆ ಇದಕ್ಕೆ ಕಾರಣ ಇನ್ನೂ ತಿಳಿದಿಲ್ಲವಾದರೂ ವಿಮಾನ ವಿಪತ್ತುಗಳ ಕಾರಣಗಳನ್ನು ಕಂಡುಹಿಡಿಯಲು ಫ್ಲೈಟ್ ರೆಕಾರ್ಡರ್ ಅಂದರೆ ಕಪ್ಪು ಪೆಟ್ಟಿಗೆ (Black Box) ಕಂಡುಬಂದ ನಂತರವಷ್ಟೇ ಅಸಲಿ ಕಾರಣಗಳು ತಿಳಿಯುತ್ತವೆ. ಹಾಗಾದ್ರೆ ವಿಮಾನಗಳಲ್ಲಿನ ಈ ಕಪ್ಪು ಪೆಟ್ಟಿಗೆ (Black Box) ಅಂದ್ರೆ ಏನು? ಮತ್ತು ಅದು ಏಕೆ ಮುಖ್ಯ ತಿಳಿಯಿರಿ.
Air India Plane Crash ಬಗ್ಗೆ ಪ್ರಸ್ತುತದ ಮಾಹಿತಿ:
ಏರ್ ಇಂಡಿಯಾದ ವಿಮಾನವು ರನ್‌ವೇ 23 ರಿಂದ ಮಧ್ಯಾಹ್ನ 1:39 ಕ್ಕೆ ಟೇಕ್ ಆಫ್ IST ಕ್ಕೆ ಹೊರಟಿತು ಮತ್ತು ಶೀಘ್ರದಲ್ಲೇ MAYDAY ಕರೆಯನ್ನು ನೀಡಿತು ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ವರದಿ ಮಾಡಿದೆ. ವಿಮಾನವು ಕೇವಲ 625 ಅಡಿ ಎತ್ತರವನ್ನು ತಲುಪಿ ವಿಮಾನ ನಿಲ್ದಾಣದ ಹೊರಗಿನ ಮೇಘನಿ ನಗರ ಪ್ರದೇಶದಲ್ಲಿ ಅಪ್ಪಳಿಸಿತು ನಂತರ ಭಾರಿ ಬೆಂಕಿ ಕಾಣಿಸಿಕೊಂಡಿತು.
ಕ್ಯಾಪ್ಟನ್ ಸುಮೀತ್ ಸಭರ್ವಾಲ್ ಮತ್ತು ಮೊದಲ ಅಧಿಕಾರಿ ಕ್ಲೈವ್ ಕುಂದರ್ ಅವರ ನೇತೃತ್ವದಲ್ಲಿ ವಿಮಾನವು 232 ಪ್ರಯಾಣಿಕರು ಮತ್ತು 10 ಸಿಬ್ಬಂದಿಯನ್ನು ಲಂಡನ್ ಗ್ಯಾಟ್ವಿಕ್‌ಗೆ ಕರೆದೊಯ್ಯುತ್ತಿತ್ತು ಎನ್ನುವುದು ಕಂಫಾರ್ಮ್ ಆಗಿದೆ.
ವಿಮಾನಗಳಲ್ಲಿ’Black Box’ ಅಂದ್ರೆ ಏನು?
ಕಪ್ಪು ಪೆಟ್ಟಿಗೆ ಎಂದರೆ ಕೇವಲ ಕಪ್ಪು ಪೆಟ್ಟಿಗೆಯಲ್ಲ. ವಾಸ್ತವವಾಗಿ ಬ್ಲಾಕ್ ಬಾಕ್ಸ್ ತೀವ್ರ ಪರಿಸ್ಥಿತಿಗಳು ಮತ್ತು ಬೆಂಕಿಯಿಂದ ಬದುಕುಳಿಯಲು ವಿನ್ಯಾಸಗೊಳಿಸಲಾದ ಪ್ರಕಾಶಮಾನವಾದ ಕಿತ್ತಳೆ ಬಣ್ಣದ ಅಪಘಾತ-ನಿರೋಧಕ ಸಾಧನಗಳಾಗಿವೆ. ಪ್ರತಿಯೊಂದು ವಾಣಿಜ್ಯ ವಿಮಾನವು ಅಂತಹ ಎರಡು ರೆಕಾರ್ಡರ್‌ಗಳನ್ನು ಹೊಂದಿದ್ದು, ಇವುಗಳನ್ನು ಬಲವರ್ಧಿತ ಕೇಸಿಂಗ್‌ಗಳಲ್ಲಿ ಇರಿಸಲಾಗುತ್ತದೆ ಮತ್ತು ಸ್ಫೋಟಗಳು, ಬೆಂಕಿ, ನೀರಿನ ಒತ್ತಡ ಮತ್ತು ಹೆಚ್ಚಿನ ವೇಗದ ಅಪಘಾತಗಳನ್ನು ತಡೆದುಕೊಳ್ಳಬಲ್ಲವು.
ಫ್ಲೈಟ್ ಡೇಟಾ ರೆಕಾರ್ಡರ್ (FDR) ಎತ್ತರ, ವೇಗ, ಎಂಜಿನ್ ಒತ್ತಡ ಮತ್ತು ಹಾರಾಟದ ಮಾರ್ಗದ ಡೇಟಾದಂತಹ ನಿರ್ಣಾಯಕ ತಾಂತ್ರಿಕ ನಿಯತಾಂಕಗಳನ್ನು ದಾಖಲಿಸುತ್ತದೆ. ಅಪಘಾತಕ್ಕೀಡಾದ ಬೋಯಿಂಗ್ 787 ನಂತಹ ಆಧುನಿಕ ವಿಮಾನಗಳು ಕಾಕ್‌ಪಿಟ್ ಕಮಾಂಡ್ ಇನ್‌ಪುಟ್‌ಗಳಿಂದ ಹಿಡಿದು AC ವ್ಯವಸ್ಥೆಯವರೆಗೆ ಸಾವಿರಾರು ನಿಯತಾಂಕಗಳನ್ನು ದಾಖಲಿಸಬಹುದು. ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ (CVR) ಎಲ್ಲಾ ಕಾಕ್‌ಪಿಟ್ ಆಡಿಯೊವನ್ನು ದಾಖಲಿಸುತ್ತದೆ – ಪೈಲಟ್ ಸಂಭಾಷಣೆಗಳು, ರೇಡಿಯೋ ಪ್ರಸರಣಗಳು, ಎಚ್ಚರಿಕೆ ಅಲಾರಂಗಳು ಮತ್ತು ಯಾಂತ್ರಿಕ ಶಬ್ದಗಳೊಂದಿಗೆ ಇದು ಅಪಘಾತಕ್ಕೆ ಮುಂಚಿನ ಕ್ಷಣಗಳ ಬಗ್ಗೆ ಪ್ರಮುಖ ಮಾಹಿತಿಯನ್ನು ಒದಗಿಸುತ್ತದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile