ಇನ್ಮುಂದೆ ಫಿಂಗರ್‌ಪ್ರಿಂಟ್ ಮತ್ತು ಫೇಸ್ ಐಡಿಯಿಂದ ಲಾಗಿನ್ ಮಾಡಲು WhatsApp New Feature ಪರಿಚಯ!

ಇನ್ಮುಂದೆ ಫಿಂಗರ್‌ಪ್ರಿಂಟ್ ಮತ್ತು ಫೇಸ್ ಐಡಿಯಿಂದ ಲಾಗಿನ್ ಮಾಡಲು WhatsApp New Feature ಪರಿಚಯ!
HIGHLIGHTS

ಫಿಂಗರ್‌ಪ್ರಿಂಟ್ ಮತ್ತು ಫೇಸ್ ಐಡಿಯಿಂದ ಲಾಗಿನ್ ಮಾಡಲು ವಾಟ್ಸಾಪ್ ಹೊಸ ಫೀಚರ್ (WhatsApp New Feature) ಪರಿಚಯ

ಸ್ತುತ ವಾಟ್ಸಾಪ್ (WhatsApp) ಪ್ಲಾಟ್‌ಫಾರ್ಮ್ iOS ಬಳಕೆದಾರರಿಗೆ ಪಾಸ್‌ಕೀ (Passkeys) ಫೀಚರ್ ಅನ್ನು ಪರಿಚಯಿಸಿದೆ.

ಪಾಸ್‌ಕೀ (Passkeys) ವೈಶಿಷ್ಟ್ಯವನ್ನು ಪಡೆದ ನಂತರ ಬಳಕೆದಾರರು ತಮ್ಮ ಲಾಗಿನ್‌ಗಾಗಿ ಯಾವುದೇ ಪಾಸ್‌ವರ್ಡ್ ಅನ್ನು ನೆನಪಿಟ್ಟುಕೊಳ್ಳಬೇಕಾಗಿಲ್ಲ.

WhatsApp New Feature: ಜನಪ್ರಿಯ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸಾಪ್ (WhatsApp) ಅನ್ನು ಪ್ರಪಂಚದಾದ್ಯಂತ ಲಕ್ಷಾಂತರ ಬಳಕೆದಾರರು ಬಳಸುತ್ತಾರೆ. ಇದರಲ್ಲಿ ವೈಯಕ್ತಿಕ ಚಾಟ್‌ಗಳನ್ನು ಸುರಕ್ಷಿತವಾಗಿರಿಸಲು ಹೊಸ ವೈಶಿಷ್ಟ್ಯಗಳನ್ನು ನಿರಂತರವಾಗಿ ಸೇರಿಸಲಾಗುತ್ತಿದೆ. ಈ ಮೂಲಕ ಈಗ ವಾಟ್ಸಾಪ್ ತಮ್ಮ ಬಳಕೆದಾರರ ಭದ್ರತೆ ಮತ್ತು ಸುರಕ್ಷತೆಯನ್ನು ಹೆಚ್ಚಿಸಲು ಸಾಮಾನ್ಯ ಪಾಸ್‌ವರ್ಡ್ ಬದಲಿಗೆ ಫಿಂಗರ್‌ಪ್ರಿಂಟ್‌ (Fingerprint) ಮತ್ತು ಫೇಸ್‌ಐಡಿ (Face ID) ಮೂಲಕ ಲಾಗಿನ್ ಮಾಡಲು ಸುಲಭವಾದ ಆಯ್ಕೆಯನ್ನು ನೀಡುತ್ತಿದೆ. ಪ್ರಸ್ತುತ ವಾಟ್ಸಾಪ್ (WhatsApp) ಪ್ಲಾಟ್‌ಫಾರ್ಮ್ iOS ಬಳಕೆದಾರರಿಗೆ ಪಾಸ್‌ಕೀ (Passkeys) ಫೀಚರ್ ಅನ್ನು ಪರಿಚಯಿಸಿದೆ.

ಲಾಗಿನ್ ಮಾಡಲು WhatsApp New Feature ಪರಿಚಯ!

ಸ್ತುತ ವಾಟ್ಸಾಪ್ (WhatsApp) ನೀಡುತ್ತಿರುವ ಈ ಪಾಸ್‌ಕೀ (Passkeys) ವೈಶಿಷ್ಟ್ಯವನ್ನು ಪಡೆದ ನಂತರ ಬಳಕೆದಾರರು ತಮ್ಮ ಲಾಗಿನ್‌ಗಾಗಿ ಯಾವುದೇ ಪಾಸ್‌ವರ್ಡ್ ಅನ್ನು ನೆನಪಿಟ್ಟುಕೊಳ್ಳಬೇಕಾಗಿಲ್ಲ. ಈ ಪಾಸ್‌ಕೀ (Passkeys) ಬಯೋಮೆಟ್ರಿಕ್ ಗುರುತಿಸುವಿಕೆಯೊಂದಿಗೆ ಸುಲಭವಾದ ಲಾಗಿನ್ ಆಯ್ಕೆಯನ್ನು ಒದಗಿಸುತ್ತದೆ ಮತ್ತು ಅಪ್ಲಿಕೇಶನ್ ಹ್ಯಾಕ್ ಆಗುವ ಭಯವಿರುವುದಿಲ್ಲ. ಈ ವೈಶಿಷ್ಟ್ಯವನ್ನು ಈಗ ಐಒಎಸ್ ಬಳಕೆದಾರರಿಗಾಗಿ ಹೊರತರಲಾಗುತ್ತಿದೆ ಮತ್ತು ಅಂಡ್ರಾಯ್ಡ್ ಬಳಕೆದಾರರಿಗೆ ಈಗಾಗಲೇ ಅಂದ್ರೆ ಕಳೆದ ವರ್ಷದಿಂದಲೇ ಲಭ್ಯವಿದೆ.

WhatsApp New Passkeys Feature
WhatsApp New Passkeys Feature

ಪಾಸ್‌ಕೀ (Passkeys) ಬಯೋಮೆಟ್ರಿಕ್ ಉತ್ತಮ ಆಯ್ಕೆ

ಸೈಬರ್ ಅಪರಾಧ ಮತ್ತು ಡೇಟಾ ಕಳ್ಳತನದಂತಹ ಪ್ರಕರಣಗಳನ್ನು ತಡೆಗಟ್ಟಲು ಪ್ಲಾಟ್‌ಫಾರ್ಮ್ ಸುಧಾರಿಸುತ್ತಲೇ ಇದೆ ಆದರೆ ಹೆಚ್ಚಿನ ಪಾಸ್‌ವರ್ಡ್ ಆಧಾರಿತ ಸೇವೆಗಳ ಪಾಸ್‌ವರ್ಡ್ ಸೋರಿಕೆಯ ಭಯ ಉಳಿದಿದೆ. ಪಾಸ್-ಕೀ ಸುಲಭ ಮತ್ತು ಉತ್ತಮ ಆಯ್ಕೆಯಾಗಿದೆ. ಏಕೆಂದರೆ ಇದು ಫಿಂಗರ್‌ಪ್ರಿಂಟ್ ಮತ್ತು FaceID ನಂತಹ ಆಯ್ಕೆಗಳನ್ನು ಬಳಸುತ್ತದೆ. ಈ ರೀತಿಯಾಗಿ ಲಾಗಿನ್ ಸಮಯದಲ್ಲಿ 6 ಅಂಕೆಗಳ ಪಾಸ್ವರ್ಡ್ ಅನ್ನು ನಮೂದಿಸಬೇಕಾಗಿಲ್ಲ ಮತ್ತು ನೆನಪಿನಲ್ಲಿಟ್ಟುಕೊಳ್ಳಬೇಕಾಗಿಲ್ಲ. ಪಾಸ್ ಹೀಗೆ ಸಂಬಂಧಿಸಿದ ದೊಡ್ಡ ಪ್ರಯೋಜನವೆಂದರೆ ಅದನ್ನು ನೆನಪಿಟ್ಟುಕೊಳ್ಳಲು ಯಾವುದೇ ತೊಂದರೆಯಿಲ್ಲ. ಇದಲ್ಲದೆ ಇದು ಬಳಸಲು ಸುಲಭವಾಗಿದೆ ಮತ್ತು ಯಾವುದೇ ತಲೆನೋವಿನ ಪ್ರಕ್ರಿಯೆಯ ಮೂಲಕ ಹೋಗಲು ಅಗತ್ಯವಿಲ್ಲ.

Also Read: Amazon Summer 2024 ಸೇಲ್‌ನಲ್ಲಿ ಅತಿ ಕಡಿಮೆ ಬೆಲೆಗೆ ಮಾರಾಟವಾಗುತ್ತಿರುವ ಲೇಟೆಸ್ಟ್ Smart Watches

WhatsApp New Passkeys Feature
WhatsApp New Passkeys Feature

WhatsApp ಬಳಕೆದಾರರು ಪಾಸ್‌ಕೀ (Passkeys) ಫೀಚರ್ ಬಳಸುವುದು ಹೇಗೆ?

ಮೊದಲನೆಯದಾಗಿ ನಿಮ್ಮ WhatsApp ಅನ್ನು ಇತ್ತೀಚಿನ ಆವೃತ್ತಿಗೆ ಅಪ್ಡೇಟ್ ಮಾಡಿಕೊಂಡು ಅದನ್ನು ತೆರೆಯಿರಿ.

ಇದರ ನಂತರ ನೀವು ಸೆಟ್ಟಿಂಗ್‌ಗಳಿಗೆ ಹೋಗಿ ಅಲ್ಲಿಂದ ಅಕೌಂಟ್ ಆಯ್ಕೆಯ ಮೇಲೆ ಟ್ಯಾಪ್ ಮಾಡಬೇಕು.

ಇದರಲ್ಲಿ ನಿಮಗೆ ಎರಡನೇ ಆಯ್ಕೆ ಪಾಸ್‌ಕೀ (Passkeys) ಎಂಬುದನ್ನು ಕಾಣಬಹುದು.

ಈಗ ಇದನ್ನು ಆಯ್ಕೆ ಮಾಡಿ ಕ್ಲಿಕ್ ಮಾಡಿದರೆ Creat Passkeys ಬರುತ್ತದೆ ಸ್ಕ್ರೀನ್ ಮೇಲೆ ತೋರಿಸಿರುವ ಸೂಚನೆಗಳನ್ನು ಅನುಸರಿಸುವ ಮೂಲಕ ನೀವು ಪಾಸ್‌ ಅನ್ನು ಹೊಂದಿಸಲು ಸಾಧ್ಯವಾಗುತ್ತದೆ.

ಈಗ ಲಾಗ್ ಇನ್ ಮಾಡುವಾಗ ನಿಮ್ಮನ್ನು ಯಾವುದೇ ಪಾಸ್‌ವರ್ಡ್ ಕೇಳಲಾಗುವುದಿಲ್ಲ ಮತ್ತು ನೀವು ಫಿಂಗರ್‌ಪ್ರಿಂಟ್‌ ಅಥವಾ ಫೇಸ್ ಐಡಿ ಮೂಲಕ ಮಾತ್ರ ಲಾಗಿನ್ ಮಾಡಬಹುದು.

ನಿಮಗೆ ಇದು ಇಷ್ಟವಾಗದಿದ್ದರೆ ಅಪ್ಲಿಕೇಶನ್‌ಗೆ ಹೋಗುವ ಮೂಲಕ ನೀವು ಯಾವಾಗ ಬೇಕಾದರೂ ಪಾಸ್‌ಕೀ (Passkeys) ಅನ್ನು ತೆಗೆದುಹಾಕಬಹುದು.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo