Vodafone Idea ಈ ಆಫರ್ ಜೂನ್ 30, 2026 ರ ವರೆಗೆ ಮಾತ್ರ ಲಭ್ಯ
Vodafone Idea ಕಂಪನಿಯು HMD ಸಹಭಾಗಿತ್ವದಲ್ಲಿ Super Saver Offer ಪರಿಚಯಿಸಿದೆ.
Vodafone Idea ಕೊಡುಗೆಯು ಆಯ್ದ HMD ಮತ್ತು Nokia ಫೀಚರ್ ಫೋನ್‌ಗಳನ್ನು ಖರೀದಿಸುವ ಗ್ರಾಹಕರಿಗೆ ಮಾತ್ರ ಲಭ್ಯ.
Vi-HMD Super Saver Plan: ದೇಶದ ಮೂರನೇ ದೊಡ್ಡ ಖಾಸಗಿ ಟೆಲಿಕಾಂ ಸಂಸ್ಥೆಯಾಗಿರುವ ವೋಡಾಫೋನ್ ಐಡಿಯಾ (Vodafone Idea) ಕೆಲವು ಆಕರ್ಷಕ ಪ್ರೀಪೇಯ್ಡ್ ಪ್ಲ್ಯಾನ್‌ಗಳ ಮೂಲಕ ಇತರೆ ಟೆಲಿಕಾಂ ಬ್ರ್ಯಾಂಡ್‌ಗಳಿಗೆ ಪೈಪೋಟಿ ನೀಡುತ್ತಾ ಮುನ್ನಡೆದಿದ್ದು ತನ್ನದೇ ಆದ ಚಂದಾದಾರರ ಬಳಗ ಹೊಂದಿದೆ. ಈಗಾಗಲೇ ಹಲವು ಬೊಂಬಾಟ್ ಪ್ಲ್ಯಾನ್ ಪರಿಚಯಿಸಿರುವ Vodafone Idea ಇದೀಗ ಮತ್ತೊಂದು ನೂತನ ಯೋಜನೆಯನ್ನು ತನ್ನ ಗ್ರಾಹಕರಿಗೆ ನೀಡಿದೆ. Vodafone Idea (Vi) ಕಂಪನಿಯು HMD ಮೊಬೈಲ್ ಸಹಭಾಗಿತ್ವದಲ್ಲಿ ತನ್ನ 140ರೂ. ಬೆಲೆಯ ಪ್ರೀಪೇಯ್ಡ್ ಪ್ಲ್ಯಾನಿನ ಹೆಸರಿನಲ್ಲಿ Super Saver Offer ಅನ್ನು ಪರಿಚಯಿಸಿದೆ. ಅಂದಹಾಗೆ ಇದು ದೇಶದಲ್ಲಿ ಆಯ್ದ HMD ಮತ್ತು Nokia ಫೀಚರ್ ಫೋನ್‌ಗಳನ್ನು ಖರೀದಿಸುವ ಹೊಸ ಪ್ರಿಪೇಯ್ಡ್ ಚಂದಾದಾರರಿಗೆ ಸೀಮಿತ ಅವಧಿಯ ಕೊಡುಗೆಯನ್ನು ನೀಡಿದೆ.
SurveyAlso Read: BSNL ಸೇರುವವರಿಗೆ ಮಾತ್ರ! ಕೇವಲ 1 ರೂಗಳಿಗೆ ಸಿಕ್ಕಾಪಟ್ಟೆ ಪ್ರಯೋಜನಗಳು! ಲಿಮಿಟೆಡ್ ಟೈಮ್ ಆಫರ್!
Vodafone Idea ದ ಸೂಪರ್ ಸೇವರ್ ಆಫರ್ ಯಾರಿಗೆ ಲಭ್ಯ?
Vodafone Idea ಹಾಗೂ HMD ಜತೆಗೂಡಿ ಪರಿಚಯಿಸಿರುವ ಹೊಸ Super Saver Offer ಯೋಜನೆಗೆ ಯಾರು ಅರ್ಹರಾಗಿರುತ್ತಾರೆ ಎಂದು ನೋಡುವುದಾದರೇ ಈ ಆಕರ್ಷಕ ಆಫರ್‌ನ ಅಡಿಯಲ್ಲಿ HMD 100, HMD 101 ಅಥವಾ Nokia 105 ಕ್ಲಾಸಿಕ್ ಫೀಚರ್ ಫೋನ್ ಅನ್ನು ಡಿಸೆಂಬರ್ 24, 2025 ರಂದು ಅಥವಾ ನಂತರ ಖರೀದಿಸುವ ಅರ್ಹ ಚಂದಾದಾರರು ಮತ್ತು SIM ಆಕ್ಟಿವ್ ಮಾಡಿದ 30 ದಿನಗಳ ಒಳಗೆ ಕಡ್ಡಾಯವಾಗಿ 140 ರೂ.ಗಳ ಮೊದಲ ರೀಚಾರ್ಜ್ ಅನ್ನು ಪೂರ್ಣಗೊಳಿಸಿದರೆ ಅನಿಯಮಿತ ವಾಯಿಸ್ ಕರೆಗಳು, 30 ದಿನಗಳ ವ್ಯಾಲಿಡಿಟಿ ಸೌಲಭ್ಯ 2GB ಡೇಟಾ ಮತ್ತು 30 SMS ಅಲ್ಲದೇ 2GB ಡೇಟಾ ಪ್ರಯೋಜನ ಲಭ್ಯ ಆಗಲಿವೆ.

ಇನ್ನು ಈ ಪ್ರಯೋಜನಗಳು ಮೊದಲ ರೀಚಾರ್ಜ್ ಮತ್ತು ನಂತರದ ಅರ್ಹ ರೀಚಾರ್ಜ್‌ಗಳಿಗೆ ಮಾತ್ರ ಅನ್ವಯಿಸುತ್ತವೆ ಎಂದು ವರದಿ ತಿಳಿಸಿದೆ. ಅಂದಹಾಗೆ Vodafone Idea ಹಾಗೂ HMD ಯ ಈ ನೂತನ ಕೊಡುಗೆಯ ಅಗತ್ಯ ಅರ್ಹತಾ ಮಾನದಂಡಗಳನ್ನು ಪೂರೈಸದ ಚಂದಾದಾರರು ಹೆಚ್ಚುವರಿ ಡೇಟಾ ಮತ್ತು SMS ಪ್ರಯೋಜನಗಳಿಲ್ಲದೆ ಸಾಮಾನ್ಯ ರೀಚಾರ್ಜ್ ಅಡಿಯಲ್ಲಿ ಅನ್ವಯವಾಗುವಂತೆ 15 ದಿನಗಳ ವ್ಯಾಲಿಡಿಟಿ ಪಡೆಯುತ್ತಾರೆ ಎಂದು Vodafone Idea ಕಂಪನಿಯು ಸ್ಪಷ್ಟ್ ಮಾಹಿತಿ ನೀಡಿದೆ.
Vodafone Idea ದ ಸೂಪರ್ ಸೇವರ್ ಆಫರ್ ಅವಧಿ:
Vodafone Idea ಹಾಗೂ HMD ಜಂಟಿಯಲ್ಲಿ ಬಿಡುಗಡೆ ಮಾಡಿರುವ ಸೂಪರ್ ಸೇವರ್ ಆಫರ್ ಪ್ರಯೋಜನವು ಇದೇ ಜನವರಿ 14, 2026 ರಿಂದ ಜೂನ್ 30, 2026 ವರೆಗೆ ಮಾತ್ರ ಗ್ರಾಹಕರಿಗೆ ಲಭ್ಯ ಇರುತ್ತದೆ. ಹೊಸ ಸಿಮ್ ಪಡೆಯಲು ಮತ್ತು ಪ್ರಯೋಜನಗಳನ್ನು ಆನಂದಿಸಲು ಗ್ರಾಹಕರು Vi ರೀಟೆಲ್ ಸ್ಟೋರ್‌ಗಳು ಅಥವಾ ಅಧಿಕೃತ ಪಾಲುದಾರರನ್ನು ಭೇಟಿ ಮಾಡಬಹುದು.
Vodafone Idea ಸಂಸ್ಥೆಯ 140ರೂ. ಪ್ಲ್ಯಾನ್ ಪ್ರಯೋಜನಗಳ ಮಾಹಿತಿ:
Vodafone Idea ಕಂಪನಿಯ 140ರೂ. ಪ್ರೀಪೆಯ್ಡ್ ರೀಚಾರ್ಜ್ ಪ್ಲ್ಯಾನ್ ಮುಕ್ತ ಮಾರುಕಟ್ಟೆ (ಸೂಪರ್ ಸೇವರ್ ಆಫರ್ ಹೊರತುಪಡಿಸಿ) 15 ದಿನಗಳ ವ್ಯಾಲಿಡಿಟಿ ಪಡೆದಿದೆ. ಹಾಗೆಯೇ ಅನಿಯಮಿತ ವಾಯಿಸ್ ಕರೆಗಳ ಸೌಲಭ್ಯ ಸಿಗಲಿದೆ. ಇದೇ ಯೋಜನೆಯನ್ನು Vi – HMD ಸೂಪರ್ ಸೇವರ್ ಆಫರ್ ಕೊಡುಗೆ ಅಡಿಯಲ್ಲಿ ಗ್ರಾಹಕರು ಹೊಸ Vi SIM ಅನ್ನು ಅರ್ಹ HMD ಫೀಚರ್ ಫೋನ್‌ನಲ್ಲಿ ಬಳಸಿದರೆ ಅನಿಯಮಿತ ವಾಯಿಸ್ ಕರೆಗಳು, 2GB ಡೇಟಾ ಸೌಲಭ್ಯ ಹಾಗೂ 300 SMS ಪ್ರಯೋಜನ 28 ದಿನಗಳ ವ್ಯಾಲಿಡಿಟಿ ಲಭ್ಯ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile