1 ವರ್ಷ Sun NXT ಪ್ರೀಮಿಯಂ ಎಚ್‌ಡಿ ಚಂದಾದಾರಿಕೆ ಉಚಿತ! Vi ಬಳಕೆದಾರರಿಗೆ ಭರ್ಜರಿ ಆಫರ್!

1 ವರ್ಷ Sun NXT ಪ್ರೀಮಿಯಂ ಎಚ್‌ಡಿ ಚಂದಾದಾರಿಕೆ ಉಚಿತ! Vi ಬಳಕೆದಾರರಿಗೆ ಭರ್ಜರಿ ಆಫರ್!
HIGHLIGHTS

Vi ಪೋಸ್ಟ್‌ಪೇಯ್ಡ್‌ ಗ್ರಾಹಕರಿಗೆ ಸನ್‌ ಎನ್‌ಎಕ್ಸ್‌ಟಿಯ ಪ್ರೀಮಿಯಂ ಎಚ್‌ಡಿ ಚಂದಾದಾರಿಕೆಯನ್ನು ‌ಮೊಬೈಲ್ ಮತ್ತು ಟಿವಿಯಲ್ಲಿ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಒಂದು ವರ್ಷದವರೆಗೆ ‌ವೀಕ್ಷಿಸುವ ಅವಕಾಶ ಕಲ್ಪಿಸಿಕೊಟ್ಟಿದೆ.

ಇದಕ್ಕೆ ಪೂರಕವಾಗಿ Vi ಬಳಕೆದಾರರು ಸನ್ ಮರಾಠಿ ಮತ್ತು ಬಾಂಗ್ಲಾ ಟಿವಿ ಕಾರ್ಯಕ್ರಮಗಳನ್ನೂ ವೀಕ್ಷಿಸಬಹುದು

ತಮ್ಮ ಮೊಬೈಲ್ ಫೋನ್‌ನಲ್ಲಿ ಅಥವಾ ಟಿವಿ ಸೆಟ್‌ನಲ್ಲಿ ಹೊಸ ₹ 401 ಪೋಸ್ಟ್‌ಪೇಯ್ಡ್‌ ಯೋಜನೆಯಡಿ ವೀಕ್ಷಿಸಬಹುದು.

Sun NXT Premium HD: ಕೆಲವು ಅತ್ಯುತ್ತಮ ಪ್ರಾದೇಶಿಕ ಟೆಲಿವಿಷನ್‌ ಕಾರ್ಯಕ್ರಮಗಳನ್ನು ವೀಕ್ಷಿಸಲು ಹಾತೊರೆಯುತ್ತಿದ್ದೀರಾ? ಆದರೆ ಅದಕ್ಕೆ ಹೆಚ್ಚುವರಿ ಹಣ ಖರ್ಚು ಮಾಡಲು ಬಯಸುವುದಿಲ್ಲವೇ? ಭಾರತದ ಪ್ರಮುಖ ದೂರಸಂಪರ್ಕ ಸೇವಾ ಸಂಸ್ಥೆ ವೊಡಾಫೋನ್ ಐಡಿಯಾ (Vi) ಈ ಸಮಸ್ಯೆಗೆ ಹೊಸ ಪ್ಲ್ಯಾನ್‌ನಡಿ ಪರಿಹಾರ ಒದಗಿಸಲು ಮುಂದಾಗಿದೆ. ಕನ್ನಡ, ತಮಿಳು, ಮಲಯಾಳಂ ಮತ್ತು ತೆಲುಗು ಭಾಷೆಗಳಲ್ಲಿ ಸಮಗ್ರ ಸ್ವರೂಪದಲ್ಲಿ ಟೆಲಿವಿಷನ್‌ ಕಾರ್ಯಕ್ರಮಗಳನ್ನು ಒದಗಿಸುವ ಸನ್‌ ಎನ್‌ಎಕ್ಸ್‌ಟಿ (Sun NXT) ಜೊತೆಗಿನ ಪಾಲುದಾರಿಕೆಯಡಿ ಅತ್ಯಂತ ಕಡಿಮೆ ವೆಚ್ಚದಲ್ಲಿ ನಿಮ್ಮ ಅಪೇಕ್ಷೆಗಳನ್ನು ಈಡೇರಿಸಲು ಹೊಸ ಪೋಸ್ಟ್‌ಪೇಯ್ಡ್‌ ಸೌಲಭ್ಯ ಪರಿಚಯಿಸಿದೆ.

Vi ಪೋಸ್ಟ್‌ಪೇಯ್ಡ್‌ Sun NXT Premium HD ಚಂದಾದಾರಿಕೆ

ಈ ಪಾಲುದಾರಿಕೆಯು Vi ಪೋಸ್ಟ್‌ಪೇಯ್ಡ್‌ ಗ್ರಾಹಕರಿಗೆ ಸನ್‌ ಎನ್‌ಎಕ್ಸ್‌ಟಿಯ ಪ್ರೀಮಿಯಂ ಎಚ್‌ಡಿ ಚಂದಾದಾರಿಕೆಯನ್ನು ‌ಮೊಬೈಲ್ ಮತ್ತು ಟಿವಿಯಲ್ಲಿ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಒಂದು ವರ್ಷದವರೆಗೆ ‌ವೀಕ್ಷಿಸುವ ಅವಕಾಶ ಕಲ್ಪಿಸಿಕೊಟ್ಟಿದೆ. Vi ಬಳಕೆದಾರರು ಕನ್ನಡ, ತಮಿಳು, ಮಲಯಾಳಂ ಹಾಗೂ ತೆಲುಗು ಭಾಷೆಯಲ್ಲಿನ ತಮ್ಮ ನೆಚ್ಚಿನ ಚಲನಚಿತ್ರಗಳು, ಟಿವಿ ಷೋಗಳು ಮತ್ತು ಸಂಗೀತ ವಿಡಿಯೊಗಳನ್ನು ಯಾವುದೇ ಸಮಯದಲ್ಲಿ ಎಲ್ಲಿಯಾದರೂ ತಮ್ಮ ಮೊಬೈಲ್ ಫೋನ್‌ನಲ್ಲಿ ಅಥವಾ ಟಿವಿ ಸೆಟ್‌ನಲ್ಲಿ ಹೊಸ ₹ 401 ಪೋಸ್ಟ್‌ಪೇಯ್ಡ್‌ ಯೋಜನೆಯಡಿ ವೀಕ್ಷಿಸಬಹುದು.

ಇದಕ್ಕೆ ಪೂರಕವಾಗಿ Vi ಬಳಕೆದಾರರು ಸನ್ ಮರಾಠಿ ಮತ್ತು ಬಾಂಗ್ಲಾ ಟಿವಿ ಕಾರ್ಯಕ್ರಮಗಳನ್ನೂ ವೀಕ್ಷಿಸಬಹುದು. ಇತ್ತೀಚಿನ ಬಹು ಜನಪ್ರಿಯ ಚಲನಚಿತ್ರಗಳಾದ ರಾಂಗಿ, ಲಾಠಿ ಚಾರ್ಜ್, ಡಿಎಸ್‌ಪಿ, ಮಹಾವೀರ್ಯಾರ್, ತಿರುಚಿತ್ರಂಬಲಂ, ಅಬ್ಬರ, ಅಣ್ಣಾತ್ತೆ, ಬೀಸ್ಟ್, ಡಾಕ್ಟರ್‌ನಿಂದ ಹಿಡಿದು ಜನಪ್ರಿಯ ಟಿವಿ ಕಾರ್ಯಕ್ರಮಗಳಾದ ಎಥಿರ್‌ ನೀಚಲ್, ಸುಂದರಿ, ಪ್ರೇಮಾಸ್ ರಂಗ್ ಯಾವೆ, ವೊಂಟಾರಿ ಗುಲಾಬಿ, ಕಲಿವೀಡು, ಕನಲ್‌ಪೂವು, ರಾಧಿಕಾ ಮತ್ತು ಸಂಗೀತದ ವಿಡಿಯೊಗಳು, ಟೆಲಿವಿಷನ್‌ ನೇರ ಪ್ರಸಾರ ಕಾರ್ಯಕ್ರಮಗಳು ಮತ್ತು ಇತರ ಟಿವಿ ಕಾರ್ಯಕ್ರಮಗಳನ್ನು ವೀಕ್ಷಿಸಬಹುದು.

ಮೂನ್‌ಲೈಟಿಂಗ್‌ಗೆ ಅವಕಾಶ ನೀಡಬೇಕಾ? ಬೇಡ್ವಾ?

ಈ ಕುರಿತಂತೆ ವೊಡಾಫೋನ್ ಐಡಿಯಾ ಲಿಮಿಟೆಡ್‌ನ ಮುಖ್ಯ ಮಾರುಕಟ್ಟೆ ಅಧಿಕಾರಿ ಅವನೀಶ್ ಖೋಸ್ಲಾ ಅವರು ಮಾತನಾಡಿ‘ಡಿಜಿಟಲ್ ವ್ಯಾಮೋಹಿ ಬಳಕೆದಾರರು ಪ್ರಯಾಣದಲ್ಲಿರುವಾಗ ವೈವಿಧ್ಯಮಯ ಮಾಹಿತಿ ವೀಕ್ಷಿಸುವಾಗ ಆಯ್ಕೆ, ಸ್ವಾತಂತ್ರ್ಯ ಮತ್ತು ಅನುಕೂಲತೆ ಬಯಸುತ್ತಾರೆ. ಸನ್‌ ಎನ್‌ಎಕ್ಸ್‌ಟಿ ಜೊತೆಗಿನ ನಮ್ಮ ಸಹಯೋಗವು ನಮ್ಮ ಮಾಹಿತಿಯ ಭಂಡಾರವನ್ನು ಇನ್ನಷ್ಟು ಬಲಪಡಿಸುವುದಲ್ಲದೆ ಪೋಸ್ಟ್‌ಪೇಯ್ಡ್ ಬಳಕೆದಾರರಿಗೆ ಅವರ ಆದ್ಯತೆಯ ಭಾಷೆಯಲ್ಲಿ ಚಲನಚಿತ್ರಗಳು, ಟಿವಿ ಷೋಗಳು ಮತ್ತು ಸಂಗೀತದ ವಿಡಿಯೊಗಳ ದೊಡ್ಡ ಸಂಗ್ರಹವನ್ನೇ ಅವರ ಬೆರಳ ತುದಿಯಲ್ಲಿಯೇ ಒದಗಿಸಿಕೊಡಲಿದೆ.

ಉತ್ತಮ ಗುಣಮಟ್ಟದ ಪ್ರಾದೇಶಿಕ ಭಾಷೆಗಳಲ್ಲಿನ ಚಲನಚಿತ್ರ, ಟಿವಿ ಕಾರ್ಯಕ್ರಮ ಹಾಗೂ ಸಂಗೀತ ವಿಡಿಯೊಗಳ ಭಾರಿ ಬೇಡಿಕೆಯನ್ನು ಈ ವಿಭಾಗದಲ್ಲಿನ ಅತ್ಯುತ್ತಮ ಚಾನೆಲ್‌ಗಳ ಸಹಭಾಗಿತ್ವದ ಮೂಲಕ ಪೂರೈಸುವುದನ್ನು ನಾವು ಮುಂದುವರಿಸುತ್ತೇವೆ ಎಂದು ಹೇಳಿದ್ದಾರೆ. ವಾರ್ಷಿಕ ಸನ್ ಎನ್‌ಎಕ್ಸ್‌ಟಿ ಸದಸ್ಯತ್ವವನ್ನು ವಿಐ ಆಪ್‌ (Vi App) ಮೂಲಕ ಚಾಲನೆಗೊಳಿಸಬಹುದು. ಹೊಸದಾಗಿ ಪರಿಚಯಿಸಿರುವ ₹401 ಪೋಸ್ಟ್‌ಪೇಯ್ಡ್‌ ಪ್ಲ್ಯಾನ್‌ನಲ್ಲಿರುವ ಬಳಕೆದಾರರು ತಮ್ಮ ಸನ್‌ ಎನ್‌ಎಕ್ಸ್‌ಟಿ ಸದಸ್ಯತ್ವವನ್ನು ಮೂರು ಸುಲಭ ಹಂತಗಳಲ್ಲಿ ಸಕ್ರಿಯಗೊಳಿಸಬಹುದು.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo