ಇನ್ಮೇಲೆ WhatsApp ಬಳಕೆದಾರರು ಈ ಫೀಚರ್ ಬಳಸಲು ಆಗೋದಿಲ್ಲ! ಈಗ ಮತ್ತಷ್ಟು ಸೇಫ್ ಎಂದ ನೆಟ್ಟಿಗರು!

ಇನ್ಮೇಲೆ WhatsApp ಬಳಕೆದಾರರು ಈ ಫೀಚರ್ ಬಳಸಲು ಆಗೋದಿಲ್ಲ! ಈಗ ಮತ್ತಷ್ಟು ಸೇಫ್ ಎಂದ ನೆಟ್ಟಿಗರು!
HIGHLIGHTS

ತ್ವರಿತ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ (WhatsApp) ತಮ್ಮ ಬಳಕೆದಾರರು ಈ ಫೀಚರ್ ಬಳಸಲು ಆಗೋದಿಲ್ಲ!

ಈ WhatsApp ಫೀಚರ್ ನಿಮ್ಮ ಪ್ರೊಫೈಲ್ ಫೋಟೋವನ್ನು ಸ್ಕ್ರೀನ್ ಶಾಟ್ ತೆಗೆದು ನಕಲಿಸಬಹುದು ಅಥವಾ ಅದನ್ನು ದುರುಪಯೋಗಪಡಿಸಿಕೊಳ್ಳಬಹುದು

WhatsApp ನೀವು ಯಾರೊಬ್ಬರ ಪ್ರೊಫೈಲ್ ಫೋಟೋದ ಸ್ಕ್ರೀನ್‌ಶಾಟ್ ತೆಗೆದುಕೊಳ್ಳಲು ಪ್ರಯತ್ನಿಸಿದರೆ ಸ್ಕ್ರೀನ್‌ಶಾಟ್ ತೆಗೆದುಕೊಳ್ಳಲು ಸಾಧ್ಯವಿಲ್ಲ.

ಅತಿ ಹೆಚ್ಚಾಗಿ ಬಳಕೆಯಲ್ಲಿರುವ ಮತ್ತು ಜನಪ್ರಿಯ ತ್ವರಿತ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ (WhatsApp) ತಮ್ಮ ಬಳಕೆದಾರರು ಈ ಫೀಚರ್ ಬಳಸಲು ಆಗೋದಿಲ್ಲ! ಈಗ ಮತ್ತಷ್ಟು ಸೇಫ್ ಎಂದ ನೆಟ್ಟಿಗರು. ಯಾಕೆಂದ್ರೆ WhatsApp ಬಳಕೆದಾರರು ಯಾವುದೇ ರೀತಿಯ ಸಮಸ್ಯೆಯನ್ನು ಎದುರಿಸುವುದಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಂಡು ಕಂಪನಿಯು ಅವರ ಗೌಪ್ಯತೆಗೆ ಹೊಸ ಫೀಚರ್ ಅನ್ನು ನೀಡಿದೆ. ಈ WhatsApp ಫೀಚರ್ ನಿಮ್ಮ ಪ್ರೊಫೈಲ್ ಫೋಟೋವನ್ನು ಸ್ಕ್ರೀನ್ ಶಾಟ್ ತೆಗೆದು ನಕಲಿಸಬಹುದು ಅಥವಾ ಅದನ್ನು ದುರುಪಯೋಗಪಡಿಸಿಕೊಳ್ಳಬಹುದು ಎಂದು ನೀವು ಚಿಂತೆ ಮಾಡುತ್ತಿದ್ದರೆ ಈ ಹೊಸ ಫೀಚರ್ ನಿಮಗೆ ತುಂಬಾ ಉಪಯುಕ್ತವಾಗಿರುತ್ತದೆ.

WhatsApp ಬಳಕೆದಾರರು ಇನ್ನು ಮುಂದೆ ಸ್ಕ್ರೀನ್‌ಶಾಟ್ ಮಾಡಲು ಸಾಧ್ಯವಿಲ್ಲ!

ಇನ್ನು ಮುಂದೆ ವಾಟ್ಸಾಪ್ ಬಳಕೆದಾರರು ಯಾರೊಬ್ಬರ ಪ್ರೊಫೈಲ್ ಫೋಟೋದ ಸ್ಕ್ರೀನ್ ಶಾಟ್ ತೆಗೆಯುವಂತಿಲ್ಲ ನಿಜ. ಈ ಹೊಸ ಪ್ರೈವಸಿ ಫೀಚರ್ ಅನ್ನು ಮಾರ್ಚ್ 2024 ರಲ್ಲಿ ಪರಿಚಯಿಸಲಾಯಿತು ಮತ್ತು ಕ್ರಮೇಣ ಎಲ್ಲಾ ಬಳಕೆದಾರರಿಗೆ ಹೊರತರಲಾಗುತ್ತಿದೆ. ಈ ಫೀಚರ್ WhatsApp “ಒಮ್ಮೆ ವೀಕ್ಷಿಸಿ” ಫೀಚರ್ ಅನ್ನು ಹೋಲುತ್ತದೆ ಇದರ ಅಡಿಯಲ್ಲಿ ಕಳುಹಿಸಲಾದ ಮೆಸೇಜ್ ಮತ್ತು ಫೋಟೋಗಳನ್ನು ಒಮ್ಮೆ ವೀಕ್ಷಿಸಿದ ನಂತರ ಕಣ್ಮರೆಯಾಗುತ್ತದೆ.

ಇನ್ಮೇಲೆ WhatsApp ಬಳಕೆದಾರರು ಈ ಫೀಚರ್ ಬಳಸಲು ಆಗೋದಿಲ್ಲ! ಈಗ ಮತ್ತಷ್ಟು ಸೇಫ್ ಎಂದ ನೆಟ್ಟಿಗರು!
ಇನ್ಮೇಲೆ WhatsApp ಬಳಕೆದಾರರು ಈ ಫೀಚರ್ ಬಳಸಲು ಆಗೋದಿಲ್ಲ! ಈಗ ಮತ್ತಷ್ಟು ಸೇಫ್ ಎಂದ ನೆಟ್ಟಿಗರು!

ಈ ಫೀಚರ್ ಪೂರ್ವನಿಯೋಜಿತವಾಗಿ ಆನ್ ಆಗಿದೆ.

ನೀವು ಯಾರೊಬ್ಬರ ಪ್ರೊಫೈಲ್ ಫೋಟೋದ ಸ್ಕ್ರೀನ್‌ಶಾಟ್ ತೆಗೆದುಕೊಳ್ಳಲು ಪ್ರಯತ್ನಿಸಿದರೆ ಸ್ಕ್ರೀನ್‌ಶಾಟ್ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳುವ ಅಧಿಸೂಚನೆಯನ್ನು ನೀವು ನೋಡುತ್ತೀರಿ. ಯಾರಾದರೂ ತಮ್ಮ “ಪ್ರೊಫೈಲ್ ಫೋಟೋ” ಸೆಟ್ಟಿಂಗ್‌ಗಳಲ್ಲಿ “ಎಲ್ಲರೊಂದಿಗೆ ಹಂಚಿಕೊಳ್ಳಿ” ಎಂದು ಹೊಂದಿಸಿದರೆ ನೀವು ಈಗಲೂ ಅವರ ಪ್ರೊಫೈಲ್ ಫೋಟೋವನ್ನು ಡೌನ್‌ಲೋಡ್ ಮಾಡಬಹುದು. ಈ ಫೀಚರ್ ಅನ್ನು ಪ್ರೊಫೈಲ್ ಫೋಟೋಗಳಿಗೆ ಮಾತ್ರ ಅನ್ವಯಿಸುತ್ತದೆ.

Also Read: AI Feature ಆಧಾರಿತ Google Pixel 8a ಭಾರತದಲ್ಲಿ ಬಿಡುಗಡೆ! ಬೆಲೆ ಮತ್ತು ಟಾಪ್ 5 ಫೀಚರ್ಗಳೇನು ತಿಳಿಯಿರಿ

ಇನ್ನೊಬ್ಬರ ಚಾಟ್‌ನಲ್ಲಿ ಕಳುಹಿಸಿದ ಫೋಟೋದ ಸ್ಕ್ರೀನ್‌ಶಾಟ್ ಅನ್ನು ನೀವು ಇನ್ನೂ ತೆಗೆದುಕೊಳ್ಳಬಹುದು. ಬೇರೆಯವರ ಪ್ರೊಫೈಲ್ ಫೋಟೋವನ್ನು ಸೇವ್ ಮಾಡಿಕೊಳ್ಳಲು ಅಥವಾ ಸ್ಕ್ರೀನ್‌ಶಾಟ್ ತೆಗೆದುಕೊಳ್ಳುವುದನ್ನು ಅವಲಂಬಿಸಿರುವ ಕೆಲವು ಬಳಕೆದಾರರಿಗೆ ಈ ಫೀಚರ್ ಕೊಂಚ ನಿರಾಶಾದಾಯಕವಾಗಿರಬಹುದು. ಆದರೆ ಪ್ರತಿ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು ಈ ಫೀಚರ್ ಅನ್ನು ಅಭಿವೃದ್ಧಿಗೊಳಿಸಿದೆ. ಯಾಕೇಂದ್ರ ಪ್ರತಿ ಬಳಕೆದಾರರು ತಮ್ಮ ಪ್ರೊಫೈಲ್ ಫೋಟೋಗಳನ್ನು ಹೆಚ್ಚು ಖಾಸಗಿಯಾಗಿ ಇರಿಸಿಕೊಳ್ಳಲು ಬಯಸುವ ಬಳಕೆದಾರರಿಗೆ ಇದು ಪ್ರಮುಖ ಪ್ರೈವಸಿ ಸುಧಾರಣೆಯಾಗಿದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo