ನಿಮ್ಮ ವಿಶೇಷವಾದ ದಿನಾಂಕ ಮತ್ತು ಸಮಯವನ್ನು ಮರೆಯದಿರಲು WhatsApp ಮೆಸೇಜ್ ಅನ್ನು ಸೆಡ್ಯೂಲ್ ಮಾಡುವುದು ಹೇಗೆ ಗೊತ್ತಾ?

ಇವರಿಂದ Ravi Rao | ಪ್ರಕಟಿಸಲಾಗಿದೆ 24 Mar 2021
HIGHLIGHTS
  • ಆತ್ಮೀಯರ ಹುಟ್ಟುಹಬ್ಬ, ಆನಿರ್ವೇರ್ಸಿರಿ ಮತ್ತು ವಿಶೇಷ ದಿನಗಳನ್ನು ಮರೆಯದೆ ಶೆಡ್ಯೂಯಲ್ ಮಾಡಬವುದು.

  • ಆಂಡ್ರಾಯ್ಡ್ ಮತ್ತು ಐಫೋನ್ ಎರಡರಲ್ಲೂ ವಾಟ್ಸಾಪ್‌ನಲ್ಲಿ ಸಂದೇಶಗಳನ್ನು ನಿಗದಿಪಡಿಸುವ ಮಾರ್ಗಗಳಿವೆ.

  • ಪ್ರಮುಖ ಸಮಯ ಮತ್ತು ದಿನಾಂಕಗಳನ್ನು ಮರೆಯುವ ಪ್ರವೃತ್ತಿಯಲ್ಲಿರುವ ಜನರಿಗೆ ಈ ವೈಶಿಷ್ಟ್ಯವನ್ನು ಖಂಡಿತವಾಗಿ ಇಷ್ಟವಾಗಬಹುದು.

ನಿಮ್ಮ ವಿಶೇಷವಾದ ದಿನಾಂಕ ಮತ್ತು ಸಮಯವನ್ನು ಮರೆಯದಿರಲು WhatsApp ಮೆಸೇಜ್ ಅನ್ನು ಸೆಡ್ಯೂಲ್ ಮಾಡುವುದು ಹೇಗೆ ಗೊತ್ತಾ?
ನಿಮ್ಮ ವಿಶೇಷವಾದ ದಿನಾಂಕ ಮತ್ತು ಸಮಯವನ್ನು ಮರೆಯದಿರಲು WhatsApp ಮೆಸೇಜ್ ಅನ್ನು ಸೆಡ್ಯೂಲ್ ಮಾಡುವುದು ಹೇಗೆ ಗೊತ್ತಾ?

ವಾಟ್ಸಾಪ್ - WhatsApp ಹಲವಾರು ಉತ್ತಮ ವೈಶಿಷ್ಟ್ಯಗಳನ್ನು ಹೊಂದಿದೆ. ಆದರೆ ವಾಟ್ಸಾಪ್ ಮೆಸೇಜ್ ಅನ್ನು ಸೆಡ್ಯೂಲ್ ಮಾಡುವ ಸಾಮರ್ಥ್ಯ ಇನ್ನೂ ಕಾಣೆಯಾಗಿದೆ. ನಿಮ್ಮವರಲ್ಲಿ  ಯಾರನ್ನಾದರೂ ಅವರ ಜನ್ಮದಿನದಂದು ಅಥವಾ ಮದುವೆ ದಿನವನ್ನು ಹಾರೈಸಲು ನೀವು ನೆನಪಿಟ್ಟುಕೊಳ್ಳಲು ಬಯಸಿದರೆ ಅಥವಾ ಮಧ್ಯರಾತ್ರಿಯಲ್ಲಿ ಯಾರನ್ನಾದರೂ ಪಿಂಗ್ ಮಾಡುವ ಬದಲು ಕೆಲಸದ ಸಮಯದಲ್ಲಿ ಸಂದೇಶವನ್ನು ಕಳುಹಿಸಲು ಬಯಸಿದರೆ ಸಂದೇಶಗಳನ್ನು ನಿಗದಿಪಡಿಸುವುದು ಬಹಳಷ್ಟು ಸಹಾಯ ಮಾಡುತ್ತದೆ. ಆಂಡ್ರಾಯ್ಡ್ ಮತ್ತು ಐಫೋನ್ ಎರಡರಲ್ಲೂ ವಾಟ್ಸಾಪ್‌ನಲ್ಲಿ ಸಂದೇಶಗಳನ್ನು ನಿಗದಿಪಡಿಸುವ ಮಾರ್ಗಗಳಿವೆ. 

ನಿಮ್ಮ ಮೆಸೇಜ್ಗಳು, ಫೋಟೊಗಳು ಮತ್ತು ವೀಡಿಯೊಗಳನ್ನು ಕಳುಹಿಸಲು WhatsApp ನಿಮಗೆ ಅವಕಾಶ ಮಾಡಿಕೊಡುತ್ತದೆ ಆದರೆ ತಕ್ಷಣವೇ ನಿಮ್ಮ ಮೆಸೇಜನ್ನು ಸರಿಯಾದ ಸಮಯದಲ್ಲಿ ತಲುಪಿಸಲು ಸದ್ಯಕ್ಕೆ ಅವಕಾಶ ಮಾಡಿಕೊಟ್ಟಿಲ್ಲ. ಈ WhatsApp ನಿಮ್ಮ ಮೆಸೇಜ್ಗಳನ್ನು ನೀವು ನಿಗದಿಪಡಿಸುವ ಸಮಯದ ಆಯ್ಕೆಯನ್ನು ಅಷ್ಟಾಗಿ ಒದಗಿಸುವುದಿಲ್ಲವಾದರೂ ಈ ವೈಶಿಷ್ಟ್ಯವು ಕೆಲವು ಬಳಕೆದಾರರಿಗೆ ಉನ್ನತ ಮಾನದಂಡದಲ್ಲಿರುವುದಿಲ್ಲ. ಆದರೆ ಪ್ರಮುಖ ಸಮಯ ಮತ್ತು ದಿನಾಂಕಗಳನ್ನು ಮರೆಯುವ ಪ್ರವೃತ್ತಿಯಲ್ಲಿರುವ ಜನರಿಗೆ ಈ ವೈಶಿಷ್ಟ್ಯವನ್ನು ಖಂಡಿತವಾಗಿ ಇಷ್ಟವಾಗಬಹುದು. Google Play ಸ್ಟೋರ್ನಲ್ಲಿ ನಿಮ್ಮ ಮೆಸೇಜ್ಗಳನ್ನು ಕಾರ್ಯಯೋಜನೆ ಮಾಡಲು ಅನುವು ಮಾಡಿಕೊಡುವ ಬಹಳಷ್ಟು ಅಪ್ಲಿಕೇಶನ್ಗಳ ಬಗ್ಗೆ ನೋಡೋಣ.

1. ಮೊದಲಿಗೆ ನೀವು ಗೂಗಲ್ ಪ್ಲೇ ಸ್ಟೋರಿನಲ್ಲಿ SKEDit Scheduling App ಎಂಬ ಅಪ್ಲಿಕೇಶನನ್ನು ಡೌನ್ಲೋಡ್ ಮಾಡಿಕೊಳ್ಳಿ.

2. ಇನ್ಸ್ಟಾಲ್ ಮಾಡಿದ ನಂತರ ಅಪ್ಲ್ಲಿಕೇಷನನ್ನು ತೆರೆಯಿರಿ ಇಲ್ಲಿ ನಿಮ್ಮ ಫೇಸ್ಬುಕ್ ಅಥವಾ ಹೊಸ ಅಕೌಂಟ್ ಕ್ರಿಯೇಟ್ ಮಾಡಬವುದು. 

3. ಮೊದಲ ಬಾರಿಗೆ ಬಳಸುತ್ತಿದ್ದರೆ ಅಕೌಂಟ್ ಕ್ರಿಯೇಟ್ ಮೇಲೆ ಕ್ಲಿಕ್ ಮಾಡಿ ತೆರೆಯಿರಿ. 

4. ತೆರೆದ ನಂತರ ಇಲ್ಲಿ ನಿಮ್ಮ ಹೆಸರು, ಇಮೇಲ್ ಮತ್ತು ಪಾಸ್ವರ್ಡ್ ನಮೂದಿಸಿರಿ.   

5. ಇಲ್ಲಿನ ಎಲ್ಲಾ ಮಾಹಿತಿ ನೀಡಿದ ನಂತರ ಈಗ Create Account ಮೇಲೆ ಕ್ಲಿಕ್ ಮಾಡಿರಿ.

6. ಅಕೌಂಟ್ ಕ್ರಿಯೇಟ್ ಆದ ನಂತರ ಪುನಃ ನೀವು ಬಳಸಿದ ಇಮೇಲ್ ಮತ್ತು ಪಾಸ್ವರ್ಡ್ ಹಾಕಿ ಲಾಗಿನ್ ಮಾಡಿರಿ. 

7. ಇದರೊಳಗೆ ಸೈನ್ ಇನ್ ಆದ ನಂತರ ನಿಮಗೆ WhatsApp Business, WhatsApp, SMS, Email, Call ಮತ್ತು Facebook ಕಾಣಿಸುತ್ತದೆ. 

8. ಇದರಲ್ಲಿ ನೀವು ಮೊದಲಿಗೆ WhatsApp ಮೇಲೆ ಕ್ಲಿಕ್ ಮಾಡಿ ಇಲ್ಲಿ To ಅನ್ನುವ ನಂತರ ಯಾರಿಗೆ ಮೆಸೇಜ್ ಕಳುಯಿಸಬೇಕೋ ಅವರ ನಂಬರ್ ಸೇರಿಸಿ. 

9. ನಿಮ್ಮ ಆತ್ಮೀಯರ ನಂಬರ್ ಸೇರಿಸಿದ ನಂತರ ಏನು ಬರೆಯಬೇಕೋ ಅದನ್ನು ಇಲ್ಲಿ ಬರೆಯಿರಿ. 

10. ನಿಮ್ಮ ಮೆಸೇಜ್ ಟೈಪ್ ಆದ ನಂತರ ಕೆಳಗೆ ನೋಡಿ ಯಾವಾಗ ಕಳುಯಿಸಬೇಕೋ ಅದನ್ನು ಆಯ್ಕೆ ಮಾಡಿಕೊಳ್ಳಿ. 

11. ಇದರಲ್ಲಿ ನಿಮ್ಮ ಟೈಮ್ ಮತ್ತು ಡೇಟ್ ಆಯ್ಕೆ ಮಾಡಿದ ನಂತರ ನಿಮ್ಮ ಬಲ ಭಾಗದ ಮೇಲೆ ಕೊನೆಯಲ್ಲಿ  ಚಿನ್ಹೆಯ ಮೇಲೆ ಕ್ಲಿಕ್ ಮಾಡಿ. 

12. ಈ ರೀತಿಯಲ್ಲಿ ಆತ್ಮೀಯರ ಹುಟ್ಟುಹಬ್ಬ, ಆನಿರ್ವೇರ್ಸಿರಿ ಮತ್ತು ವಿಶೇಷ ದಿನಗಳನ್ನು ಮರೆಯದೆ ಶೆಡ್ಯೂಯಲ್ ಮಾಡಬವುದು. ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ ಡಿಜಿಟ್ ಕನ್ನಡ ಮತ್ತು ಯೌಟ್ಯೂಬ್ ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

WEB TITLE

How to schedule your WhatsApp messages on your phones

Advertisements

ಟ್ರೆಂಡಿಂಗ್ ಲೇಖನಗಳು

Advertisements

LATEST ARTICLES ಎಲ್ಲವನ್ನು ವೀಕ್ಷಿಸಿ

Advertisements
DMCA.com Protection Status