ಅಮೆಜಾನ್‌ನಲ್ಲಿ ಇಂದು ಸೋನಿಯ ಈ Dolby Digital Soundbar ಮೇಲೆ ಭರ್ಜರಿ ಡಿಸ್ಕೌಂಟ್‌ಗಳು ಲಭ್ಯ!
ಅಮೆಜಾನ್ ಮಾರಾಟದಲ್ಲಿ ಲೇಟೆಸ್ಟ್ ಸೋನಿ Dolby Digital Soundbar ಭರ್ಜರಿ ಡಿಸ್ಕೌಂಟ್‌ನೊಂದಿಗೆ ಲಭ್ಯ.
ಅಮೆಜಾನ್ ಮಾರಾಟದಲ್ಲಿ ಸುಮಾರು ₹17,990 ರೂಗಳಿಗೆ ಸೋನಿಯ ಪವರ್ಫುಲ್ ಸೌಂಡ್ ಬಾರ್ ಪಟ್ಟಿಯಾಗಿದೆ
ಆಸಕ್ತರು ಆಯ್ದ ಬ್ಯಾಂಕ್ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಸಿ ಸುಮಾರು ₹1500 ರೂಗಳ ರಿಯಾಯಿತಿಯನ್ನು ಪಡೆಯಬಹುದು.
ಸೌಂಡ್‌ಬಾರ್‌ಗಳನ್ನು ತಯಾರಿಸುವಲ್ಲಿ ಬಹಳ ಪ್ರಸಿದ್ಧಿಯನ್ನು ಹೊಂದಿರುವ ಸೋನಿ (Sony) ಕಂಪನಿ ತನ್ನ ಹೊಸ Sony HT-S20R Real 5.1ch Dolby Digital Soundbar ಮೇಲೆ ಈಗ ಅಮೆಜಾನ್ ಸೇಲ್‌ನಲ್ಲಿ (Amazon Sale) ಸಿಕ್ಕಾಪಟ್ಟೆ ಡೀಲ್ ಮತ್ತು ಡಿಸ್ಕೌಂಟ್ ನೀಡಲು ಸಜ್ಜಾಗಿದೆ. ನೀವೊಂದು ಹೊಸ ಸೌಂಡ್‌ಬಾರ್ ಹುಡುಕುತ್ತಿದ್ದರೆ ಇದನ್ನು ಖರೀದಿಸುವುದು ತುಂಬ ಒಳ್ಳೆಯ ಬೆಲೆಗೆ ಜಬರದಸ್ತ್ ಡೀಲ್ ಮಾರಾಟವಾಗಿದೆ. ನೀವು ಹೆಚ್ಚಾಗಿ ಮ್ಯೂಸಿಕ್ ಕೇಳುವವರು ಅಥವಾ ಸಿನಿಮಾ ನೋಡುವವರಾಗಿದ್ದರೆ ಈ ಸೋನಿಯ ಈ 5.1ch ಸೌಂಡ್‌ಬಾರ್ ನಿಮಗೆ ಮನೆಯಲ್ಲೇ ಥಿಯೇಟರ್‌ನ ಅನುಭವ ಕೊಡಲು ಅತ್ಯುತ್ತಮ ಆಯ್ಕೆಯಾಗಿದೆ. ಈಗ ಇದು ಅಮೆಜಾನ್‌ನಲ್ಲಿ ಭಾರೀ ಡಿಸ್ಕೌಂಟ್‌ನೊಂದಿಗೆ ಅತ್ಯಂತ ಕಡಿಮೆ ಬೆಲೆಗೆ ಸಿಗುತ್ತಿದೆ. ಪ್ರಸ್ತುತ ಸುಮಾರು ₹17,990 ರೂಗಳಿಗೆ ಪವರ್ಫುಲ್ ಮಾತು ಪ್ರೀಮಿಯಂ ಫೀಚರ್ಗಳೊಂದಿಗೆ ಮಾರಾಟಕ್ಕೆ ಪಟ್ಟಿ ಮಾಡಲಾಗಿದೆ.
SurveyAlso Read: ಬರೋಬ್ಬರಿ 90 ದಿನಗಳ ವ್ಯಾಲಿಡಿಟಿ ನೀಡುವ Jio ಮತ್ತು Airtel ರಿಚಾರ್ಜ್ ಯೋಜನಗಳಲ್ಲಿ ಯಾವುದು ಬೆಸ್ಟ್?
Sony HT-S20R Real 5.1ch Dolby Digital Soundbar
ಈ ಬೆಲೆಗೆ ಮಾರುಕಟ್ಟೆಯಲ್ಲಿ ಬೇರೆ ಸೌಂಡ್‌ಬಾರ್‌ಗಳೂ ಇವೆ ಆದರೆ ಸೋನಿಯ ಈ ಸೌಂಡ್‌ಬಾರ್ ತೆಗೆದುಕೊಳ್ಳಲು ಕೆಲವು ಮುಖ್ಯ ಕಾರಣಗಳಿವೆ. ಈ Sony HT-S20R ಸೌಂಡ್‌ಬಾರ್ ನಿಜವಾದ 5.1 ಚಾನೆಲ್ ಸುತ್ತುವರಿದ ಧ್ವನಿಯನ್ನು ನೀಡುತ್ತದೆ. ಇದರಿಂದ ಯಾವುದೇ ವಿಷಯದ ಮಾತುಕತೆ (ಸಂಭಾಷಣೆ) ಸ್ಪಷ್ಟವಾಗಿ ಕೇಳಿಸುತ್ತದೆ. ಇದರ ಬಾಸ್ ಹೆಚ್ಚು ಪವರ್‌ಫುಲ್ ಆಗಿದೆ ಮತ್ತು ಧ್ವನಿ ಎಲ್ಲಾ ಕಡೆಯಿಂದ ಬರುವಂತೆ ಅನಿಸುತ್ತದೆ. ಇದರಲ್ಲಿರುವ ಡಾಲ್ಬಿ ಡಿಜಿಟಲ್ ಟೆಕ್ನಾಲಜಿ ಸಿನಿಮಾಗಳು ಮತ್ತು ಕ್ರೀಡೆಗಳನ್ನು ನೋಡುವ ಅನುಭವಕ್ಕೆ ಹೆಚ್ಚು ಖುಷಿ ನೀಡುತ್ತದೆ.

ಈ ಸೌಂಡ್‌ಬಾರ್‌ನ ಬೆಲೆಯನ್ನು ನೋಡುವುದಾದರೆ ಪ್ರಸ್ತುತ ₹17,990 ಆಗಿದೆ ಮತ್ತು ಇದು ಕೇವಲ ಅಮೆಜಾನ್‌ನಲ್ಲಿ ಮಾತ್ರ ಮಾರಾಟವಾಗುತ್ತಿದೆ. ಈ ಕಡಿಮೆ ಬೆಲೆಯ ಸೌಂಡ್‌ಬಾರ್ ಅನ್ನು ಸುಮಾರು ₹16,490 ರೂಪಾಯಿಗಳಿಗೆ ಕೊಂಡುಕೊಳ್ಳಲು ನೀವು ಆಯ್ದ ಬ್ಯಾಂಕ್‌ನ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಸಿದರೆ ಸುಮಾರು ₹1,500 ವರೆಗೆ ರಿಯಾಯಿತಿ ಪಡೆಯಬಹುದು. ಈ ಆಫರ್ ಪಡೆಯಲು ಆಸಕ್ತಿ ಇರುವ ಗ್ರಾಹಕರು Buy Now ಮೇಲೆ ಕ್ಲಿಕ್ ಮಾಡಬಹುದು.
Sony HT-S20R Real 5.1ch Soundbar ಸ್ಮಾರ್ಟ್ ಫೀಚರ್ಗಳೇನು?
ಇದನ್ನು ನಿಮ್ಮ ಟಿವಿಗೆ ಜೋಡಿಸಿ ಸಿನಿಮಾ ಮತ್ತು ಸಂಗೀತವನ್ನು ಆನಂದಿಸಲು ಇದು ಒಳ್ಳೆಯ ಆಯ್ಕೆಯಾಗಿದೆ. ಈ ಸೋನಿ ಒಂದು ಪ್ರಸಿದ್ಧ ಬ್ರಾಂಡ್ ಆಗಿರುವುದರಿಂದ ಖರೀದಿಯ ನಂತರವೂ ಒಳ್ಳೆಯ ಸಪೋರ್ಟ್ ಸಿಗುತ್ತದೆ. ನೀವು ಇದನ್ನು HDMI ARC, ಆಪ್ಟಿಕಲ್ ಇನ್‌ಪುಟ್, ಅಥವಾ ಅನಲಾಗ್ ಆಡಿಯೋ ಇನ್‌ಪುಟ್ ಮೂಲಕ ಟಿವಿಗೆ ಸಂಪರ್ಕಿಸಬಹುದು. ಇದರ ಜೊತೆಗೆ USB ಪ್ಲೇಬ್ಯಾಕ್ ಮತ್ತು ಬ್ಲೂಟೂತ್ (Bluetooth) ಆಯ್ಕೆಗಳೂ ಇವೆ. ಇದರಿಂದ ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್ ಮತ್ತು ಲ್ಯಾಪ್‌ಟಾಪ್‌ಗಳಿಂದ ವೈರ್ ಇಲ್ಲದೆ (ವೈರ್‌ಲೆಸ್) ಹಾಡುಗಳನ್ನು ಪ್ಲೇ ಮಾಡಬಹುದು.
ಈ ಕಡಿಮೆ ಬೆಲೆಗೆ ಸಿಗುತ್ತಿರುವ ಸೌಂಡ್‌ಬಾರ್‌ನಲ್ಲಿ ಹಲವು ಮುಖ್ಯ ಫೀಚರ್‌ಗಳಿವೆ. ಇದರಲ್ಲಿ ಒಂದು ಸೌಂಡ್‌ಬಾರ್, ಒಂದು ಸಬ್‌ವೂಫರ್ ಮತ್ತು ಎರಡು ಚಿಕ್ಕ ಹಿಂದಿನ ಸ್ಪೀಕರ್‌ಗಳು ಇವೆ. ಇವೆಲ್ಲವೂ ಸೇರಿ ಒಟ್ಟು 400W ವ್ಯಾಟ್ ಪವರ್ ನೀಡುತ್ತವೆ. ಇದರಲ್ಲಿ ಸಿನಿಮಾ, ಮ್ಯೂಸಿಕ್, ಸ್ಟ್ಯಾಂಡರ್ಡ್ ಎಂಬ ಸೌಂಡ್ ಮೋಡ್‌ಗಳು ಇದ್ದು ನೀವು ನೋಡುವ ವಿಷಯಕ್ಕೆ ತಕ್ಕಂತೆ ಧ್ವನಿ ಸರಿಹೊಂದುತ್ತದೆ. ನೈಟ್ ಮೋಡ್ ರಾತ್ರಿ ಹೊತ್ತು ಬಾಸ್ ಸೌಂಡ್ ಅನ್ನು ಕಡಿಮೆ ಮಾಡುತ್ತದೆ. ವಾಯ್ಸ್ ಮೋಡ್ ಮಾತುಕತೆ ಇನ್ನಷ್ಟು ಸ್ಪಷ್ಟವಾಗಿ ಕೇಳಿಸಲು ಸಹಾಯ ಮಾಡುತ್ತದೆ. ಇದು ಪ್ಲಗ್-ಅಂಡ್-ಪ್ಲೇ ರೀತಿಯಲ್ಲಿ ಸರಳವಾಗಿರುವುದರಿಂದ ಇದನ್ನು ಸೆಟ್ ಮಾಡುವುದು ತುಂಬಾ ಸುಲಭವಾಗಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile