ಮುಖ್ಯವಾಗಿ ಅಮೆಜಾನ್ ಪ್ರೈಮ್ ವಿಡಿಯೋ ಹೆಚ್ಚು ಜನಪ್ರಿಯ ಮತ್ತು ಹೆಚ್ಚು ಉಪಯುಕ್ತವಾಗಿದೆ.
Jio, Airtel ಮತ್ತು Vi ಉಚಿತ ಒಟಿಟಿ ಯೋಜನೆಗಳ ಕುರಿತು ಒಂದಿಷ್ಟು ಮಾಹಿತಿ ಈ ಕೆಳಗೆ ಪಟ್ಟಿ ಮಾಡಲಾಗಿದೆ.
ಅಮೆಜಾನ್ ಪ್ರೈಮ್ ಲೈಟ್ (Amazon Prime Lite) ಚಂದಾದಾರಿಕೆಯನ್ನು ಸಾಮಾನ್ಯ ರೀಚಾರ್ಜ್‌ನೊಂದಿಗೆ ಉಚಿತವಾಗಿ ಪಡೆಯಬಹುದು.
How to get Free Amazon Prime: ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ಜನಪ್ರಿಯ ಟೆಲಿಕಾಂ ಕಂಪನಿಗಳು ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾದ ಕೆಲವೊಂದು ಆಯ್ದ ರೀಚಾರ್ಜ್ ಯೋಜನೆಗಳು ಉಚಿತ OTT ಚಂದಾದಾರಿಕೆಯನ್ನು ನೀಡುತ್ತಿವೆ. ಅದರಲ್ಲಿ ಮುಖ್ಯವಾಗಿ ಅಮೆಜಾನ್ ಪ್ರೈಮ್ ವಿಡಿಯೋ ಹೆಚ್ಚು ಜನಪ್ರಿಯ ಮತ್ತು ಹೆಚ್ಚು ಉಪಯುಕ್ತವಾಗಿದೆ. ಯಾಕೆಂದರೆ ಬಳಕೆದಾರರು ಬಯಸಿದರೆ ದೀರ್ಘಾವಧಿಯ ಮಾನ್ಯತೆಗಾಗಿ ಅಮೆಜಾನ್ ಪ್ರೈಮ್ ಲೈಟ್ (Amazon Prime Lite) ಚಂದಾದಾರಿಕೆಯನ್ನು ನಿಮ್ಮ ನಿತ್ಯದ ಕರೆ ಮತ್ತು ಡೇಟಾದೊಂದಿಗೆ ಉಚಿತವಾಗಿ ಪಡೆಯಬಹುದು. ಹಾಗಾದ್ರೆ Jio, Airtel ಮತ್ತು Vi ಉಚಿತ ಒಟಿಟಿ ಯೋಜನೆಗಳ ಕುರಿತು ಒಂದಿಷ್ಟು ಮಾಹಿತಿ ಈ ಕೆಳಗೆ ಪಟ್ಟಿ ಮಾಡಲಾಗಿದೆ.
ಅಮೆಜಾನ್ ಪ್ರೈಮ್ ಸದಸ್ಯರಿಗೆ (Amazon Prime Membership) ವಿಶೇಷ ಸೌಲಭ್ಯಗಳು:
ಅಮೆಜಾನ್ ಪ್ರೈಮ್ ಸದಸ್ಯರಿಗೆ (Amazon Prime Member) ವಿಶೇಷವಾಗಿ ಒಂದು ದಿನದ ಡೆಲಿವರಿ, ಪ್ರೈಮ್ ವಿಡಿಯೋ, ಪ್ರೈಮ್ ಮ್ಯೂಸಿಕ್, ಸ್ಟ್ರೀಮಿಂಗ್, ಗೇಮಿಂಗ್ ಮತ್ತು ಪ್ರೈಮ್ ರೀಡಿಂಗ್ ಮಾಡುವುದರೊಂದಿಗೆ ವಿಶೇಷ ಡೀಲ್ ಮತ್ತು ಡಿಸ್ಕೌಂಟ್‌ಗಳ ಬಗ್ಗೆ ಮೊದಲು ಅಪ್ಡೇಟ್ ನೀಡಲಾಗುತ್ತದೆ. ಅಲ್ಲದೆ ವಿಶೇಷ ಮಾರಾಟದಲ್ಲಿ ಪ್ರೈಮ್ ಸದಸ್ಯರಿಗೆ ಮೊದಲು ಪ್ರವೇಶಸುವ (Early Access) ಪ್ರಯೋಜನಗಳನ್ನು ಸಹ ನೀಡುತ್ತದೆ.
ಜಬರ್ದಸ್ತ್ ಆಫರ್ ಮತ್ತು ಪ್ರಯೋನಗಳನ್ನು ಆನಂದಿಸಲು ಇಂದೇ Amazon Prime ಮೇಲೆ ಕ್ಲಿಕ್ ಮಾಡಿ
ಅಷ್ಟೇಯಲ್ಲದೆ ಅಮೆಜಾನ್ ಪ್ರೈಮ್ ಸದಸ್ಯರಿಗೆ (Amazon Prime Member) ವಿಶೇಷ ಬ್ಯಾಂಕ್ ಆಫರ್, ಕೂಪನ್, ವೋಚರ್ ಆಫರ್ಗಳೊಂದಿಗೆ ಅದರಲ್ಲೂ ಸ್ಮಾರ್ಟ್‌ಫೋನ್‌ಗಳ ಮೇಲೆ ಉಚಿತ ಸ್ಕ್ರೀನ್ ರಿಪ್ಲೇಸೆಮೆಂಟ್ನಂತಹ ಹೆಚ್ಚುವರಿ ಪ್ರಯೋಜನಗಳನ್ನು ನೀಡುತ್ತದೆ. ಪ್ರೈಮ್ ಸದಸ್ಯರಿಗೆ ಈ ರೀತಿ ಹತ್ತಾರು ಅನುಕೂಲಗಳೊಂದಿಗೆ ಸಾಮಾನ್ಯ ಬಳಕೆದಾರರಿಗಿಂತ ಹೆಚ್ಚು ಮತ್ತು ಮೊದಲು ನಿಮ್ಮ ಒಂದಿಷ್ಟು ಹಣವನ್ನು ಉಳಿಸಿಕೊಳ್ಳಲು ಒಂದೊಳ್ಳೆ ಅವಕಾಶವನ್ನು ಅಮೆಜಾನ್ ನೀಡುತ್ತಿದೆ.
ಜಿಯೋ ಉಚಿತ ಅಮೆಜಾನ್ ಪ್ರೈಮ್ (Free Amazon Prime) ಯೋಜನೆ
ರಿಲಯನ್ಸ್‌ನ ಉಚಿತ ಅಮೆಜಾನ್ ಪ್ರೈಮ್ ಲೈಟ್ ಪ್ರಿಪೇಯ್ಡ್ ಯೋಜನೆಯ ಬೆಲೆ 1,029 ರೂಗಳಾಗಿದ್ದು ರೀಚಾರ್ಜ್‌ನಲ್ಲಿ 84 ದಿನಗಳ ಮಾನ್ಯತೆಯ ಪ್ರಯೋಜನದೊಂದಿಗೆ ಬರುತ್ತದೆ. ಈ ಯೋಜನೆಯು 84 ದಿನಗಳವರೆಗೆ 2GB ದೈನಂದಿನ ಡೇಟಾವನ್ನು ನೀಡುತ್ತದೆ ಮತ್ತು ಬಳಕೆದಾರರು ಪ್ರತಿದಿನ 100 SMS ಕಳುಹಿಸಬಹುದು. ಅಲ್ಲದೆ ಬಳಕೆದಾರರು ಅನಿಯಮಿತ ಧ್ವನಿ ಕರೆಯ ಪ್ರಯೋಜನವನ್ನು ಪಡೆಯುತ್ತಾರೆ. ಇದರಲ್ಲಿ JioTV ಮತ್ತು JioAlCloud ಗೆ ಪ್ರವೇಶವನ್ನು ಒದಗಿಸಲಾಗಿದೆ.
Also Read: ಸೈಬರ್ ವಂಚಕನಿಗೆ ಯಾಮಾರಿಸಿದ ಸ್ಮಾರ್ಟ್ ಯುವತಿಯ ವಿಡಿಯೋ Viral! ಆಗಿದ್ದೇನು ವಿಡಿಯೋ ನೋಡಿ!
ಏರ್‌ಟೆಲ್‌ನ Free Amazon Prime ಯೋಜನೆ
ಏರ್‌ಟೆಲ್ ಬಳಕೆದಾರರು 1,199 ರೂಗಳಿಗೆ ಯೋಜನೆಯೊಂದಿಗೆ ರೀಚಾರ್ಜ್ ಮಾಡಿದರೆ 84 ದಿನಗಳವರೆಗೆ ಉಚಿತ ಅಮೆಜಾನ್ ಪ್ರೈಮ್ ಲೈಟ್ ಪ್ರಯೋಜನವನ್ನು ಪಡೆಯುತ್ತಾರೆ. ಈ ಯೋಜನೆಯು 84 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ ಮತ್ತು ಇದರಲ್ಲಿ 2.5GB ದೈನಂದಿನ ಡೇಟಾವನ್ನು ನೀಡಲಾಗುತ್ತಿದೆ. ಬಳಕೆದಾರರು ಎಲ್ಲಾ ನೆಟ್‌ವರ್ಕ್‌ಗಳಲ್ಲಿ ಅನಿಯಮಿತ ವಾಯ್ಸ್ ಕರೆಗಳನ್ನು ಮಾಡಬಹುದು ಮತ್ತು ಪ್ರತಿದಿನ 100 SMS ಕಳುಹಿಸಬಹುದು. ಹೆಚ್ಚುವರಿಯಾಗಿ ಏರ್‌ಟೆಲ್ ಎಕ್ಸ್ ಸ್ಟ್ರೀಮ್ ಪ್ಲೇ ಪ್ರೀಮಿಯಂ ಪ್ರವೇಶ ಲಭ್ಯವಿದೆ. ಇದರೊಂದಿಗೆ 22 ಕ್ಕೂ ಹೆಚ್ಚು OTT ಸೇವೆಗಳಿಂದ ವಿಷಯವನ್ನು ವೀಕ್ಷಿಸುವ ಆಯ್ಕೆಯನ್ನು ಪಡೆಯಲಾಗುತ್ತದೆ.
ಜಬರ್ದಸ್ತ್ ಆಫರ್ ಮತ್ತು ಪ್ರಯೋನಗಳನ್ನು ಆನಂದಿಸಲು ಇಂದೇ Amazon Prime ಮೇಲೆ ಕ್ಲಿಕ್ ಮಾಡಿ
ವೊಡಾಫೋನ್ ಐಡಿಯಾದ ಉಚಿತ ಅಮೆಜಾನ್ ಪ್ರೈಮ್ ಯೋಜನೆ
ಅತ್ಯಂತ ಕಡಿಮೆ ಬೆಲೆಗೆ ಉಚಿತ ಅಮೆಜಾನ್ ಪ್ರೈಮ್ ಲೈಟ್ ಯೋಜನೆಯನ್ನು Vi ನೀಡುತ್ತಿದೆ ಮತ್ತು ಇದರ ಬೆಲೆ 996 ರೂಗಳ ಇದು 90 ದಿನಗಳವರೆಗೆ ಪ್ರೈಮ್ ಲೈಟ್‌ನ ಪ್ರಯೋಜನವನ್ನು ನೀಡುತ್ತದೆ. ಇದರಲ್ಲಿ 84 ದಿನಗಳ ಮಾನ್ಯತೆಯೊಂದಿಗೆ 2GB ದೈನಂದಿನ ಡೇಟಾವನ್ನು ನೀಡಲಾಗುತ್ತಿದ್ದು ಪ್ರತಿದಿನ 100 SMS ಕಳುಹಿಸಬಹುದು. ಅಲ್ಲದೆ ಎಲ್ಲಾ ನೆಟ್‌ವರ್ಕ್‌ಗಳಲ್ಲಿ ಅನಿಯಮಿತ ವಾಯ್ಸ್ ಕರೆ ಮಾಡಬಹುದು. ವಾರಾಂತ್ಯದ ಡೇಟಾ ರೋಲ್‌ಓವರ್ ಜೊತೆಗೆ ಇದು ಡೇಟಾ ಡಿಲೈಟ್ಸ್ ನೊಂದಿಗೆ 2GB ಬ್ಯಾಕಪ್ ಡೇಟಾವನ್ನು ಸಹ ನೀಡುತ್ತದೆ. ಅಲ್ಲದೆ ಮಧ್ಯಾಹ್ನ 12 ರಿಂದ 12 ರವರೆಗೆ ಅನಿಯಮಿತ ಡೇಟಾಗೆ ಪ್ರವೇಶವನ್ನು ನೀಡಲಾಗಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile